ಕರ್ನಾಟಕ ಸರ್ಕಾರದ ಗ್ಯಾರಂಟಿ ಕಾರ್ಡ್ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ ರಾಜ್ಯದ ಮಹಿಳೆಯರೆಲ್ಲರೂ ಕಾಯುತ್ತಿದ್ದರು ಅಂತಿಮವಾಗಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಬಿಡುಗಡೆ ಆಗಿದೆ. ಎಪಿಎಲ್ ಕಾರ್ಡ್ ಸೇರಿದಂತೆ ಕರ್ನಾಟಕ ರಾಜ್ಯದ ಎಲ್ಲಾ ಕುಟುಂಬಗಳ ಯಜಮಾನಿ ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸಿ ಸರ್ಕಾರದಿಂದ ಪ್ರತಿ ತಿಂಗಳು 2000 ಸಹಾಯಧನ ಪಡೆಯಬಹುದು.
ಈ ಅಂಕಣದಲ್ಲಿ ಯಾವ ದಾಖಲೆಗಳ ಜೊತೆಗೆ ಅರ್ಜಿ ಸಲ್ಲಿಸಬೇಕು ಹಾಗೂ ಅರ್ಜಿ ಸಲ್ಲಿಸುವ ವಿಧಾನ ಹೇಗೆ ಎಂದು ತಿಳಿಸಿಕೊಡುತ್ತಿದ್ದೇವೆ. ಸರ್ಕಾರವು ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಎರಡು ದಾಖಲೆಯಿಂದಲೂ ಕೂಡ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದೆ. ಸೇವಾ ಸಿಂಧು ಅಕೌಂಟ್ ಕ್ರಿಯೇಟ್ ಮಾಡಿ ಸೇವಾ ಸಿಂಧು ಪೋರ್ಟಲ್ ಗೆ ಲಾಗಿನ್ ಆಗಿ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಅಥವಾ ಈ ಕೆಳಗಿನ ಲಿಂಕ್ಗಳನ್ನು ಕ್ಲಿಕ್ ಮಾಡುವ ಮೂಲಕ ನೇರವಾಗಿ ವೆಬ್ಸೈಟ್ ತಲುಪಿ ಅರ್ಜಿ ಸಲ್ಲಿಸಬಹುದು.
https://bit.ly/3PC1nWd
https://sevasindhugs1.Karnata.gov.in
1. ರೇಷನ್ ಕಾರ್ಡ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:-
● ಮೊದಲಿಗೆ ಸೇವಾ ಸಿಂಧು ಅಕೌಂಟ್ ಮೂಲಕ ಲಾಗಿನ್ ಆಗಿ, ಗೃಹಲಕ್ಷ್ಮಿ ಯೋಜನೆ ಮತ್ತು ಗೃಹಲಕ್ಷ್ಮಿ ಯೋಜನೆ ಪ್ರಿ ಅಪ್ರೂವ್ಡ್ ಎನ್ನುವ 2 ಆಪ್ಷನ್ ಕಾಣುತ್ತದೆ. ಗೃಹಲಕ್ಷ್ಮಿ ಯೋಜನೆ ಪ್ರಿ ಅಪ್ರೂವ್ಡ್ ಎನ್ನುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
● ಮೊದಲಿಗೆ ವೈಯಕ್ತಿಕ ವಿವರಗಳು ಎನ್ನುವ ಆಪ್ಷನ್ ಇರುತ್ತದೆ ಅದರಲ್ಲಿ ನಿಮ್ಮ ಪಡಿತರ ಸಂಖ್ಯೆ, ಅರ್ಜಿದಾರರ ಹೆಸರು, ವರ್ಗ ಮತ್ತು ಮೊಬೈಲ್ ಸಂಖ್ಯೆ ಆಪ್ಷನ್ ಇರುತ್ತದೆ ಅವುಗಳನ್ನು ಫಿಲ್ ಮಾಡಿ.
● ಇದಾದ ಮೇಲೆ ಬ್ಯಾಂಕ್ ಖಾತೆಯ ವಿವರಗಳು ಇರುತ್ತದೆ.
● ಆಧಾರ್ ಕಾರ್ಡ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಬೇಕು ಅಥವಾ ಬೇರೆ ಬ್ಯಾಂಕ್ ಖಾತೆಗೆ ವರ್ಗಾಯಿಸಬೇಕು ಎನ್ನುವ ಆಪ್ಷನ್ ಇರುತ್ತದೆ, ಅದರಲ್ಲಿ ನಿಮ್ಮ ಆಯ್ಕೆಯನ್ನು ಕ್ಲಿಕ್ ಮಾಡಿ.
● IFSC ಕೋಡ್, ಬ್ಯಾಂಕ್ ಹೆಸರು, ಬ್ಯಾಂಕ್ ಖಾತೆ ಸಂಖ್ಯೆ , ಶಾಖೆಯ ಹೆಸರಿನ ಮಾಹಿತಿಯನ್ನು ಫಿಲ್ ಮಾಡಿ ಹಾಗೂ ಅಕೌಂಟ್ ನಂಬರ್ ಅನ್ನು ಮತ್ತೊಮ್ಮೆ ಹಾಕುವ ಮೂಲಕ ಕನ್ಫರ್ಮ್ ಮಾಡಿ.
● ನಾನು ಮತ್ತು ನನ್ನ ಪತಿ ಆದಾಯ ತೆರಿಗೆ ಪಾವತಿದಾರರಾಗಿರುತ್ತೇವೆ, ನಾನು ಮತ್ತು ನನ್ನ ಪತಿ GST ರಿಟರ್ನ್ಸ್ ಸಲ್ಲಿಸಿರುತ್ತೇವೆ ಎನ್ನುವುದಕ್ಕೆ ಹೌದು ಮತ್ತು ಇಲ್ಲ ಎಂದು ಆಪ್ಷನ್ ಗಳು ಇರುತ್ತವೆ. ನೀವು ನಿಮ್ಮ ಆಯ್ಕೆಯನ್ನು ಸೆಲೆಕ್ಟ್ ಮಾಡಿ. ಇದಾದ ಬಳಿಕ ನೀವು ಒದಗಿಸಿರುವ ಮಾಹಿತಿ ಸರಿ ಇದೆ, ನಿಮ್ಮ ಕುಟುಂಬದ ಒಡತಿ ನೀವೇ ಆಗಿರುತ್ತೀರಿ, ಕೊಟ್ಟಿರುವ ಮಾಹಿತಿ ಸುಳ್ಳಾದರೆ ಕಾನೂನು ಕ್ರಮಕ್ಕೆ ಒಳಗಾಗುವುದಕ್ಕೆ ಹಾಗೂ ಗೃಹಲಕ್ಷ್ಮಿ ಯೋಜನೆ ಸಹಾಯವನ್ನು ವಾಪಸ್ ನೀಡುವುದಕ್ಕೆ ಒಪ್ಪಿರುತ್ತೇನೆ ಎಂದು ಸ್ವಯಂ ಘೋಷಣೆ ಇರುತ್ತದೆ. ಚೆಕ್ ಬಾಕ್ಸ್ ಅಲ್ಲಿ ರೈಟ್ ಮಾರ್ಕ್ ಕ್ಲಿಕ್ ಮಾಡುವ ಮೂಲಕ ಅಗ್ರಿ ಮಾಡಿ.
● ಆಧಾರ್ ಧೃಡೀಕರಣಕ್ಕಾಗಿ ಆಪ್ಷನ್ ಇರುತ್ತದೆ. ಅದನ್ನು ಕ್ಲಿಕ್ ಮಾಡಿ ಆಧಾರ್ ಸಂಖ್ಯೆ ನಮೂದಿಸಿದರೆ OTP ವೆರಿಫೈ ಆಗಿ ನಿಮ್ಮ ಅರ್ಜಿ ಸಲ್ಲಿಕೆ ಸ್ವೀಕೃತಿ ಪತ್ರ ನಿಮಗೆ ಸಿಗುತ್ತದೆ.
2. ಆಧಾರ್ ಕಾರ್ಡ್ ಮೂಲಕ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ:-
● ಮೊದಲಿಗೆ ಆಧಾರ್ ದೃಢೀಕರಣ ಮಾಡಲಾಗುತ್ತದೆ ಆಧಾರ್ ಸಂಖ್ಯೆ ನಮೂದಿಸಿ OTP ಜನರೇಟ್ ಮಾಡುವ ಮೂಲಕ ಅರ್ಜಿ ಸಲ್ಲಿಸುವುದಕ್ಕೆ ನೀವು ಮುಂದುವರಿಸಬಹುದು.
● ಮನೆಯ ಯಜಮಾನಿಯ ವಿವರಗಳನ್ನು ಕೆಳಲಾಗುತ್ತದೆ. ಅರ್ಜಿದಾರರ ಹೆಸರು, ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ, ಮತದಾರಲ್ಲಿ ಗುರುತಿನ ಚೀಟಿ ಸಂಖ್ಯೆ, ಪಡಿತರ ಚೀಟಿ ಸಂಖ್ಯೆ, ಪಡಿತರ ಚೀಟಿ ವಿಧ, ವರ್ಗ ಆಧಾರ್ ಸೀಡಿಂಗ್ ಆಗಿರುವ ಬ್ಯಾಂಕ್ ನೇಮ್, ಬ್ಯಾಂಕ್ ಖಾತೆ ಸಂಖ್ಯೆ ನಮೂದಿಸಿ ನಿಮ್ಮ ಭಾವಚಿತ್ರವನ್ನು ಅಪ್ಲೋಡ್ ಮಾಡಬೇಕು.
● ನಂತರ ಕುಟುಂಬ ಸದಸ್ಯರ ವಿವರಗಳನ್ನು ಕೇಳುತ್ತದೆ. ಕುಟುಂಬದ ಯಜಮಾನಿಯ ಪತಿಯ ಹೆಸರನ್ನು ನಮೂದಿಸಬೇಕು.
● ಒಂದು ವೇಳೆ ಪತಿ ಬೇರ್ಪಟ್ಟಿದ್ದರೆ, ಮರಣ ಹೊಂದಿದ್ದರೆ ಅಥವಾ ಅವಿವಾಹಿತೆ ಆಗಿದ್ದರೆ ಆಪ್ಷನ್ ಇರುತ್ತೆ ಅದರಲ್ಲಿ ಸೂಕ್ತವಾದದ್ದನ್ನು ಆಯ್ಕೆ ಮಾಡಬೇಕು.
● ಆಯ್ಕೆಗೆ ತಕ್ಕ ಹಾಗೆ ಪತಿಯ ಹೆಸರು ಆಧಾರ್ ಕಾರ್ಡ್ ಸಂಖ್ಯೆ ಮೊಬೈಲ್ ಸಂಖ್ಯೆ ಇವುಗಳನ್ನು ಭರ್ತಿ ಮಾಡಬೇಕು.
● ಈಗಲೂ ಸಹ ಸ್ವಯಂ ಘೋಷಣೆ ಬರುತ್ತದೆ, ಘೋಷಣೆಯನ್ನು ಓದಿ ಅಗ್ರಿ ಎನ್ನುವ ಚೆಕ್ ಬಾಕ್ಸ್ ಮೇಲೆ ರೈಟ್ ಕ್ಲಿಕ್ ಮಾಡಬೇಕು.
● ಕೊನೆಯಲ್ಲಿ ವರ್ಡ್ ವೆರಿಫಿಕೇಶನ್ ಅಥವಾ ಕ್ಯಾಪ್ಚಾ ಬರಬಹುದು ಅದನ್ನು ನಮೂದಿಸಿ ಸಬ್ಮಿಟ್ ಕೊಟ್ಟರೆ ಅರ್ಜಿ ಸಲ್ಲಿಕೆ ಸ್ವೀಕೃತಿ ಪ್ರತಿ ಬರುತ್ತದೆ.
ಆದರೆ ಪ್ರಮುಖವಾದ ವಿಷಯ ಏನೆಂದರೆ ಸರ್ಕಾರ ಈಗ ಇದನ್ನು ಟೆಸ್ಟಿಂಗ್ ಗಾಗಿ ಮಾತ್ರ ಬಿಡುಗಡೆ ಮಾಡಿದೆ. ಅಧಿಕೃತವಾಗಿ ಅರ್ಜಿ ಆಹ್ವಾನ ಯಾವಾಗ ಎನ್ನುವ ದಿನಾಂಕವನ್ನು ಇನ್ನು ನಿಗದಿಪಡಿಸಿಲ್ಲ. ಆಗಸ್ಟ್ 16ರಂದು ಯೋಜನೆ ಲಾಂಚ್ ಆಗುವ ಕಾರಣ ಶೀಘ್ರದಲ್ಲೇ ಇನ್ನೆರಡು ದಿನಗಳಲ್ಲಿ ಅರ್ಜಿ ಆಹ್ವಾನ ಪ್ರಕ್ರಿಯೆ ಯಾವಾಗ ಆರಂಭ ಎನ್ನುವುದು ಸರ್ಕಾರದ ಕಡೆಯಿಂದ ಅಫಿಶಿಯಲ್ ಆಗಿ ಅನೌನ್ಸ್ ಆಗಬಹುದು.