ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ (Karnataka Guaranty Scheme) ಒಂದಾದ ಅನ್ನಭಾಗ್ಯ ಯೋಜನೆಯು (Annabhagya) ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ (CM Siddaramaih) ಕನಸಿನ ಕೂಸು ಎಂದೇ ಹೇಳಬಹುದು. ಈ ಹಿಂದೆ ಕೂಡ ಅವರು ರಾಜ್ಯದ ಮುಖ್ಯಮಂತ್ರಿಗಳಾಗಿ ಅಧಿಕಾರದಲ್ಲಿದ್ದಾಗ ಈ ರೀತಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಉಚಿತವಾಗಿ ಅಕ್ಕಿ ವಿತರಣೆ ಮಾಡಬೇಕು ಎಂದು ಬಯಸಿ ಅನ್ನ ಭಾಗ್ಯ ಯೋಜನೆ ಜಾರಿಗೆ ತಂದಿದ್ದರು.
ಈ ವರ್ಷ ಕರ್ನಾಟಕ ವಿಧಾನಸಭಾ ಚುನಾವಣೆ 2023ರ (Karnataka Assembly Election-2023) ಸಮಯದಲ್ಲೂ ಕೂಡ ಕಾಂಗ್ರೆಸ್ ಪಕ್ಷದ (Congress party) ಚುನಾವಣಾ ಪ್ರಣಾಳಿಕೆಯಲ್ಲಿ ಇದ್ದ ಪಂಚಖಾತ್ರಿ ಯೋಜನೆಗಳ ಮಧ್ಯೆ ಅನ್ನಭಾಗ್ಯ ಯೋಜನೆ ಕೂಡ ಸೇರಿ ಗಮನ ಸೆಳೆದಿತ್ತು. ಕಾಂಗ್ರೆಸ್ ಪಕ್ಷವು ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಅನ್ನ ಭಾಗ್ಯ ಯೋಜನೆಯಡಿ ನೀಡುತ್ತಿರುವ ಪಡಿತರವನ್ನು ಪ್ರತಿ ಸದಸ್ಯನಿಗೆ 10Kg ಗೆ ಏರಿಸಲಾಗುವುದು ಎಂದು ಆಶ್ವಾಸನೆ ಕೊಟ್ಟಿದ್ದರು.
ಅಂತೆಯೇ ಈಗಾಗಲೇ ಈ ವರ್ಷ ಆಗಸ್ಟ್ ತಿಂಗಳಿಂದಲೇ ಅನ್ನ ಭಾಗ್ಯ ಯೋಜನೆ ಜಾರಿಗೆ ಇದೆ. ಆದರೆ ರಾಜ್ಯ ಸರ್ಕಾರಕ್ಕೆ ಅಕ್ಕಿ ದಾಸ್ತಾನು ಲಭ್ಯವಾಗಿಲ, ಲ ಅಕ್ಕಿ ಖರೀದಿಗಾಗಿ ಅನೇಕ ರಾಜ್ಯಗಳನ್ನು ಮತ್ತು ಕೇಂದ್ರ ಸರ್ಕಾರದ ನೆರವನ್ನು ಕೇಳಿದ ಸರ್ಕಾರಕ್ಕೆ ತಮ್ಮ ನಿರೀಕ್ಷೆಯಂತೆ ಅಕ್ಕಿ ಸಿಗದ ಕಾರಣ ಕೇಂದ್ರ ಸರ್ಕಾರದಿಂದ ನೀಡುತ್ತಿರುವ 5Kg ಅಕ್ಕಿ ಜೊತೆ ಉಳಿದ 5 Kg ಅಕ್ಕಿಗೆ ಪ್ರತಿ ಸದಸ್ಯನಿಗೆ 1 Kg ಅಕ್ಕಿಗೆ 35 ರೂಪಾಯಿಯಂತೆ 150 ರೂಪಾಯಿಯನ್ನು ಆ ಕುಟುಂಬದ ಮುಖ್ಯಸ್ಥರ ಖಾತೆಗೆ DBT ಮೂಲಕ ವರ್ಗಾವಣೆ ಮಾಡಲಾಗುತ್ತಿದೆ.
ಇಲ್ಲಿಯವರೆಗೂ ಕೂಡ ಇದೇ ರೀತಿ ನಡೆದುಕೊಂಡು ಬಂದಿದ್ದು ಆಗಾಗ ಪ್ರತಿಪಕ್ಷಗಳು ಇದರ ಬಗ್ಗೆ ಚ’ಕಾ’ರ ಎತ್ತುತಲೇ ಇರುತ್ತವೆ. ಅನ್ನಭಾಗ್ಯ ಯೋಜನೆಯಡಿ ಈ ರೀತಿ ಕುಟುಂಬದ ಮುಖ್ಯಸ್ಥರ ಖಾತೆಗೆ ಒಬ್ಬ ಸದಸ್ಯನಿಗೆ 170 ರೂಪಾಯಿಯಂತೆ ಹಣ ವರ್ಗಾವಣೆ ಮಾಡುವ ಬದಲು ಅವರ ಪಾಲಿನ 5Kg ಅಕ್ಕಿಯನ್ನು ನೀಡಿದ್ದರೆ ಎಷ್ಟೋ ಬಡ ಕುಟುಂಬಗಳಿಗೆ ನೆರವಾಗುತ್ತಿತ್ತು ಎನ್ನುವುದು ಫಲಾನುಭವಿಗಳ ಅಭಿಪ್ರಾಯ ಕೂಡ ಹೌದು.
ಈಗ ಅದಕ್ಕೆ ಕಾಲ ಕೂಡಿ ಬಂದಿದೆ ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಸಭೆ ಅಧಿವೇಶನದಲ್ಲಿ ಈ ಬಗ್ಗೆ ವಿಷಯ ಹಂಚಿಕೊಳ್ಳಲಾಗಿದೆ. ವಿಧಾನಸಭೆಯಲ್ಲಿ ಕಾಂಗ್ರೆಸ್ ನಾಯಕ ಅಶೋಕ ಕುಮಾರ್ ರೈ (Ashok Kumar Rai) ಅಕ್ಕಿ ವಿಷಯ ಪ್ರಸ್ತಾಪಿಸಿದ್ದಾರೆ. ಸರ್ಕಾರ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಅನ್ನಭಾಗ್ಯ ಯೋಜನೆಯಡಿ 10Kg ಪಡಿತರ ಉಚಿತವಾಗಿ ನೀಡಲಾಗುವುದು ಎಂದು ಭರವಸೆ ನೀಡಿತ್ತು.
ಆದರೆ ಅಕ್ಕಿ ಖರೀದಿಗೆ ಅನೇಕ ಸಮಸ್ಯೆಗಳಾದ ಕಾರಣ ಇತ್ತೀಚಿನ ದಿನಗಳಲ್ಲಿ 5Kg ಪಡಿತರ ನೀಡಿ ಉಳಿದ 5Kg ಅಕ್ಕಿ ಬದಲಿಗೆ ನೇರ ನಗದು ವರ್ಗಾವಣೆ ಮಾಡುತ್ತಿದೆ. ಆದರೆ ಶೀಘ್ರದಲ್ಲೇ ಅಕ್ಕಿಯ ಬದಲಿಗೆ ಕುಚಲಕ್ಕಿಯನ್ನು ಕೊಡುವ ನಿರ್ಧಾರ ಮಾಡಲಾಗುತ್ತದೆ ಎಂದು ವಿಷಯ ತಿಳಿಸಿದ್ದಾರೆ. ಬಳಿಕ ಈ ಬಗ್ಗೆ ಮಾತನಾಡಿದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಕೆ.ಎಚ್ ಮುನಿಯಪ್ಪ (KFCSD Minister K.H Muniyappa) ಅನ್ನಭಾಗ್ಯ ಯೋಜನೆಯಡಿ ಹಣ ನೀಡುತ್ತಿರುವುದರ ಬದಲು ಕುಚಲಕ್ಕಿ ಕೊಡಲಾಗುತ್ತದೆ, ಕೆಲವು ಕಡೆ ಈಗಾಗಲೆ 5 Kg ಕುಚಲಕ್ಕಿ ನೀಡಲಾಗಿದೆ ಎಂದು ಹೇಳಿದ್ದಾರೆ.