ಬೇಟಿ ಬಚಾವೋ, ಬೇಟಿ ಪಡಾವೋ ಎನ್ನುವ ಧ್ಯೇಯದೊಂದಿಗೆ ಕೇಂದ್ರ ಸರ್ಕಾರವು (Indian Government) 2015ರಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯನ್ನು (Sukanya Samruddi Yojane for Girl Child) ಪರಿಚಯಿಸಿತು. ಸುಕನ್ಯಾ ಸಮೃದ್ಧಿ ಯೋಜನೆಯು ದೀರ್ಘಕಾಲದ ಉಳಿತಾಯ ಯೋಜನೆಯಾಗಿದ್ದು.
ಹೆಣ್ಣು ಮಕ್ಕಳ ಪೋಷಕರು ಅವರ ಮೊದಲ ಎರಡು ಹೆಣ್ಣು ಮಕ್ಕಳ ಹೆಸರಿನಲ್ಲಿ ಖಾತೆ ತೆರೆದು ಹಣ ಹೂಡಿಕೆ ಮಾಡುತ್ತಾ ಬಂದರೆ ಮುಂದೆ ಹೆಣ್ಣುಮಕ್ಕಳ ವಿದ್ಯಾಭ್ಯಾಸದ ಖರ್ಚಿಗೆ ಅಥವಾ ಮದುವೆ ಖರ್ಚಿಗೆ ಈ ಯೋಜನೆ ಹಣವು ಅನುಕೂಲಕ್ಕೆ ಬರುತ್ತದೆ. ಹೆಣ್ಣು ಮಕ್ಕಳನ್ನು ಆರ್ಥಿಕವಾಗಿ ಸದೃಢರನ್ನಾಗಿಸಲು ಪ್ರತಿ ಪೋಷಕರು ತಮ್ಮ ಮಕ್ಕಳ ಹೆಸರಿನಲ್ಲಿ ಈ ಖಾತೆ ತೆರೆಯಬೇಕು.
ಇದುವರೆಗೆ ಇರುವ ಸಣ್ಣ ಉಳಿತಾಯ ಯೋಜನೆಯಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ ಬಡ್ಡಿದರ ಹೆಚ್ಚಿನ ಮೊತ್ತದಲ್ಲಿತ್ತು ಈಗ ಈ ಕುರಿತಾದಂತೆ ಕೇಂದ್ರ ಸರ್ಕಾರದಿಂದ ಮತ್ತೊಂದು ಸಿಹಿ ಸುದ್ದಿ ನೀಡಿದೆ. ಅದೇನೆಂದರೆ ಪ್ರತಿ ಮೂರು ತಿಂಗಳಿಗೊಮ್ಮೆ ಸಣ್ಣ ಉಳಿತಾಯಗಳ ಬಡ್ಡಿದರವನ್ನು ಪರಿಷ್ಕರಿತಗೊಳಿಸಲಾಗುತ್ತದೆ.
ಅಂತೆಯೇ ಜನವರಿ 2024 ರಿಂದ ಮಾರ್ಚ್ 2024ರ ತ್ರೈಮಾಸಿಕ ಬಡ್ಡಿದರವನ್ನು ಪರಿಷ್ಕೃತಗೊಳಿಸಿ ಇದುವರೆಗೂ 8% ಇದ್ದ ಸುಕನ್ಯ ಸಮೃದ್ಧಿ ಯೋಜನೆ ಬಡ್ಡಿದರವನ್ನು 8.2% ಗೆ ಏರಿಸಲಾಗಿದೆ. ಈ ಪ್ರಕಾರವಾಗಿ ಇದು ಉಳಿತಾಯ ಯೋಜನೆಗಳಲ್ಲಿ ಅತಿ ಹೆಚ್ಚು ಬಡ್ಡಿದರವನ್ನು ಪಡೆಯುತ್ತಿದ್ದ ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS) ಬಡ್ಡಿದರಕ್ಕೆ ಸಮವಾಗಿದೆ.
ಇದುವರೆಗೂ ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ 8.2% ಬಡ್ಡಿದರ ಸಿಗುತ್ತಿತ್ತು ಈ ತ್ರೈಮಾಸಿಕದಲ್ಲಿ ಬದಲಾಗದೆ ಯತಾಸ್ಥಿತಿ ಮುಂದುವರೆದಿದೆ. ಈ ಉಪಯುಕ್ತ ಮಾಹಿತಿಯನ್ನು ತಪ್ಪದೆ ಎಲ್ಲಾ ಹೆಣ್ಣು ಮಕ್ಕಳ ಪೋಷಕರ ಜೊತೆಗೂ ಹಂಚಿಕೊಳ್ಳಿ, ಇದರ ಜೊತೆಗೆ ಸುಕನ್ಯ ಸಮೃದ್ಧಿ ಯೋಜನೆ ಕುರಿತಾದ ಪ್ರಮುಖ ಮಾಹಿತಿ ಹೀಗಿದೆ ನೋಡಿ.
* ಹೆಣ್ಣು ಮಕ್ಕಳ ಪೋಷಕರು ತಮ್ಮ ಮೊದಲ ಎರಡು ಹೆಣ್ಣು ಮಕ್ಕಳ ಹೆಸರಿನಲ್ಲಿ ಮಾತ್ರ ಸುಕನ್ಯಾ ಸಮೃದ್ಧಿ ಯೋಜನೆ ಖಾತೆ ತೆರೆಯಬಹುದು. ಒಂದು ವೇಳೆ ಎರಡನೇ ಮಗುವಿನ ಜನನದ ಸಮಯದಲ್ಲಿ ಅವಳಿ ಹೆಣ್ಣು ಮಕ್ಕಳಾದರೆ ಮಾತ್ರ ಮೂರು ಹೆಣ್ಣು ಮಕ್ಕಳ ಹೆಸರಿನಲ್ಲೂ ಸುಕನ್ಯ ಸಮೃದ್ಧಿ ಯೋಜನೆ ಖಾತೆ ತೆರೆಯಬಹುದು
* ಹೆಣ್ಣು ಮಗುವಿಗೆ ಹತ್ತು ವರ್ಷ ತುಂಬುವ ಮೊದಲೇ ಸುಕನ್ಯಾ ಸಮೃದ್ಧಿ ಯೋಜನೆ ಖಾತೆ ತೆರೆದಿರಬೇಕು.
* ಹೆಣ್ಣು ಮಗುವಿನ ಆಧಾರ್ ಕಾರ್ಡ್, ಪೋಷಕರಲ್ಲಿ ಒಬ್ಬರ ಆಧಾರ್ ಕಾರ್ಡ್, ಪಾನ್ ಕಾರ್ಡ್, ಬ್ಯಾಂಕ್ ಖಾತೆ ಮಾಹಿತಿ ನೀಡುವ ಮೂಲಕ ಯಾವುದೇ ಅಂಚೆ ಕಚೇರಿ ಅಥವಾ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ ಖಾತೆ ತೆರೆಯಬಹುದು
* ಒಂದು ಆರ್ಥಿಕ ವರ್ಷದಲ್ಲಿ ಕನಿಷ್ಠ ರೂ.250 ನಿಂದ ಗರಿಷ್ಠ ರೂ.1.5 ಲಕ್ಷದವರೆಗೆ ಈ ಖಾತೆಯಲ್ಲಿ ಹಣ ಹೂಡಿಕೆ ಮಾಡಬಹುದು. ಒಂದು ವೇಳೆ ಡಿಫಾಲ್ಟರ್ ಆಗಿದ್ದಲ್ಲಿ ರೂ.50 ರೂಪಾಯಿಗಳ ದಂಡ ಕಟ್ಟುವ ಮೂಲಕ ಯೋಜನೆಯನ್ನು ಮುಂದುವರೆಸಿಕೊಂಡು ಹೋಗಬಹುದು
* ಈ ಯೋಜನೆಯ ಮೆಚುರಿಟಿ ಅವಧಿ ಹೆಣ್ಣು ಮಗುವಿಗೆ 21 ವರ್ಷ ತುಂಬಿದಾಗ, ಆದರೆ 18 ವರ್ಷ ತುಂಬಿದ ಬಳಿಕ ಅದರಲ್ಲಿ 75% ಹಣವನ್ನು ಉನ್ನತ ಶಿಕ್ಷಣ ಅಥವಾ ಮದುವೆ ಅಥವಾ ಇನ್ನಿತರ ಯಾವುದೇ ಪ್ರಮುಖ ಕೆಲಸಕ್ಕಾಗಿ ಹಿಂಪಡೆಯಬಹುದು.
* ಆದಾಯ ತೆರಿಗೆ ಇಲಾಖೆ ನೀತಿ 80CC ನಡಿ ವಿನಾಯಿತಿ ಕೂಡ ಇರುತ್ತದೆ
* ಈ ಯೋಜನೆ ಕುರಿತಾಗಿ ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ ಸರ್ಕಾರದ ಅಧಿಕೃತ ವೆಬ್ಸೈಟ್ ಮಾಹಿತಿ ಪಡೆಯುವುದು ಅಥವಾ ನಿಮ್ಮ ಹತ್ತಿರದ ಅಂಚೆ ಕಚೇರಿ ಶಾಖೆಗೆ ಹೋಗಿ ಹೆಚ್ಚಿನ ಮಾಹಿತಿ ಪಡೆಯಿರಿ.