ದ್ವಿಚಕ್ರ ವಾಹನ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಶಾಲೆಗೆ ಹೋಗುವ ಹುಡುಗಿಯಿಂದ ಹಿಡಿದು ಕೆಲಸಕ್ಕೆ ಹೋಗುವ ಮಗನವರೆಗೆ ಕಚೇರಿ ದೂರ, ಸಮಯಕ್ಕೆ ಬಸ್ ಸಿಗುವುದಿಲ್ಲ, ಸ್ನೇಹಿತರ ಹತ್ತಿರ ಎಲ್ಲ ಇದೆ, ಮಕ್ಕಳನ್ನು ಶಾಲೆಯಿಂದ ಕರೆ ತರಲು ಗಾಡಿ ಬೇಕು ಇಂತಹ ಹತ್ತಾರು ನೆಪ ಹೇಳಿ ಬೈಕ್ ಅಥವಾ ಸ್ಕೂಟಿ ಡಿಮ್ಯಾಂಡ್ ಮಾಡುತ್ತಾರೆ.
ಏರುತ್ತಿರುವ ಪೆಟ್ರೋಲ್ ಬೆಲೆಯಲ್ಲಿ ಬೈಕ್ ಕೊಡಿಸುವುದಕ್ಕಿಂತ ಅದಕ್ಕೆ ಪೆಟ್ರೋಲ್ ತುಂಬಿಸುವುದೇ ಹೆಚ್ಚು ಜವಾಬ್ದಾರಿ ಎನಿಸಿ ಬಿಟ್ಟಿದೆ. ಈ ರೀತಿ ಯೋಚಿಸುವವರಿಗೆ ಬರೋಬ್ಬರಿ 73km ಮೈಲೇಜ್ ನೀಡುವಂತಹ ಬೈಕ್ ಒಂದನ್ನು ಹೀರೋ ಮೋಟೋ ಕಾಪ್ ಷಕಂಪನಿ (Hero motocorp Company) ಲಾಂಚ್ ಮಾಡಿದೆ. ಇದರ ವೈಶಿಷ್ಟತೆಗಳ ಬಗ್ಗೆ ತಿಳಿದರೆ ಇಂದೇ ನೀವು ಇದನ್ನು ಬುಕ್ ಮಾಡುತ್ತೀರಿ ಆಸಕ್ತರಿಗಾಗಿ ಈ ಹೊಸ Splendor+XTECpp 2.0 ಕುರಿತ ಒಂದಷ್ಟು ಮಾಹಿತಿ ಹೀಗಿದೆ.
* ಹೀರೋ ಮೋಟೋ ಕಾಪ್ ಕಂಪನಿಗೆ 30 ವರ್ಷ ತುಂಬಿರುವ ಸಂಭ್ರಮದಲ್ಲಿ ಈ ನೂತನ ಮಾದರಿಯ ಲೇಟೆಸ್ಟ್ ಫೀಚರ್ಸ್ ಗಳನ್ನು ಹೊಂದಿರುವ ಐಕಾನಿಕ್ ಬ್ರಾಂಡ್ ಸ್ಲೆಂಡರ್ ನ್ನು ಒಂದು ಹೊಸ ವರ್ಷನ್ ನಲ್ಲಿ ಪರಿಚಯಿಸುತ್ತಿದೆ.
* ಸ್ಲೆಂಡರ್ ನ ಪುನರಾವರ್ತನೆಯಾದ Splendor+XTEC 2.0
ಬೈಕ್ ಹೆಡ್ ಲೈಟ್ ಗಳು ಮತ್ತು ಸ್ಪಾಟ್ ಲೈಟ್ ಗಳು LED ಯದ್ದಾಗಿವೆ.
* ಮೋಟಾರ್ ಸೈಕಲ್ ಹಿಂಭಾಗದಲ್ಲಿ ವಿಶಿಷ್ಟವಾದ H ಆಕಾರದ ಸಿಗ್ನೇಚರ್ ಟೈಲ್ ಲ್ಯಾಂಪ್ ಇದೆ.
ಈ ಸುದ್ದಿ ಓದಿ:- KAS ಪರೀಕ್ಷೆಗೆ ಉಚಿತ ತರಬೇತಿ.! ಆಸಕ್ತರು ಅರ್ಜಿ ಸಲ್ಲಿಸಿ.!
* 73kmpl ಇಂಧನ ದಕ್ಷತೆಯನ್ನು ಹೊಂದಿದೆ
* ಬಣ್ಣಗಳ ಕಲೆಕ್ಷನ್ ಬಗ್ಗೆ ಹೇಳುವುದಾದರೆ ಮ್ಯಾಟ್ ಗ್ರೇ, ಗ್ಲೋಸ್ ಬ್ಲಾಕ್ ಮತ್ತು ಗ್ಲೋಸ್ ರೆಡ್ ಬಣ್ಣಗಳಲ್ಲಿ ಈ ಮಾಡೆಲ್ ವೆಹಿಕಲ್ ಗಳು ಸಿಗುತ್ತವೆ.
* ಸೈಡ್ ಹುಕ್, ಟ್ಯಾಬುಲರ್ ಗ್ರ್ಯಾಬ್ ರೈಲ್ ಇದೆಲ್ಲವು ಗಾಡಿ ಅಂದವನ್ನು ಇನ್ನಷ್ಟು ಹೆಚ್ಚಿಸಿವೆ
* ಸಣ್ಣ ಟೈಲ್ ರಾಕ್ ನಂತೆ ದ್ವಿಗುಣಗೊಂಡಿದ್ದು ಕ್ರೋಮ್ ಸಿದ್ಧಪಡಿಸಿದ ಇಂಜಿನ್ ಕ್ರ್ಯಾಶ್ ಗಾರ್ಡ್ ಬದಲಾಗದೆ ಉಳಿದಿದೆ.
* ಇದರ ಮತ್ತೊಂದು ಪ್ಲಸ್ ಪಾಯಿಂಟ್ ಏನೆಂದರೆ Splendor+XTEC 2.0 ಬೈಕ್ ನಲ್ಲಿ ಆಸನವು ಉದ್ದವಾಗಿದ್ದು ದೊಡ್ಡದಾಗಿದೆ ಇದು ಹೆಚ್ಚು ಕಂಫರ್ಟ್ ಮತ್ತು ಅನುಕೂಲಕರವಾಗಿದೆ
* ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್ Splendor+XTEC 2.0 ಬ್ರಾಂಡ್ ನ ಮತ್ತೊಂದು ವೈಶಿಷ್ಟವಾಗಿದ್ದು ಇದು ಇಕೋ ಇಂಡಿಕೇಟರ್, ರಿಯಲ್ ಟೈಮ್ ಮೈಲೇಜ್ ಇಂಡಿಕೇಟರ್, ಸರ್ವಿಸ್ ರಿಮೈಂಡರ್ ಮತ್ತು ಸೈಡ್ ಸ್ಟ್ಯಾಂಡ್ ಇಂಡಿಕೇಟರ್ ಹೊಂದಿದೆ
* USB ಚಾರ್ಜರ್ ಪೋರ್ಟ್ ಇದೆ.
* ಕಾಲ್ ಮತ್ತು ಟೆಕ್ಸ್ಟ್ ಮೂಲಕ ಬ್ಯಾಟರಿ ಎಚ್ಚರಿಕೆಯ ನೋಟಿಫಿಕೇಶನ್ ನೀಡುವ ಬ್ಲೂಟೂತ್ ಸಂಪರ್ಕ ಕೂಡ ಇದೆ
* ಸುರಕ್ಷತಾ ಉದ್ದೇಶದಿಂದ ಅಳವಡಿಸಲಾದ ಅಪಾಯದ ಸ್ವಿಚ್, ಸೈಡ್ ಸ್ಟ್ಯಾಂಡ್ ಇಂಜಿನ್ ಕಟ್ ಆಫ್ ಮತ್ತು ಬ್ಯಾಂಕ್ ಕೋ ಸಂವೇದಕದಿಂದ ಉತ್ತಮ ಫೀಚರ್ಸ್ ನೀಡಲಾಗಿದೆ.
* ಇದರ ಸಾಮರ್ಥ್ಯದ ಬಗ್ಗೆ ಹೇಳುವುದಾದರೆ 100CC ಸಿಂಗಲ್ ಸಿಲಿಂಡರ್ ಎಂಜಿನ್ 7.09BHP, 8.05NM ಪೀಕ್ ಟಾರ್ಕ್ ನೀಡುತ್ತಿದೆ.
* 4 ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ i3s ಐಡಲ್ ಸ್ಟಾಪ್ ಸ್ಟಾರ್ಟ್ ಸಿಸ್ಟಮ್ ಕೂಡ ಇದೆ. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಥವಾ ಹತ್ತಿರದ ಶೋ ರೂಮ್ ನಲ್ಲಿ ತಿಳಿಯಿರಿ.