ಈಗ ಕೃಷಿ ಕ್ಷೇತ್ರವು ಕೂಡ ಆಧುನೀಕರಣಗೊಳ್ಳುತ್ತಿದೆ. ಟೆಕ್ನಾಲಜಿ ಸಹಾಯದಿಂದ ಸಿಗುತ್ತಿರುವ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಸಾಂಪ್ರದಾಯಿಕ ಪದ್ಧತಿಯಿಂದ ಬದಲಾಗಿ ಕೃಷಿಗೂ ಆಧುನಿಕ ರೂಪ ಕೊಟ್ಟು ಕೃಷಿ ಕ್ಷೇತ್ರವನ್ನು ಕೂಡ ಮುನ್ನೆಲೆಗೆ ತರಲಾಗುತ್ತಿದೆ. ಈ ಹಾದಿಯಲ್ಲಿ ಸರ್ಕಾರಗಳು ಕೂಡ ರೈತನಿಗೆ ಆಧುನಿಕ ಯಂತ್ರೋಪಕರಣಗಳ ಮತ್ತು ವಾಹನಗಳ ಖರೀದಿ ಸಂದರ್ಭದಲ್ಲಿ ನೆರವು ನೀಡಿ ಪ್ರೋತ್ಸಾಹಿಸುತ್ತಿದೆ.
ಅದೇ ರೀತಿಯಾಗಿ ಮಹೇಂದ್ರ ಕಂಪನಿಯು ಸಿದ್ಧಪಡಿಸಿರುವ CNG ಟ್ರ್ಯಾಕ್ಟರ್ ಗಳನ್ನು ಖರೀದಿಸುವ ರೈತರಿಗೆ ಕೇಂದ್ರ ಸರ್ಕಾರವು ಸಬ್ಸಿಡಿ ಕೊಡಲು ಚಿಂತಿಸುತ್ತಿದೆ. ಈ ಕುರಿತಾದ ಕೆಲ ಪ್ರಮುಖ ಮಾಹಿತಿ ಹಾಗೂ CNG ಮಹೇಂದ್ರ ಟ್ರ್ಯಾಕ್ಟರ್ ಕುರಿತ ವಿಶೇಷ ಮಾಹಿತಿ ಇಲ್ಲಿದೆ ನೋಡಿ. ಭಾರತದ ಪ್ರಮುಖ ಟ್ರಾಕ್ಟರ್ ಬ್ರ್ಯಾಂಡ್ ಮಹೀಂದ್ರಾ ಟ್ರಾಕ್ಟರ್ಸ್ ತನ್ನ ಮೊದಲ CNG ಮೊನೊ ಫ್ಯೂಲ್ ಟ್ರಾಕ್ಟರ್ ಅನ್ನು ಅನಾವರಣಗೊಳಿಸಿದೆ.
ಭಾರತದ ಅತಿದೊಡ್ಡ ಅಗ್ರಿ ಶೃಂಗಸಭೆಯಾದ ನಾಗ್ಪುರದ ಅಗ್ರೋವಿಷನ್‌ನಲ್ಲಿ ಮಯಹೀಂದ್ರ ನ್ನ ಜನಪ್ರಿಯ ಯುವೋ ಟ್ರಾಕ್ಟರ್ ಪ್ಲಾಟ್‌ಫಾರ್ಮ್‌ನಲ್ಲಿ ಟ್ರಾಕ್ಟರ್ ಅನ್ನು ಅನಾವರಣಗೊಳಿಸಿದೆ. ನಾಲ್ಕು ದಿನಗಳು ನಡೆಯುವ ಈ ಶೃಂಗಸಭೆಯ ಉದ್ಘಾಟನಾ ದಿನದಂದೇ ಕೇಂದ್ರ ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಮಹೀಂದ್ರಾ ತಮ್ಮ ಮೊದಲ CNG ಮೊನೊ ಫ್ಯೂಲ್ ಟ್ರಾಕ್ಟರ್ ಅನ್ನು ಅನಾವರಣಗೊಳಿಸಿದ್ದರು.
ಟ್ರಾಕ್ಟರ್ ಕುರಿತು ಬಹಳಷ್ಟು ಮಾಹಿತಿಯನ್ನು ಹಂಚಿಕೊಂಡಿರುವ ಕಂಪನಿಯು, ಹಣ ಉಳಿಸುವಲ್ಲಿ ಡೀಸಲ್ ವಾಹನಗಳಿಗಿಂತ CNG ಚಾಲಿತ ವಾಹನಗಳು ಸಮರ್ಥವಾಗಿವೆ ಎಂದು ತಿಳಿಸಿದ್ದಾರೆ. CNG ಚಾಲಿತ ವಾಹನಗಳನ್ನು ತಯಾರಿಸಿದರೆ ಇದರ ಉತ್ತಮ ಪರಿಣಾಮಗಳಿಂದ ಕಾರ್ಬನ್ ನಿಯಂತ್ರಣ, ಕಾರ್ಯಕ್ಷಮತೆ ಮತ್ತು ಕಾರ್ಯಾಚರಣೆಯ ವೆಚ್ಚದ ದಕ್ಷತೆಗೆ ಆದ್ಯತೆ ನೀಡಿದಂತಾಗುತ್ತದೆ ಎನ್ನುವುದು ಮಹೀಂದ್ರ ಕಂಪನಿಯ ಉದ್ದೇಶ.
ಈಗಾಗಲೇ ಈ ಕಾರ್ಯ ಪೂರ್ತಿಯಾಗಿದ್ದು ಚೆನ್ನೈನ ಮಹೀಂದ್ರಾ ರಿಸರ್ಚ್ ವ್ಯಾಲಿಯಲ್ಲಿ ಈ CNG ಟ್ರಾಕ್ಟರ್ ಪರೀಕ್ಷಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಹೊಸ ಮಹೀಂದ್ರಾ CNG ಟ್ರಾಕ್ಟರ್ ಡೀಸೆಲ್ ಚಾಲಿತ ಟ್ರಾಕ್ಟರ್‌ಗಳಿಗೆ ಸಮಾನವಾದ ಪವರ್ ಮತ್ತು ಪರ್ಫಾಮೆನ್ಸ್ ನೀಡುತ್ತದೆ ಕೃಷಿಗಾಗಿ ಪರ್ಯಾಯ ಎಂಜಿನ್ ತಂತ್ರಜ್ಞಾನದಲ್ಲಿ ಹೊಸ ಮಾನದಂಡಗಳನ್ನು ಹೊಂದಿಸುತ್ತದೆ.
ಗಮನಾರ್ಹವಾಗಿ ಪರಿಸರ ಸ್ನೇಹಿ CNG ಟ್ರಾಕ್ಟರ್, ಡೀಸೆಲ್ ಟ್ರಾಕ್ಟರ್‌ಗಳಿಗೆ ಹೋಲಿಸಿದರೆ ಶೇ70 ರಷ್ಟು ಕಾರ್ಬನ್ ಹೊರಸೂಸುವಿಕೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಎನ್ನುವುದು ಇದುವರೆಗೂ ಮಹೀಂದ್ರಾ ಹಂಚಿಕೊಂಡಿರುವ ಮಾಹಿತಿಯಾಗಿದೆ.
ಹೊಸ CNG ಟ್ರಾಕ್ಟರ್ ನ ಕಡಿಮೆ ಎಂಜಿನ್ ಕಂಪನಗಳು, ಕಡಿಮೆ ಶಬ್ದವನ್ನುಂಟು ಮಾಡುತ್ತವೆ. ಡೀಸೆಲ್ ಟ್ರಾಕ್ಟರುಗಳಿಗಿಂತ 3.5db ಕಡಿಮೆ ಇದೆ ಎಂದು ಕಂಪನಿ ತಿಳಿಸಿದೆ. ಇದರಿಂದ ಕೆಲಸದ ಸಮಯ ಮತ್ತು ಎಂಜಿನ್ ಜೀವಿತಾವಧಿಯನ್ನು ಹೆಚ್ಚಿಸುತ್ತದೆ. ಹಾಗೆಯೇ ವರ್ಧಿತ ಆಪರೇಟರ್ ಸೌಕರ್ಯವನ್ನು ಒದಗಿಸುವುದರಿಂದ ಕೃಷಿ ಮತ್ತು ಕೃಷಿಯೇತರ ಕೆಲಸಗಳಿಗೂ ಬಳಸಿಕೊಳ್ಳಬಹುದಾಗಿದೆ.
CNG ತಂತ್ರಜ್ಞಾನದೊಂದಿಗೆ ಸಜ್ಜುಗೊಂಡಿರುವ ಟ್ರಾಕ್ಟರ್, ಈಗಿರುವ ಡೀಸೆಲ್ ಟ್ರಾಕ್ಟರ್‌ಗಳ ಸಾಮರ್ಥ್ಯಗಳಿಗೆ ಹೊಂದಿಕೆಯಾಗುವ ವಿವಿಧ ಕೃಷಿ ಮತ್ತು ಸಾಗಣೆ ಕಾರ್ಯಗಳಿಗೆ ಬಳಕೆಗೆ ಬರುತ್ತದೆ. ಆರ್ಥಿಕವಾಗಿ ನೋಡಿಕೊಂಡರೆ ಡೀಸೆಲ್ ಟ್ರಾಕ್ಟರುಗಳಿಗೆ ಹೋಲಿಸಿಕೊಂರೆ ಗಂಟೆಗೆ 100 ರೂಪಾಯಿಗಳನ್ನು ಉಳಿತಾಯ ಮಾಡಬಹುದು ಎಂದು ಮಹೀಂದ್ರಾ ಕಂಪನಿಯು ಮಾಹಿತಿ ಹಂಚಿಕೊಂಡಿದೆ.
ಶೀಘ್ರದಲ್ಲೇ ಇದು ಭಾರತದ ಮಾರುಕಟ್ಟೆಗಳಲ್ಲಿ ಸಿಗಲಿತ್ತು ಆ ಸಮಯದಲ್ಲಿ ಖರೀದಿ ಮಾಡುವ ರೈತರಿಗೆ ಕೇಂದ್ರ ಸರ್ಕಾರವು ಎಂದಿನಂತೆ ಟ್ಯಾಕ್ಟರ್ ಖರೀದಿಗಳಿಗೆ ನೀಡುವ ಮಾನದಂಡಗಳನ್ನೇ ಅನ್ವಯ ಸಬ್ಸಿಡಿ ನೀಡಬೇಕು ಎಂದು ಚಿಂತಿಸಿದೆ.