ಕರ್ನಾಟಕ ರಾಜ್ಯ ಸರ್ಕಾರವು ಮಹಿಳೆಯರಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಮಹಿಳೆಯರಿಗಾಗಿಯೇ ಇರುವ ಮಾತೃವಂದನ ಇನ್ನು ಮುಂತಾದ ಯೋಜನೆಗಳಿಂದ ಸಾಕಷ್ಟು ಕುಟುಂಬಗಳಿಗೆ ನೆರವಾಗಿದೆ ಹಾಗೂ ರಾಜ್ಯದ ಲಕ್ಷಾಂತರ ಮಹಿಳೆಯರು ಪ್ರತಿ ವರ್ಷ ಇದರ ಅನುಕೂಲ ಪಡೆಯುತ್ತಿದ್ದಾರೆ. ಇದರೊಂದಿಗೆ ಮಹಿಳೆಯರಿಗೆ ತಮ್ಮ ಆರ್ಥಿಕ ಶಕ್ತಿ ಚೇತರಿಸಿಕೊಳ್ಳಲು ಉಚಿತವಾಗಿ ಕೌಶಲ್ಯ ಅಭಿವೃದ್ಧಿ ತರಬೇತಿಗಳನ್ನು ಕೊಡುವುದು ಜೊತೆಗೆ ಸಣ್ಣಪುಟ್ಟ ವ್ಯಾಪಾರ, ವಹಿವಾಟು, ಉದ್ಯೋಗ ಆರಂಭಿಸಲು ಸಬ್ಸಿಡಿ ದರದಲ್ಲಿ ಸಾಲ ನೀಡುವುದು ಇನ್ನೂ ಮುಂತಾದ ಅನೇಕ ಯೋಜನೆಗಳಿಂದ ರಾಜ್ಯದ ಮಹಿಳೆಯರ ಮನ ಗೆದ್ದಿದೆ.
ಇದರ ಬೆನ್ನಲ್ಲೇ ಮತ್ತೊಂದು ಯೋಜನೆಯನ್ನು ಮಹಿಳೆಯರಿಗಾಗಿ ಸರ್ಕಾರವು ಜಾರಿಗೆ ತಂದಿದೆ ಈ ಬಾರಿ ಗೃಹಿಣಿ ಶಕ್ತಿಯನ್ನು ಯೋಜನೆಯಲ್ಲಿ ರಾಜ್ಯದ ಎಲ್ಲಾ ಮಹಿಳೆಯರಿಗೂ ಅನುಕೂಲ ಮಾಡಿಕೊಡುತ್ತಿದೆ. ಈ ವರ್ಷ ಮಂಡಣೆಯಾದ ಕರ್ನಾಟಕದ ವಿಧಾನಸೌಧ ಬಜೆಟ್ 2022 – 23 ರಲ್ಲಿ ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಯೋಜನೆ ಬಗ್ಗೆ ಮಾತನಾಡಿದರು. ಈ ಹಿಂದೆ ಈ ಯೋಜನೆ ಅಡಿ ಪ್ರತಿ ಮಹಿಳೆ 500 ಹಣ DBT ಅಂದರೆ ಡೈರೆಕ್ಟಾಗಿ ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ಹೋಗುತ್ತಿತ್ತು.
ಈಗ ಅದನ್ನು 500 ರಿಂದ 1000 ರೂ ಗೆ ಹೆಚ್ಚಿಸಲು ಸರ್ಕಾರ ಚಿಂತನೆ ಮಾಡಿದೆ. ಶೀಘ್ರದಲ್ಲಿಯೇ ಈ ಯೋಜನೆಯಲ್ಲಿರುವ ಎಲ್ಲಾ ಮಹಿಳೆಯರಿಗೂ 1000ರೂ ಸಹಾಯಧನ ದೊರೆಯಲಿದೆ. ಗೃಹಣಿ ಶಕ್ತಿ ಎನ್ನುವ ಈ ಹೊಸ ಯೋಜನೆ ಬಗ್ಗೆ ಹೇಳುವುದಾದರೆ ಇದು ರಾಜ್ಯದಲ್ಲಿರುವ ಎಲ್ಲಾ ವಿವಾಹಿತ ಮಹಿಳೆಯರಿಗೆ ಸಿಗುವ ಯೋಜನೆ ಆಗಿದೆ ಆದರೆ ಇದರ ಫಲಾನುಭವಿಗಳಾಗಬೇಕು ಎಂದರೆ ಮಹಿಳೆಯರಿಗೆ ಕೆಲ ನಿಯಮಗಳಿವೆ.
ಆ ಮಹಿಳೆಯರು ಬಿಪಿಎಲ್ ಕಾರ್ಡ್ ಹೊಂದಿರಬೇಕು. ಅವರು ಕೃಷಿ ರಹಿತ ರೈತ ಮಹಿಳೆ ಆಗಿರಬೇಕು. ಹಾಗಿದ್ದಲ್ಲಿ ಮಾತ್ರ ಗೃಹಿಣಿ ಶಕ್ತಿ ಯೋಜನೆ ಅಡಿ ಶ್ರಮ ಶಕ್ತಿ ಎನ್ನುವ ಈ ಯೋಜನೆಯ ಫಲಾನುಭವಿಗಳಾಗಬಹುದು. ಈಗಾಗಲೇ ರಾಜ್ಯದ ಸಾಕಷ್ಟು ಮಹಿಳೆಯರು ಇದರಲ್ಲಿ ನೋಂದಾಯಿಸಿಕೊಂಡು ಇದರ ಅನುಕೂಲತೆ ಹಾಗೂ ಲಾಭಗಳನ್ನು ಪಡೆಯುತ್ತಿದ್ದಾರೆ. ಮಹಿಳೆಯರ ಸಮಸ್ಯೆಯನ್ನು ಮನಗಂಡ ಸರ್ಕಾರವು ಅವರ ಕುಟುಂಬ ನಿರ್ವಹಣೆಗೆ ಅನುಕೂಲ ಆಗಲಿ ಅಥವಾ ಅವರ ಆರೋಗ್ಯವೃದ್ದಿಗೆ ಅನುಕೂಲ ಆಗಲಿ,
ಪೌಷ್ಟಿಕಾಂಶದ ಕೊರತೆ ಇರುವ ಸಮಯದಲ್ಲಿ ಇವರಿಗೆ ನೆರವಾಗಲಿ ಮತ್ತು ಇನ್ನಿತರ ಕಾರಣಗಳಿಗೆ ಸಹಾಯವಾಗಲಿ ಎನ್ನುವ ಕಾರಣಕ್ಕಾಗಿ ಇಂತಹ ಒಂದು ಮಹತ್ತರ ಯೋಜನೆಯನ್ನು ಕೈಗೆತ್ತಿಕೊಂಡು ಲಕ್ಷಾಂತರ ಮಹಿಳೆಯರ ಪಾಲಿಗೆ ವರದಾನವಾಗಿದೆ. ಇದುವರೆಗೆ ನಮ್ಮ ರಾಜ್ಯ ಸರ್ಕಾರ ಕೈಗೊಂಡ ಅನೇಕ ಯೋಜನೆಗಳಂತೆ ಈ ಯೋಜನೆಯು ಕೂಡ ಒಂದು ಅರ್ಥಪೂರ್ಣ ಯೋಜನೆ ಆಗಿದೆ.
ಗೃಹಿಣಿ ಶಕ್ತಿ ಯೋಜನೆ ಅಥವಾ ಶ್ರಮಶಕ್ತಿ ಯೋಜನೆ ಶಕ್ತಿ ಎಂದು ಹೆಸರು ಇರುವಂತೆ ಮಹಿಳೆಯರ ಪಾಲಿಗೆ ಇದೊಂದು ದೊಡ್ಡ ಶಕ್ತಿಯಾಗಿದೆ ಎಂದು ಹೇಳಬಹುದು. ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸಲು ನೀವು ಸಹ ಅರ್ಹರಾಗಿದ್ದರೆ ತಪ್ಪದೆ ಈ ಕೂಡಲೇ ಅರ್ಜಿ ಸಲ್ಲಿಸಿ ಯೋಜನೆಯ ಫಲಾನುಭವಿಗಳಾಗಿ ತಿಂಗಳಿಗೆ 1000 ಅನ್ನು ಪಡೆದುಕೊಳ್ಳಿ. ಮತ್ತು ಈ ಯೋಜನೆ ಬಗ್ಗೆ ಇತರ ಕೃಷಿ ಭೂಮಿ ರಹಿತ ಮಹಿಳಾ ಕಾರ್ಮಿಕರಿಗೂ ತಿಳಿಸಿ ಅವರಿಗೂ ನೆರವಾಗಿ.