ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿ ಯೋಜನೆಗಲ್ಲಿ (Guaranty Scheme) ಈಗಾಗಲೇ ಶಕ್ತಿ ಯೋಜನೆ, ಅನ್ನಭಾಗ್ಯ, ಗೃಹಜೋತಿ ಹಾಗೂ ಗೃಹಲಕ್ಷ್ಮಿ ಯೋಜನೆಗಳ ಪ್ರಯೋಜನವನ್ನು ರಾಜ್ಯದ ಜನತೆಗೆ ಪಡೆಯುತ್ತಿದ್ದಾರೆ. ಅಂತಿಮವಾಗಿ 5ನೇ ಗ್ಯಾರಂಟಿ ಯೋಜನೆಯಾದ ಯುವನಿಧಿ ಯೋಜನೆಯು (Yuvanidhi Scheme) ಕೂಡ ಜಾರಿಗೆ ಬರುತ್ತಿದ್ದು, ಯುವನಿಧಿ ಯೋಜನೆ ಮೂಲಕ ನಿರುದ್ಯೋಗಿ ಯುವಕ ಯುವತಿಯರಿಗೆ ನಿರುದ್ಯೋಗ ಭತ್ಯೆ ನೀಡಲಾಗುತ್ತಿದೆ.
ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಕೂಡ ಆರಂಭವಾಗಿದ್ದು ಕರ್ನಾಟಕ ಸರ್ಕಾರ, ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯು ಇದೆ ಜನವರಿ 12ರಂದು ರಾಷ್ಟ್ರೀಯ ಯುವ ದಿನ (National Youth Day) ಹಾಗೂ ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ಯುವನಿಧಿ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಕಾರ್ಯಕ್ರಮ (Yuvanidhi Launch) ಕೂಡ ಹಮ್ಮಿಕೊಂಡಿದೆ.
ಕೊಟ್ಟಿದ್ದ ಆಶ್ವಾಸನೆಯಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿರುವ ಸರ್ಕಾರವು ಅಂತಿಮವಾಗಿ ಐದನೇ ಗ್ಯಾರಂಟಿಯಾಗಿ ಯುವನಿಧಿ ಯೋಜನೆಯನ್ನು ಕೂಡ ಜಾರಿ ಮಾಡಿ ನುಡಿದಂತೆ ನಡೆದು ಮಾತು ಉಳಿಸಿಕೊಳ್ಳುತ್ತಿದೆ.
ನಿಮ್ಮ ಜಮೀನು, ಮನೆ, ಸೈಟ್ ಬೆಲೆ ಇಂದು ಮಾರುಕಟ್ಟೆಯಲ್ಲಿ ಎಷ್ಟಿದೆ ಎಂದು ಈ ರೀತಿ ಚೆಕ್ ಮಾಡಿ ತಿಳಿದುಕೊಳ್ಳಿ.!
ಆ ಪ್ರಯುಕ್ತವಾಗಿ 12ನೇ ಜನವರಿ 2024 ರಂದು ಶಿವಮೊಗ್ಗ ನಗರದ ಫ್ರೀಡಂ ಪಾರ್ಕ್ ನಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ (CM Siddaramaih) ಮತ್ತು ಉಪಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ ಶಿವಕುಮಾರ್ ರವರು (D.K.Shivakumar) ಹಾಗೂ ಮಾನ್ಯ ಕೌಶಲ್ಯ ಅಭಿವೃದ್ಧಿ ಸಚಿವರಾಗಿರುವ ಡಾ.ಶರಣ ಪ್ರಕಾಶ್ ಪಾಟೀಲ್ (Sharan Prakash Pateel) ಅವರ ಸಮ್ಮುಖದಲ್ಲಿ ನೇರ ನಗದು ವರ್ಗಾವಣೆ ಕಾರ್ಯಕ್ರಮಕ್ಕೆ ಚಾಲನೆ ಸಿಗುತ್ತಿದೆ ಮತ್ತು ಇದರೊಂದಿಗೆ ಸರ್ಕಾರದ ಇನ್ನಿತರ ಪ್ರಮುಖ ಸಚಿವರು ಭಾಗಿಯಾಗಲಿದ್ದಾರೆ. ಸ್ವತಃ ಈ ವಿಷಯವನ್ನು ಕೌಶಲ್ಯ ಅಭಿವೃದ್ಧಿ ಸಚಿವರೇ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿಕೊಂಡು ದೃಢಪಡಿಸಿದ್ದಾರೆ.
ಯೋಜನೆ ಕುರಿತು ಇರುವ ಪ್ರಮುಖ ಅಂಶಗಳು:-
* ವಿದ್ಯಾವಂತ ನಿರುದ್ಯೋಗಿ ಯುವಕ ಅಥವಾ ಯುವತಿಯರಿಗೆ ಹಣಕಾಸಿನ ನೆರವು ನೀಡಿ ಅವರಲ್ಲಿ ಆತ್ಮಸ್ಥೈರ್ಯ ಬೆಳೆಸಿ ಸ್ವಾವಲಂಭಿಗಳನ್ನಾಗಿಸಲು ಯುವನಿಧಿ ಯೋಜನೆ ಸಹಾಯಕಾರಿ ಎಂದು ಸರ್ಕಾರ ಹೇಳಿಕೊಂಡಿದೆ.
* ಯಾವುದೇ ಗ್ಯಾರೆಂಟಿ ಯೋಜನೆಗಳಾಗಿದ್ದರು ಕರ್ನಾಟಕದ ನಿವಾಸಿಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ
* ಎರಡು ವರ್ಷಗಳು ಅಥವಾ ಉದ್ಯೋಗ ದೊರಕುವವರಿಗೆ ಇದರಲ್ಲಿ ಯಾವುದು ಮೊದಲು ಅಲ್ಲಿಯವರೆಗೆ ಪ್ರತಿ ತಿಂಗಳು ಪದವೀಧರರಿಗೆ ರೂ. 3000 ಡಿಪ್ಲೋಮೋದಾರರಿಗೆ ರೂ.1500 ನಿರುದ್ಯೋಗ ಭತ್ಯೆ ನೀಡಲಾಗುತ್ತದೆ
* ಸ್ವಯಂ ಉದ್ಯೋಗ ಹೊಂದಿದವರು ಮತ್ತು ಉನ್ನತ ವಿದ್ಯಾಭ್ಯಾಸ ಮುಂದುವರಿಸದೇ ಇರುವಂತಹ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು.
ವಸತಿ ನಿಲಯ ಹುದ್ದೆಗಳ ನೇಮಕಾತಿ.! ವಾರ್ಡನ್ ಸೇರಿದಂತೆ ಹಲವು ಹುದ್ದೆಗಳು ಖಾಲಿ, ವೇತನ 32,670/- ಆಸಕ್ತರು ಅರ್ಜಿ ಸಲ್ಲಿಸಿ.!
* 2022 -23ನೇ ಸಾಲಿನಲ್ಲಿ ಪದವಿ ಅಥವಾ ಡಿಪ್ಲೋಮೋ ಉತ್ತೀರ್ಣರಾಗಿ ವಿದ್ಯಾರ್ಥಿಗಳು ಕನಿಷ್ಠ ಆರು ತಿಂಗಳವರೆಗೆ ಯಾವುದೇ ಸರ್ಕಾರಿ ಅಥವಾ ಖಾಸಗಿ ಉದ್ಯೋಗ ಹೊಂದಿರದೆ ಇದ್ದವರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು
* ಉಚಿತವಾಗಿ ಕರ್ನಾಟಕ ಒನ್, ಬೆಂಗಳೂರು ಒನ್, ಗ್ರಾಮ ಒನ್ ಮತ್ತು ಬಾಪೂಜಿ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು
* https://sevasindhugs.karnayaka.gov.in ಸೇವಾ ಸಿಂಧು ಪೋರ್ಟಲ್ ನಲ್ಲಿ ನೋಂದಾಯಿಸಿ ಅಭ್ಯರ್ಥಿಗಳು ಮಾಸಿಕವಾಗಿ ನಿರುದ್ಯೋಗಿ ಎಂದು ಕಡ್ಡಾಯವಾಗಿ ದೃಢೀಕರಣ ಮಾಡಬೇಕು ಮತ್ತು ತಪ್ಪು ಮಾಹಿತಿ ನೀಡಿದಲ್ಲಿ ಕಾನೂನು ಪ್ರಕಾರವಾಗಿ ಕ್ರಮ ಕೈಗೊಳ್ಳಲಾಗುತ್ತದೆ.
* ಯಾವುದೇ ಕಡೆಯ ದಿನಾಂಕ ಘೋಷಿಸಿಲ್ಲ ಆದರೆ ಈಗಾಗಲೇ ಅರ್ಜಿ ಸಲ್ಲಿಸಿ ನೋಂದಾಯಿಸಿಕೊಂಡಿದ್ದರು ಅವರಿಗೆ ಜನವರಿ 12ನೇ ತಾರೀಖಿನಂದು ಮೊದಲ ಕಂತಿನ ಹಣ ಪಡೆಯುತ್ತಾರೆ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:-
* SSLC ಅಂಕಪಟ್ಟಿ
* PUC ಅಂಕಪಟ್ಟಿ
* ಪದವಿ ಅಥವಾ ಡಿಪ್ಲೋಮೋ ಪ್ರಮಾಣ ಪತ್ರ
* ಅಭ್ಯರ್ಥಿಯ ಆಧಾರ್ ಕಾರ್ಡ್
* ಬ್ಯಾಂಕ್ ಪಾಸ್ ಬುಕ್ ವಿವರ