ಕೃಷಿ ಇಲಾಖೆ ವತಿಯಿಂದ ಸಣ್ಣ ರೈತರಿಗೆ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನೆರವು ಒದಗಿಸಲಾಗುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿವಿಧ ಯೋಜನೆಗಳನ್ನು ರೂಪಿಸಿ ಕೃಷಿ ಇಲಾಖೆ ಮೂಲಕ ಸಾಕಾರ ಪಡಿಸಿಕೊಳ್ಳಲು ರೈತರಿಗೆ ಸೂಚಿಸುತ್ತವೆ ಅಂತೆಯೇ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಕೃಷಿ ಇಲಾಖೆ ವತಿಯಿಂದ.
ಈ ಸುದ್ದಿ ನೋಡಿ:- ಪೋಲಿಸ್ ಇಲಾಖೆಯಲ್ಲಿ ಖಾಲಿ ಇರುವ ಕಂಪ್ಯೂಟರ್ ಆಪರೇಟರ್ & ಕ್ಲರ್ಕ್, ಅಕೌಂಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ವೇತನ 51,400
ಸೂಕ್ಷ್ಮ ನೀರಾವರಿ ಯೋಜನೆಯಡಿ ರೈತರಿಗೆ ಸ್ಪ್ರಿಂಕ್ಲರ್ ಸೆಟ್ ಖರೀದಿಸಲು ಆರ್ಥಿಕ ನೆರವು ನೀಡಲಾಗುತ್ತಿದೆ, ರೈತರು ಸಬ್ಸಿಡಿಯಲ್ಲಿ ಸಿಗುತ್ತಿರುವ ಈ ಸ್ಲಿಂಕ್ಲರ್ ಸೆಟ್ (ಕಪ್ಪು ಪೈಪ್ ಮತ್ತು ಜೆಟ್) ಪಡೆದುಕೊಳ್ಳಲು ರೈತರಿಗೆ ಇರಬೇಕಾದ ಅರ್ಹತೆಗಳೇನು? ಬೇಕಾಗುವ ದಾಖಲೆಗಳೇನು? ಅರ್ಜಿ ಸಲ್ಲಿಸುವುದು ಹೇಗೆ? ಎನ್ನುವುದನ್ನು ಈ ಅಂಕಣದಲ್ಲಿ ಹಂಚಿಕೊಳ್ಳುತ್ತಿದ್ದೇವೆ.
ಯೋಜನೆಯ ಉದ್ದೇಶ:-
ರೈತರು ಕೃಷಿ ಚಟುವಟಿಕೆ ಮಿತವಾಗಿ ನೀರು ಬಳಸುವಂತೆ ಪ್ರೇರೇಪಿಸಲು ಈ ಮೂಲಕ ನೀರಿನ ಸಮರ್ಪಕ ನಿರ್ವಹಣೆ ಜೊತೆಗೆ ಮಣ್ಣಿನ ಸವಕಳಿ ಹಾಗೂ ಫಲವತ್ತತೆ ಕ್ಷೀಣವಾಗುವುದನ್ನು ತಪ್ಪಿಸಿ ಭೂಮಿಯ ಫಲವತ್ತತೆಯನ್ನು ಕಾಪಾಡಿಕೊಳ್ಳಲು ಜಾಗ್ರತೆ ಮೂಡಿಸಿ ರೈತನಿಗೆ ಅನುಕೂಲತೆ ಮಾಡಿಕೊಡುವುದು.
ಬೇಕಾಗುವ ದಾಖಲೆಗಳನು?
* ಆಧಾರ್ ಕಾರ್ಡ್
* ಜಮೀನಿನ RTC
* ಬ್ಯಾಂಕ್ ಪಾಸ್ ಬುಕ್ ವಿವರ
* 20ರೂ. ಸ್ಟ್ಯಾಂಪ್ ಪೇಪರ್ ಅಫಿಡವಿಟ್
* ಜಮೀನಿಗೆ ನೀರಿನ ಸೌಲಭ್ಯ ಇರುವುದರ ಬಗ್ಗೆ ಗ್ರಾಮ ಆಡಳಿತ ಅಧಿಕಾರಿ, ಕಂದಾಯ ಇಲಾಖೆಯಿಂದ ಪಡೆದ ದೃಢೀಕರಣ ಪತ್ರ
* ಇತ್ತೀಚಿನ ಫೋಟೋ
* ಜಾತಿ ಪ್ರಮಾಣ ಪತ್ರ (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗಗಳಿಗೆ ಸೇರಿದ ರೈತರಿಗೆ)
ರೈತನು ಪಾವತಿ ಮಾಡಬೇಕಾದ ವಂತಿಕೆ:-
* 1 ಎಕರೆಗೆ ರೂ.2496 (18 ಪೈಪ್ + 2 ಜೆಟ್)
* 1 – 2.5 ಎಕರೆವರೆಗೆ ಭೂಮಿ ಹೊಂದಿರುವ ಸಣ್ಣ ರೈತರು ರೂ.4139 ಪಾವತಿ ಮಾಡಿದರೆ (30 ಪೈಪ್ + 5 ಜೆಟ್)
ಈ ಸುದ್ದಿ ಓದಿ:- ಗ್ಯಾಸ್ ಸಬ್ಸಿಡಿ ಹಣ ನಿಮ್ಮ ಖಾತೆಗೆ ಬಂದಿದೆಯೋ ಅಥವಾ ಇಲ್ಲವೋ ಈ ರೀತಿ ಚೆಕ್ ಮಾಡಿ.!
ಅರ್ಜಿ ಸಲ್ಲಿಸುವುದು ಹೇಗೆ
* ಈ ಮೇಲೆ ತಿಳಿಸಿದ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ರೈತರು ಹತ್ತಿರದಲ್ಲಿರುವ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಅರ್ಜಿ ಸಲ್ಲಿಸಬಹುದು
* ಮೊಬೈಲ್ ನಲ್ಲಿಯೂ ಕೂಡ ಅರ್ಜಿ ಸಲ್ಲಿಸಿ ನೋಂದಾಯಿಸಿಕೊಳ್ಳಬೇಕು
1. ಕರ್ನಾಟಕ ಸರ್ಕಾರ ಕೃಷಿ ಇಲಾಖೆಯ ಕೆ-ಕಿಸಾನ್ ವೆಬ್ ಸೈಟ್ ಗೆ ಭೇಟಿ ನೀಡಿ👇 https://kkisan.karnataka.gov.in/Home.aspx
2. ಸೂಕ್ಷ್ಮ ನೀರಾವರಿ ಅರ್ಜಿ ನೋಂದಣಿ (Micro Irrigation Application Register) ಮೇಲೆ ಕ್ಲಿಕ್ ಮಾಡಿ👇 https://kkisan.karnataka.gov.in/Citizen/ApplicationEntryMI.aspx
3. ರೈತನು FID ನಂಬರ್ ಹಾಕಿ get details ಬಟನ್ ಕ್ಲಿಕ್ ಮಾಡಬೇಕು, ಆಗ ರೈತನ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಬರುತ್ತದೆ, Verify and Continue ಮೇಲೆ ಕ್ಲಿಕ್ ಮಾಡಿ ಮುಂದುವರೆಯಿರಿ.
4. ಅರ್ಜಿ ನಮೂನೆ ಓಪನ್ ಆಗುತ್ತದೆ ರೈತನು ವಿವರಗಳನ್ನು ತುಂಬಿಸಿ ಪೂರಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು ಅಥವಾ ಪೂರಕ ದಾಖಲೆಗಳ ಸಂಖ್ಯೆಯನ್ನು ಸೂಚಿಸುತ್ತಿರುವ ಸ್ಥಳಗಳಲ್ಲಿ ನಮೂದಿಸಿ Submit button ಕ್ಲಿಕ್ ಮಾಡಿ, ನಿಮಗೆ ಸೂಚಿಸಿರುವಷ್ಟು ಶುಲ್ಕವನ್ನು ಆನ್ಲೈನ್ ವಿಧಾನದಲ್ಲಿ ಪಾವತಿಸಿ ಇ-ರಸೀದಿ ಪಡೆಯಿರಿ ಮತ್ತು ಅರ್ಜಿ ಸಲ್ಲಿಕೆ ಪೂರ್ತಿ ಆದಮೇಲೆ ತಪ್ಪದೆ ಅರ್ಜಿ ಸ್ವೀಕೃತಿ ಪ್ರತಿ ಪಡೆಯಿರಿ.
5. ನಂತರ ಅದನ್ನು ಪಡೆದುಕೊಂಡು ನಿಮ್ಮ ರೈತ ಸಂಪರ್ಕ ಕೇಂದ್ರಕ್ಕೆ ಸಂಪರ್ಕಿಸಿದರೆ ಸ್ಲಿಂಕರ್ ಸೆಟ್ ನೀಡುತ್ತಾರೆ.