ಕೃಷಿ (agriculture) ಭಾರತ ದೇಶದ ಆರ್ಥಿಕತೆಯ ಬೆನ್ನೆಲುಬು ಎಂದು ಕರೆಯುತ್ತೇವೆ. ದೇಶದಲ್ಲಿ ಅತಿ ಹೆಚ್ಚಿನ ಜನಸಂಖ್ಯೆ ಕೃಷಿ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಗ್ರಾಮೀಣ ಭಾಗದ ರೈತರ (farmers) ಮೂಲ ಉದ್ಯೋಗವೇ ಕೃಷಿ ಆಗಿರುವುದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು (Central and state governments) ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ಕೊಟ್ಟು ನೆರವಾಗುತ್ತಿದೆ.
ಭಾರತದಲ್ಲಿ ಕೃಷಿಯು ಅನಿಶ್ಚಿತತೆಯಿಂದ ಕೂಡಿರುವುದರಿಂದ ಹಲವಾರು ಕಾರಣಗಳಿಂದ ರೈತನು ಖಚಿತವಾದ ಆದಾಯವಿಲ್ಲದೆ ಆರ್ಥಿಕವಾಗಿ ಹಿಂದುಳಿದಿದ್ದಾನೆ. ಇದನ್ನು ಮನಗಂಡಿರುವ ಸರ್ಕಾರಗಳು ರೈತನಿಗಾಗಿಯೇ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿವೆ. ರೈತನ ಈಗ ಕೃಷಿಯಲ್ಲಿ ಅನೇಕ ಸವಾಲುಗಳನ್ನು ಎದುರಿಸಬೇಕಾದ ಪರಿಸ್ಥಿತಿ ಬಂದಿದೆ.
ಹೃದಯಘಾ-ತ ಉಂಟು ಮಾಡುವ ಅಪಾಯಕಾರಿ ಅಂಶಗಳು ಇವು, ಒಮ್ಮೆ ಡಾಕ್ಟರ್ ಅಂಜನಪ್ಪ ಅವರ ಮಾತು ಕೇಳಿ.!
ಒಂದೆಡೆ ಕೂಲಿ ಕಾರ್ಮಿಕರ ಕೊರತೆ ಎದ್ದು ಕಾಣುತ್ತಿದ್ದರೆ ಮತ್ತೊಂದೆಡೆ ಮಳೆ ಅಕಾಲಿಕವಾಗಿದೆ. ಯಂತ್ರೋಪಕರಣಗಳ ಬಳಕೆಗೆ ತೈಲ ಬೆಲೆಯ ಏರಿಕೆಯು ಹೊರೆಯಾಗಿದ್ದರೆ, ರಸಗೊಬ್ಬರಗಳು ಹಾಗೂ ಕೀಟನಾಶಕಗಳ ಬೆಲೆಯೂ ಕೂಡ ಕೈಗೆಟುಕದಂತೆ ಏರಿಕೆಯಾಗಿ ಇರುವುದು ರೈತರನ್ನು ಇನ್ನಷ್ಟು ಕಂಗಾಲಾಗಿಸಿದೆ.
ಇಷ್ಟೆಲ್ಲ ಸಮಸ್ಯೆಗಳಲ್ಲಿರುವ ರೈತನ ಅಹವಾಲುಗಳನ್ನು ಸ್ವೀಕರಿಸಿರುವ ಸರ್ಕಾರಗಳು ರೈತನಿಗೆ ಯಂತ್ರೋಪಕರಣಗಳ ಖರೀದಿಗೆ ಸಾಲ ಸೌಲಭ್ಯ, ಸಬ್ಸಿಡಿ ಸಾಲ ಸೌಲಭ್ಯ, ರೈತನಿಗೆ ಕೃಷಿ ಚಟುವಟಿಕೆಯ ಖರ್ಚಿಗಾಗಿ ಸಹಕಾರಿ ಸಂಘಗಳು ಹಾಗೂ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಕಡಿಮೆ ಬಡ್ಡಿಗೆ ಸಾಲ ಅಥವಾ ಬಡ್ಡಿ ರಹಿತ ಸಾಲ, ಕೃಷಿ ಕ್ಷೇತ್ರದಲ್ಲಿ ಉತ್ತಮ ಇಳುವರಿ ಪಡೆದ ರೈತನಿಗೆ ಪ್ರೋತ್ಸಾಹ ಧನ.
ಕೃಷಿ ಕ್ಷೇತ್ರದಲ್ಲಿ ವೈಜ್ಞಾನಿಕತೆ ಅಳವಡಿಸಿಕೊಂಡು ಹೆಚ್ಚು ಲಾಭ ಪಡೆಯಲು ಉಚಿತ ತರಬೇತಿಗಳು, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PMKSY), ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ (PMFBY) ಮತ್ತಿತರ ಕ್ರಮಗಳ ಮೂಲಕ ನೆರವಾಗುತ್ತಾ ಬಂದಿದೆ.
ಇವುಗಳ ಜೊತೆಗೆ ಕೃಷಿ ಚಟುವಟಿಕೆಗೆ ಬೇಕಾದ ಬಿತ್ತನೆ ಬೀಜಗಳು, ರಸಗೊಬ್ಬರಗಳು ಇವುಗಳ ಬೆಲೆ ಇಳಿಕೆಯು ಕೂಡ ರೈತನಿಗೆ ಅನುಕೂಲವಾಗಲಿದೆ ಎನ್ನುವ ಕಾರಣಕ್ಕಾಗಿ ಮಾರುಕಟ್ಟೆಯಲ್ಲಿ ದೊರೆಯುವ ಬೆಲೆಗೆ ರೈತನು ಇದನ್ನು ಖರೀದಿಸಲು ಸಾಧ್ಯವಾಗುವುದಿಲ್ಲ ಎಂದು ಸರ್ಕಾರ ದೇಶದ ಪ್ರತಿ ಜಿಲ್ಲೆಯಲ್ಲೂ ಕೂಡ ಸರ್ಕಾರಿ ಗೋದಾಮುಗಳನ್ನು ನಿರ್ಮಿಸಿ ರಸಗೊಬ್ಬರಗಳ ಹಂಚಿಕೆ ಮಾಡುತ್ತಿದೆ.
ಸಬ್ಸಿಡಿ ರೂಪದಲ್ಲಿ ರೈತರಿಗೆ ರಸಗೊಬ್ಬರ ಹಂಚಬೇಕು ಮತ್ತು ಖಾಸಗಿಯವರಿಂದ ರಸಗೊಬ್ಬರದ ಕೃತಕ ಅಭಾವ ಆಗುವುದನ್ನು ತಪ್ಪಿಸಿ ನೆರವಾಗಬೇಕು ಎನ್ನುವ ಉದ್ದೇಶದಿಂದ ಹಲವು ವರ್ಷಗಳಿಂದ ಇಂತಹ ಒಂದು ನೀತಿಯನ್ನು ಪಾಲಿಸುತ್ತಿದೆ. ರೈತರು ತಮ್ಮ ಆಧಾರ್ ಕಾರ್ಡ್ (Aadhar card) ಮತ್ತು ಪಹಣಿ ಪತ್ರವನ್ನು (RTC) ದಾಖಲೆಯಾಗಿ ನೀಡುವ ಮೂಲಕ ಸಬ್ಸಿಡಿ ಬೆಲೆಗೆ (Subsidy rate) ಸರ್ಕಾರದಿಂದ ರಸಗೊಬ್ಬರಗಳನ್ನು (fertilizer) ಪಡೆಯಬಹುದಾಗಿದೆ.
ಸದ್ಯಕ್ಕೆ ರಾಜ್ಯದಲ್ಲಿ ಮುಂಗಾರಿನ ಕೃಷಿ ಅನೇಕ ಕಡೆ ಆರಂಭ ಆಗಿದೆ. ಈಗ ಬಿತ್ತನೆ ಸಮಯದಲ್ಲಿ ಮತ್ತು ಬೆಳೆಯುತ್ತಿರುವ ಬೆಳೆಗೆ ರಸಗೊಬ್ಬರಗಳಾದ DAP ಮತ್ತು ಯೂರಿಯಾ (Urea) ವನ್ನು ಸಿಂಪಡಿಸಬೇಕಾಗಿದೆ, ಅದಕ್ಕಾಗಿ ಸರ್ಕಾರವು ಇವುಗಳ ಬೆಲೆ ಇಳಿಕೆ ಮಾಡಿದೆ.
ಪ್ರಸ್ತುತವಾಗಿ ಮಾರುಕಟ್ಟೆಯಲ್ಲಿ ಒಂದು ಮೂಟೆ DAP 1525 ಗೆ ಮತ್ತು ಒಂದು ಮೂಟೆ ಯೂರಿಯ 270ರೂ. ಗಿಂತ ಆಧಿಕವಾಗಿದೆ. ಆದರೆ ಸರ್ಕಾರದ ನೆರವಿನಿಂದ ನೀವು ಇದನ್ನು ಸರ್ಕಾರಿ ಗೋದಾಮುಗಳಲ್ಲಿ ದಾಖಲೆಗಳನ್ನು ಕೊಟ್ಟು ಒಂದು ಮೂಟೆ DAP 1350ರೂ. ಗೆ ಹಾಗೂ ಒಂದು ಮೂಟೆ ಯೂರಿಯಾವನ್ನು 266 ರೂ.ಗೆ ಖರೀದಿಸಬಹುದು. ಈ ಉಪಯುಕ್ತ ವಿಷಯವನ್ನು ಎಲ್ಲ ರೈತರ ಜೊತೆಗೆ ಹಂಚಿಕೊಂಡು ಎಲ್ಲರಿಗೂ ಮಾಹಿತಿ ತಲುಪುವಂತೆ ಮಾಡಿ.