ಬೈಕ್ (bike) ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ ಶ್ರೀಮಂತರಿಗೆ ಫ್ಯಾಷನ್ ಬೈಕ್ ಕೊಂಡು ಕೊಳ್ಳುವ ಕ್ರೇಜ್ ಇದ್ದರೆ, ಜನ ಹಾಗೂ ಸಾಮಾನ್ಯ ವರ್ಗದವರಿಗೆ ತಮ್ಮ ಬಜೆಟ್ ಗೆ ತಕ್ಕ ಹಾಗೆ ಆದರೂ ಅನುಕೂಲಕ್ಕಾಗಲಿ ಎಂದು ಮೈಲೇಜ್ ಕೊಡುವ ಒಂದು ಬೈಕ್ ಕೊಂಡುಕೊಳ್ಳುವ ಆಸೆ. ಒಟ್ಟಿನಲ್ಲಿ ಶ್ರೀಮಂತರಿಂದ ಬಡ ಮನೆಯ ಹುಡುಗನ ತನಕ ಎಲ್ಲರೂ ವಯಸ್ಸಿಗೆ ಬರುತ್ತಲೇ ಇಷ್ಟಪಡುವ ಒಂದೇ ಒಂದು ವಸ್ತು ಎಂದರೆ ಅದು ಬೈಕ್. ಬೈಕ್ ಬೆಲೆಗಿಂತ ಅದಕ್ಕೆ ಹಾಕಿಸುವ ಪೆಟ್ರೋಲ್ ಖರ್ಚಿನ (Petrol expencive) ವಿಷಯದಿಂದ ಇದನ್ನು ಕೊಂಡುಕೊಳ್ಳಲು ಹಿಂದೇಟು ಹಾಕುವವರು ಇದ್ದಾರೆ.
ಒಂದು ವೇಳೆ ನೀವೇನಾದರೂ ಹೀರೋ ಸ್ಪ್ಲೆಂಡರ್ (Hero Splendor) ಬೈಕ್ ಹೊಂದಿದ್ದರೆ ಈ ರೀತಿ ಪೆಟ್ರೋಲ್ ಹಾಕಿಸುವ ಹಣಕ್ಕೆ ಯೋಚನೆ ಮಾಡುವ ಅಗತ್ಯ ಇಲ್ಲ. ಯಾಕೆಂದರೆ ಇನ್ನು ಮುಂದೆ ನಿಮ್ಮ ಗಾಡಿಯನ್ನು ಪೆಟ್ರೋಲ್ ಇಲ್ಲದೆ ಓಡಿಸಬಹುದು ಅದು ಕೂಡ ಹೆಚ್ಚು ಮೈಲೇಜ್ ಒಂದಿಗೆ. ಇದು ಹೇಗೆ ಸಾಧ್ಯ ಎಂದು ಎಲ್ಲರಿಗೂ ಆಶ್ಚರ್ಯ ಆಗಬಹುದು. ಇದು ಸಾಧ್ಯ ಇದೆ ಹೇಗೆಂದರೆ ನಿಮ್ಮ ಹೀರೋ ಸ್ಪ್ಲೆಂಡರ್ ಬೈಕ್ ಅನ್ನು ಎಲೆಕ್ಟ್ರಿಕಲ್ ವೆಹಿಕಲ್ (electrical vehical) ಆಗಿ ಕನ್ವರ್ಟ್ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ಈಗ ಹೀರೋ ಸ್ಪ್ಲೆಂಡರ್ ಬೈಕ್ ಗಾಗಿ ಇವಿ ಕನ್ವರ್ಷನ್ ಕಿಟ್ ಬಿಡುಗಡೆ ಮಾಡಲಾಗಿದೆ.
ಹೀರೋ ಸ್ಪ್ಲೆಂಡರ್ ಬೈಕ್ ಖರೀದಿಸಿ ಪೆಟ್ರೋಲ್ ಹಣ ಉಳಿಸಲು ಬಯಸುವವರಿಗಾಗಿ ಈ ರೀತಿ ಎಲೆಕ್ಟ್ರಿಕಲ್ ಕಿಟ್ ಅಳವಡಿಸಿ ಹಣ ಉಳಿಸುವ ಯೋಜನೆ ತರಲಾಗಿದೆ. ಈ ವಿದ್ಯುತ್ ಕಿಟ್ ಬಳಕೆಯನ್ನು ಆರ್ಟಿಓ (RTO) ಕೂಡ ಅನುಮೋದಿಸಿದೆ. ಮಹಾರಾಷ್ಟ್ರದ ಥಾಣೆ (Thane) ಮೂಲದ ಇವಿ ಸ್ಟಾರ್ಟಪ್ ಕಂಪನಿ ಗೊಗೊಎ 1 ಇತ್ತೀಚೆಗೆ ಇದನ್ನು ಬಿಡುಗಡೆ ಮಾಡಿದೆ. ಅತ್ಯಂತ ಕಡಿಮೆ ಬೆಲೆಯಲ್ಲಿ ಸಾಮಾನ್ಯ ಜನರಿಗೂ ಕೈಗೆಟಕುವ ದರದಲ್ಲಿ ಇದನ್ನು ಮಾರ್ಕೆಟ್ಗೆ ತಂದಿದೆ. ಇದರ ಬೆಲೆ ಕೇವಲ 35,000 ರೂಗಳು ಇದರ ಜೊತೆಗೆ ಜಿಎಸ್ಟಿ ಆಗಿ 6300 ಗಳನ್ನು ಪ್ರತ್ಯೇಕವಾಗಿ ಕಟ್ಟಬೇಕಾಗುತ್ತದೆ.
ಜೊತೆಗೆ ಬ್ಯಾಟರಿ ದರವನ್ನು ಕೂಡ ಪ್ರತ್ಯೇಕವಾಗಿ ಕಟ್ಟಬೇಕು. ಒಟ್ಟಾರಿಯಾಗಿ ಈ ಕಿಟ್ ಮತ್ತು ಬ್ಯಾಟರಿ ಎಲ್ಲವನ್ನು ಖರೀದಿಸಲು ಒಟ್ಟಾರೆಯಾಗಿ 95,000ಗಳನ್ನು ಕೊಡಬೇಕು. ಇದಲ್ಲದೆ ಹೀರೋ ಸ್ಪ್ಲೆಂಡರ್ ಬೈಕ್ ಖರೀದಿಯ ಮೊತ್ತವನ್ನು ಕೊಡಬೇಕು. ಹಾಗಾದರೆ ಸಾಮಾನ್ಯವಾದ ಬೈಕ್ ಗಿಂತಲೂ ದುಬಾರಿ ಆಯ್ತಲ್ಲ ಎಂದು ಲೆಕ್ಕಾಚಾರ ಹಾಕುವವರು ಇರುತ್ತಾರೆ. ಆದರೆ ಇದು ಒನ್ ಟೈಮ್ ಇನ್ವೆಸ್ಟ್ಮೆಂಟ್ ಆಗಿರುತ್ತದೆ. ಒಮ್ಮೆ ಇಷ್ಟು ದುಡ್ಡು ಕೊಟ್ಟು ಖರೀದಿಸಿದರೆ ಮತ್ತೆ ಚಾರ್ಜ್ ಮಾಡಿಕೊಂಡು ಪೆಟ್ರೋಲ್ ಇಲ್ಲದೆ ಬಳಸಬಹುದು ಮತ್ತು ಇದರ ಜೊತೆಗೆ ನಿಮಗೆ ಮೂರು ವರ್ಷಗಳ ವಾರಂಟಿ ಕೂಡ ಸಿಗುತ್ತದೆ.
ರಶ್ಲೈನ್ ಅಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ ಇದು ಒಮ್ಮೆ ಚಾರ್ಜ್ ಆದರೆ 151 km ಮೈಲೇಜ್ (Mylage) ಕೊಡುತ್ತದೆಯಂತೆ. ನಿಜಕ್ಕೂ ಇದು ಅನುಕೂಲಕರವಾದ ಸಂಗತಿಯೇ ಆಗಿದೆ. ಬೈಕ್ ಖರೀದಿಸುವ ಮನಸ್ಸಿದ್ದು ಪೆಟ್ರೋಲ್ ಬೆಲೆಯಿಂದ ಖರೀದಿಸಲು ಹಿಂದು ಮುಂದು ನೋಡುತ್ತಿದ್ದ ಎಲ್ಲರಿಗೂ ಕೂಡ ಈ ಯೋಜನೆಯಿಂದ ಅನುಕೂಲ ಆಗಲಿದೆ. ತಕ್ಷಣವೇ ನಿಮ್ಮ ಸ್ನೇಹಿತರು ಹಾಗೂ ಕುಟುಂಬದಲ್ಲಿರುವ ಬೈಕ್ ಪ್ರಿಯರಿಗೆ ಈ ಮಾಹಿತಿಯ ಬಗ್ಗೆ ತಿಳಿಸಿ ಅವರನ್ನು ಸಂತಸ ಪಡಿಸಿ.