ಜುಲೈ ತಿಂಗಳಿನಲ್ಲಿ ಕರೆಂಟ್ ಬಿಲ್ ಕಟ್ಟಿದ್ದವರಿಗೆ ಗುಡ್ ನ್ಯೂಸ್, ವಾಪಸ್ ಬರಲಿದೆ ನಿಮ್ಮ ಹಣ ಸರ್ಕಾರದ ನಿರ್ಧಾರಕ್ಕೆ ಜನ ಫುಲ್ ಖುಷ್.!

 

WhatsApp Group Join Now
Telegram Group Join Now

ಕಾಂಗ್ರೆಸ್ ಸರ್ಕಾರದ ಪಂಚಖಾತ್ರಿ ಯೋಜನೆಗಳಲ್ಲಿ (Guarantee Schem) ಒಂದಾದ ಗೃಹಜ್ಯೋತಿ ಯೋಜನೆಗೆ (Gruhajyothi scheme) ಆಗಸ್ಟ್ 5, ರಂದು ಚಾಲನೆ ಸಿಗಲಿದೆ. ಚುನಾವಣೆ ಪ್ರಣಾಳಿಕೆಯಲ್ಲಿ (manifesto) ಮೊದಲ ಗ್ಯಾರಂಟಿ ಯೋಜನೆಯಾಗಿ ಗೃಹಜ್ಯೋತಿ ಯೋಜನೆಯನ್ನು ಘೋಷಿಸಿ ಇದರ ಮೂಲಕ ಕರ್ನಾಟಕದ ಪ್ರತಿ ಮನೆಗಳಿಗೂ ಕೂಡ 200 ಯೂನಿಟ್ ವರೆಗೆ ಉಚಿತವಾಗಿ ವಿದ್ಯುತ್ ನೀಡಲಾಗುವುದು ಎಂದು ಕಾಂಗ್ರೆಸ್ ಪಕ್ಷವು ಆಶ್ವಾಸನೆ ನೀಡಿತ್ತು.

ಈಗ ಅಂತಿಯಮವಾಗಿ ನುಡಿದಂತೆ ನಡೆದುಕೊಂಡಿರುವ ಸರ್ಕಾರವು ಜೂನ್ ತಿಂಗಳಿನಿಂದ ಈ ಗೃಹಜ್ಯೋತಿ ಯೋಜನೆಗೆ ಫಲಾನುಭವಿಗಳು ನೋಂದಾಯಿಸಿಕೊಳ್ಳಬೇಕು ಎಂದು ಸೂಚಿಸಿತ್ತು. ಸರ್ಕಾರದ ಮಾರ್ಗಸೂಚಿಯಂತೆ ಸೇವಾ ಸಿಂಧು ಪೋರ್ಟಲ್ ಮೂಲಕ ತಮ್ಮ ಮನೆಯ ವಿದ್ಯುತ್ ಖಾತೆ ಸಂಖ್ಯೆ (Acc. ID) ಹಾಗೂ ಆಧಾರ್ ನಂಬರ್ (Aadhar number) ಕೊಟ್ಟು ಸಾಕಷ್ಟು ಜನ ಗೃಹಜ್ಯೋತಿ ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ.

ಎಲ್ಲಾ ದಾಖಲೆ ಕೊಟ್ಟು ಆಸ್ತಿ ರಿಜಿಸ್ಟರ್ ಮಾಡಿಸಿದ್ರೂ ಕೂಡ ನೋಂದಣಿ ಕ್ಯಾನ್ಸಲ್, ರಿಜಿಸ್ಟ್ರೇಷನ್ ನಿಯಮ ಬದಲಾಯಿಸಿದ ಸರ್ಕಾರ.! ತಪ್ಪದೆ ಈ ಸುದ್ದಿ ನೋಡಿ.!

ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿರುವ ಕುಟುಂಬಗಳು ಜುಲೈ ತಿಂಗಳಿನಲ್ಲಿ ಬಳಸಿರುವ ವಿದ್ಯುತ್ ಗೆ ಆಗಸ್ಟ್ ತಿಂಗಳಲ್ಲಿ ಪಡೆಯುತ್ತಿದ್ದ ಬಿಲ್ ಅನ್ನು ಶೂನ್ಯ ವಿದ್ಯುತ್ ಬಿಲ್ (Zero current bill) ಆಗಿ ನೀಡಲು ಸರ್ಕಾರ (government) ನಿರ್ಧಾರ ಮಾಡಿದೆ. ಆದರೆ ಅದಕ್ಕೆ ಕೆಲವು ಕಂಡಿಷನ್ ಗಳನ್ನು ಕೂಡ ಸೇರಿಸಿದೆ. ಇದರ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇಂಧನ ಸಚಿವರಾದ ಕೆ.ಜೆ ಚಾರ್ಜ್ (Energy minister K.J George) ಅವರು ಈ ಯೋಜನೆ ಕುರಿತು ಕೆಲ ಪ್ರಮುಖ ಅಂಶಗಳನ್ನು ಹಂಚಿಕೊಂಡಿದ್ದಾರೆ.

ಈಗಾಗಲೇ ಜುಲೈ ತಿಂಗಳಿಂದ ವಿದ್ಯುತ್ ಬಿಲ್ ಕಟ್ಟಿರುವವರಿಗೆ ಹಣ ವಾಪಸ್ ಕೊಡುವುದರ ಬಗ್ಗೆ ಕೂಡ ಸುಳಿವು ನೀಡಿದ್ದಾರೆ. ಅದೇನೆಂದರೆ ಜುಲೈ25 ರ ಒಳಗೆ ಗೃಹಜ್ಯೋತಿ ಯೋಜನೆಗೆ ನೋಂದಾಯಿಸಿಕೊಂಡಿದ್ದವರಿಗೆ ಮಾತ್ರ ಆ ತಿಂಗಳ ಉಚಿತ ವಿದ್ಯುತ್ ಫಲಾನುಭವಿಗಳಾಗುವ ಅವಕಾಶ ಸಿಗುತ್ತದೆ.

ನಿಮ್ಮ ಮನೆಯ ವಿದ್ಯುತ್ ಬಿಲ್ 210 ಯೂನಿಟ್ ಬಂದಿದ್ದರೆ ನೀವು ಎಷ್ಟು ಕರೆಂಟ್ ಬಿಲ್ ಕಟ್ಟಬೇಕು ಗೊತ್ತಾ.?

ಆದರೆ ಅರ್ಜಿ ಸಲ್ಲಿಸುವುದಕ್ಕೆ ಅಂತಿಮ ದಿನಾಂಕ ಎನ್ನುವುದು ಇಲ್ಲ ಪ್ರತಿ ತಿಂಗಳ 25ನೇ ತಾರೀಖಿನಿಂದ ಮುಂದಿನ ತಿಂಗಳ 25ನೇ ತಾರೀಕನ್ನು ವಿದ್ಯುತ್ ಬಳಕೆ ಮಾಪನ ಮಾಡಲು ಕಾಲಮಾನವಾಗಿ ನಿಗದಿ ಮಾಡಿರುವುದರಿಂದ ಜುಲೈ 25ರ ವರೆಗೆ ಅರ್ಜಿ ಸಲ್ಲಿಸಿದವರಿಗೆ ಜುಲೈ ತಿಂಗಳಿನಲ್ಲಿ ಗೃಹಜೋತಿ ಯೋಜನೆಯ ಅನುಕೂಲತೆ ಸಿಗಲಿದೆ.

ಜುಲೈ 25ರ ನಂತರ ರಾಜ್ಯ ಸಲ್ಲಿಸಿದವರಿಗೆ ಮುಂದಿನ ತಿಂಗಳ ಅಂದರೆ ಆಗಸ್ಟ್ ತಿಂಗಳಲ್ಲಿ ಉಚಿತ ವಿದ್ಯುತ್ ಸಿಗಲಿದೆ ಎಂದು ತಿಳಿಸಿದ್ದಾರೆ. ಆದರೆ ಈ ವಿಚಾರವಾಗಿ ಉಂಟಾಗಿರುವ ಮತ್ತೊಂದು ಗೊಂದಲ ಎಂದರೆ ಹೆಚ್ಚಿನ ವಿದ್ಯುತ್ ಬಿಲ್ ಬಂದಿದೆ ಎನ್ನುವುದು. ಜುಲೈ ತಿಂಗಳಿನಲ್ಲಿ ಬಳಸಿರುವ ವಿದ್ಯುತ್ ಗೆ ಅನೇಕರು ಹೆಚ್ಚಿನ ವಿದ್ಯುತ್ ಬಿಲ್ ಬಂದಿದೆ ಎಂದು ಆ’ಕ್ರೋ’ಶ ವ್ಯಕ್ತಪಡಿಸಿದ್ದಾರೆ.

ನಿಮ್ಮ ಕೃಷಿ ಭೂಮಿಗೆ ಸರ್ಕಾರದಿಂದ ಉಚಿತ ವಿದ್ಯುತ್ ಪಡೆಯಬೇಕಾ.? ಆಗಿದ್ರೆ ಈ ರೀತಿ ಮಾಡಿ.!

ಈ ಬಗ್ಗೆ ಕೂಡ ಮಾತನಾಡಿದ ಸಚಿವರು ಜುಲೈ ತಿಂಗಳಿನಲ್ಲಿ ಜೂನ್ ತಿಂಗಳ ಕೆಲವು ದಿನಗಳು ಕೂಡ ಸೇರ್ಪಡೆ ಆಗಿರುತ್ತವೆ ಹೀಗಾಗಿ ಬಿಲ್ ಮೊತ್ತ ಹೆಚ್ಚಿಗೆ ಬಂದಿರಬಹುದು. ಕಳೆದ ನಾಲ್ಕು ತಿಂಗಳಿನಿಂದ ಯಾರು ಶುಲ್ಕ ಬಾಕಿ ಉಳಿಸಿಕೊಂಡಿಲ್ಲ ಆ ಮಾಹಿತಿಯನ್ನು ಪರಿಶೀಲಿಸಿ ಹೆಚ್ಚಿನ ವಿದ್ಯುತ್ ಬಿಲ್ ಪಾವತಿ ಮಾಡಿರುವವರಿಗೆ ಹಣವನ್ನು ವಾಪಸ್ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.

ಹಾಗೆಯೇ ಜುಲೈ ತಿಂಗಳಿನಿಂದ ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಸೌಲಭ್ಯ ಇದ್ದರೂ ಕುಟುಂಬಗಳು ಕಳೆದ 12 ತಿಂಗಳಿನಲ್ಲಿ ಬಳಸಿರುವ ವಿದ್ಯುತ್ ಬಳಕೆ ಮೇಲೆ 10% ಮಾತ್ರ ಹೆಚ್ಚು ಪಡೆಯಬಹುದು ಆ ಮಿತಿ ಒಳಗೆ ವಿದ್ಯುತ್ ಬಳಕೆ ಮಾಡಿದವರು ಶೂನ್ಯ ವಿದ್ಯುತ್ ಬಿಲ್ ಪಡೆಯಲಿದ್ದಾರೆ, ಅದಕ್ಕಿಂತಲೂ ಹೆಚ್ಚಿಗೆ ಬಳಕೆ ಮಾಡಿದವರು ಹೆಚ್ಚುವರಿ ವಿದ್ಯುತ್ ಶುಲ್ಕ ಪಾವತಿಸಬೇಕು. ಒಂದು ವೇಳೆ 210 ಯೂನಿಟ್ ಗಿಂತ ಹೆಚ್ಚಾಗಿ ಬಳಕೆ ಮಾಡಿದವರು ಸಂಪೂರ್ಣ ವಿದ್ಯುತ್ ಬಿಲ್ ಅನ್ನು ಕಟ್ಟಬೇಕಾಗುತ್ತದೆ ಎಂದು ಹೇಳಿದ್ದಾರೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now