08 ನವೆಂಬರ್, 2016ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರೂ.500 ಹಾಗೂ ರೂ.1000 ಮುಖಬೆಲೆಯ ನೋಟ್ ಗಳನ್ನು ಅಮಾನ್ಯೀಕರಣ ಮಾಡಿ ರೂ.2,000, ರೂ.200 ಮುಖಬೆಲೆಯ ಹೊಸ ನೋಟುಗಳನ್ನು ಪರಿಚಯಿಸಿದರು ಬಳಿಕ ಹೊಸ ಬಣ್ಣದಲ್ಲಿ ಮತ್ತು ಹೊಸ ರೂಪದಲ್ಲಿ ರೂ.100, ರೂ.50, ರೂ.20 ಮತ್ತು ರೂ.10 ರ ನೋಟ್ ಗಳು ಕೂಡ ಚಾಲ್ತಿಗೆ ಬಂದವು ಆದರೆ ಈಗ ಕಳೆದ ಮೇ 19, 2023 ರಲ್ಲಿ ಮತ್ತೊಮ್ಮೆ RBI ರೂ.2000 ಮುಖಬೆಲೆಯ ನೋಟುಗಳನ್ನು ಹಿಂಪಡೆದಿದೆ.
ಇದಕ್ಕಾಗಿ ಮೂರು ತಿಂಗಳುಗಳವರೆಗೆ ಕಾಲಾವಕಾಶವನ್ನು ಕೂಡ ನೀಡಲಾಗಿತ್ತು. ಕೊಟ್ಟಿದ್ದ ಗಡುವು ಮುಗಿದಿದ್ದು 97.26% ರಷ್ಟು 2,000 ಬ್ಯಾಂಕ್ ನೋಟುಗಳನ್ನು ಬ್ಯಾಂಕಿಂಗ್ ವ್ಯವಸ್ಥೆಗೆ ಹಿಂತಿರುಗಿಸಲಾಗಿದೆ ಎಂದು RBI ಘೋಷಿಸಿದೆ. ಮೊದಲಿಗೆ ಯಾವುದೇ ಬ್ಯಾಂಕ್ ನಲ್ಲಿ ಅಥವಾ ಯಾವುದೇ ಅಂಚೆ ಕಛೇರಿಯಲ್ಲಿ ನೀವು 2000 ನೋಟ್ ವಿನಿಮಯ ಮಾಡಿಕೊಳ್ಳಲು ಅವಕಾಶ ನೀಡಲಾಗಿತ್ತು.
ಕಾರ್ಮಿಕ ಇಲಾಖೆಯಿಂದ ಲೇಬರ್ ಕಾರ್ಡ್ ಇದ್ದವರಿಗೆ 2 ಲಕ್ಷ ಜೀವ ವಿಮೆ ಹಾಗೂ ಅಪಘಾತ ವಿಮೆ.! ಆಸಕ್ತರು ಅರ್ಜಿ ಸಲ್ಲಿಸಿ.!
ಆದರೆ ಒಂದು ದಿನಕ್ಕೆ ಇಂತಿಷ್ಟೇ ಹಣ ವಿನಿಮಯ ಮಾಡಬೇಕು ಎಂದು ಮಿತಿ ಹೇರಲಾಗಿತ್ತು. ನೀವು ನೋಟ್ ಗಳನ್ನು ಕೊಟ್ಟು ನಿಮ್ಮ ಖಾತೆಗೆ ಜಮೆ ಮಾಡಿಕೊಳ್ಳಲು ಅಥವಾ ವಾಪಸ್ಸು ನಗದನ್ನೇ ಪಡೆಯಲು ಕೂಡ ಅನುಮತಿ ಇತ್ತು. ಆ ಸಮಯದಲ್ಲಿ ನೀವು ಈ ಅವಕಾಶ ಉಪಯೋಗಿಸಿಕೊಳ್ಳದೆ ಇದ್ದರೆ ಖಂಡಿತವಾಗಿಯೂ ಅವಧಿ ಮುಗಿದ ಮೇಲೆ ಟೆನ್ಶನ್ ಆಗಿರುತ್ತದೆ.
ಈಗ ಆ ಚಿಂತೆ ಬಿಟ್ಟುಬಿಡಿ ನಿಮಗಾಗಿ ಈಗ ಮತ್ತೊಂದು ಅವಕಾಶ ಸಿಗುತ್ತಿದೆ. ಸ್ವತಃ RBI ಈ ಬಗ್ಗೆ ಪ್ರಕಟಣೆ ಹೊರಡಿಸಿ ವಿಷಯ ತಿಳಿಸಿದೆ. ನೀವೇನಾದರೂ ಒಂದು ಪಕ್ಷ ಮನೆಯಲ್ಲಿ ರೂ.2000 ನೋಟ್ ಇಟ್ಟುಕೊಂಡು ಮರೆತಿದ್ದರೆ ಅಥವಾ ಈ ಅವಧಿ ಮುಗಿದ ಮೇಲೆ ನಿಮ್ಮ ಕೈಗೆ ಮರೆತಿದ್ದ ಹಣ ಸಿಕ್ಕಿದ್ದರೆ RBI ನಿಂದ ಈಗ ಮತ್ತೊಂದು ಅವಕಾಶ ಸಿಕ್ಕಿದೆ.
ಈ ಲಿಸ್ಟ್ ನಲ್ಲಿ ಹೆಸರು ಇರುವ ರೈತರಿಗೆ ಬೆಳೆ ಪರಿಹಾರ ಹಣ ಸಿಗಲ್ಲ.! ನಿಮ್ಮ ಹೆಸರು ಇದೆಯೇ.? ಮೊಬೈಲ್ ನಲ್ಲಿ ಈ ರೀತಿ ಚೆಕ್ ಮಾಡಿ.!
ಈ ಬಾರಿ ಇನ್ನೂ ಒಂದು ಹೆಚ್ಚಿನ ಅನುಕೂಲತೆ ಕೂಡ ಸಿಗುತ್ತಿದ್ದು, ಆದ್ದರಿಂದ ನೀವು ನಿಮ್ಮ ಹತ್ತಿರದ ಅಂಚೆ ಕಚೇರಿಯಲ್ಲಿ ಈ ಬಾರಿ ರೂ.2000 ನೋಟ್ ವಿನಿಮಯ ಮಾಡಿಕೊಳ್ಳಬಹುದು. ಆದರೆ ಈ ಬಾರಿ ನೀವು RBI ಸೂಚಿಸಿರುವ ಮತ್ತೊಂದು ಮಾರ್ಗವನ್ನು ಅನುಸರಿಸಿಯೇ ವಿನಿಮಯ ಮಾಡಿಕೊಳ್ಳಬೇಕು.
ಮೊದಲಿಗೆ, RBI ವೆಬ್‌ಸೈಟ್‌ನಿಂದ ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಲು ಅಗತ್ಯವಿರುವ ಫಾರ್ಮ್‌ನ್ನು ಡೌನ್‌ಲೋಡ್ ಮಾಡಿಕೊಂಡು ಅದನ್ನು ಭರ್ತಿ ಮಾಡಿರಿ. ಅದರಲ್ಲಿ ನಿಮ್ಮ ಒಟ್ಟು ಜಮೆಯಾಗಬೇಕಾದ ಮೊತ್ತ, ಬ್ಯಾಂಕ್ ಖಾತೆ ಸಂಖ್ಯೆ ತದನಂತರ ಆ ಫಾರ್ಮ್ ಜೊತೆ ನಿಮ್ಮ ರೂ.2000 ನೋಟುಗಳನ್ನು ಯಾವುದೇ ಹತ್ತಿರವಿರುವ ಪೋಸ್ಟ್ ಆಫೀಸ್‌ಗೆ ತೆಗೆದುಕೊಂಡು ಹೋಗಿ ನೋಂದಣಿ ಮಾಡಿಸಿ.
ಗೃಹಲಕ್ಷ್ಮಿ 5ನೇ ಕಂತಿನ ಹಣ ಪಡೆಯಲು ಹೊಸ ರೂಲ್ಸ್.!
ನಿಮ್ಮ ನೋಟುಗಳನ್ನು RBI ಕಚೇರಿಗೆ ಅಂಚೆ ಮೂಲಕ ಪೋಸ್ಟ್ ಮಾಡಲಾಗುತ್ತದೆ ಮತ್ತು ಇದು RBI ಗೆ ತಲುಪಿದ ನಂತರ ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮೆ ಆಗುತ್ತದೆ. RBI ನಿಯಮದ ಪ್ರಕಾರ ಈ ಬಾರಿಯೂ ಒಂದು ಸಲಕ್ಕೆ ಗರಿಷ್ಠ 20,000 ರೂಪಾಯಿ ಮೌಲ್ಯದ ನೋಟುಗಳನ್ನು ಬದಲಾಯಿಸಲು ಮಾತ್ರ ಅವಕಾಶವಿದೆ.
ಈ ರೀತಿಯಾಗಿ ಬ್ಯಾಂಕ್ ಗಳಿಗೆ ಅಲೆಯುವ ಬದಲು ಗ್ರಾಮದಲ್ಲೇ ಇರುವ ಅಂಚೆ ಕಚೇರಿಯಲ್ಲಿ ಈ ಸೌಲಭ್ಯ ಪಡೆಯಲು ಅವಕಾಶ ಮಾಡಿಕೊಡಲಾಗಿದೆ. ಈ ಸೇವೆ ಭಾರತದಾದ್ಯಂತ ಲಭ್ಯವಿದೆ ತಪ್ಪದೇ ಈ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.