ಜಮೀನಿನಲ್ಲಿ ವಿದ್ಯುತ್ ಕಂಬ ಅಥವಾ ಟ್ರಾನ್ಸ್ಫಾರ್ಮರ್ ಇದ್ದರೆ ಅನಾನುಕೂಲತೆಗಳು ಹೆಚ್ಚು ಎನ್ನುವ ಭಯವೂ ರೈತರನ್ನು ಕಾಡುತ್ತಿರುತ್ತದೆ. ಆದರೆ ಸರ್ಕಾರ ಕೂಡ ಇದರ ಬಗ್ಗೆ ಕಾಳಜಿ ಮಾಡುತ್ತಿದೆ. ವಿದ್ಯುತ್ ಸಂಪರ್ಕ ಕಲ್ಪಿಸುವುದಕ್ಕೆ ಜಮೀನಿನಲ್ಲಿ ವಿದ್ಯುತ್ ಕಂಬ ನೆಡುವುದು ಹಾಗೂ ಟ್ರಾನ್ಸ್ಫಾರ್ಮರ್ ಗಳನ್ನು ಹಾಕುವುದು ಅನಿವಾರ್ಯ ಆದಕಾರಣ ಈ ಮೂಲಭೂತ ಸೌಕರ್ಯ ಹೊಂದಿರುವ ರೈತರಿಗೆ ಕೆಲ ಅನುಕೂಲತೆಗಳನ್ನು ಮಾಡುವ ವಿಶೇಷ ಯೋಜನೆಗಳನ್ನು ಜಾರಿಗೆ ತಂದಿದೆ.
ಸರ್ಕಾರದ ಹೊಸ ವಿದ್ಯುತ್ ಕಾಯ್ದೆ ಅನ್ವಯವಾಗಿ ಯಾವ ರೈತನ ಜಮೀನಿನ ಮೇಲೆ ಈ ರೀತಿ ವಿದ್ಯುತ್ ಕಂಬ ಹೋಗಿರುತ್ತದೆ ಆ ರೈತರಿಗೆ ಸರ್ಕಾರದ ಕಡೆಯಿಂದ ಹಲವು ಸವಲತ್ತುಗಳನ್ನು ಕಲ್ಪಿಸಿಕೊಡಲಾಗುತ್ತಿದೆ ಅದರ ಪಟ್ಟಿ ಹೀಗಿದೆ ನೋಡಿ.
ಈ ಸುದ್ದಿ ಓದಿ:- ಆಹಾರ ಸಂಶೋಧನಾಲಯ ಇಲಾಖೆ ನೇಮಕಾತಿ ಆಸಕ್ತರು ಅರ್ಜಿ ಸಲ್ಲಿಸಿ.! ವೇತನ 56,000/-
* ರೈತನ ಜಮೀನಿನ ಮೇಲೆ ವಿದ್ಯುತ್ ಕಂಬ ಅಥವಾ ಟ್ರಾನ್ಸ್ಫರ್ಮರ್ ಹೋಗಿದ್ದರೆ ಆ ರೈತನಿಗೆ ವಾರಕ್ಕೆ ರೂ.100 ರಂತೆ ವಿದ್ಯುತ್ ಇಲಾಖೆ ಕಡೆಯಿಂದ ಆರ್ಥಿಕ ನೆರವು ಸಿಗುತ್ತದೆ.
* ಎಲೆಕ್ಟ್ರಿಕಲ್ ಟ್ರಾನ್ಸ್ಫರ್ಮರ್ ಅಥವಾ ವಿದ್ಯುತ್ ಲೈನ್ ನಲ್ಲಿ ಏನಾದರೂ ದೋಷವನ್ನು ಹೊಂದಿದ್ದರೆ ಆ ಜಮೀನಿನ ಮಾಲೀಕ ದೂರು ಕೊಟ್ಟ 48 ಗಂಟೆಗಳ ಒಳಗೆ ವಿದ್ಯುತ್ ಇಲಾಖೆ ಕಡೆಯಿಂದ ಸಮಸ್ಯೆಗೆ ಸ್ಪಂದಿಸಿ ದುರಸ್ತಿ ಪಡಿಸಬೇಕು. ವಿಳಂಬ ಮಾಡಿದಲ್ಲಿ ದಿನಕ್ಕೆ ರೂ.50 ಲೆಕ್ಕದಲ್ಲಿ ಪರಿಹಾರ ನೀಡಬೇಕಾಗುತ್ತದೆ.
* ಡೊಮೆಸ್ಟಿಕ್ ಪರ್ಪಸ್ (DP) ಮತ್ತು ಪಂಪ್ ಲೋಡ್ (PL) ಜೊತೆಗೆ 2,000 ದಿಂದ 5,000 ಯೂನಿಟ್ ವಿದ್ಯುತ್ ಪ್ರಯೋಜನ ಕೂಡ ಆ ರೈತರಿಗೆ ಉಚಿತವಾಗಿ ನೀಡಲಾಗುತ್ತದೆ.
ಈ ಸುದ್ದಿ ಓದಿ:- ಮನೆಯಲ್ಲಿ ಮಳೆ ನೀರಿನ ಕೊಯ್ಲು ಮಾಡುವ ವಿಧಾನ.! ನೀರಿನ ಸಮಸ್ಯೆ ಯಾವತ್ತೂ ಬರಲ್ಲ ಬೇಸಿಗೆಯಲ್ಲೂ ಕೂಡ.!
* ಒಂದು ವೇಳೆ ತನ್ನ ಜಮೀನಿನಲ್ಲಿ ಈ ರೀತಿ ವಿದ್ಯುತ್ ಕಂಬ ಅಥವಾ ಟ್ರಾನ್ಸ್ಫಾರ್ಮರ್ ಅಳವಡಿಸಿಕೊಳ್ಳುವುದಕ್ಕೆ ತನ್ನ ತಕರಾರು ಏನು ಇಲ್ಲ ಎಂದು ರೈತ NOC ನೀಡಿದರೆ ಕಂಪನಿ ಮತ್ತು ರೈತರ ನಡುವೆ ಭೂ ಗುತ್ತಿಗೆ ಒಪ್ಪಂದ ಜರುಗುತ್ತದೆ.
ನಂತರ ಆ ಒಪ್ಪಂದದ ಪ್ರಕಾರವಾಗಿ ರೈತನು ತನ್ನ ಜಮೀನನ್ನು ರೂ.5,000 ದವರೆಗೆ ಗುತ್ತಿಗೆ ಮಾತನಾಡಿ ವಿದ್ಯುತ್ ಇಲಾಖೆಗೆ ನೀಡಬಹುದು. ಇದರಿಂದ ರೈತನಿಗೆ ಪ್ರತಿ ತಿಂಗಳು ಅದರ ಜೀವನ ನಿರ್ವಹಣೆಗೆ ಆದಾಯದ ಮೂಲ ದೊರೆತ ರೀತಿ ಆಗುತ್ತದೆ.
* ತಮ್ಮ ಜಮೀನಿನಲ್ಲಿ ಕಂಬ ಅಥವಾ ಟ್ರಾನ್ಸ್ಫಾರ್ಮರ್ ಹೊಂದಿರುವ ಭೂ ಮಾಲೀಕರು ವಸತಿ ಅಥವಾ ಕೃಷಿ ಉದ್ದೇಶಕ್ಕಾಗಿ ವಿದ್ಯುತ್ ಸಂಪರ್ಕ ಪಡೆಯಲು ಬಯಸಿದರೆ ಆ ಸಮಯದಲ್ಲಿ ಕೂಡ ಅವರಿಗೆ ಅನೇಕ ವಿನಾಯಿತಿ ಇರುತ್ತದೆ. ಹೀಗೆ ಹೊಸ ವಿದ್ಯುತ್ ಸಂಪರ್ಕ ಪಡೆದಾಗ ರೂ.1500 ಇಂದ ರೂ.5000 ವರೆಗೆ ನಿರ್ವಹಣೆ ಶುಲ್ಕ ಬರುತ್ತದೆ ಇದನ್ನು ಕೂಡ ಕಂಪನಿಯೇ ನಿಭಾಯಿಸುತ್ತದೆ. ಇನ್ನಿತ್ಯಾದಿ ಹಲವು ಸೌಕರ್ಯಗಳು ಸಿಗುತ್ತವೆ.
ಈ ಸುದ್ದಿ ಓದಿ:- ಪೋಸ್ಟ್ ಆಫೀಸ್ ನಾ ಈ ಯೋಜನೆಯಲ್ಲಿ ಕೇವಲ 36 ರೂಪಾಯಿ ಹೂಡಿಕೆ ಮಾಡಿದರೆ ಸಾಕು, 6 ಲಕ್ಷ ಸಿಗಲಿದೆ
ವಿದ್ಯುತ್ ಕಂಬ ಸ್ಥಾಪಿಸುವುದು ಅಥವಾ ಟ್ರಾನ್ಸ್ಫಾರ್ಮರ್ ಅಳವಡಿಸುವುದರಿಂದ ಸಮಸ್ಯೆ ಆಗುತ್ತದೆ ಎನ್ನುವ ರೈತನ ಭಾವನೆಯನ್ನು ಬದಲಾಯಿಸಿ ಆತನಿಗೆ ಈ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಪ್ರೋತ್ಸಾಹಿಸಲು ಎಲ್ಲಾ ಮುಂಜಾಗ್ರತ ಕ್ರಮಗಳನ್ನು ಕೈಗೊಂಡು ಈ ನೀತಿ ಜಾರಿಗೆ ತರಲಾಗಿದೆ.
ಆದರೆ ರೈತರಿಗೆ ಸಿಗುತ್ತಿರುವ ಈ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದರೆ ರೈತನು ಅರ್ಜಿ ಸಲ್ಲಿಸಿ, ನೋಂದಾಯಿಸಿಕೊಳ್ಳಬೇಕು. ದಾಖಲೆಗಳು ಸರಿಯಾಗಿದ್ದರೆ, ಸ್ಥಳ ಪರೀಕ್ಷೆ ಸಂಬಂಧಿತ ಇಲಾಖೆ ಅಧಿಕಾರಿಗಳು ಅರ್ಜಿಯನ್ನು ಅನುಮೋದಿಸಿದರೆ 30 ದಿನಗಳ ನಂತರ ಈ ಮೇಲೆ ತಿಳಿಸಿದಂತಹ ಎಲ್ಲಾ ಅನುಕೂಲತೆಗಳು ರೈತನಿಗೆ ಸಿಗುತ್ತವೆ.