ಸಾಲ ಮನ್ನಾ ನಿರೀಕ್ಷೆಯಲ್ಲಿದ್ದ ರೈತರಿಗೆ ಗುಡ್ ನ್ಯೂಸ್, ರಾಜ್ಯ ಸರ್ಕಾರದಿಂದ ರೈತರಿಗೆ ಸಿಹಿ ಸುದ್ದಿ…

ರಾಜ್ಯದಲ್ಲಿ ಈ ವರ್ಷದ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳು ಶುರು ಆಗಿವೆ. ರಾಜ್ಯದ ಎಲ್ಲಾ ಭಾಗದ ರೈತರು ಕೂಡ ಕೃಷಿ ಕಾರ್ಯಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಾ ಮಳೆಯ ನಿರೀಕ್ಷೆಯಲ್ಲಿ ಇದ್ದಾರೆ. ಭೂಮಿಯನ್ನು ಹಸನು ಮಾಡಿಕೊಳ್ಳುತ್ತಿರುವ ರೈತ ಈಗ ಕೃಷಿ ಚಟುವಟಿಕೆಗೆ ಬೇಕಾದ ಹಣಕಾಸಿನ ಖರ್ಚಿಗೆ ಲೆಕ್ಕ ಹಾಕುತ್ತಿದ್ದಾನೆ.

WhatsApp Group Join Now
Telegram Group Join Now

ಸಾಮಾನ್ಯವಾಗಿ ಪ್ರತಿ ವರ್ಷವೂ ಕೂಡ ರೈತ ತನ್ನ ಕೃಷಿ ಚಟುವಟಿಕೆಗಳಿಗೆ ಅಗತ್ಯವಾದ ಹಣಕ್ಕೆ ಸರ್ಕಾರದ ಸಹಾಯವನ್ನು ಎದುರು ನೋಡುವುದು ಸರ್ವೇಸಾಮಾನ್ಯ. ಸರ್ಕಾರವು ಕೂಡ ಹಲವು ಯೋಜನೆಗಳ ಮೂಲಕ ರೈತನಿಗೆ ಸಾಲ ನೀಡುವುದು ಬಿತ್ತನೆ ಬೀಜ ಮತ್ತು ರಸಗೊಬ್ಬರ ಖರೀದಿಸಲು ಸಬ್ಸಿಡಿ ರೂಪದಲ್ಲಿ ಸಾಲ ನೀಡುವುದು ಈ ಕಾರ್ಯಗಳನ್ನು ಮಾಡುತ್ತಿದೆ.

ಈ ರೀತಿ ಶೂನ್ಯ ಬಡ್ಡಿದರದಲ್ಲಿ ಸಾಲ ಪಡೆದ ರೈತನಿಗೆ ನಾನಾ ಕಾರಣದಿಂದಾಗಿ ಸಾಲ ತೀರಿಸಲು ಆಗದಿದ್ದಾಗ ಆ ಸಾಲವು ಹಲವು ವರ್ಷಗಳಿಂದ ಬಾಕಿ ಉಳಿದಿದ್ದಾಗ ಅಥವಾ ಅತಿವೃಷ್ಟಿ ಅನಾವೃಷ್ಟಿ ಕಾರಣದಿಂದಾಗಿ ರಾಜ್ಯದಲ್ಲಿ ಬೆಳೆ ಹಾನಿಯಾಗಿ ರೈತರಿಗೆ ಸಾಲ ತೀರಿಸದ ಪರಿಸ್ಥಿತಿ ಎದುರಾದಾಗ ಈ ರೀತಿ ಸರ್ಕಾರದಿಂದ ಪಡೆದ ಸಾಲ ಅನೇಕ ಬಾರಿ ಮನ್ನಾ ಆಗಿದೆ.

ಹಾಗಾಗಿ ಪ್ರತಿ ಬಾರಿಯೂ ಸರ್ಕಾರ ರಚನೆ ಆದಾಗ ಅಥವಾ ಪ್ರತಿ ಬಜೆಟಿನಲ್ಲಿ ಈ ಕುರಿತು ಏನಾದರೂ ವಿಶೇಷ ಸುದ್ದಿ ಇರಬಹುದೇ ಎಂದು ರೈತರು ಎದುರು ನೋಡುತ್ತಾರೆ. ಇದೀಗ ಕರ್ನಾಟಕದ ಈ ವರ್ಷ ಕರ್ನಾಟಕ ವಿಧಾನಸಭಾ ಚುನಾವಣೆ ನಡೆದು ಹೊಸ ಕಾಂಗ್ರೆಸ್ ಸರ್ಕಾರ ಸ್ಥಾಪನೆ ಆಗಿದೆ. ರೈತರು ಕಾಂಗ್ರೆಸ್ ಸರ್ಕಾರವು ತಮಗಾಗಿ ಯಾವುದಾದರೂ ಅನುಕೂಲತೆ ಮಾಡಬಹುದೇ ಎಂದು ಕಾಯುತ್ತಿದ್ದಾರೆ.

ಅಂತವರಿಗೆ ಸಾಲ ಮನ್ನಾ ವಿಚಾರದ ಬದಲು ಸಾಲದ ವಿಚಾರದಲ್ಲಿ ಸಿಹಿ ಸುದ್ದಿಯು ಸರ್ಕಾರದಿಂದ ದೊರೆತಿದೆ. ಕೃಷಿ ಬೆಳೆಗಳಿಗೆ ಶೂನ್ಯ ಬಡ್ಡಿದರದಲ್ಲಿ ಸಾಲವನ್ನು ಪಡೆಯುತ್ತಿದ್ದ ರೈತರಿಗೆ ಹಿಂದಿಗಿಂತ ಹೆಚ್ಚಿನ ಮೊತ್ತದಲ್ಲಿ ಸಾಲ ನೀಡಲು ಸರ್ಕಾರ ಮುಂದಾಗಿದೆ. ಇಂತಹ ಒಂದು ಘೋಷಣೆಯನ್ನು ಮಾನ್ಯ ಸಹಕಾರ ಸಚಿವ ಕೆ. ಎಸ್ ರಾಜಣ್ಣ ಅವರೇ ತಿಳಿಸಿದ್ದಾರೆ. ಪ್ರಸಕ್ತ ಮುಂಗಾರು ಹಂಗಾಮಿನಿಂದಲೇ ಈ ಯೋಜನೆ ಕಾರ್ಯ ರೂಪಕ್ಕೆ ಬರಲಿದೆ.

ರೈತರು ಈ ಸಾಲಕ್ಕಾಗಿ ಪೂರಕ ದಾಖಲೆಗಳ ಜೊತೆ ಸಹಕಾರಿ ಬ್ಯಾಂಕಳಲ್ಲಿ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದ್ದಾರೆ. ರೈತರು ಕಳೆದ ವರ್ಷ ರೈತರಿಗೆ 12,000 ಕೋಟಿ ಸಾಲ ನೀಡುವ ಟಾರ್ಗೆಟ್ ಹೊಂದಿತ್ತು ಆದರೆ ರೈತರ ಬೇಡಿಕೆ ನೋಡಿ 20,000 ಕೋಟಿ ವರೆಗೂ ಕೂಡ ಸಾಲ ನೀಡಿದೆ. ಅದೇ ರೀತಿ ಈ ವರ್ಷವೂ ಕೂಡ ರೈತರಿಗೆ ಸಮಸ್ಯೆ ಆಗತಂತೆ ಅನುಕೂಲಕರವಾದ ಮೊತ್ತದ ಸಾಲವನ್ನು ಶೂನ್ಯ ಬಡ್ಡಿ ದರದಲ್ಲಿ ನೀಡಲಾಗುತ್ತದೆ ಆ ಮಿತಿಯನ್ನು ಹೆಚ್ಚಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಇದುವರೆಗೆ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಹಕಾರಿ ಬ್ಯಾಂಕ್ ಗಳಲ್ಲಿ 3 ಲಕ್ಷಗಳ ವರೆಗೆ ಸಾಲ ದೊರೆಯುತ್ತಿತ್ತು ಇನ್ನು ಮುಂದೆ 3 – 5 ಲಕ್ಷದವರೆಗೆ ಇದು ಹೆಚ್ಚಾಗಲಿದೆ. ಹಾಗೆಯೇ 3% ಬಡ್ಡಿದರದಲ್ಲಿ ದೊರೆಯುತ್ತಿದ್ದ ಮಧ್ಯಮಾವತಿ ಸಾಲ ಮೊತ್ತವು 10 ಲಕ್ಷಗಳವರೆಗೆ ಇತ್ತು ಈಗ ಅದನ್ನು 20 ಲಕ್ಷದವರೆಗೆ ಹೆಚ್ಚಿಸಲಾಗುತ್ತಿದೆ. ಇದರಿಂದ ರಾಜ್ಯದ ಎಲ್ಲಾ ರೈತರಿಗೂ ಕೂಡ ನೆರವಾಗಲಿದೆ ಎನ್ನುವುದು ಸರ್ಕಾರದ ಆಶಯ. ಸರ್ಕಾರವು ನೀಡಿರುವ ರೈತ ಸಾಲ ಪ್ರಣಾಳಿಕೆಯ ಮಾಹಿತಿಯನ್ನು ಎಲ್ಲಾ ರೈತರಿಗೂ ತಲುಪಿಸುವ ಉದ್ದೇಶದಿಂದ ಶೇರ್ ಮಾಡಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now