ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಕೊನೆಯ ಚಿತ್ರ ಗಂಧದಗುಡಿ ಬಿಡುಗಡೆಯಾಗಿ ಕರ್ನಾಟಕ ರಾಜ್ಯದಾದ್ಯಂತ ಮನೆ ಮನೆ ಮೆಚ್ಚುವ ಚಿತ್ರವಾಗಿದೆ ಇದು ಕೇವಲ ಚಲನಚಿತ್ರ ಅಲ್ಲ, ಡಾಕ್ಯುಮೆಂಟರಿ ಕೂಡ ಅಲ್ಲ ಇದು ಒಂದು ನೈಜ್ಯ ಜೀವನದ ಅನುಭವ ಏಕೆಂದರೆ ಇಲ್ಲಿ ಪುನೀತ್ ರಾಜ್ಕುಮಾರ್ ಅವರು ಪವರ್ ಸ್ಟಾರ್ ಆಗಿ ಕಾಣಿಸಿಕೊಂಡಿಲ್ಲ. ಅಪ್ಪು ಅಪ್ಪು ಅವರಾಗಿಯೇ ಈ ಸಿನಿಮಾದ ಉದ್ದಕ್ಕೂ ಜೀವಿಸಿದ್ದಾರೆ ಪವರ್ ಸ್ಟಾರ್ ಅವರ ಕೊನೆಯ ಸಿನಿಮಾ ಗಂಧದಗುಡಿ ಎಷ್ಟು ಕೋಟಿ ಮಾಡಿದೆ ಎಂದು ಊಹಿಸಿಕೊಳ್ಳಲು ಸಾಧ್ಯವಿಲ್ಲ ಹೌದು ಪವರ್ ಸ್ಟಾರ್ ಅವರ ಕೊನೆಯ ಸಿನಿಮಾ ನೋಡಿ ಎಷ್ಟು ಸಂತೋಷ ಆಗಿದಿಯೋ ಅಷ್ಟೇ ದುಃಖ ಕೂಡ ಎಲ್ಲರಲ್ಲಿಯೂ ಮನೆ ಮಾಡಿದೆ ಏಕೆಂದರೆ ಕೊನೆಯದಾಗಿ ಅಪ್ಪು ಅವರನ್ನು ಬೆಳ್ಳಿ ಪರದೆಯ ಮೇಲೆ ನೋಡುವ ಅವಕಾಶಬಿಲ್ಲ.
ಮುಂದೆ ಅವರ ಹಳೆಯ ಸಿನಿಮಾಗಳನ್ನು ಅವರ ಹುಟ್ಟುಹಬ್ಬಕ್ಕೆ ಪ್ರಯುಕ್ತ ರಿಲೀಸ್ ಮಾಡಬಹುದು ಆದರೆ ಅವರ ಹೊಸ ಸಿನಿಮಾ ಬರುತ್ತೆ ಎಂಬ ಆಸೆ ಇಲ್ಲಿಗೆ ಮುಕ್ತಾಯವಾಗಿದೆ ಅವರ ಮುಂಬರುವ ಸಿನಿಮಾದ ಟ್ರೈಲರ್, ಪ್ರೀ ರಿಲೀಸ್ ಈವೆಂಟ್ ಯಾವುದಕ್ಕು ಕಾಯುವ ಅವಕಾಶ ಕಳೆದುಕೊಂಡಿದ್ದೇವೆ. ಗಂಧದಗುಡಿ ಸಿನಿಮಾ ಕರ್ನಾಟಕದಲ್ಲಿ ಪ್ರತಿಕ್ರಿಯೆ ಪಡೆದಿದೆ ಎಲ್ಲ ಚಿತ್ರಮಂದಿರಗಳು ಹೌಸ್ ಫುಲ್ ಆಗಿ ಪ್ರದರ್ಶನ ಕಾಣುತ್ತಿದೆ ಪುನೀತ್ ರಾಜ್ಕುಮಾರ್ ಅವರು ಸಿನಿಮಾದ ಉದ್ದಕ್ಕೂ ನೈಜ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ ಗಂಧದಗುಡಿಯಲ್ಲಿ ನಿಸರ್ಗದ ಸೌಂದರ್ಯವನ್ನು ಚಿತ್ರದಲ್ಲಿ ಸೆರೆಹಿಡಿದಿದ್ದಾರೆ ಈ ಸಿನಿಮಾವನ್ನು ಅಷ್ಟು ಚಂದವಾಗಿ ತೋರಿಸುವಲ್ಲಿ ನಿರ್ದೇಶಕ ಅಮೋಘ ವರ್ಷ ತುಂಬಾ ಶ್ರಮ ಪಟ್ಟಿದ್ದಾರೆ ಎಂದು ಚಿತ್ರ ನೋಡಿದರೆ ಗೊತ್ತಾಗುತ್ತದೆ. ಗಂಧದಗುಡಿ ಸಿನಿಮಾ ಬಿಡುಗಡೆಯಾದ ಮೊದಲ ದಿನವೇ 8 ರಿಂದ 10 ಕೋಟಿ ಕಲೆಕ್ಷನ್ ಸಿಕ್ತು ಇದು ಕೇವಲ ಕರ್ನಾಟಕದಲ್ಲಿ ಮಾತ್ರ.
ನಮ್ಮ ಕರ್ನಾಟಕದ ಹಿರಿಮೆಯನ್ನು ಎತ್ತಿ ತೋರಿಸುವಂತಹ ಗಂಧದಗುಡಿ ಸಿನಿಮಾ ವಿವಿಧ ಪ್ರಕೃತಿ ಪರಂಪರೆಯ ಸ್ಥಳಗಳಿಗೆ ಭೇಟಿ ನೀಡಿರುವ ಪುನೀತ್ ರಾಜ್ಕುಮಾರ್ ಅವರು ಹಾಗೂ ಚಿತ್ರತಂಡ ಸಾಕಷ್ಟು ಶ್ರಮಪಟ್ಟು ಈ ಒಂದು ಸಿನಿಮಾದ ಚಿತ್ರೀಕರಣವನ್ನು ಮಾಡಲಾಗಿದೆ ಆದ್ದರಿಂದ ಈ ಸಿನಿಮಾಗೆ ಒಳ್ಳೆಯ ಕಲೆಕ್ಷನ್ ಸಹ ಸಿಗುತ್ತಿದೆ. ಅಪ್ಪು ಅವರ ಕನಸು ಈ ಸಿನಿಮಾದ ಮೂಲಕ ನನಸಾಗಿದೆ ಎಂದರೆ ತಪ್ಪಾಗಲಾರದು. ಇನ್ನು ಈ ಸಿನಿಮಾ ಬಿಡುಗಡೆ ಆದಾಗಿನಿಂದ ಈ ದಿನದವರೆಗೂ ಉತ್ತಮ ಪ್ರದರ್ಶನ ಚಿತ್ರಮಂದಿರಗಳಲ್ಲಿ ಕಾಣುತ್ತಿದ್ದು ದೊಡ್ಡ ಯಶಸ್ಸನ್ನು ಪಡೆದುಕೊಂಡಿದೆ. 23 ಕೋಟಿಗೂ ಅಧಿಕ ಹಣವನ್ನು ಪಡೆದುಕೊಂಡಿದೆ ಈ ಒಂದು ಹಣದಿಂದ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ತಮ್ಮ ಯಾವುದೇ ಸ್ವಂತ ಕೆಲಸಕ್ಕೆ ಬಳಸಿಕೊಳ್ಳದೆ ಕೇವಲ ಸಮಾಜ ಸೇವೆಗಾಗಿ ಉಪಯೋಗ ಮಾಡಬೇಕು ಎನ್ನುವಂತಹ ನಿರ್ಧಾರವನ್ನು ಕೈಗೊಂಡಿದ್ದಾರೆ.
ಪುನೀತ್ ರಾಜ್ಕುಮಾರ್ ಬದುಕಿದ್ದಷ್ಟು ದಿನ ಸಾಕಷ್ಟು ಅನಾಥಾಶ್ರಮಗಳು, ವೃದ್ಧಾಶ್ರಮಗಳು, ಮಕ್ಕಳ ಶಿಕ್ಷಣ ಈ ರೀತಿಯಾದಂತಹ ಸಮಾಜ ಸೇವೆಗೆ ಬಳಕೆ ಮಾಡುತ್ತಿದ್ದರು ಆದ್ದರಿಂದ ಅಶ್ವಿನಿ ಅವರು ಸಹ ಈ ರೀತಿಯಾದಂತಹ ಸಮಾಜ ಸೇವೆಗೆ ಗಂಧದಗುಡಿ ಸಿನಿಮಾದಿಂದ ಬಂದಂತಹ ಹಣವನ್ನು ಉಪಯೋಗ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ. ಪುನೀತ್ ರಾಜ್ಕುಮಾರ್ ಅವರು ಮಾಡುತ್ತಿದ್ದಂತಹ ದಾನ ಧರ್ಮ ಸೇವೆ ಇನ್ನಿತರ ಎಲ್ಲಾ ಕೆಲಸಗಳನ್ನು ಸಹ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಮುಂದುವರಿಸಿಕೊಂಡು ಹೋಗುತ್ತಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ ಅದಕ್ಕೆ ತಕ್ಕ ಉದಾಹರಣೆ ಗಂಧದಗುಡಿ ಸಿನಿಮಾದ ಹಣವನ್ನು ಸಮಾಜ ಸೇವೆಗಾಗಿ ಬಳಸಿಕೊಳ್ಳುತ್ತಾ ಇರುವುದು. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ.