ಭಾರತ ಹಳ್ಳಿ ಪ್ರಧಾನ ದೇಶ, ಇಲ್ಲಿ ಕೃಷಿಯೇ ಪ್ರಧಾನ ಕಸಬು. ಜೊತೆಗೆ ಕೃಷಿ ಭಾರತದ ಆರ್ಥಿಕತೆಯ ಬೆನ್ನೆಲುಬು ಎಂದೆ ಹೆಸರಾಗಿದೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಕೃಷಿಯೋಪಕರಣ ಬಳಕೆ ಕಡಿಮೆ ಆಗುತ್ತಿರುವ ದೃಷ್ಟಿಗಿಂತ ಅದನ್ನು ಸುಧಾಸುವ ಉದ್ದೇಶದಿಂದ ಸರಕಾರ ಹಲವಾರು ಯೋಚನೆಗಳನ್ನು ಜಾರಿಗೆ ತಂದಿದೆ. ಎಲ್ಲಾ ಕ್ಷೇತ್ರದಂತೆ ಕೃಷಿಯನ್ನು ಸಹ ಆಧುನಿಕರಣ ತರುವ ದೃಷ್ಟಿಯಿಂದ ಸರಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ.
ಕರ್ನಾಟಕದ ಕಡೆ ಹಳ್ಳಿಯ ವರೆಗೂ ಕೂಡ ಪ್ರತಿ ರೈತರಿಗೂ ಸೌಲಭ್ಯ ಸಿಗಬೇಕು ಎನ್ನುವುದು ನಮ್ಮ ಈ ರೈತಪರ ಸರ್ಕಾರದ ಆಶಯ ಆಗಿದೆ. ಅದಕ್ಕಾಗಿ ನಮ್ಮ ಸರ್ಕಾರವು ಹಾಕಿಕೊಂಡಿರುವ ಯೋಜನೆಗಳು ಏನು ಎಂದು ನೋಡುವುದಾದರೆ ಅದು ಈ ರೀತಿ ಇದೆ. ಸೇವಾ ಕೇಂದ್ರದ ಸ್ಥಾಪನೆ ಮಾಡುವುದು ಇಂತಹ ಯೋಜನೆಗಳಲ್ಲಿ ಒಂದು ಪ್ರಮುಖವಾದ ಯೋಜನೆ ಆಗಿದೆ ಅದಕ್ಕಾಗಿ ಅರ್ಜಿ ಸಲ್ಲಿಸಲು ಬೇಕಿರುವ ಅರ್ಹತೆಗಳು ಹೀಗಿದೆ.
ಕೃಷಿ ಯಂತ್ರೋಪಕರಣಗಳ ಸ್ಥಾಪನೆಗೆ ಅರ್ಜಿ ಸಲ್ಲಿಸಲು ಬಯಸುವವರು ಆಯಾ ಗ್ರಾಮದ ನೋಂದಾಯಿತ ಸಹಕಾರಿ ಸೊಸೈಟಿ ಸಂಘದ ಸದಸ್ಯರಾಗಿರಬೇಕು. ರೈತ ಉತ್ಪಾದಕ ಸಂಸ್ಥೆಗಳು ಸಹ ಅರ್ಜಿ ಸಲ್ಲಿಸಬಹುದು ಗ್ರಾಮ ಪಂಚಾಯಿತಿಗಳು ಕೂಡ ಅರ್ಜಿ ಸಲ್ಲಿಸಬಹುದು. ರಾಜ್ಯದ ಇತರೆ ಹೋಬಳಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಸೇವಾ ಕೇಂದ್ರ ಸ್ಥಾಪಿಸಲು ಅರ್ಜಿ ಸಲ್ಲಿಸಬಹುದು. ಈ ಸೇವಾ ಕೇಂದ್ರ ಸ್ಥಾಪನೆಗೆ ಅರ್ಜಿಗಳು ಎಲ್ಲಿ ಸಿಗುತ್ತವೆ ಎಂದು ನೋಡುವುದಾದರೆ.
ಹತ್ತಿರದ ರೈತ ಸಂಪರ್ಕ ಕೇಂದ್ರಗಳಲ್ಲಿ ಭೇಟಿ ಮಾಡಿ ವಿಚಾರಿಸಿದರೆ ಅಲ್ಲಿ ಅರ್ಜಿಗಳು ಹಾಗೂ ಇತರೆ ಮಾಹಿತಿಗಳು ದೊರೆಯುತ್ತದೆ. ಈ ರೀತಿ ಸೇವಾ ಕೇಂದ್ರ ಸ್ಥಾಪಿಸುವುದರಿಂದ ಆಗುವ ಪ್ರಯೋಜನಗಳು ಏನು ಎನ್ನುವ ಮಾಹಿತಿಯೇ ಹೆಚ್ಚಿನ ಜನಕ್ಕೆ ತಿಳಿದಿಲ್ಲ. ಇದರಿಂದ ರೈತರಿಗೆ ಕೃಷಿ ಸಲಕರಣೆ ಅಥವಾ ಯಾವುದೇ ಯಂತ್ರೋಪಕರಣ ಖರೀದಿಸಲು ಪಟ್ಟಣಕ್ಕೆ ಹೋಗುವ ಅವಶ್ಯಕತೆಯೇ ಇಲ್ಲ.
ರೈತರಿಗೆ ಒಂದು ವೇಳೆ ಅವರ ಕೃಷಿಯಂತ್ರಗಳು ಹಾಳಾದರೆ ಅವುಗಳ ದುರಸ್ಥಿ ಅಥವಾ ರಿಪೇರಿ ಕೂಡ ಗ್ರಾಮ ಪಂಚಾಯಿತಿಯ ಸೇವಾ ಕೇಂದ್ರ ದಲ್ಲಿಯೇ ಮಾಡಿಕೊಡಲಾಗುವುದು. ಕೃಷಿ ಯಂತ್ರೋಪಕರಣಗಳನ್ನು ಖರೀದಿಸುವ ಸಂದರ್ಭದಲ್ಲಿ ಸೇವಾ ಕೇಂದ್ರದಲ್ಲಿ ಸಬ್ಸಿಡಿ ಯಲ್ಲಿ ಯಂತ್ರೋಪಕರಣ ನೀಡಲಾಗುತ್ತದೆ. ಯುವ ರೈತರನ್ನು ಕೃಷಿಯತ್ತ ಆಕರ್ಷಿಸುವ ಹಾಗೂ ಕೃಷಿಯಲ್ಲಿಯೇ ಉಳಿಸಿಕೊಳ್ಳುವ ಉದ್ದೇಶದಿಂದ ಸರ್ಕಾರ ಇಂತಹ ಯೋಜನೆಯನ್ನು ಜಾರಿಗೆ ತಂದಿದೆ.
ಸ್ಥಳೀಯವಾಗಿ ರೈತರನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಗ್ರಾಮಗಳಲ್ಲಿಯೇ ಈ ಎಲ್ಲಾ ಅನುಕೂಲತೆಗಳನ್ನು ನೀಡಲಾಗುತ್ತದೆ. ಹಾಗಾಗಿ ಗ್ರಾಮಗಳಲ್ಲಿಯೇ ಯಂತ್ರೋಪಕರಣ ಸ್ಥಾಪಿಸಲು ನಿರ್ಧರಿಸಲಾಗಿದೆ. ಬಡ ರೈತರು ಯಂತ್ರೋಪಕರಣ ಖರೀದಿಸಲು ಸಾಧ್ಯವಾಗುವುದಿಲ್ಲ ಆಗ ಹತ್ತಿರದಲ್ಲೇ ಸೇವಾ ಕೇಂದ್ರ ಸ್ಥಾಪಿಸಿ ಅಲ್ಲಿಯೇ ಸಬ್ಸಿಡಿಯಲ್ಲಿ ಬಡ ರೈತರಿಗೆ ಬೇಕಾಗುವ ಯಂತ್ರಗಳನ್ನು ಪಡೆಯಬಹುದು.
ಕೃಷಿ ಇಲಾಖೆಯಿಂದ ರೈತರಿಗೆ ಸಿಗುವಂತಹ ಎಲ್ಲ ಸೌಲಭ್ಯಗಳು ಈ ಸೇವಾ ಕೇಂದ್ರಗಳಲ್ಲಿ ಸಿಗಬೇಕು ಎಂದು ಸರ್ಕಾರ ನಿರ್ಧರಿಸಿದೆ. ಹಾಗೆಯೇ ಕೃಷಿ ಸಲಕರಣೆಗಳು ಹಾಳಾದರೆ ರಿಪೇರಿಯನ್ನು ಕೂಡ ಇದೆ ಸೇವಾ ಕೇಂದ್ರದಲ್ಲಿ ಮಾಡಿಕೊಡಲಾಗುವುದು. ಇದರಿಂದ ಸಮಯ ಹಾಗೂ ಹಣ ವ್ಯರ್ಥ ಮಾಡಿಕೊಂಡು ನಗರ ಪ್ರದೇಶಕ್ಕೆ ರೈತರು ತಿರುಗುವ ಅಗತ್ಯವೇ ಇರುವುದಿಲ್ಲ. ಇಂತಹ ಯೋಜನೆಗಳ ಸದುಪಯೋಗಪಡಿಸಿಕೊಂಡು ನಮ್ಮ ರೈತರು ಕೃಷಿ ಚಟುವಟಿಕೆಗಳಲ್ಲಿ ಪಾಲ್ಕೊಂಡು ದೇಶದ ಆರ್ಥಿಕತೆಯ ಉನ್ನತಿಯತ್ತ ಧಾಪುಗಾಲು ಇಡಬೇಕು ಎನ್ನುವುದು ಸರ್ಕಾರದ ಆಕಾಂಕ್ಷೆ.