ಪ್ರತಿಯೊಂದು ಬ್ಯಾಂಕ್ ಗಳು ಕೂಡ ತಮ್ಮ ಬ್ಯಾಂಕ್ ನಲ್ಲಿ ಖಾತೆ ತೆರೆಯುವ ಗ್ರಾಹಕನಿಗೆ ಅನುಕೂಲವಾಗಲಿ ಎಂದು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಗಳಂತಹ (Debit and Credit Cards) ಆಯ್ಕೆಗಳನ್ನು ನೀಡುತ್ತಾರೆ. ಈಗಿನ ಕಾಲದಲ್ಲಿ ಎಲ್ಲವೂ ಆನ್ಲೈನ್ ಪೇಮೆಂಟ್ ಆಗಿರುವುದರಿಂದ UPI ಬೆಂಬಲಿತ ಆಪ್ ಗಳನ್ನು ಬಳಸುವುದಕ್ಕೆ, ATM ಗಳಲ್ಲಿ ಹಣ ಪಡೆಯುವುದಕ್ಕೆ, ಇನ್ನು ಮತ್ತಿತರ ವಹಿವಾಟಿಗಾಗಿ ಈ ರೀತಿ ಡೆಬಿಟ್ ಕಾರ್ಡುಗಳ ಮತ್ತು ಕ್ರೆಡಿಟ್ ಕಾರ್ಡ್ ಗಳ ಅವಶ್ಯಕತೆ ಇದ್ದೇ ಇದೆ.
ಆದರೆ ಇವುಗಳನ್ನು ಯಾವ ರೀತಿ ಬಳಸಬೇಕು ಎಂದು ಸರಿಯಾಗಿ ತಿಳಿದುಕೊಂಡಿರಬೇಕು, ಇಲ್ಲವಾದಲ್ಲಿ ಗೊತ್ತೋ ಗೊತ್ತಿಲದೆಯೋ ಮಾಡುವ ತಪ್ಪಿಗಾಗಿ ನಾವೇ ದಂಡವನ್ನು ತರಬೇಕಾಗುತ್ತದೆ ಅಥವಾ ಪೂರ್ತಿ ಮಾಹಿತಿ ತಿಳಿದುಕೊಳ್ಳುವುದಕ್ಕೆ ಬಳಿಸಿದ ತಪ್ಪಿಗಾಗಿ ಸಾಲದ ಹೊರೆ ಹೆಚ್ಚಾಗಿ ನಮ್ಮ ಕೈನಿಂದ ಹಣ ಕಳೆದುಕೊಳ್ಳಬೇಕಾಗುತ್ತದೆ ಹಾಗಾಗಿ ಅದರ ಕುರಿತು ಕೆಲ ಪ್ರಮುಖ ವಿಷಯಗಳನ್ನು ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
ಈ ಡೆಬಿಟ್ ಕಾರ್ಡುಗಳ ಮೂಲಕ ಸಾಕಷ್ಟು ಅನುಕೂಲವಿದೆ. ಅತಿ ಮುಖ್ಯವಾಗಿ ಗ್ರಾಹಕರು ತಮ್ಮ ಬ್ಯಾಂಕ್ ಶಾಖೆಯಿಂದ ದೂರ ಇದ್ದಾಗ ಅವರಿಗೆ ಬೇಕಾದ ಸ್ಥಳದಲ್ಲಿ ಹಣವನ್ನು ವಿತ್ ಡ್ರಾ (Withdraw ) ಮಾಡಲು ಅನುಕೂಲವಾಗಲಿ ಎನ್ನುವುದೇ ಮುಖ್ಯ ಉದ್ದೇಶವಾಗಿದೆ ಎಂದು ಹೇಳಬಹುದು. ಡೆಬಿಟ್ ಕಾರ್ಡುಗಳ ಮೂಲಕ ATM ಗಳಿಗೆ ಹೋಗಿ ಗ್ರಾಹಕರು ತಮ್ಮ ಅವಶ್ಯಕತೆ ಇದ್ದ ಸಮಯದಲ್ಲಿ ಹಣವನ್ನು ಹಿಂಪಡೆಯಬಹುದು.
ಆದರೆ ಇನ್ನು ಮುಂದೆ ಇದನ್ನು ವಿಸ್ತರಿಸಿ ಡೆಬಿಟ್ ಕಾರ್ಡ್ ನಂತೆ ಕ್ರೆಡಿಟ್ ಕಾರ್ಡ್ ಗಳ ಮೂಲಕವೂ ಕೂಡ ಹಣವನ್ನು ವಿಥ್ ಡ್ರಾ ಮಾಡಲು ಅವಕಾಶ ಮಾಡಿಕೊಡಲಾಗುತ್ತಿದೆ. ಆದರೆ ಇದು ಸ್ವಲ್ಪ ರಿಸ್ಕ್ ನಿಂದ ಕೂಡಿದೆ. ಹಾಗಾಗಿ ನೀವೇನಾದರೂ ಕ್ರೆಡಿಟ್ ಕಾರ್ಡ್ ಮೂಲಕ ಹಣ ಡ್ರಾ ಮಾಡುವುದಾದರೆ ಈ ವಿಷಯಗಳನ್ನು ಗಮನದಲ್ಲಿ ಇಟ್ಟುಕೊಳ್ಳಿ.
ಕ್ರೆಡಿಟ್ ಕಾರ್ಡ್ ಗಳು ಕೂಡ ಒಂದು ರೀತಿಯ ಲೋನ್ ಎಂದು ಹೇಳಬಹುದು. ಕ್ರೆಡಿಟ್ ಕಾರ್ಡುಗಳನ್ನು ಶಾಪಿಂಗ್ ಗೆ ಮಾತ್ರ ಬಳಸುತ್ತಿದ್ದರು, ಆದರೆ ನಗದು ಪಡೆಯಲು ಆಗುತ್ತಿರಲಿಲ್ಲ. ಈಗ ಬ್ಯಾಂಕ್ ಗಳು ತಮ್ಮ ಗ್ರಾಹಕರಿಗೆ ಕ್ರೆಡಿಟ್ ಕಾರ್ಡ್ ಮೂಲಕ ಕೂಡ ATM ಗಳಲ್ಲಿ ಹಣ ಡ್ರಾ ಮಾಡಿಕೊಳ್ಳುವ ಅವಕಾಶ ನೀಡುತ್ತಿವೆ. ಆದರೆ ಈ ರೀತಿ ನೀವೇನಾದರೂ ಈ ಆಪ್ಷನ್ ಅನ್ನು ಬಳಸಿದರೆ ಇದು ನಿಮ್ಮ ಸಿಬಿಲ್ ಸ್ಕೋರ್ (Cibil Score) ಮೇಲೆ ಪರಿಣಾಮ ಬೀರುತ್ತದೆ.
ನೀವೇನಾದರೂ ಕ್ರೆಡಿಟ್ ಕಾರ್ಡ್ ಮೂಲಕ ನಗದು ಹಿಂಪಡೆಯುತ್ತಿದ್ದರೆ ಸಿಬಿಲ್ ಸ್ಕೋರ್ ತೀವ್ರವಾಗಿ ಕುಸಿದು ಇದು ನಿಮಗೆ ನಷ್ಟವನ್ನುಂಟು ಮಾಡುತ್ತದೆ. ನೀವು ಕ್ರೆಡಿಟ್ ಕಾರ್ಡ್‌ನಿಂದ ಹಣವನ್ನು ಹಿಂಪಡೆದರೆ ಅದು ಕೂಡ ನಿಮಗೆ ನೀಡುತ್ತಿರುವ ಸಾಲವಾಗುತ್ತದೆ ಮತ್ತು ಆ ಸಾಲಕ್ಕೆ ಬ್ಯಾಂಕುಗಳು ಹೆಚ್ಚಿನ ಬಡ್ಡಿ ದರಗಳನ್ನು ವಿಧಿಸುತ್ತವೆ. ಅಲ್ಲದೆ ಸಾಲ ಮರುಪಾವತಿಗೆ ಯಾವುದೇ ಗ್ರೇಸ್ ಅವಧಿಯನ್ನು ಸಿಗುವುದಿಲ್ಲ, ಮತ್ತು ಬಡ್ಡಿದರಗಳು ತಕ್ಷಣವೇ ಏರಲು ಪ್ರಾರಂಭಿಸುತ್ತವೆ.
ಇದರ ಜೊತೆಗೆ ನೀವು ವಿಳಂಬ ಶುಲ್ಕವನ್ನು ಸಹ ಪಾವತಿಸಬೇಕಾಗುತ್ತದೆ. ನೀವು ATM ನಿಂದ ಕ್ರೆಡಿಟ್ ಕಾರ್ಡ್ ಮೂಲಕ ಹಣವನ್ನು ಹಿಂಪಡೆದರೂ ಆ ಸೇವೆಗಾಗಿ ಬಳಕೆಯ ಶುಲ್ಕವನ್ನು ಸಹ ಪಾವತಿಸಬೇಕು. ಹೀಗೆ ಕ್ರೆಡಿಟ್ ಕಾರ್ಡ್‌ನಿಂದ ಹಣವನ್ನು ಹಿಂತೆಗೆದುಕೊಳ್ಳುವುದು ಅನುಕೂಲಕರವಾದರೂ ಅದನ್ನು ಸರಿಯಾಗಿ ಪಾಲಿಸದೆ ಇದ್ದರೆ ಅದು ನಿಮಗೆ ನಷ್ಟವನ್ನುಂಟು ಮಾಡುತ್ತದೆ ಎನ್ನುವುದು ತಿಳಿದಿರಲಿ.