ಪ್ರಧಾನಮಂತ್ರಿ ನರೇಂದ್ರ ಮೋದಿಯವರ (PM Narendra Modi) ದೇಶದ ಪ್ರಧಾನಿ ಯಾಗಿ ಅಧಿಕಾರ ವಹಿಸಿಕೊಂಡ ಮೇಲೆ ಜಾರಿಗೆ ತಂದ ಜನಪ್ರಿಯ ಯೋಜನೆಗಳಲ್ಲಿ ಜನಧನ್ ಖಾತೆ (Jan-dhan account ) ಕೂಡ ಒಂದು. ಈ ಜನ್ ಧನ್ ಖಾತೆ ಅನುಕೂಲತೆಯ ಮೂಲಕ ಗ್ರಾಮೀಣ ಪ್ರದೇಶದಲ್ಲಿರುವ ಜನರು, ದೇಶದ ಅತಿ ಬಡವರು ಕೂಡ ಬ್ಯಾಂಕ್ ಕ್ಷೇತ್ರದ ಜೊತೆ ಸಂಬಂಧ ಬೆಸೆದುಕೊಳ್ಳುವ ರೀತಿ ಆಯಿತು.
ಇಂದು ದೇಶದ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಬ್ಯಾಂಕ್ ಖಾತೆ ಹೊಂದಿದ್ದಾನೆ ಎಂದರೆ ಇದು ಸಾಧ್ಯವಾಗಿದ್ದು ಜನ್ ಧನ್ ಖಾತೆಯ ಮೂಲಕ ಜೀರೋ ಬ್ಯಾಲೆನ್ಸ್ ಹೊಂದಿದ್ದರು ಅಕೌಂಟ್ ಓಪನ್ ಮಾಡಬಹುದು ಎನ್ನುವ ಆಪ್ಷನ್ ಸಿಕ್ಕಿದ್ದರಿಂದ. ಈ ಯೋಜನೆಯ ಮೂಲಕ DBT ಮೂಲಕ ವಿಮೆ, ಪಿಂಚಣಿ, ಸಹಾಯಧನ, ಪ್ರೋತ್ಸಾಹಧನ, ವಿದ್ಯಾರ್ಥಿ ವೇತನದಂತಹ ಪ್ರಯೋಜನಗಳನ್ನು ಫಲಾನುಭವಿಗಳು ನೇರವಾಗಿ ಪಡೆಯುವಂತಾಗಿದೆ.
ಇಷ್ಟೆಲ್ಲಾ ಸೌಲಭ್ಯಗಳ ಜೊತೆ ಜನ್ ಧನ್ ಖಾತೆಯಿಂದ ಮತ್ತೊಂದು ಪ್ರಯೋಜನ ಇದೆ ಆದರೆ ಖಾತೆ ಹೊಂದಿರುವ ಅನೇಕರಿಗೆ ಇದರ ಬಗ್ಗೆ ಮಾಹಿತಿ ಇಲ್ಲ. ಅದೇನೆಂದರೆ ಜೀರೋ ಬ್ಯಾಲೆನ್ಸ್ ಅಕೌಂಟ್ ಎಂದು ಕರೆಯಲಾಗುವ ಈ ಖಾತೆಗೆ ಯಾವುದೇ ಠೇವಣಿ ಹಣ ಇಡದೆ ಇದ್ದರೂ ಆಕ್ಟಿವ್ ಆಗಿ ಇರುತ್ತದೆ ಹೀಗೆ ಮತ್ತು ಸರ್ಕಾರದಿಂದಲೇ ರೂ. 10,000ಗಳ ವರೆಗೆ ಈ ಖಾತೆಗೆ ಹಣ ಸಿಗುತ್ತದೆ.
ಇದು ಹೇಗೆಂದರೆ ಇದನ್ನು ಓವರ್ ಡ್ರಾಫ್ ಸಾಲ (Overdraft) ಎನ್ನುತ್ತಾರೆ. ಓವರ್ಡ್ರಾಫ್ಟ್ ಒಂದು ರೀತಿಯ ಸುಲಭ ಸಾಲವಾಗಿದೆ. ಇದು ಹೇಗೆಂದರೆ ಬ್ಯಾಂಕ್ ಗ್ರಾಹಕರಿಗೆ ನಿರ್ದಿಷ್ಟ ಮೊತ್ತವನ್ನು ಸಾಲ ಪಡೆಯಲು ಅನುಮತಿ ನೀಡುತ್ತದೆ ಮತ್ತು ಕೊಡುವ ಸಾಲಕ್ಕೆ ಬ್ಯಾಂಕ್ ಬಡ್ಡಿಯನ್ನೂ ಸಹಾ ವಿಧಿಸುತ್ತದೆ. ನೀವು ಓವರ್ಡ್ರಾಫ್ಟ್ ಸಾಲ ಪಡೆದುಕೊಳ್ಳಲು ಶುಲ್ಕವನ್ನು ಪಾವತಿಸಬೇಕಾಗಬಹುದು.
ಜನ್ ಧನ್ ಖಾತೆಯಲ್ಲಿ, ಖಾತೆದಾರರು ಸುಲಭವಾಗಿ ತಮ್ಮ ಖಾತೆ ಇರುವ ಬ್ಯಾಂಕ್ ಮೂಲಕ ರೂ 10,000 ವರೆಗೆ ಓವರ್ಡ್ರಾಫ್ಟ್ ಸೌಲಭ್ಯವನ್ನು ಪಡೆಯುತ್ತಾರೆ. ಯಾವಾಗ ಬೇಕಾದರೂ ಓವರ್ಡ್ರಾಫ್ಟ್ ಅಥವಾ 10,000 ರೂ.ವರೆಗೆ ಕ್ರೆಡಿಟ್ ಮಾಡಬಹುದು. ಈ ಹಿಂದೆ ಓವರ್ಡ್ರಾಫ್ಟ್ ಮಿತಿ 5,000 ರೂ. ಇತ್ತು ಈಗ ಅದನ್ನು ರೂ.10,000 ಗೆ ಏರಿಸಲಾಗಿದೆ. ಅಗತ್ಯವಿರುವ ಯಾವುದೇ ವ್ಯಕ್ತಿಯು ಈ ಸೌಲಭ್ಯವನ್ನು ಪಡೆಯಬಹುದು.
ಓವರ್ಡ್ರಾಫ್ಟ್ ಅಥವಾ ಕ್ರೆಡಿಟ್ ಸೌಲಭ್ಯವನ್ನು ಪಡೆಯುವಲ್ಲಿ, ನೀವು ಬ್ಯಾಂಕಿಗೆ ನಾಮಮಾತ್ರ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ಇದರ ಬಹುದೊಡ್ಡ ಅನುಕೂಲತೆ ಏನೆಂದರೆ ಯಾರನ್ನು ಸಾಲಕ್ಕಾಗಿ ಬೇಡಬೇಕಾಗಿಲ್ಲ ಮತ್ತು ಹೆಚ್ಚು ಕಾಗದ ಪತ್ರ ಇಲ್ಲದೆ ಹಾಗೂ ಪ್ರತಿನಿತ್ಯ ಕೂಡ ಸಾಲಕ್ಕಾಗಿ ಅಲಿಸದೆ ಸುಲಭವಾಗಿ ಸಣ್ಣ ಮೊತ್ತದ ಸಾಲ ಅವಶ್ಯಕತೆ ಇರುವವರಿಗೆ ಸಿಗುತ್ತದೆ.
ಈ ಸಾಲ ಪಡೆಯಲು ಇರಬೇಕಾದ ಅರ್ಹತೆಗಳು:-
* ನೀವು ಕನಿಷ್ಟ ಆರು ತಿಂಗಳ ಕಾಲ ನಿಮ್ಮ ಜನ್-ಧನ್ ಉಳಿತಾಯ ಖಾತೆಯನ್ನು ಉತ್ತಮವಾಗಿ ನಿರ್ವಹಿಸಿರಬೇಕು.
* ಅರ್ಜಿದಾರರ ವಯಸ್ಸು 18 ರಿಂದ 65 ವರ್ಷಗಳ ನಡುವೆ ಇರಬೇಕು.
* ನಿಮ್ಮ ಖಾತೆಯನ್ನು ಆಧಾರ್ ಸಂಖ್ಯೆಗೆ ಲಿಂಕ್ ಮಾಡಬೇಕು.
ಹೀಗಿದ್ದಾಗ ಮಾತ್ರ DBT ಮೂಲಕ ನಿಮ್ಮ ಖಾತೆಗೆ ಹಣ ಬರಲು ಸಾಧ್ಯ.
* ಅತಿ ಮುಖ್ಯವಾಗಿ ನೀವು ಒಂದೇ ಬ್ಯಾಂಕ್ ನಲ್ಲಿ ಜನ್ ಧನ್ ಖಾತೆ ಹೊಂದಿರಬೇಕು, ನಿಮ್ಮ ಹೆಸರಿನಲ್ಲಿ ಬೇರೆ ಯಾವುದೇ ಬ್ಯಾಂಕ್ ನಲ್ಲಿ ಉಳಿತಾಯ ಖಾತೆ ಇರಬಾರದು. ಹೆಚ್ಚಿನ ಡೀಟೇಲ್ಸ್ ಗಾಗಿ ನೀವು ಜನ್ ಧನ್ ಖಾತೆ ಹೊಂದಿರುವ ಬ್ಯಾಂಕ್ ಶಾಖೆಗೆ ಭೇಟಿ ಕೊಟ್ಟು ಮಾಹಿತಿ ಪಡೆಯಿರಿ.