ರೇಷನ್ ಕಾರ್ಡ್ (Ration card) ಹೊಂದಿರುವ ಪ್ರತಿಯೊಬ್ಬರಿಗೂ ಎರಡು ಮಹತ್ವದ ಸುದ್ದಿ ಇದೆ. ಅದೇನೆಂದರೆ, ಇನ್ನು ಮುಂದೆ ಹಿರಿಯ ನಾಗರಿಕರಿಗೆ (Senior Citizen) ಅಂಗಡಿಗೆ ಹೋಗಿ ಕ್ಯೂ ನಿಲ್ಲುವ ತಾಪತ್ರಯ ತಪ್ಪುತ್ತದೆ, ಇದಕ್ಕಾಗಿ ಅನುಕೂಲ ಆಗುವ ಹಿರಿಯ ನಾಗರಿಕ ಸ್ನೇಹಿ ನೀತಿಯನ್ನು ಜಾರಿಗೆ ತರಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ (food and civil Supply department) ನಿರ್ಧರಿಸಿದೆ.
ಇದರ ಜೊತೆಗೆ ಕಡ್ಡಾಯವಾಗಿ ಎಲ್ಲಾ ಪಡಿತರ ಚೀಟಿದಾರರು ಕೂಡ ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ (Adhar link) ಮಾಡಲೇಬೇಕು ಎಂದು ಕೇಂದ್ರ ಸರ್ಕಾರ ಕಡ್ಡಾಯ ನಿಯಮ ಹೇರಿದೆ, ಇದಕ್ಕೆ ನೀಡಿದ್ದ ಸಮಯಾವಕಾಶವನ್ನು ಡಿಸೆಂಬರ್ 30 ಕಡೆ ಬಾರಿಗೆ ವಿಸ್ತರಿಸಿದೆ. ಇಷ್ಟರೊಳಗೆ ಈ ಪ್ರಕ್ರಿಯ ಪೂರ್ತಿಗೊಳ್ಳದೆ ಇದ್ದರೆ ಮುಂದಿನ ದಿನಗಳಲ್ಲಿ ದಂಡ ತೆರಬೇಕಾಗಿ ಬರಬಹುದು ಅಥವಾ ರೇಷನ್ ಕಾರ್ಡ್ ರದ್ದಾಗಬಹುದು.
ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದರಿಂದ ಸಾಕಷ್ಟು ಅನುಕೂಲತೆಗಳು ಇವೆ. ಕರ್ನಾಟಕ ರಾಜ್ಯದಲ್ಲಿ ಹೇಳುವುದಾದರೆ ಆಧಾರ್ ಕಾರ್ಡ್ ಆಧಾರಿತವಾಗಿ ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿಯ ಯೋಜನೆಯ (Annabhagya and Gruhalakshmi) ಹಣವನ್ನು ಆಧಾರ್ ಕಾರ್ಡ್ ಆಧಾರಿತವಾಗಿ DBT ಮೂಲಕ ನೀಡಲಾಗುತ್ತಿದೆ.
ಆಧಾರ್ ಕಾರ್ಡ್ ಲಿಂಕ್ ಮಾಡುವುದರಿಂದ ಕುಟುಂಬದ ಸದಸ್ಯರ ವಿವರ ನಿಖರವಾಗಿ ಸರ್ಕಾರಕ್ಕೆ ಸಿಗುತ್ತದೆ ಇದರಿಂದ ನಕಲಿ ಫಲಾನುಭವಿಗಳನ್ನು ಸುಲಭವಾಗಿ ಪತ್ತೆ ಹಚ್ಚಬಹುದು. ಇದರ ಜೊತೆಗೆ ಕರ್ನಾಟಕ ರಾಜ್ಯ ಸರ್ಕಾರ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಅದೇನೆಂದರೆ ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದರಿಂದ ಹಿರಿಯ ನಾಗರಿಕರು ರೇಷನ್ ಕಾರ್ಡ್ ನಲ್ಲಿ ಸದಸ್ಯರಾಗಿದ್ದರೆ ಅವರ ಮಾಹಿತಿ ಸರ್ಕಾರಕ್ಕೆ ಸಿಗುತ್ತದೆ.
ಅವರು ಎಲ್ಲರಂತೆ ನ್ಯಾಯಬೆಲೆಗಳ ಅಂಗಡಿಗೆ ಬಂದು ಸರತಿ (Queue) ಸಾಲಿನಲ್ಲಿ ನಿಂತು ಬಯೋಮೆಟ್ರಿಕ್ (Biometric) ನೀಡಿ ಪಡಿತರ ಪಡೆಯುವುದಕ್ಕೆ ಕಷ್ಟವಾಗುವುದರಿಂದ ಅವರಿಗೆ ಆ ಸಮಸ್ಯೆ ತಪ್ಪಿಸಲು ಅವನ ಮನೆ ಬಾಗಿಲಿಗೆ ನ್ಯಾಯಬೆಲೆ ಅಂಗಡಿ ಸಿಬ್ಬಂದಿ ಹೋಗಿ ಅವರ ಬಯೋಮೆಟ್ರಿಕ್ ಮಾಹಿತಿ ಪಡೆದು ಅನ್ನಭಾಗ್ಯ ಯೋಜನೆ ಪಡಿತರ (Ration) ತಲುಪಿಸಲು ಆಹಾರ ಇಲಾಖೆ ನಿರ್ಧಾರ ಕೈಗೊಳ್ಳುತ್ತಿದೆ.
ಇನ್ನು ಕೆಲವೇ ದಿನಗಳಲ್ಲಿ ಇದರ ಬಗ್ಗೆ ಆಹಾರ ಇಲಾಖೆ ಅಧಿಕೃತ ಘೋಷಣೆ ಕೂಡ ಮಾಡಲಿದೆ. ಯಾರಿಗೆ ಈ ಯೋಜನೆ ಅನುಕೂಲತೆ ಸಿಗುತ್ತದೆ ಎಂದರೆ 75 ವರ್ಷ ಮೇಲ್ಪಟ್ಟ ಸದಸ್ಯರ ಹೆಸರು ರೇಷನ್ ಕಾರ್ಡ್ ನಲ್ಲಿ ಇದ್ದು ಅವರ ಕಾರ್ಡ್ ನಲ್ಲಿ ಬೇರೆ ಯಾವ ಸದಸ್ಯರು ಇಲ್ಲದೆ ಇದ್ದಲ್ಲಿ ಅಥವಾ ರೇಷನ್ ಕಾರ್ಡ್ ನಲ್ಲಿ ಇಬ್ಬರು ಸದಸ್ಯರಿದ್ದು ಇಬ್ಬರು ಸಹ 75 ವರ್ಷ ದಾಟಿದ ವೃದ್ಧ ದಂಪತಿಗಳಾಗಿದ್ದರೆ ಈ ಸೇವೆ ನೀಡಲು ಸರ್ಕಾರ ನಿರ್ಧರಿಸಿದೆ ಆಹಾರ ಇಲಾಖೆಯ ಈ ಮಾನವೀಯ ನೀತಿ ಸ್ವಾಗತಾರ್ಹವಾಗಿದೆ.
ಇವರ ಜೊತೆಗೆ 75 ವರ್ಷ ದಾಟಿದ ಕುಟುಂಬದ ಸದಸ್ಯರು ಅದೇ ವಿಳಾಸದಲ್ಲಿ ವಾಸವಿದ್ದು ಆ ಪಡಿತರ ಚೀಟಿಯಲ್ಲಿರುವ ಇತರ ಸದಸ್ಯರಿದ್ದು ವಲಸೆ ಹೋಗಿದ್ದರೆ ಇಂತಹ ಸಂದರ್ಭಗಳಲ್ಲಿ ನ್ಯಾಯಬೆಲೆ ಅಂಗಡಿ ಗೆ ಹೋಗಿ ಅವರು ಮನವಿ ಸಲ್ಲಿಸಿದರೆ ಅವರಿಗೂ ಕೂಡ ಈ ನೀತಿ ಅನ್ವಯವಾಗಲಿದೆ. ಹಿರಿಯ ನಾಗರಿಕರ ಕಷ್ಟವನ್ನು ಅರಿತು ಆಹಾರ ಇಲಾಖೆ ಇಂತಹದೊಂದು ಮಾನವೀಯ ನಿರ್ಧಾರವನ್ನು ತೆಗೆದುಕೊಂಡಿದೆ. ಶೀಘ್ರವಾಗಿ ಈ ಯೋಜನೆ ಜಾರಿಗೆ ಬರಲಿ ಎಂದು ನಾವು ಆಶಿಸುತ್ತೇವೆ.