ಚಿನ್ನ ಎನ್ನುವುದು ಒಂದು ಶ್ರೇಷ್ಠತೆಯ ಪದ ಎನ್ನುವ ರೀತಿ ಆಗಿಬಿಟ್ಟಿದೆ ಪ್ರಪಂಚದಲ್ಲಿರುವ ಎಲ್ಲಾ ಲೋಹಗಳಿಗಿಂತ ಚಿನ್ನದ ಮೇಲೆ ವ್ಯಾಮೋಹ ಹೆಚ್ಚು ಇದನ್ನು ಆಭರಣ ಮಾಡಿ ಹಾಕಿಕೊಳ್ಳುವ ಆಸೆ ಹೆಣ್ಣು ಮಕ್ಕಳಲ್ಲಿ ಇದ್ದರೆ ಹೂಡಿಕೆ ಉದ್ದೇಶದಿಂದ ಕೂಡ ಬಂಗಾರ ಖರೀದಿಸುವವರು ಇದ್ದಾರೆ ಇದ್ಯಾವುದೇ ಇರಲಿ ಚಿನ್ನ ಕೊಂಡುಕೊಳ್ಳುವ ಮುನ್ನ ಕೆಲ ಅವಶ್ಯಕ ಮಾಹಿತಿಗಳನ್ನು ತಿಳಿದುಕೊಂಡಿರಲೇಬೇಕು.
ಇಲ್ಲವಾದಲ್ಲಿ ಕಡಿಮೆ ಹಣ ಎಂದು ಖರೀದಿಸಿದ ಚಿನ್ನಕ್ಕೆ ನಾಳೆ ಬೆಲೆಯೇ ಇಲ್ಲದಂತೆ ಆಗಿ ಹೋಗಿಬಿಡಬಹುದು ಹಾಗಾಗಿ ನವೀಕರಿಸಲಾಗದ ಸಂಪನ್ಮೂಲವಾದ ಈ ಬಂಗಾರದ ಬಗ್ಗೆ ಒಂದಿಷ್ಟು ಮಾಹಿತಿ ನಿಮಗಾಗಿ ಹೀಗಿದೆ ನೋಡಿ. ನಾವು ಚಿನ್ನ ಖರೀದಿಸಲು ಅಂಗಡಿಗೆ ಹೋದಾಗ ಅಂಗಡಿಗಳಲ್ಲಿ ಹಾರ್ಮಾರ್ಕ್ (Hallmark) ಕೆಡಿಎಂ(KDM) 24 ಕ್ಯಾರೆಟ್, 22 ಕ್ಯಾರೆಟ್, 18 ಕ್ಯಾರೆಟ್ ಮತ್ತು ಒಂದಕ್ಕೊಂದು ರೇಟ್ ವ್ಯತ್ಯಾಸವಿರುವುದು ಇದನ್ನೆಲ್ಲ ನೀವು ಗಮನಿಸಿರುತ್ತೀರಿ, ಆದರೇ ಹೆಚ್ಚಿನವರು ಪ್ರಶ್ನೆ ಮಾಡಲು ಹೋಗುವುದಿಲ್ಲ.
ಈ ಸುದ್ದಿ ಓದಿ:- PM ವಿಶ್ವಕರ್ಮ ಯೋಜನೆಗೆ ಅರ್ಜಿ ಹಾಕಿದವರಿಗೆ 3 ಲಕ್ಷ ಹಣ, 15,000 ಮೌಲ್ಯದ ಕಿಟ್ ವಿತರಣೆ.!
ಚಿನ್ನ ತಾನೆ ಎಂದು ಕಡಿಮೆ ರೇಟ್ ಇರುವ ಚಿನ್ನ ಖರೀದಿಸಿ ಸುಮ್ಮನಾಗಿ ಬಿಟ್ಟಿರುತ್ತಾರೆ ಆದರೆ ಇಲ್ಲಿ ಚಿನ್ನದ ಬೆಲೆಯು ಚಿನ್ನದ ಗುಣಮಟ್ಟದ ಆಧಾರದ ಮೇಲೆ ನಿರ್ಧಾರವಾಗಿದೆ ಎನ್ನುವ ಸಾಮಾನ್ಯ ಜ್ಞಾನ ಪ್ರತಿಯೊಬ್ಬರಿಗೂ ಇರಲೇಬೇಕು. ಇಂಡಿಯನ್ ಸ್ಟ್ಯಾಂಡರ್ಡ್ ಆಫ್ ಬ್ಯೂರೋ (BIS) ಸಂಸ್ಥೆಯಿಂದ ಮಾನ್ಯತೆ ಪಡೆದ ಇತರ ಸಂಸ್ಥೆಗಳು ಬಂಗಾರದ ಗುಣಮಟ್ಟದ ಪರೀಕ್ಷಿಸಿ ನಂತರ ಹಾಲ್ ಮಾರ್ಕ್ ಸರ್ಟಿಫಿಕೇಟ್ ನೀಡುತ್ತದೆ.
ಆ ಆಭರಣಕ್ಕೆ BIS ಹಾಲ್ಮಾರ್ಕ್ ಸಂಖ್ಯೆ ಹಾಗೂ ಚಿಹ್ನೆ ಹಾಕಲಾಗಿರುತ್ತದೆ ಈ ಹಾಲ್ಮಾರ್ಕ್ ಇರುವ ಚಿನ್ನ ಶುದ್ಧತೆಯ ಸಂಕೇತವಾಗಿದೆ ಮತ್ತು ಮುಂದೊಂದು ದಿನ ಚಿನ್ನ ಮಾರಾಟ ಮಾಡುವಾಗ ಕೂಡ ನಿಮಗೆ ಸಮಸ್ಯೆ ಆಗುವುದಿಲ. ಲ ಹಾಗಾಗಿ 2013ರಲ್ಲಿ ಭಾರತ ಸರ್ಕಾರವು ಬಂಗಾರದ ಆಭರಗಳ ಮೇಲೆ ಹಾಲ್ ಮಾರ್ಕ್ ಚಿಹ್ನೆ ಎಂಬುದನ್ನು ಕಡ್ಡಾಯ ಮಾಡಿದೆ.
ಇನ್ನು ವಿವರವಾಗಿ ಹೇಳುವುದಾದರೆ 24 ಕ್ಯಾರೆಟ್ ಗೋಲ್ಡ್ ಎಂದರೆ ಅದರಲ್ಲಿ 100ಕ್ಕೆ 99.9 ಭಾಗ ಬಂಗಾರ ಇರುತ್ತದೆ ಎಂದರ್ಥ, ಇನ್ನು KDM ಬಂಗಾರದ ಬೆಲೆ ಇದಕ್ಕಿಂತ ಕಡಿಮೆ ಇರುತ್ತದೆ. ಹಾಗಾದ್ರೆ KDM ಎಂದರೆ ಏನು ಎಂದು ನೋಡುವುದಾದರೆ ಇದರಲ್ಲಿ ಹಾಲ್ ಮಾರ್ಕ್ಶಚಿಹ್ನೆ ಇರುವುದಿಲ್ಲ ಆದರೂ ಭಾರತದಲ್ಲಿ ಬಹಳ ಪಾಪುಲರ್ ಆಗಿತ್ತು.
ಈ ಸುದ್ದಿ ಓದಿ:- ರೈತರಿಗೆ ಸಿಹಿಸುದ್ದಿ ಕೃಷಿ ಹೊಂಡ ನಿರ್ಮಾಣಕ್ಕೆ ಸಹಾಯಧನ
ಈತನಕ ಇದರಲ್ಲಿ 92% ಚಿನ್ನ ಹಾಗೂ 8% ಕ್ಯಾಡ್ಮಿಯಂ (Cadmium) ಬಳಕೆ ಮಾಡಲಾಗುತ್ತಿತ್ತು ಆದರೆ ಕಳೆದ ವರ್ಷ ಭಾರತ ಸರ್ಕಾರವು ಈ ಲೋಹವನ್ನು ಬ್ಯಾನ್ ಮಾಡಿದೆ. ಇದು ಹೆಚ್ಚು ವಿಷ ಕಾರಿ ಅಂಶಗಳಿಂದ ಕೂಡಿದೆ, ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಬ್ಯಾನ್ ಮಾಡಿದೆ. ಕ್ಯಾಡ್ಮಿಯಂ ಬದಲಾಗಿ ಬೇರೆ ಲೋಹಗಳ ಮಿಶ್ರಣ ನಡೆಯುತ್ತಿದೆ.
ಹೀಗೆ ಮುಂದುವರೆದು 22 ಕ್ಯಾರೆಟ್ ಎನ್ನುವುದರಲ್ಲಿ 91.6 ರಷ್ಟು ಶುದ್ಧ ಬಂಗಾರ ಇರುತ್ತದೆ ಉಳಿದ ಭಾಗವನ್ನು ಬೆಳ್ಳಿ, ನಿಕ್ಕಲ್, ಕೋಬಾಲ್ಟ್, ತಾಮ್ರ, ಜಿಂಕ್ ಇನ್ನಿತರ ಲೋಹಗಳ ಬಳಕೆ ಮಾಡಲಾಗುತ್ತದೆ. ಇದನ್ನೇ ಹೋಲುವಂತೆ 18 ಕ್ಯಾರೆಟ್ ಇದೆ ಇದಕ್ಕೂ ಕೂಡ ಹಾಲ್ ಮಾರ್ಟ್ ಇರುತ್ತದೆ. ಇಂದಿಗೆ ಬಂಗಾರದ ಬೆಲೆ 10 ಗ್ರಾಂ ಗೆ 75,000ವನ್ನು ದಾಟಿರುವುದರಿಂದ 7 ಕ್ಯಾರೆಟ್ ಗೋಲ್ಡ್ ಗೂ ಕೂಡ ಹಾಲ್ ಮಾರ್ಕ್ ನೀಡಬೇಕು ಎನ್ನುವ ಬೇಡಿಕೆ ಹೆಚ್ಚಾಗುತ್ತದೆ.
ಹೀಗೆ ಮಾಡುವುದರಿಂದ ಬಡ ಜನರು ಕೂಡ ಬಂಗಾರ ಖರೀದಿಸುವ ರೀತಿ ಆಗುತ್ತದೆ ಅವರಿಗೆ ಬಂಗಾರ ಹಾಕಿಕೊಂಡ ಸಮಾಧಾನದ ಜೊತೆಗೆ ಅದನ್ನು ವಾಪಸ್ ಕೊಡುವಾಗ ಮೋ’ಸವಾಗುವುದಿಲ್ಲ ಎನ್ನುವುದು ಜನಸಾಮಾನ್ಯರ ಬೇಡಿಕೆ. ಈ ಬಗ್ಗೆ ಸರ್ಕಾರದ ನಿರ್ಧಾರ ಏನಿದೆಯೋ ನೋಡೋಣ ಆದರೆ ನೀವು ಬಂಗಾರ ಖರೀದಿ ಮಾಡುವ ಮುನ್ನ ಇದೆಲ್ಲವನ್ನು ಯೋಚಿಸಿ ಮುಂದುವರೆಯಿರಿ.