ಬ್ಯಾಂಕ್ ಸಾಲ ಮಾಡುವ ಪ್ರತಿಯೊಬ್ಬರಿಗೂ ಕೂಡ ಸಿಬಿಲ್ ಸ್ಕೋರ್ (CIBIL Score) ಬಗ್ಗೆ ಗೊತ್ತಿರುತ್ತದೆ. ಸಿಬಿಲ್ ಸ್ಕೋರ್ ನ್ನು ಕ್ರೆಡಿಟ್ ಸ್ಕೋರ್ (Credit Score) ಎಂದು ಕೂಡ ಕರೆಯುತ್ತಾರೆ. ಇದರ ಅರ್ಥ ಇಷ್ಟೇ ನೀವು ಈ ಹಿಂದೆ ಯಾವುದೇ ಬ್ಯಾಂಕ್ ಗಳಿಂದ ವೈಯಕ್ತಿಕ ಸಾಲ, ವಾಹನ ಸಾಲ ಅಥವಾ ಗೃಹ ಸಾಲಗಳನ್ನು ಪಡೆದುಕೊಂಡಿದ್ದರೆ ಅವುಗಳನ್ನು ಎಷ್ಟು ಚೆನ್ನಾಗಿ ನಿರ್ವಹಿಸಿದ್ದೀರಾ ಎನ್ನುವುದರಿಂದ ವಿವರ.
ನೀವು ಎಷ್ಟು ಪಂಕ್ಚುವಲ್ ಆಗಿ ನಿಮ್ಮ ಕಮಿಟ್ಮೆಂಟ್ ಗಳನ್ನು ಪೂರೈಸುತ್ತಿರೋ ಅಷ್ಟು ನಿಮ್ಮ ಕ್ರೆಡಿಟ್ ಸ್ಕೋರ್ ಇಂಪ್ರೂ ಆಗುತ್ತದೆ. ಹೀಗೆ ಕ್ರೆಡಿಟ್ ಸ್ಕೋರ್ ಹೆಚ್ಚಿಗೆ ಇದ್ದಾಗ ಯಾವುದೇ ಹಣಕಾಸು ಸಂಸ್ಥೆ ನಿಮಗೆ ಸಾಲ ಕೊಡಲು ಮುಂದೆ ಬರುತ್ತದೆ. ಗ್ರಾಹಕರು ಸಾಲಕ್ಕಾಗಿ ಅರ್ಜಿ ಸಲ್ಲಿಸಿದಾಗಲೆಲ್ಲಾ ಬ್ಯಾಂಕ್‌ಗಳು ಅವರ CIBIL ಸ್ಕೋರ್ ಅನ್ನು ಪರಿಶೀಲಿಸುತ್ತದೆ.
ಇತ್ತೀಚಿನ ದಿನಗಳಲ್ಲಿ ಸಿಬಿಲ್ ಸ್ಕೋರ್ ಎನ್ನುವುದು ಕೂಡ ಬ್ಯಾಂಕಿಂಗ್ ವಹಿವಾಟಿನ ಪ್ರಮುಖ ಅಂಶ ಆಗಿರುವುದರಿಂದ RBI ಸಿಬಿಲ್ ಸ್ಕೋರ್ ಕುರಿತು ಇದು ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಇದು ಮುಂದಿನ ಆರ್ಥಿಕ ವರ್ಷ ಅಂದರೆ ಏಪ್ರಿಲ್ 1, 2024 ರಿಂದಲೆ ಜಾರಿಗೆ ಬರಲಿದೆ. ಆ ಪ್ರಕಾರವಾಗಿ ಹೊಸದಾಗಿ ಏನೆಲ್ಲ ಬದಲಾವಣೆ ಆಗಿದೆ ಎನ್ನುವುದರ ವಿವರ ಇಲ್ಲಿದೆ ನೋಡಿ.
● ಯಾವುದೇ ಬ್ಯಾಂಕ್ ಅಥವಾ NBFC ಗ್ರಾಹಕನ ಕ್ರೆಡಿಟ್ ವರದಿಯನ್ನು ಪರಿಶೀಲಿಸಿದ ನಂತರ ಆ ಗ್ರಾಹಕರಿಗೆ ಈ ಕುರಿತು
SMS ಅಥವಾ ಇಮೇಲ್ ಮೂಲಕ ಮಾಹಿತಿಯನ್ನು ಕಳುಹಿಸಬೇಕು ಎಂದು RBI ಎಲ್ಲಾ ಕ್ರೆಡಿಟ್ ಮಾಹಿತಿ ಕಂಪನಿಗಳಿಗೆ ಆದೇಶ ಹೊರಡಿಸಿದೆ. ಈ ಇತ್ತೀಚಿಗೆ ಕ್ರೆಡಿಟ್ ಸ್ಕೋರ್‌ಗೆ ಸಂಬಂಧಿಸಿದಂತೆ ಗ್ರಾಹಕರಿಂದ ದೂರುಗಳು ಹೆಚ್ಚಾಗುತ್ತಿರುವುದರಿಂದ RBI ಇಂತಹದೊಂದು ನಿಯಮ ಮಾಡಿದೆ.
● ಗ್ರಾಹಕರ ಸಾಲದ ವಿನಂತಿಯನ್ನು ಬ್ಯಾಂಕ್ ಗಳು ಅಥವಾ ಕಂಪನಿಗಳು ತಿರಸ್ಕರಿಸಿದರೆ, ಅದಕ್ಕೆ ಕಾರಣ ಏನು ಎನ್ನುವ ವಿವರವನ್ನು ಗ್ರಾಹಕನಿಗೆ ತಿಳಿಸಬೇಕು ಎಂದು RBI ನಿಯಮ ಮಾಡಿದೆ.
● ಕ್ರೆಡಿಟ್ ಕಂಪನಿಗಳು ವರ್ಷಕ್ಕೊಮ್ಮೆ ತಮ್ಮ ಗ್ರಾಹಕರಿಗೆ ಉಚಿತವಾಗಿ ಸಂಪೂರ್ಣ ಕ್ರೆಡಿಟ್ ಸ್ಕೋರ್ ಅನ್ನು ವಿವರ ನೀಡಬೇಕು. ತನ್ನ ವೆಬ್‌ಸೈಟ್‌ನಲ್ಲಿ ಲಿಂಕ್ ಬಗ್ಗೆ ಪ್ರದರ್ಶಿಸಬೇಕು, ಇದರಿಂದ ಗ್ರಾಹಕರು ತಮ್ಮ CIBIL ಸ್ಕೋರ್ ಮತ್ತು ಸಂಪೂರ್ಣ ಕ್ರೆಡಿಟ್ ಹಿಸ್ಟರಿಯನ್ನು ವರ್ಷಕ್ಕೊಮ್ಮೆ ಸುಲಭವಾಗಿ ಪರಿಶೀಲಿಸಿಕೊಳ್ಳಬಹುದು ಎಂದು RBI ಹೇಳಿದೆ.
● ಡೀಫಾಲ್ಟ್ ಅನ್ನು ವರದಿ ಮಾಡುವ ಮೊದಲು ಗ್ರಾಹಕನಿಗೂ ಆ ಮಾಹಿತಿ ತಿಳಿದಿರಬೇಕು. ಹೀಗಾಗಿ ಸಾಲ ನೀಡುವ ಸಂಸ್ಥೆಗಳು, SMS ಅಥವಾ Email ಕಳುಹಿಸುವ ಮೂಲಕ ಮಾಹಿತಿಯನ್ನು ಹಂಚಿಕೊಳ್ಳಬೇಕು. ಇದರ ಜೊತೆಗೆ ಕ್ರೆಡಿಟ್ ಸ್ಕೋರ್ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸಲು ಬ್ಯಾಂಕುಗಳು ಮತ್ತು ಸಾಲ ನೀಡುವ ಸಂಸ್ಥೆಗಳು ನೋಡಲ್ ಅಧಿಕಾರಿಗಳನ್ನು ನೇಮಿಸಬೇಕು ಎಂದು ಹೇಳಿದೆ.
● ಕ್ರೆಡಿಟ್ ಮಾಹಿತಿಯ ಕಂಪನಿಯು ಗ್ರಾಹಕ ನೀಡಿದ ದೂರನ್ನು 30 ದಿನಗಳಲ್ಲಿ ಉತ್ತರಿಸಬೇಕು, ಇಲ್ಲವಾದಲ್ಲಿ ಅಂತಹ ಕಂಪನಿಯು ದಿನಕ್ಕೆ 100 ರೂಪಾಯಿ ದಂಡವನ್ನು ಪಾವತಿಸಬೇಕಾಗುತ್ತದೆ. ಸಾಲ ವಿತರಿಸುವ ಸಂಸ್ಥೆಗೆ 21 ದಿನಗಳು ಮತ್ತು ಕ್ರೆಡಿಟ್ ಬ್ಯೂರೋ 9 ದಿನಗಳನ್ನು ಪಡೆಯುತ್ತದೆ. 21 ದಿನಗಳಲ್ಲಿ ಬ್ಯಾಂಕ್ ಕ್ರೆಡಿಟ್ ಬ್ಯೂರೋಗೆ ತಿಳಿಸದಿದ್ದರೆ, ಬ್ಯಾಂಕ್ ಪರಿಹಾರವನ್ನು ಪಾವತಿಸುತ್ತದೆ. ಬ್ಯಾಂಕಿನಿಂದ ಮಾಹಿತಿ ನೀಡಿದ 9 ದಿನಗಳ ನಂತರವೂ ದೂರನ್ನು ಪರಿಹರಿಸದಿದ್ದರೆ, ಕ್ರೆಡಿಟ್ ಬ್ಯೂರೋ ಹಾನಿಯನ್ನು ಪಾವತಿಸಬೇಕಾಗುತ್ತದೆ ಎಂದು RBI ನಿಯಮ ಹೇಳಿದೆ.