ಚಿನ್ನ (Gold) ಎನ್ನುವುದು ಅಲಂಕಾರಿಕ ವಸ್ತು ಮಾತ್ರವಲ್ಲ, ಇದು ಹೂಡಿಕೆಯು (Investment) ಹೌದು. ಯಾಕೆಂದರೆ ಮನೆಯಲ್ಲಿ ಇದ್ದರೆ ಚಿನ್ನ ಹಣಕಾಸಿನ ವಿಷಯಕ್ಕೆ ಚಿಂತೆ ಇರುವುದಿಲ್ಲ. ಬಂಗಾರವು ಒಂದು ಪ್ರಾಪರ್ಟಿ ರೀತಿಯಲ್ಲೇ ನಮ್ಮ ಕಷ್ಟಕಾಲದಲ್ಲಿ ಕೈ ಹಿಡಿಯುತ್ತದೆ ಮತ್ತು ಪ್ರತಿ ವರ್ಷವೂ ಕೂಡ ಚಿನ್ನದ ಬೆಲೆ ಏರಿಕೆ ಆಗುವುದರಿಂದ ನಾವು ಖರೀದಿಸಿದ ಬಂಗಾರದ ಮೌಲ್ಯವು ಸಹ ಸಹಜವಾಗಿ ಬೆಳೆಯುತ್ತಲೇ ಇರುತ್ತದೆ.
ಹಾಗಾಗಿ ನಮ್ಮ ದೇಶದಲ್ಲಿ ಮಹಿಳೆಯರು ಆಭರಣಕ್ಕಾಗಿ ಚಿನ್ನವನ್ನು ಇಷ್ಟಪಟ್ಟರೆ, ಪುರುಷರು ಮನೆಯಲ್ಲಿ ಒಂದು ಆಧಾರ ಇರುತ್ತದೆ ಎನ್ನುವ ಕಾರಣಕ್ಕಾದರೂ ಚಿನ್ನವನ್ನು ತಕರಾರಿಲ್ಲದೆ ಕೊಡಿಸುತ್ತಾರೆ. ಸಾಮಾನ್ಯವಾಗಿ ಜನರು ತಮ್ಮ ಕಷ್ಟಕಾಲದಲ್ಲಿ ಬಂಗಾರವನ್ನು ಅಡವಿಟ್ಟು ವೈಯಕ್ತಿಕ ಸಾಲ ಅಥವಾ ವಿವಿಧ ಬಗೆಯ ಸಾಲಗಳನ್ನು ಪಡೆದುಕೊಳ್ಳುತ್ತಾರೆ.
ಈ ಸುದ್ದಿ ಓದಿ:- LPG ಬಳಕೆದಾರರಿಗೆಲ್ಲಾ ಗುಡ್ ನ್ಯೂಸ್, ಸರ್ಕಾರದಿಂದ ಬರೋಬ್ಬರಿ ರೂ.300 ಸಬ್ಸಿಡಿ ನೆರವು, ಪಡೆಯುವುದು ಹೇಗೆ ನೋಡಿ.!
ಈಗ ಬ್ಯಾಂಕ್ ಗಳು ಮಾತ್ರವಲ್ಲದೇ ಬಹುತೇಕ ಎಲ್ಲಾ ಹಣಕಾಸು ಸಂಸ್ಥೆಗಳು ಬಂಗಾರದ ಮೇಲೆ ಆಕರ್ಷಣೀಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡುತ್ತವೆ. ಆದರೆ ಅದಕ್ಕೆ ಕೆಲವಾರು ಕಂಡಿಷನ್ ಗಳಿವೆ, ಇದರಲ್ಲಿ ಕೆಲವು ನಿಯಮಗಳು ಗ್ರಾಹಕರ ಅಸಮಾಧಾನಕ್ಕೂ ಕೂಡ ಕಾರಣವಾಗಿತ್ತು. ಈಗ ಅವರಿಗೆಲ್ಲ ಕೇಂದ್ರ ಸರ್ಕಾರದ ಕಡೆಯಿಂದ ಸಮಾಧಾನಕರ ಸುದ್ದಿ ಇದೆ.
ಸದ್ಯಕ್ಕೆ ಕೇಂದ್ರ ಸರ್ಕಾರವು ಎಲ್ಲಾ ನಗರ ಭಾಗದ ಸಹಕಾರಿ ಸಂಘಗಳಿಗೆ (Urban Co-Operative Bank) ಅನ್ವಯವಾಗುವಂತೆ ಬಂಗಾರದ ಮೇಲಿನ ಸಾಲ (Gold Loan) ಪಡೆದುಕೊಳ್ಳುವುದಕ್ಕೆ ಕೆಲ ನಿಯಮಗಳನ್ನು ಸಡಿಲಗೊಳಿಸಿ ಇದರೊಂದಿಗೆ ಗ್ರಾಹಕ ಸ್ನೇಹಿಯಾದ ಇನ್ನಷ್ಟು ಸೌಕರ್ಯವನ್ನು ಒದಗಿಸಿದೆ. ಅವುಗಳ ವಿವರ ಹೀಗಿದೆ.
ಈ ಸುದ್ದಿ ಓದಿ:-ಮನೆಯಲ್ಲಿಯೇ ನೋಟ್ ಬುಕ್ ತಯಾರಿಸಿ ಪ್ರತಿದಿನ ರ4,500 ಲಾಭ ಮಾಡಬಹುದು ತಿಂಗಳಿಗೆ 1,75,000 ಲಾಭ ಪಕ್ಕಾ.!
* ಆ ಪ್ರಕಾರವಾಗಿ ಇನ್ನು ಮುಂದೆ ಗ್ರಾಹಕರು ಅಡ ಇಡುವಂತಹ ಚಿನ್ನದ ಮೇಲೆ ಯಾವುದೇ ರೀತಿಯ ಆಧಾರವನ್ನು ಅಂದರೆ ಗ್ಯಾರಂಟಿಯನ್ನು ನೀಡಬೇಕಾದ ಅಗತ್ಯವಿಲ್ಲ ಎಂಬುದಾಗಿ ಸರ್ಕಾರ ತಿಳಿಸಿದೆ.
* ಇದುವರೆಗೂ ಚಿನ್ನದ ಮೇಲೆ ಗರಿಷ್ಠವಾಗಿ ಕೇವಲ ರೂ. 2 ಲಕ್ಷ ರೂಪಾಯಿಗಳವರೆಗೆ ಮಾತ್ರ ಸಾಲ ಪಡೆದುಕೊಳ್ಳಲು ಅನುಮತಿ ಇತ್ತು, ಆದರೀಗ ಈ ಮಿತಿಯನ್ನು ರೂ. 2 ಲಕ್ಷ ರೂಪಾಯಿಗಳಿಂದ ರೂ. 4 ಲಕ್ಷದವರೆಗೆ ಏರಿಸಲಾಗಿದೆ.
* ಬ್ಯಾಂಕುಗಳಲ್ಲಿ ಲೋನ್ ಮರುಪಾವತಿ (Loan Repayment) ಯೋಜನೆಯಡಿಯಲ್ಲಿ ಗ್ರಾಹಕನಿಗೆ ಮತ್ತೊಂದು ಅನುಕೂಲತೆ ನೀಡಲಾಗುತ್ತಿದೆ. ಈ ಬದಲಾದ ನಿಯಮದ ಪ್ರಕಾರವಾಗಿ ಗ್ರಾಹಕನು ಪಡೆದಿರುವಂತಹ ಚಿನ್ನದ ಮೇಲಿನ ಸಾಲಕ್ಕೆ ಆತ ಅಸಲನ್ನು ಕಟ್ಟಲು ಒಪ್ಪುವವರೆಗೂ ಕೇವಲ ಬಡ್ಡಿಯನ್ನು ಕಟ್ಟಿದರೆ ಸಾಕು ಎನ್ನುವುದಾಗಿ ತೀರ್ಮಾನಿಸಲಾಗಿದೆ.
ಈ ಸುದ್ದಿ ಓದಿ:-ಕೇವಲ 600 ಗೆ ಛಾವಣಿ ತಂಪು, ರಾತ್ರಿ ಸೆಖೆ ಇಲ್ಲದೆ ಸುಖ ನಿದ್ರೆ ಮಾಡಲು ಈ ಸಿಂಪಲ್ ಟ್ರಿಕ್ ಫಾಲೋ ಮಾಡಿ ಸಾಕು.!
ಹಾಗಾಗಿ ಇನ್ಮುಂದೆ ಸಾಲ ಪಡೆದ ನಂತರದಿಂದಲೇ ಅಸಲು ಮತ್ತು ಬಡ್ಡಿಯನ್ನೊಳಗೊಂಡ EMI ಕಟ್ಟಬೇಕಾದ ಅಗತ್ಯವಿರುವುದಿಲ್ಲ. ಅಲ್ಲಿಯವರೆಗೂ ಕೇವಲ ಬಡ್ಡಿಯನ್ನು ಸರಿಯಾಗಿ ಪಾವತಿ ಮಾಡಿದರಾಯಿತು. ಸಾಲವನ್ನು ಮರುಪಾವತಿ ಮಾಡಲು ನಿರ್ಧರಿಸಿದ ಸಮಯದಿಂದ ಲೆಕ್ಕಾಚಾರ ಹಾಕಿ ಎಷ್ಟು ಹಣವನ್ನು ಪ್ರತಿ ತಿಂಗಳು ನೀವು ಕಟ್ಟಬೇಕು ಅನ್ನೋದನ್ನ ಲೆಕ್ಕಾಚಾರ ಹಾಕಲಾಗುತ್ತದೆ.
ಸದ್ಯಕ್ಕೆ ಬದಲಾದ ಈ ನಿಯಮಗಳು ಬಂಗಾರ ಅಡ ಇಟ್ಟವರ ಹಾಗೂ ಬಂಗಾರವನ್ನು ಕಷ್ಟ ಕಾಲಕ್ಕೆ ಅನುಕೂಲ ಆಗಲಿ ಎಂದು ಖರೀದಿಸುವವರ ಪಾಲಿಗೆ ಅಪಾರ ಪ್ರಮಾಣದ ಸಮಾಧಾನವನ್ನು ತಂದಿದೆ. ಈ ಅಂಶಗಳು ಗ್ರಾಹಕ ಸ್ನೇಹಿಯಾಗಿರುವ ಕಾರಣದಿಂದಲೇ ಇನ್ನಷ್ಟು ಮಂದಿ ಇನ್ನು ಮುಂದೆ ಆರಾಮಾಗಿ ಕಷ್ಟ ಬಂದಾಗ ಚಿನ್ನ ಅಡ ಇಡಲು ಮನಸು ಮಾಡುತ್ತಾರೆ ಎಂದು ಹೇಳಬಹುದು. ಬದಲಾದ ಈ ನಿಯಮಗಳ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎನ್ನುವುದು ಕೂಡ ಮುಖ್ಯವಾಗುತ್ತದೆ. ಹಾಗಾಗಿ ತಪ್ಪದೇ ಕಮೆಂಟ್ ಮಾಡಿ ತಿಳಿಸಿ.