ದೇಶದ ಪ್ರತಿಷ್ಠಿತ ಬ್ಯಾಂಕ್ ಗಳಲ್ಲಿ ಒಂದಾಗಿರುವ HDFC ಬ್ಯಾಂಕ್ ಪರಿವರ್ತನ ECSS ಕಾರ್ಯಕ್ರಮವನ್ನು (HDFC Bank Parivartan ECSS Programme 2023-24) ಹಮ್ಮಿಕೊಂಡಿದೆ. ಈ ಯೋಜನೆ ಉದ್ದೇಶವೇನೆಂದರೆ ದೇಶದಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಪ್ರತಿಭಾವಂತ ಅರ್ಹ ವಿದ್ಯಾರ್ಥಿಗಳಿಗೆ ಧನ ಸಹಾಯ ನೀಡಿ ಪ್ರೋತ್ಸಾಹಿಸುವುದಾಗಿದೆ.
ದೇಶದಲ್ಲಿ ಸರ್ಕಾರಗಳು ಮಾತ್ರವಲ್ಲದೆ ಸರ್ಕಾರೇತರವಾಗಿ ಹಲವಾರು ಕಂಪನಿಗಳು ಈ ರೀತಿ ಬಡ ವಿದ್ಯಾರ್ಥಿಗಳಿಗೆ ಹಣಕಾಸಿನ ಅನುಕೂಲತೆ ಒದಗಿಸಿ ವಿದ್ಯಾಭ್ಯಾಸವನ್ನು ಬಡತನದ ಕಾರಣದಿಂದ ಮೊಟಕುಗೊಳಿಸುವ ವಿದ್ಯಾರ್ಥಿಗಳ ಹಿಂದಿನ ಬಲವಾಗಿ ನಿಂತಿವೆ.
ಈ ಸುದ್ದಿ ನೋಡಿ:- ಜಮೀನು, ಮನೆ, ಸೈಟ್, ಇನ್ನಿತರ ಆಸ್ತಿಗೆ ತಕರಾರು ಅರ್ಜಿ ಸಲ್ಲಿಸುವುದು ಹೇಗೆ.? ತಕರಾರು ಪ್ರಕ್ರಿಯೆ ಹೇಗೆ ಇರುತ್ತೆ ಸಂಪೂರ್ಣ ಮಾಹಿತಿ.!
ಈಗ HDFC ಕೂಡ ಆ ಸಾಲಿಗೆ ಸೇರುತ್ತಿದ್ದು, ಯಾರೆಲ್ಲ ಈ ವಿದ್ಯಾರ್ಥಿ ವೇತನ (Scholarship) ಪಡೆಯಬಹುದು ಮತ್ತು ಎಷ್ಟು ಸಹಾಯಧನ ಸಿಗುತ್ತದೆ ಹೇಗೆ ಅರ್ಜಿ ಸಲ್ಲಿಸುವುದು ಎನ್ನುವ ಮಾಹಿತಿಯನ್ನು ಈ ಲೇಖನದಲ್ಲಿ ಹಂಚಿಕೊಳ್ಳುತ್ತಿದ್ದೇವೆ.
ಅರ್ಜಿ ಸಲ್ಲಿಸಲು ಯಾರು ಅರ್ಹರು:-
* ದೇಶದ ಯಾವುದೇ ಶಾಲೆ ಅಥವಾ ಕಾಲೇಜುಗಳಲ್ಲಿ 1ನೇ ತರಗತಿಯಿಂದ ಸ್ನಾತಕೋತ್ತರ ಪದವಿವರೆಗೆ ಯಾವುದೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
* ಅರ್ಜಿ ಸಲ್ಲಿಸುವ ವಿದ್ಯಾರ್ಥಿಯ ಹಿಂದಿನ ವರ್ಷದ ಪರೀಕ್ಷೆಯಲ್ಲಿ ಶೇಕಡ 55% ಅಂಕಗಳಿಗೆ ಕಡಿಮೆ ಇಲ್ಲದಂತೆ ಉತ್ತೀರ್ಣರಾಗಿರಬೇಕು
* ಎಲ್ಲ ಮೂಲಗಳಿಂದ ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯ ಮಿತಿ 2.5 ಲಕ್ಷದ ಒಳಗಿರಬೇಕು
* ಈ ಹಿಂದಿನ ಮೂರು ವರ್ಷಗಳಲ್ಲಿ ಕೌಟುಂಬಿಕ ಬಿಕ್ಕಟ್ಟು ಅಥವಾ ವೈಯಕ್ತಿಕ ಸಮಸ್ಯೆಗಳನ್ನು ಎದುರಿಸಿದ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು.
ಈ ಸುದ್ದಿ ನೋಡಿ:- ರೈತರ ಖಾತೆಗೆ ಬಂತು ಬರ ಪರಿಹಾರ ಉಚಿತ ರೂ.2,000 ಹಣ, ನಿಮ್ಮ ಮೊಬೈಲ್ ನಲ್ಲೇ ಚೆಕ್ ಮಾಡಿ.! ಹಣ ಬರದೇ ಇದ್ದವರು ಚಿಂತೆ ಮಾಡಬೇಡಿ ಈ ದಿನಾಂಕದಂದು ನಿಮಗೂ ಬರುತ್ತೆ.!
ವಿದ್ಯಾರ್ಥಿ ವೇತನದ ಮೊತ್ತ:-
* 1ನೇ ತರಗತಿಯಿಂದ 6ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ರೂ.15,0000
* 7ನೇ ತರಗತಿಯಿಂದ 12ನೇ ತರಗತಿ, ಡಿಪ್ಲೋಮಾ ಮತ್ತು ಪಾಲಿಟೆಕ್ನಿಕ್ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ರೂ.18,000
* ಸಾಮಾನ್ಯ ಪದವಿ ಕೋರ್ಸ್ ಗಳಿಗೆ ರೂ.30,000
* ವೃತ್ತಿಪರ ಪದವಿ ಕೊರ್ಸ್ ಗಳಿಗೆ ರೂ.50,000
* ಸಾಮಾನ್ಯ ಸ್ನಾತಕೋತ್ತರ ಪದವಿ ಕೋರ್ಸ್ ಗಳಿಗೆ ರೂ.35,000
* ವೃತ್ತಿಪರ ಸ್ನಾತಕೋತ್ತರ ಪದವಿ ಕೋರ್ಸ್ ಗಳಿಗೆ ರೂ.75,000
ಅರ್ಜಿ ಸಲ್ಲಿಸುವ ವಿಧಾನ:-
https://www.buddy4study.com ವೆಬ್ ಸೈಟ್ ಗೆ ಭೇಟಿ ನೀಡಿ
* HDFC Bank Parivartan’s ECSS Programme 2023-24 ವಿಭಾಗಕ್ಕೆ ಹೋಗಿ ಅರ್ಜಿ ಸಲ್ಲಿಸುವ ಲಿಂಕ್ ಕ್ಲಿಕ್ ಮಾಡಿ ಕೇಳಲಾಗಿರುವ ವೈಯಕ್ತಿಕ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ
* ಕೇಳಲಾಗಿರುವ ಪೂರಕ ದಾಖಲೆಗಳಲ್ಲಿನ ಸಂಖ್ಯೆ ಅಥವಾ ಕಾಪಿಯನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡುವ ಮೂಲಕ ಅರ್ಜಿ ಸಲ್ಲಿಕೆ ಯಶಸ್ವಿಗೊಳಿಸಿ ತಪ್ಪದೇ ಅರ್ಜಿ ಸ್ವೀಕೃತಿ ಪ್ರತಿ ಪಡೆದುಕೊಳ್ಳಿ.
ಈ ಸುದ್ದಿ ನೋಡಿ:- ಮನೆಯಲ್ಲಿಯೇ ಪೇಪರ್ ಪ್ಲೇಟ್ ಮಾಡಿ ತಿಂಗಳಿಗೆ 50 ಸಾವಿರದಿಂದ 1 ಲಕ್ಷದವರೆಗೆ ದುಡಿಯಬಹುದು, ಮಹಿಳೆಯರು ಪುರುಷರು ಹಳ್ಳಿಯವರು ಎಲ್ಲರೂ ಕೂಡ ಮಾಡಬಹುದು.!
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:-
* ವಿದ್ಯಾರ್ಥಿಯ ಪಾಸ್ಪೋರ್ಟ್ ಅಳತೆಯ ಭಾವಚಿತ್ರ
* ಆಧಾರ್ ಕಾರ್ಡ್
* ಹಿಂದಿನ ವರ್ಷದ ಪರೀಕ್ಷೆಯ ಅಂಕಪಟ್ಟಿ
* ಪ್ರಸಕ್ತ ವರ್ಷದಲ್ಲಿ ಶೈಕ್ಷಣಿಕ ವಿದ್ಯಾಭ್ಯಾಸಕ್ಕೆ ದಾಖಲಾಗಿರುವ ಬಗ್ಗೆ ಯಾವುದೇ ದೃಢೀಕರಣ ಪತ್ರ ಅಥವಾ ಶುಲ್ಕ ಪಾವತಿಸಿರುವ ರಸೀದಿ
* ಕುಟುಂಬದ ರೇಷನ್ ಕಾರ್ಡ್
* ವಿದ್ಯಾರ್ಥಿಯ ಬ್ಯಾಂಕ್ ಪಾಸ್ ಬುಕ್ ವಿವರ ಅಥವಾ ರದ್ದಾದ ಚೆಕ್
* ಆದಾಯ ಪ್ರಮಾಣ ಪತ್ರ
ಪ್ರಮುಖ ದಿನಾಂಕಗಳು:-
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – ಈಗಾಗಲೇ ಆರಂಭಗೊಂಡಿದೆ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 31 ಜನವರಿ, 2024.