Deprecated: strtolower(): Passing null to parameter #1 ($string) of type string is deprecated in /home/u302298408/domains/rishithepower.com/public_html/wp-content/plugins/taboola/simple_html_dom.php on line 712
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆ ಮೂಲಕ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ನಾಲ್ಕು ನಿಗಮದ ಬಸ್ ಗಳಲ್ಲಿ ಉಚಿತ ಪ್ರಯಾಣ ಅವಕಾಶ ಕಲ್ಪಿಸಿ ಕೊಟ್ಟಿರುವ ರಾಜ್ಯ ಸರ್ಕಾರದಿಂದ KSRTC ಗೆ ಸಂಬಂಧಪಟ್ಟ ಹಾಗೆ ಮತ್ತೊಂದು ಅಧಿಕೃತ ಆದೇಶ ಪತ್ರ ಹೊರಬಿದ್ದಿದೆ.
ಈ ಬಾರಿ KSRTC ಯಿಂದ ಅ’ಪ’ಘಾ’ತವಾಗಿ ಮೃ’ತಪಟ್ಟವರಿಗೆ ನೀಡುತ್ತಿರುವ ಪರಿಹಾರ ಹಣವನ್ನು ಹೆಚ್ಚಿಸುವ ಬಗ್ಗೆ ಚರ್ಚಿಸಿ ಡಿಸೆಂಬರ್ 19, 2023ರಂದು ಸಂಸ್ಥೆ ಈ ಪ್ರಕಟಣೆ ಹೊರಡಿಸಿದೆ. ಇದು ಪರಿಹಾರ ನಿಧಿ ಹೆಚ್ಚಿಸಿರುವ ಸಮಾಧಾನಕರ ವಿಷಯದ ಜೊತೆಗೆ ನಿಧಿ ಸಂಗ್ರಹಕ್ಕಾಗಿ ಟಿಕೆಟ್ ತರವನ್ನು ಹೆಚ್ಚಿಸಿರುವ ಮಾಹಿತಿ ಹೊಂದಿದೆ ಇದರ ಕುರಿತ ಪ್ರಮುಖ ವಿಷಯ ಹೀಗಿದೆ ನೋಡಿ
ರಾಜ್ಯ ಸರ್ಕಾರದ ಅಧೀನ ಸಂಸ್ಥೆಯಾಗಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಬಸ್‌ಗಳು ಒಂದು ವೇಳೆ ಅ’ಪ’ಘಾ’ತಕ್ಕೆ ಒಳಗಾಗಿ ಅದರಲ್ಲಿ ಪ್ರಯಾಣ ಮಾಡುತ್ತಿದ್ದ ಪ್ರಯಾಣಿಕರ ಪ್ರಾಣ ಹಾ’ನಿಯಾಗಿದ್ದರೆ ಅವರನ್ನೇ ಅವಲಂಬಿಸಿದ್ದ ಅವರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ಮೊತ್ತವನ್ನು ಕೊಡಲು KSRTC ನಿರ್ಧರಿಸಿದೆ.
ಅಕ್ಟೋಬರ್ 31, 2023 ರಂದು ನಡೆದ 29ನೇ ಅಪಘಾತ ಪರಿಹಾರ ನಿಧಿ ಸಭೆಯಲ್ಲಿ ಚರ್ಚಿಸಿ ಈ ಹಿಂದೆ 3 ಲಕ್ಷ ಇದ್ದ ಪರಿಹಾರ ಮೊತ್ತವನ್ನು 10 ಲಕ್ಷಕ್ಕೆ ಏರಿಸಬೇಕು ಎಂದು ಚರ್ಚಿಸಿ ಅನುಮೋದಿಸಲಾಗಿತ್ತು. ಅಂತೆಯೇ ರಾಜ್ಯ ಸರ್ಕಾರದಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳು ಅಪಘಾ.ತಕ್ಕೀಡಾದರೆ.
ನಿಗಮದ ಬಸ್ಸುಗಳಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ದುರದೃಷ್ಟವಶಾತ್ ಮೃ’ತ ಪಟ್ಟಲ್ಲಿ, ಪ್ರಯಾಣಿಕರ ಅವಲಂಬಿತರಿಗೆ ಹೆಚ್ಚಿನ ಆರ್ಥಿಕ ನೆರವು ನೀಡುವ ಸದ್ದುದೇಶದಿಂದ ಪ್ರಯಾಣಿಕರ ಅಪಘಾತ ಪರಿಹಾರ ನಿಧಿ ಟ್ರಸ್ಟ್ ವತಿಯಿಂದ (Passenger Accident Relief fund) ಪ್ರಸ್ತುತ ನೀಡಲಾಗುತ್ತಿರುವ ಆರ್ಥಿಕ ಪರಿಹಾರ ಮೊತ್ತವನ್ನು ರೂ.3 ಲಕ್ಷದಿಂದ ರೂ.10 ಲಕ್ಷ ರೂಪಾಯಿ ಗಳಿಗೆ ಹೆಚ್ಚಳ ಮಾಡಲಾಗಿದೆ ಎಂದು ಆದೇಶ ಹೊರಡಿಸಲಾಗಿದೆ.
ಮೊದಲಿಗೆ ವಿಭಾಗೀಯ ಅಧಿಕಾರಿಗಳು ತಕ್ಷಣದ ಪರಿಹಾರವಾಗಿ 25,000 ರೂಗಳನ್ನು ನೀಡುತ್ತಾರೆ ಸೂಕ್ತ ವಿವರ ದಾಖಲಾದ ನಂತರ ಟ್ರಸ್ಟ್ ಕಡೆಯಿಂದ ರೂ.25,000 ಗಳನ್ನು ವಿಭಾಗಿಯ ಅಧಿಕಾರಿಗಳಿಗೆ ಮರುಪಾವತಿಸಿ ಉಳಿದ ಬಾಕಿ ಮೊತ್ತ ರೂ.97,5000 ಮೃ’ತರ ಕುಟುಂಬಕ್ಕೆ ನೀಡಲಾಗುತ್ತದೆ.
ಇದರೊಂದಿಗೆ ಮತ್ತೊಂದು ವಿಚಾರವೇನೆಂದರೆ, ಮೃ’ತರ ಅವಲಂಬಿತರಿಗೆ ನೀಡುವ ಪರಿಹಾರ ಮೊತ್ತವನ್ನು ಹೆಚ್ಚಿಸಿರುವುದರಿಂದ ಟ್ರಸ್ಟ್ ಖರ್ಚು ಹೆಚ್ಚಾಗುತ್ತಿದೆ ಇದರೊಂದಿಗೆ ಆದಾಯವನ್ನು ಕೂಡ ಸಮತೋಲನ ಪಡಿಸಲು ಗ್ರಾಹಕರಿಂದ ವಸೂಲಿ ಮಾಡುತ್ತಿದ್ದ ವಂತಿಕೆಯನ್ನು ಹೆಚ್ಚಿಸಲಾಗಿದೆ.
ಹೀಗಾಗಿ 1 ಜನವರಿ, 2024ರಿಂದ ಜಾರಿಗೆ ಬರುವಂತೆ ರೂ.50 ರಿಂದ ರೂ.99 ರವರೆಗಿನ ಮುಖ ಬೆಲೆಯ ಟಿಕೆಟ್ ಪಡೆದು ದರವನ್ನು ತಲಾ ರೂ.1 ಮತ್ತು ರೂ.100 ಹಾಗೂ ಹೆಚ್ಚಿನ ಬೆಲೆಯ ಟಿಕೇಟ್ ಪಡೆದು ದರವನ್ನು ತಲಾ ರೂ.2 ರಂತೆ ಹೆಚ್ಚಿಸಿ ಅಪಘಾತ ಪರಿಹಾರ ನಿಧಿ ವಂತಿಕೆ ಸಂಗ್ರಹಣೆ ಹೆಚ್ಚು ಮಾಡಲಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ರೂ.49 ಕ್ಕಿಂತ ಕಡಿಮೆ ಇರುವ ಟಿಕೆಟ್ ಬೆಲೆಗಳಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ.