ವಾಹನ ಸವಾರರಿಗಾಗಿ ಸರ್ಕಾರವು ಹಲವಾರು ಕಾನೂನುಗಳನ್ನು ಜಾರಿಗೆ ತಂದಿದೆ. ಮೋಟಾರ್ ವಾಹನ ಕಾಯ್ದೆ, ಸಂಚಾರಿ ಕಾನೂನುಗಳು ಪದೇಪದೇ ಪರಿಷ್ಕರಣೆಯಾಗಿ ಹೊಸ ಹೊಸ ರೂಲ್ಸ್ ಗಳು ಬರುತ್ತಲೇ ಇರುತ್ತದೆ. ಕೇಂದ್ರ ಹೆದ್ದಾರಿ ಸಚಿವಾಲಯವು ಸಹ ಈಗ ಅಂತಹದೇ ಹೊಸ ನಿಯಮವನ್ನು ವಾಹನ ಸವಾರರಿಗೆ ಟ್ರಾಫಿಕ್ ರೂಲ್ಸ್ ಕುರಿತಾಗಿ ಜಾರಿಗೆ ಬಂದಿದೆ ಸರ್ಕಾರದ ಮೂಲ ಉದ್ದೇಶ ವಾಹನ ಸವಾರರ ಪ್ರಾಣ ರಕ್ಷಣೆಗೆ ಆಗಿದೆ.
ವಾಹನ ಚಾಲಕರಿಗೆ ಏನು ತೊಂದರೆ ಆಗದಂತೆ ಜೊತೆಗೆ ಸಹ ಸಂಚಾರಕರಿಗೆ ಇದರಿಂದ ಸಮಸ್ಯೆ ಆಗದಂತೆ ತಡೆಗಟ್ಟಲೆಂದೇ ಇಂತಹ ಕಾನೂನುಗಳು ಜಾರಿಯಲ್ಲಿ ಇರುವುದು. ಆದರೆ ಇವುಗಳ ಉಲ್ಲಂಘನೆ ಆದಾಗ ಮಾತ್ರ ಕಟ್ಟುನಿಟ್ಟಿನ ಕ್ರಮ ಕೈಗೊಂಡು ದಂಡ ಕಟ್ಟಿಸುತ್ತದೆ ಹಾಗಾಗಿ ಬದಲಾಗುವ ಎಲ್ಲಾ ನಿಯಮಗಳನ್ನು ಕೂಡ ಭಾರತದಲ್ಲಿ ವಾಹನಗಳನ್ನು ಹೊಂದಿರುವ ಎಲ್ಲಾ ಮಾಲೀಕರು ಮತ್ತು ಚಾಲಕರು ತಿಳಿದುಕೊಂಡಿರಲೇ ಬೇಕು.
ಸದ್ಯಕ್ಕೀಗ ಭಾರತದಲ್ಲಿ DL ಹೊಂದಿರದೆ ವಾಹನಗಳನ್ನು ತೆಗೆದುಕೊಂಡು ರಸ್ತೆಗೆ ಇಳಿಯುವುದು ದಂಡಾರ್ಹ ಅಪರಾಧ. ಈ ನಿಯಮದ ಉಲ್ಲಂಘನೆಯಾದರೆ ಟ್ರಾಫಿಕ್ ಪೊಲೀಸರು ಮುಲಾಜಿಲ್ಲದೆ ದಂಡ ವಸೂಲಿ ಮಾಡುತ್ತಾರೆ. DL ಪಡೆಯುವುದಕ್ಕೂ ಕೂಡ ಸಾಕಷ್ಟು ನಿಯಮಗಳು ಇವೆ. 18 ವರ್ಷ ಪೂರೈಸಿದ ನಂತರ ಸರಿಯಾಗಿ ವಾಹನ ಚಲಾಯಿಸುವ ತರಬೇತಿ ಪಡೆದು ನಂತರ RTO ಕಛೇರಿಗಳಲ್ಲಿ ಪರೀಕ್ಷೆ ಎದುರಿಸಿ ಅರ್ಜಿ ಸಲ್ಲಿಸಿ ಅವುಗಳನ್ನು ಪಡೆಯಬೇಕು.
ಈ ರೀತಿ ಪಡೆದ ಪರವಾನಗಿಯನ್ನು ಜೋಪಾನವಾಗಿ ಇಟ್ಟುಕೊಳ್ಳುವುದು ಕೂಡ ಮುಖ್ಯ. ವಾಹನ ತೆಗೆದುಕೊಂಡು ಮನೆಯಿಂದ ಹೊರಡುವಾಗ ವಾಹನಕ್ಕೆ ಸಂಬಂಧಪಟ್ಟ ದಾಖಲೆಗಳು ಇದೆಯೇ ಎನ್ನುವುದರ ಜೊತೆಗೆ ವಾಹನ ಓಡಿಸುವುದಕ್ಕಾಗಿ ಕೊಟ್ಟಿರುವ ಈ ಲೈಸೆನ್ಸ್ ಸಹಾಶಇದೆಯೇ ಎಂದು ಕೂಡ ಚೆಕ್ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಟ್ರಾಫಿಕ್ ಪೊಲೀಸ್ ಕೈಗೆ ಸಿಕ್ಕಿಬಿದ್ದರೆ ಫೈನ್ ಕಟ್ಟಬೇಕಾಗುತ್ತದೆ.
ಈ ರೀತಿ ಪದೇ ಪದೇ ಮನೆಯಲ್ಲಿ DL ಮರೆತು ಹೋಗಿ ಅನೇಕ ಬಾರಿ ಫೈನ್ ಗಳನ್ನು ಕಟ್ಟಿರುವ ಉದಾಹರಣೆ ನಮ್ಮ ಕುಟುಂಬದಲ್ಲಿ ಅಥವಾ ಸ್ನೇಹಿತರ ಬಳಗದಲ್ಲಿಯೇ ಇರುತ್ತಾರೆ. ಇನ್ನು ಮುಂದೆ ಅವರಿಗೆಲ್ಲ ಗುಡ್ ನ್ಯೂಸ್ ಯಾಕೆಂದರೆ ನೀವು ಮನೆಯಲ್ಲಿ DL ಬಿಟ್ಟು ಹೋಗಿದ್ದರು ಕೂಡ ಪೈನ್ ಕಟ್ಟುವ ಅವಶ್ಯಕತೆ ಇರುವುದಿಲ್ಲ. ಇಂತಹ ಒಂದು ಹೊಸ ರೂಲ್ಸ್ ಅನ್ನು ಸರ್ಕಾರ ಈಗ ಜಾರಿಗೆ ತಂದಿದೆ ಭಾರತವನ್ನು ಡಿಜಿಟಲ್ ಇಂಡಿಯಾ ಮಾಡಬೇಕು ಎನ್ನುವ ಗುರಿಯನ್ನು ಹೊಂದಿರುವ ಸರ್ಕಾರ ಅದಕ್ಕೆ ತನ್ನಿಂದ ಆದಷ್ಟು ಹೊಸ ಹೊಸ ಪ್ರಯತ್ನವನ್ನು ತರುತ್ತಿದೆ.
ಎಲ್ಲಾ ಕ್ಷೇತ್ರಗಳಲ್ಲಿ ಕೂಡ ಡಿಜಿಟಲ್ ಗಳ ಬಳಕೆ ಮಾಡುವಂತೆ ಸಾರ್ವಜನಿಕರನ್ನು ಉತ್ತೇಜಿಸುತ್ತಿದೆ. ಹಾಗೆಯೇ ಕೆಲ ವರ್ಷಗಳ ಹಿಂದೆ ಡಿಜಿಟಲ್ ಲಾಕರ್ ಎನ್ನುವ ಹೊಸ ಆಪ್ ಅನ್ನು ಸರ್ಕಾರ ಜಾರಿಗೆ ತಂದು ಈ ಆಪ್ ಅಲ್ಲಿ ನಿಮ್ಮ ಎಲ್ಲ ದಾಖಲೆಗಳನ್ನು ಕೂಡ ಸ್ಕ್ಯಾನ್ ಮಾಡಿ ಇಟ್ಟುಕೊಳ್ಳಲು ಅವಕಾಶ ನೀಡಿತ್ತು.
ಈ ರೀತಿ ಆಪ್ ಅಲ್ಲಿ ಇಟ್ಟುಕೊಂಡ ಸಾಫ್ಟ್ ಕಾಪಿಗಳು ಎಲ್ಲೆಡೆ ಮಾನ್ಯವೂ ಆಗುತ್ತಿತ್ತು. ಈಗ ಈ ಡಿಜಿಟಲ್ ಲಾಕರ್ ಆಪ್ ಅಲ್ಲಿ ನೀವು DL ಅನ್ನು ಕೂಡ ಸಾಫ್ಟ್ ಕಾಪಿ ಮಾಡಿ ಇಟ್ಟುಕೊಂಡರೆ ಮನೆಯಲ್ಲಿ ಡ್ರೈವಿಂಗ್ ಲೈಸೆನ್ಸ್ ಬಿಟ್ಟು ವಾಹನವನ್ನು ತೆಗೆದುಕೊಂಡು ಹೋದಾಗ ಒಂದು ವೇಳೆ ಟ್ರಾಫಿಕ್ ಪೊಲೀಸ್ ತಡೆದು ಕೇಳಿದರೆ ನೀವು ಈ ರೀತಿ ನಿಮ್ಮ ಮೊಬೈಲ್ ಫೋನಲ್ಲೇ ಸೇವ್ ಮಾಡಿ ಇಟ್ಟುಕೊಂಡಿರುವ ಡಾಕುಮೆಂಟ್ ತೋರಿಸಬಹುದು. ಆಗ ನಿಮಗೆ DL ಮೂಲ ಪ್ರತಿ ಇಲ್ಲ ಎಂದು ದಂಡ ಹಾಕುವುದಿಲ್ಲ.