ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ (International Womens Day) ಅಂಗವಾಗಿ ದೇಶದ ಮಹಿಳೆಯರಿಗೆ ಕೇಂದ್ರ ಸರ್ಕಾರದ ವತಿಯಿಂದ ಗುಡ್ ನ್ಯೂಸ್ ಸಿಕ್ಕಿದೆ. ಹೊಗೆಯುಕ್ತ ಅಡುಗೆ ಮನೆಗಳಿಂದ ಹೆಣ್ಣು ಮಕ್ಕಳ ಆರೋಗ್ಯವನ್ನು ಕಾಪಾಡಲು ಕಾಳಜಿ ಮಾಡಿರುವ ಸರ್ಕಾರವು ಪ್ರಧಾನಮಂತ್ರಿ ಉಜ್ವಲ್ ಯೋಜನೆಯಂತಹ (PMUY) ವಿಶೇಷವಾದ ಯೋಜನೆಗಳನ್ನು ಪರಿಚಯಿಸಿದೆ.
ಇದರ ಜೊತೆಗೆ ಉಳಿದ ಬಳಕೆದಾರರಿಗೂ ಕೂಡ ಅನುಕೂಲವಾಗುವಂತೆ ಸಿಲಿಂಡರ್ ಬುಕ್ಕಿಂಗ್ ಮೇಲೆ ಸಬ್ಸಿಡಿ (Subsidy) ಯನ್ನು ಘೋಷಿಸಿ ನೆರವಾಗುತ್ತಿದೆ. ಹಾಗೆ ಆಗಾಗ ಅಡುಗೆ ಅನಿಲದ ಬೆಲೆಯನ್ನು ನಿಯಂತ್ರಣಕ್ಕೆ ತರುವುದಕ್ಕಾಗಿ ಹಲವು ಕ್ರಮಗಳನ್ನು ಕೈಗೊಂಡ ಸರ್ಕಾರವು ಈಗ ಮತ್ತೊಮ್ಮೆ ಸಬ್ಸಿಡಿ ಮೊತ್ತವನ್ನು 100ರೂ.
ಹೆಚ್ಚಿಸಿ ಘೋಷಿಸುವುದರ ಜೊತೆಗೆ ಪ್ರಧಾನಮಂತ್ರಿ ಉಜ್ವಲ್ ಯೋಜನೆಯಡಿ ಸಂಪರ್ಕ ಪಡೆದಿರುವ ಕುಟುಂಬಗಳಿಗೂ ಕೂಡ ಮುಂದಿನ ಒಂದು ವರ್ಷದವರೆಗೆ ಅನ್ವಯವಾಗುವಂತಹ ಹೊಸದೊಂದು ಘೋಷಣೆ ಮಾಡಿದೆ.
ಈ ಸುದ್ದಿ ಓದಿ:- ಇನ್ಮುಂದೆ ಮನೆಯಲ್ಲಿ ಬೈಕ್ ಕಾರ್ ತೊಳೆದರೆ 5000 ದಂಡ ಫಿಕ್ಸ್ ಸರ್ಕಾರದಿಂದ ಹೊಸ ರೂಲ್ಸ್ ಜಾರಿ.!
ಪ್ರಸ್ತುತವಾಗಿ ಪ್ರಧಾನಮಂತ್ರಿ ಉಜ್ವಲ ಯೋಜನೆಯಲ್ಲಿ ನೀಡುತ್ತಿರುವ 300 ರೂಪಾಯಿಗಳ ಸಬ್ಸಿಡಿಯನ್ನು ಕೇಂದ್ರ ಸರ್ಕಾರವು ಮುಂದಿನ ಒಂದು ವರ್ಷದವರೆಗೆ ಘೋಷಿಸಿದೆ. ಈಗ ಫಲಾನುಭವಿ ಮಹಿಳೆಯರು 31 ಮಾರ್ಚ್ 2025 ರವರೆಗೆ ಕೂಡ ಉಜ್ವಲ ಯೋಜನೆಯ ಸಬ್ಸಿಡಿಯ ಪ್ರಯೋಜನವನ್ನು ಪಡೆಯಬಹುದು.
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಗೂ ಒಂದು ದಿನ ಮುಂಚಿತವಾಗಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಸರ್ಕಾರ ಉಜ್ವಲ ಯೋಜನೆ ಬಳಕೆದಾರರಿಗೆ ಗುಡ್ ನ್ಯೂಸ್ ಕೊಟ್ಟಿದೆ. ಈ ವಿಚಾರವನ್ನು ಸ್ವತಃ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪ್ರಧಾನಿಗಳೇ ಹಂಚಿಕೊಂಡಿದ್ದಾರೆ.
ಕೇಂದ್ರ ಸಚಿವರಾದ (Minister) ಪಿಯುಷ್ ಗೋಯಲ್ ರವರು ಕೂಡ ಇದರ ಬಗ್ಗೆ ಮಾತನಾಡಿದ್ದಾರೆ. ಕೇಂದ್ರ ಸರ್ಕಾರದ ಈ ನಿರ್ಧಾರದಿಂದ 10 ಕೋಟಿ ಕುಟುಂಬಗಳಿಗೆ ಅನುಕೂಲವಾಗಲಿದೆ. ಇದಕ್ಕಾಗಿ ಕೇಂದ್ರ ಸರ್ಕಾರವು 12 ಸಾವಿರ ಕೋಟಿ ರೂಪಾಯಿ ಹೊರೆ ಹೊತ್ತುಕೊಂಡಿದೆ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ.
ಈ ಸುದ್ದಿ ಓದಿ:- SSLC ಆದವರಿಗೆ ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದಲ್ಲಿ ಗ್ರೂಪ್ ಡಿ ಹುದ್ದೆಗಳು ಅರ್ಜಿ ಆಹ್ವಾನ.! ವೇತನ 42,000 ಆಸಕ್ತರು ಅರ್ಜಿ ಸಲ್ಲಿಸಿ.!
ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಸರ್ಕಾರವು ಪ್ರತಿ LPG ಸಿಲಿಂಡರ್ ಬುಕ್ಕಿಂಗೆ ಕೂಡ ರೂ.300 ಸಬ್ಸಿಡಿ ನೀಡುತ್ತಿದೆ. ಈ ಸಬ್ಸಿಡಿ ಒಂದು ವರ್ಷದಲ್ಲಿ 12 ಸಿಲಿಂಡರ್ ನೊಳಗೆ ಬಳಕೆ ಮಾಡಿದ ಗ್ರಾಹಕರಿಗಷ್ಟೇ ಸಿಗಲಿದೆ. ಅಕ್ಟೋಬರ್ 2023 ರಲ್ಲಿ 200 ರೂಪಾಯಿ ಇದ್ದ ಸಬ್ಸಿಡಿಯನ್ನ 300 ರೂಪಾಯಿಗೆ ಹೆಚ್ಚಿಸಲಾಗಿತ್ತು.
ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY) ನ್ನು ಮೇ 2016 ರಲ್ಲಿ ಬಡ ಕುಟುಂಬಗಳ ಮಹಿಳೆಯರಿಗೆ ಠೇವಣಿ-ಮುಕ್ತ LPG ಸಂಪರ್ಕಗಳನ್ನು ಒದಗಿಸಲು ಪ್ರಾರಂಭಿಸಲಾಯಿತು. ದೇಶಾದ್ಯಂತ ಸುಮಾರು 10 ಕೋಟಿ ಕುಟುಂಬ ಉಜ್ವಲ ಯೋಜನೆಯ ಫಲಾನುಭವಿಗಳಾಗಿದ್ದಾರೆ.
ಠೇವಣಿ ಇಲ್ಲದ ಉಚಿತ ಗ್ಯಾಸ್ ಕನೆಕ್ಷನ್ ಜೊತೆ ಗ್ಯಾಸ್ ಸ್ಟವ್ ಒಂದು ಸಿಲಿಂಡರ್ ಮತ್ತು ಉತ್ತಮ ಗುಣಮಟ್ಟದ ರೆಗ್ಯುಲೇಟರ್ ಹಾಗೂ ಗ್ಯಾಸ್ ಲೈಟರ್ ಸಹ ನೀಡಲಾಗುತ್ತಿದೆ. ಇದರ ಜೊತೆಗೆ ಸರ್ಕಾರವು ಸಬ್ಸಿಡಿ ಕೂಡ ನೀಡುತ್ತಿರುವುದರಿಂದ ದೇಶದ ಬಡ ಹಾಗೂ ಮಧ್ಯಮ ವರ್ಗದ ಕೋಟ್ಯಂತರ ಕುಟುಂಬಗಳ ಮಹಿಳೆಯರು ಹೊಗೆ ಮುಕ್ತ ವಾಹನದಲ್ಲಿ ಅಡುಗೆ ಮಾಡುವಂತಾಗಿದೆ ಎಂದು ಶ್ಲಾಘಿಸಿದ ಸಚಿವರು ಈ ರೀತಿ ಮಹಿಳೆಯರಿಗೆ ಸಮಾಧಾನಕರ ಸುದ್ದಿ ನೀಡಿದ್ದಾರೆ.
ಈ ಸುದ್ದಿ ಓದಿ:- ಕೇವಲ 20 ರೂಪಾಯಿ ಕಟ್ಟಿ ಸಾಕು, 2 ಲಕ್ಷದವರೆಗೆ ವಿಮೆ ಸಿಗುತ್ತದೆ, ಕೇಂದ್ರ ಸರ್ಕಾರದಿಂದ ಬಡವರಿಗಾಗಿ ಯೋಜನೆ, ನಿಮ್ಮ ಕುಟುಂಬದ ಸುರಕ್ಷತೆಗಾಗಿ ಈ ಯೋಜನೆ ಇಂದೇ ಮಾಡಿಸಿ.!
ಬೆಲೆ ಏರಿಕೆ ಬಿಸಿಯಿಂದ ಕಂಗಾಲಾಗಿದ್ದ ಜನರಿಗೆ ಈಗ ಗ್ಯಾಸ್ ರೇಟ್ ಇಳಿಕೆ ಆಗಿರುವುದು ಬಹಳ ಸಂತೋಷ ತಂದಿದೆ. ಲೋಕಸಭಾ ಚುನಾವಣೆ ಹತ್ತಿರದಲ್ಲಿ ಇರುವುದರಿಂದ ಸರ್ಕಾರವು ಮಹಿಳೆಯರ ವೋಟ್ ಪಡೆಯಲು ಈ ರೀತಿ ಮಾಡುತ್ತಿದೆ ಎನ್ನುವ ಆರೋಪವನ್ನು ವಿಪಕ್ಷಗಳು ಮಾಡುತ್ತಿದೆಯಾದರೂ ಪ್ರಧಾನಮಂತ್ರಿ ಉಜ್ವಲ್ ಯೋಜನೆ ಲಕ್ಷಾಂತರ ಮಹಿಳೆಯರಿಗೆ ಒಳಿತಾಗಿರುವುದು ಸುಳ್ಳಲ್ಲ. ರೂ.900 ರೂಪಾಯಿಗೆ ಇದ್ದ ಸಿಲಿಂಡರ್ ಅನ್ನು ಈಗ ಸಬ್ಸಿಡಿ ನೆರವಿನಿಂದ ರೂ.600 ಖರೀದಿಸುವ ಅವಕಾಶ ಸಿಕ್ಕಿದೆ.