ಕೃಷಿ ಮಾಡುವ ರೈತನು ಕೃಷಿ ಚಟುವಟಿಕೆ ಜೊತೆಗೆ ಹಸು, ಎಮ್ಮೆ, ಕುರಿ ಸಾಕಾಣಿಕೆ, ಕೋಳಿ ಸಾಕಾಣಿಕೆ ಇವುಗಳನ್ನು ರೂಢಿಸಿಕೊಳ್ಳುವುದರಿಂದ ರೈತನ ಆದಾಯ ಹೆಚ್ಚಾಗುತ್ತದೆ ಇದರಿಂದ ದೇಶದ ಆದಾಯವು ಹೆಚ್ಚಾಗುವುದರ ಜೊತೆಗೆ ಆಹಾರ ಕೊರತೆ ನೀಗುತ್ತದೆ. ರೈತನಿಗೆ ಈ ಬಗ್ಗೆ ಆಸಕ್ತಿ ಇದ್ದರೂ ಕೂಡ ಇದಕ್ಕೆ ತಗಲುವ ಖರ್ಚಿನ ಕಾರಣದಿಂದಾಗಿ ಹಿಂದೆ ಉಳಿದಿರುತ್ತಾರೆ.
ಬಂಡವಾಳದ ಕೊರತೆಯಿಂದ ಆಸಕ್ತಿ ಇದ್ದೂ ಚಟುವಟಿಕೆಯಲ್ಲಿ ತೊಡಗಿಕೊಳ್ಳದಿರುವ ರೈತನಿಗೆ ಸರ್ಕಾರ ಅವಕಾಶ ಕೊಡುತ್ತಿದೆ. ಕರ್ನಾಟಕ ಸರ್ಕಾರ ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆ (Karnataka Government Animal Husbandry and Vertinary department) 2023-24ನೇ ಸಾಲಿನಲ್ಲಿ ಕಿಸಾನ್ ಕ್ರೆಡಿಟ್ ಸಾಲದಡಿ (Kisan Credit Card).
ಹೈನುಗಾರಿಕೆ, ಕುರಿ ಕೋಳಿ ಸಾಕಾಣಿಕೆ ಆರಂಭಿಸುವ ರೈತನಿಗೆ ಅತಿ ಕಡಿಮೆ ಬಡ್ಡಿ ದರದಲ್ಲಿ ಮತ್ತು ಸಬ್ಸಿಡಿ ರೂಪದ ಸಾಲವನ್ನು (loan for farmers) ನೀಡಲು ಅಭಿಯಾನ ಆರಂಭಿಸಿದೆ. ಇವುಗಳಿಗೆ ಅರ್ಹ ಮತ್ತು ಆಸಕ್ತ ರೈತರು ಅರ್ಜಿ ಸಲ್ಲಿಸಿ ಪ್ರಯೋಜನ ಪಡೆದುಕೊಳ್ಳಬಹುದು.
ಪಶುಸಂಗೋಪನೆಯಲ್ಲಿ ತೊಡಗಿಸಿಕೊಂಡ ರಾಜ್ಯದ ರೈತರಿಗೆ ಅದಕ್ಕೆ ತಗಲುವ ನಿರ್ವಹಣಾ ವೆಚ್ಚ ಭರಿಸಲು ಭಾರತ ಸರ್ಕಾರದ ಹಣಕಾಸು ಸೇವೆಗಳ ಇಲಾಖೆ ರಾಷ್ಟ್ರೀಕೃತ ಬ್ಯಾಂಕ್ ಅಥವಾ ಸಹಕಾರ ಸಂಸ್ಥೆಗಳ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಲು ಮುಂದಾಗಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ ಯೋಜನೆಯಡಿಯಲ್ಲಿ ಪ್ರತಿ ರೈತನಿಗೂ ಗರಿಷ್ಠ 3 ಲಕ್ಷ ರೂಪಾಯಿವರೆಗೆ ಸಾಲ.
ಯಾವುದೇ ಭದ್ರತೆಯಿಲ್ಲದೆಯೇ ರೈತನಿಗೆ 1.60 ಲಕ್ಷ ರೂ ಸಾಲ ಸಿಗಲಿದೆ.ಕಿಸಾನ್ ಕ್ರೆಡಿಟ್ ಕಾರ್ಡ್‌ನಿಂದ ಪಡೆಯುವ ಸಾಲಕ್ಕೆ 2%ರಷ್ಟು ಬಡ್ಡಿ ಸಹಾಯಧನ ಕೂಡ ಸಿಗಲಿದ್ದು, ಈ ಸಾಲವನ್ನು ಸಕಾಲದಲ್ಲಿ ತೀರಿಸಿದಲ್ಲಿ ಹೆಚ್ಚುವರಿಯಾಗಿ ವಾರ್ಷಿಕ 3%ರಷ್ಟು ಬಡ್ಡಿ ಸಹಾಯಧನ ಸೌಲಭ್ಯವನ್ನು ರೈತ ಪಡೆಯಬಹು.
ಯಾವ ಯೋಜನೆಗೆ ಎಷ್ಟು ಅನುದಾನ ಸಿಗುತ್ತದೆ ಎನ್ನುವುದರ ವಿವರ ಇಲ್ಲಿದೆ ನೋಡಿ:-
● ಹೈನುಗಾರಿಕೆಗಾಗಿ ಮಿಶ್ರತಳಿ ದನಗಳ ನಿರ್ವಹಣೆ (1+1)ಗೆ ಪ್ರತಿ ಹಸುವಿಗೆ ಗರಿಷ್ಠ 18,000 ರೂ. ನಂತೆ, 2 ಹಸುಗಳಿಗೆ 36,000 ರೂ. ಸಾಲ ಸೌಲಭ್ಯ ಸಿಗಲಿದೆ.
● ಸುಧಾರಿತ ಎಮ್ಮೆಗಳ ನಿರ್ವಹಣೆ (1+1) ಗೆ ಪ್ರತಿ ಎಮ್ಮೆಗೆ ಗರಿಷ್ಠ 21,000 ರೂ. ನಂತೆ, 2 ಎಮ್ಮೆಗಳಿಗೆ 42,000 ರೂ. ಸಾಲ ಸಿಗಲಿದೆ.
● ಕುರಿ ಸಾಕಾಣಿಕೆಯಲ್ಲಿ ಕುರಿಗಳ ನಿರ್ವಹಣೆಗೆ (10+1) 8 ತಿಂಗಳ ಸಾಕಾಣಿಕೆ ಅವಧಿಗೆ ಕಟ್ಟಿ ಮೇಯಿಸುವಂತಹ ಕುರಿಗಳಾದರೆ 29,950 ರೂ. ಮತ್ತು ಬಯಲಿನಲ್ಲಿ ಮೇಯಿಸುವ ಕುರಿಗಳಾದರೆ 14,700 ರೂ. ಸಾಲ ಸೌಲಭ್ಯ ಇದರೊಂದಿಗೆ ಕುರಿಮರಿಗಳನ್ನು ಕೊಬ್ಬಿಸುವುದಕ್ಕೆ (10+1) 13,120 ರೂ. ಸಾಲ.
● ಮೇಕೆ ಸಾಕಾಣಿಕೆಗೆ (10+1) 8 ತಿಂಗಳ ಸಾಕಾಣಿಕೆ ಅವಧಿಗೆ ಕಟ್ಟಿ ಮೇಯಿಸುವಂತಹ ಮೇಕೆಗಳಿಗೆ 29,250 ರೂ. ಮತ್ತು ಬಯಲಿನಲ್ಲಿ ಮೇಯಿಸುವ ಮೇಕೆಗಳಿಗೆ 14,700 ರೂ. ಸಾಲ ಸೌಲಭ್ಯ. ಮೇಕೆಗಳ ನಿರ್ವಹಣೆಗೆ (20+1) 8 ತಿಂಗಳ ಸಾಕಾಣಿಕೆ ಅವಧಿಗೆ ಕಟ್ಟಿ ಮೇಯಿಸುವಂತಹ ಮೇಕೆಗಳಿಗೆ 57,200 ರೂ. ಮತ್ತು ಬಯಲಿನಲ್ಲಿ ಮೇಯಿಸುವ ಮೇಕೆಗಳಿಗೆ 28,200 ರೂ. ಸಾಲ ಸೌಲಭ್ಯ.
● ಕೋಳಿ ಸಾಕಾಣಿಕೆಯಲ್ಲಿ ಮಾಂಸದ ಕೋಳಿ ಸಾಕಾಣಿಕೆ (1 ಕೋಳಿಗೆ 80 ರೂಪಾಯಂತೆ 1000 ಕೋಳಿಗಳಿಗೆ ಗರಿಷ್ಠ 80,000 ರೂ. ಸರ್ಕಾರವು ಸಾಲ ನೀಡಲಿದೆ.
● ಮೊಟ್ಟೆ ಕೋಳಿ ಸಾಕಾಣಿಕೆಗೆ 1 ಕೋಳಿಗೆ 180 ರೂ. ನಂತೆ
1000 ಕೋಳಿಗಳಿಗೆ ಗರಿಷ್ಠ 1,80,000 ರೂ. ವರೆಗೆ ಸರ್ಕಾರವು ಸಾಲ ನೀಡಲಿದೆ.