ಗೃಹಿಣಿಯರಿಗೆ ಸಿಹಿ ಸುದ್ದಿ ಕೇವಲ 500 ರೂಪಾಯಿಗೆ ಸಿಗಲಿದೆ ಗ್ಯಾಸ್ ಸಿಲಿಂಡರ್ ಪಡೆಯೋದು ಹೇಗೆ ನೋಡಿ.

 

WhatsApp Group Join Now
Telegram Group Join Now

ಇತ್ತೀಚೆಗೆ ಏರುತ್ತಿರುವ ದಿನಸಿ ಸಾಮಾನುಗಳ ರೇಟ್ ತರಕಾರಿ ಬೆಲೆ ಇಂದ ಗೃಹಿಣಿಯರು ಕಂಗೆಟ್ಟಿದ್ದಾರೆ. ಇದರ ನಡುವೆ ಏರಿರುವ ಅಡುಗೆ ಅನಿಲದ ದರವು ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ದೇಶದಾದ್ಯಂತ ಈಗ ಎಲ್ಲಾ ಗೃಹಿಣಿಯರು ಸಹ ತಮ್ಮ ಅಡುಗೆ ಕೆಲಸಕ್ಕಾಗಿ ಅಡುಗೆ ಅನಿಲವನ್ನೇ ಅವಲಂಬಿಸಿದ್ದಾರೆ. ಇದರ ನಡುವೆ ಅಡಿಗೆ ಅನಿಲದ ಬೆಲೆ ಮುಗಿಲೇರುವುದು ಗೃಹಿಣಿಯರು ಕಣ್ಣೀರುಡುವಂತೆ ಮಾಡಿದೆ.

ಪ್ರತಿ ಬಾರಿ ಕೂಡ ಮಹಿಳೆಯರು ಇದರ ಬಗ್ಗೆ ತಮ್ಮ ಪ್ರತಿರೋಧ ವ್ಯಕ್ತಪಡಿಸತ್ತಲೇ ಇದ್ದರು. ಸರ್ಕಾರ ನಿಗದಿಪಡಿಸಿರುವ ಈ ಬೆಲೆ ತೆತ್ತು ಸಿಲಿಂಡರ್ ಕೊಂಡುಕೊಳ್ಳದೆ ಬೇರೆ ದಾರಿ ಇಲ್ಲ ಆದರೆ ಸದ್ಯಕ್ಕೀಗ ಎಲ್ಲಾ ಬಿಪಿಎಲ್ ಕಾರ್ಡ್ ಹೊಂದಿರುವ ಗೃಹಿಣಿಯರು ಸ್ವಲ್ಪ ಸಮಾಧಾನ ಪಟ್ಟುಕೊಳ್ಳಬಹುದು ಯಾಕೆಂದರೆ ನೀವು ಖರೀದಿಸುವ ಸಿಲಿಂಡರ್ ಬೆಲೆ ಶೀಘ್ರವಾಗಿ 500 ಇಳಿಕೆ ಆಗಲಿದೆ.

ರಾಜಸ್ಥಾನ ರಾಜ್ಯದ ಮುಖ್ಯಮಂತ್ರಿಗಳಾದ ಅಶೋಕ್ ಗೆಲೋಟ್ ಅವರು ಸಧ್ಯಕ್ಕೆ ಈಗ ಈ ರೀತಿ ಹೇಳಿಕೆ ಕೊಟ್ಟು ಸಂಚನ ಸೃಷ್ಟಿಸಿದ್ದಾರೆ. ಭಾರತ್ ಜೋಡೋ ಯಾತ್ರೆ ವೇಳೆ ನೆರೆದಿದ್ದ ಜನತೆಯ ಜೊತೆ ಮಾತನಾಡುತ್ತಿದ್ದ ವೇಳೆ ಮಾಧ್ಯಮದವರ ಎದುರಿಗೆ ಇಂತಹದೊಂದು ಭರವಸೆ ನೀಡಿದ್ದಾರೆ. ಅದೇನೆಂದರೆ ದೇಶದಲ್ಲಿ ಹಣದುಬ್ಬರದ ಸಮಸ್ಯೆ ಆಗಿದೆ. ಆರ್‌ಬಿಐ ಕೂಡ ಈ ಪ್ರತಿಕೂಲ ಪರಿಸ್ಥಿತಿಯನ್ನು ನಿವಾರಿಸುವ ಎಲ್ಲಾ ಪ್ರಯತ್ನವನ್ನು ಮಾಡುತ್ತಿದೆ.

ರೆಪೋ ದರದಲ್ಲೂ ಕೂಡ ಏರುಪೇರುಗಳು ಆಗುತ್ತಿರುವುದರಿಂದ ಹೀಗೆ ಎಲ್ಲಾ ಪದಾರ್ಥಗಳ ಬೆಲೆ ಹೆಚ್ಚಿಗೆ ಆಗಿದೆ. ಆದರೆ ಶೀಘ್ರವಾಗಿ ಈ ಸಮಸ್ಯೆಗೆ ಪರಿಹಾರ ತರಲಾಗುವುದು ಅದರಲ್ಲೂ ಮುಖ್ಯವಾಗಿ ಗೃಹಿಣಿಯರ ಅಡುಗೆ ಅನಿಲದ ದರ ಹೆಚ್ಚಾಗಿರುವ ಬಗ್ಗೆ ಮುಖ್ಯವಾಗಿ ಗಮನ ಕೊಟ್ಟು ಅದರ ಬೆಲೆಯಲ್ಲಿ ಭಾರಿ ಇಳಿಕೆ ಮಾಡಲಾಗುವುದು ಎಂದು ಹೇಳಿ ಈ ಆಫರ್ ಕೊಟ್ಟಿದ್ದಾರೆ.

ರಾಜಸ್ಥಾನದಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ ಉಜ್ವಲ್ ಯೋಜನೆ ಅಡಿ ಗ್ಯಾಸ್ ಸಿಲಿಂಡರ್ ಖರೀದಿ ಮಾಡಿದ್ದ ಕುಟುಂಬಗಳಿಗೆ ವಾರ್ಷಿಕವಾಗಿ 12 ಸಿಲಿಂಡರ್ ನೀಡಲಾಗುವುದು. ಈ ಅನುಕೂಲ ಮಾಡಿಕೊಟ್ಟರು ಕೂಡ ಕುಟುಂಬಗಳು ಸಿಲಿಂಡರ್ ಪಡೆಯಲು ಸಾಧ್ಯವಾಗುತ್ತಿಲ್ಲ ಕಾರಣ ಅದರ ಬೆಲೆ ವಿಪರೀತವಾಗಿ ಹೆಚ್ಚಾಗಿರುವುದು.

ಇದನ್ನು ಮನೆಗಂಡಿರುವ ಸರ್ಕಾರ ಈ ಬಗ್ಗೆ ಗಮನ ಹರಿಸಿದೆ ಎಂದು ಹೇಳಿ ಏಪ್ರಿಲ್ ಒಂದಕ್ಕೆ ಅನ್ವಯ ಆಗುವಂತೆ 500 ರೂಪಾಯಿಗಳ ಬೆಲೆ ಇಳಿಕೆ ರಾಜ್ಯದಲ್ಲಿ ತರುವುದು ಎಂದು ಭರವಸೆ ನೀಡಿದ್ದಾರೆ. ಈಗಾಗಲೇ ರಾಜಸ್ಥಾನದಲ್ಲಿ 1040ರೂ. ಅಡಿಗೆ ಅನಿಲದ ಬೆಲೆ ಇದ್ದು, 500 ಇಳಿಕೆ ಆಗುವುದರಿಂದ 540 ರೂಗೆ ಖರೀದಿ ಮಾಡಿ ನೆಮ್ಮದಿಯಾಗಿ ಮಹಿಳೆಯರು ಹೊಗೆ ಮುಕ್ತವಾಗಿ ಅಡುಗೆ ಮಾಡಬಹುದಾಗಿದೆ. ಉಜ್ವಲ್ ಯೋಜನೆಯ ಉದ್ದೇಶವು ಸಹ ಇದೇ ಆಗಿದ್ದು ಬೆಲೆ ಇಳಿಕೆ ಆದರೆ ಖಂಡಿತ ಎಲ್ಲಾ ಮಹಿಳೆಯರಿಗೂ ಸಂತಸ ಆಗಲಿದೆ.

ರಾಜ್ಯದಲ್ಲೂ ಕೂಡ ವಿಧಾನಸಭಾ ಎಲೆಕ್ಷನ್ ಇರುವುದರಿಂದ ಯಾವ ಪಕ್ಷದ ಪ್ರಣಾಳಿಕೆ ಅಲ್ಲಿ ಆದರೂ ಈ ರೀತಿ ಭರವಸೆ ಸಿಗಬಹುದೇ ಎಂದು ಎದುರು ನೋಡುತ್ತಿದ್ದಾರೆ. ಈಗ ದೇಶದಲ್ಲಿ ಎಲ್ಲ ವಸ್ತುಗಳ ಬೆಲೆ ಏರಿಕೆ ಆಗಿರುವುದು ಹಾಗೂ ಮುಖ್ಯವಾಗಿ ಅಡುಗೆ ಅನಿಲದ ದರ ವಿಪರೀತ ಏರಿಕೆ ಆಗಿರುವುದರ ಬಗ್ಗೆ ಮತ್ತು ಈ ಹೊಸ ಯೋಜನೆ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎನ್ನುವುದನ್ನು ತಪ್ಪದೆ ಕಮೆಂಟ್ ಮಾಡಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now