Deprecated: strtolower(): Passing null to parameter #1 ($string) of type string is deprecated in /home/u302298408/domains/rishithepower.com/public_html/wp-content/plugins/taboola/simple_html_dom.php on line 712
ದೇಶದಲ್ಲಿ ಪ್ರತಿಯೊಬ್ಬರೂ ಕೂಡ ಸ್ವಂತ ಸೂರಿನಡಿ (Own House) ವಾಸಿಸುವಂತೆ ಆಗಬೇಕು, ದೇಶವು ಶೀಘ್ರವಾಗಿ ಈ ಗುರಿಯನ್ನು ಮುಟ್ಟಬೇಕು ಎಂದು ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು (PM Narendra Modi) ವರ್ಷಗಳ ಸಂಕಲ್ಪ ಮಾಡಿದ್ದರು.
ಇದಕ್ಕಾಗಿ ಪ್ರತಿಯೊಬ್ಬರಿಗೂ ಕೂಡ ವಸತಿ ಸೌಲಭ್ಯ ಸಿಗುವಂತಾಗಲಿ ಎಂದು ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಆವಾಸ್ ಯೋಜನೆಯಂತಹ (Pradana Mantri Awas Scheme) ಯೋಜನೆಗಳನ್ನು ಜಾರಿಗೆ ತಂದಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸ್ವಂತ ಮನೆ ಕಟ್ಟಿಕೊಂಡು ವಾಸಿಸಲು ಇಚ್ಛಿಸುವ ಜನರಿಗೆ ಅನೇಕ ಯೋಜನೆಗಳ ಮೂಲಕ ನೆರವಾಗಿ ಅವರ ಕನಸನ್ನು ನನಸು ಮಾಡಿಕೊಳ್ಳಲು ಸಹಾಯ ಮಾಡುತ್ತಿವೆ.
ಇದರೊಂದಿಗೆ ಸರ್ಕಾರಿ ಬ್ಯಾಂಕ್ ಗಳು ಮತ್ತು ಇನ್ನಿತರ ಹಣಕಾಸು ಸಂಸ್ಥೆಗಳು ಕೂಡ ಸಾಲ ಸೌಲಭ್ಯವನ್ನು (home loan) ನೀಡಿ ಮನೆ ಖರೀದಿಸುವವರಿಗೆ ಹಾಗೂ ಮನೆ ನಿರ್ಮಿಸುವವರಿಗೆ ಅನುಕೂಲತೆ ಮಾಡಿಕೊಡುತ್ತೇವೆ. ಸ್ವಂತ ಮನೆಯಲ್ಲಿ ವಾಸಿಸಬೇಕು ತಮಗೂ ಕೂಡ ತಮ್ಮದೇ ಆದ ಒಂದು ಮನೆ ಇರಬೇಕು ಆ ಮನೆಯಲ್ಲಿ ಸ್ವತಂತ್ರವಾಗಿ ಜೀವನ ನಡೆಸಬೇಕು ಎಂದು ಪ್ರತಿಯೊಬ್ಬರೂ ಕೂಡ ಆಸೆ ಪಡುತ್ತಾರೆ.
ಕೆಲವರು ವಾಸಿಸಲು ಯೋಗ್ಯವಾದ ಗೃಹ ನಿರ್ಮಾಣ ಮಾಡಿಕೊಂಡರೆ ಸಾಕು ಕಡಿಮೆ ಖರ್ಚಿಗೆ ಹೆಚ್ಚು ಹೊರೆಯಾಗದಂತೆ ಒಂದು ಪುಟ್ಟ ಮನೆ ಮಾಡಿಕೊಳ್ಳಬೇಕು ಎಂದುಕೊಂಡರೆ, ಇನ್ನೂ ಕೆಲವರಿಗೆ ಅದು ಪ್ರತಿಷ್ಠೆ ಆಗಿರುತ್ತದೆ. ತಮ್ಮ ಕನಸಿನ ಮನೆ ನಿರ್ಮಾಣ ಮಾಡಿಕೊಂಡು ಅದರ ವಿನ್ಯಾಸವನ್ನು ನೋಡಿ ಜೀವನಪೂರ್ತಿ ಆನಂದ ಪಡುತ್ತಾರೆ.
ಇವರಿಗೆಲ್ಲ ಮನೆ ನಿರ್ಮಾಣದಲ್ಲಿ ಉಂಟಾಗುವ ಆರ್ಥಿಕ ತೊಡಕುಗಳಿಗೆ ನೆರವಾಗುವುದು ಬ್ಯಾಂಕ್ ಗಳು ಹಾಗೂ ಇನ್ನಿತರ ಹಣಕಾಸು ಸಂಸ್ಥೆಗಳು. ದೇಶದಲ್ಲಿ ಲೋನ್ ಪಡೆದು ಸ್ವಂತ ಮನೆ ಕಟ್ಟಿಕೊಂಡವರ ಕೋಟ್ಯಾಂತರ ಉದಾಹರಣೆ ಇದೆ. ಈಗ ಈ ರೀತಿ ಗೃಹ ಸಾಲ ಪಡೆದು ಮನೆ ನಿರ್ಮಾಣ ಮಾಡಿಕೊಳ್ಳುವ ನಾಗರಿಕರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದೆ.
ಸ್ವಂತ ಮನೆ ಇಲ್ಲದೆ ಇನ್ನೂ ಕೂಡ ಬಾಡಿಗೆ ಮನೆಗಳಲ್ಲಿ ವಾಸಿಸುತ್ತ ಇರುವವರು ಹಾಗೂ ನಿರ್ಗತಿಕರು ಈ ಯೋಜನೆಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಸೆಪ್ಟೆಂಬರ್ ತಿಂಗಳಲ್ಲಿ ಸ್ವಂತ ಮನೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಮತ್ತೊಂದು ಹೊಸ ಯೋಜನೆಯನ್ನು ಜಾರಿಗೆ ತರಲಿದೆ.
ಆಗಸ್ಟ್ ತಿಂಗಳ ಅನ್ನಭಾಗ್ಯ ಯೋಜನೆ ಹಣ ಜಮೆ ಆಗಿದೆ ಈ ರೀತಿ ಚೆಕ್ ಮಾಡಿ ನೋಡಿ.!
ಇದರ ಈ ಸೂಚನೆಯನ್ನು ನಗರ ವ್ಯವಹಾರ ಸಚಿವಾಲಯದ ಕಾರ್ಯದರ್ಶಿ ಮನೋಜ್ ಜೋಶಿ (Ministry of Buisness Secretary) ಮಾಹಿತಿ ನೀಡಿದ್ದಾರೆ. ಈ ಯೋಜನೆಯ ಉದ್ದೇಶ ಏನೆಂದರೆ ಸದ್ಯದಲ್ಲೇ ಜನರಿಗೆ ಬ್ಯಾಂಕ್ ಸಾಲಗಳ ಬಡ್ಡಿದರದ ಮೇಲೆ ವಿನಾಯಿತಿ (decrease house loan intrest) ಒದಗಿಸುವುದಾಗಿದೆ.
ಇಂತಹದೊಂದು ಮಹತ್ವದ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ ಎನ್ನುವ ಮಾಹಿತಿಯನ್ನು ಇವರು ಹಂಚಿಕೊಂಡಿದ್ದಾರೆ. ಬ್ಯಾಂಕ್ ಸಾಲಗಳನ್ನು ಪಡೆದು ಮನೆ ನಿರ್ಮಾಣ ಮಾಡಿಕೊಳ್ಳುವವರು ನಂತರ ಆ ಸಾಲದ ವಿಪರೀತ ಬಡ್ಡಿದರವನ್ನು ತೆರಲಾಗದೇ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಈ ಕುರಿತು ಸಹಸ್ರಾರು ಮಂದಿ ಸರ್ಕಾರದೆದುರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಲೇಬರ್ ಕಾರ್ಡ್ ಇದ್ದವರ ಮಕ್ಕಳಿಗೆ ಉಚಿತ ಲ್ಯಾಪ್ಟಾಪ್ ವಿತರಣೆ, ಅರ್ಜಿ ಸಲ್ಲಿಸುವುದು ಹೇಗೆ ನೋಡಿ.!
ವರ್ಷಾನುವರ್ಷದಿಂದ ಈ ರೀತಿ ಸಮಸ್ಯೆಗಳನ್ನು ಆಲಿಸಿದ್ದ ಸರ್ಕಾರವು ಈಗ ಇಂತಹದೊಂದು ಮಹತ್ವದ ನಿರ್ಧಾರ ಕೈಗೊಂಡು ಈ ಮೂಲಕ ಕೂಡ ಸಾಲ ಪಡೆದು ಮನೆ ನಿರ್ಮಾಣದ ಅಥವಾ ಖರೀದಿಗೆ ಕನಸು ಕಂಡಿರುವವರಿಗೆ ನೆರವಾಗಲು ಮುಂದಾಗಿದೆ. ಸರ್ಕಾರದ ಈ ನಿರ್ಧಾರದಿಂದ ಸ್ವಂತಮನೆಯ ಕನಸು ಕಂಡವರಿಗೆ ಅವರ ಹೊರೆ ಸ್ವಲ್ಪ ಕಡಿಮೆ ಆಗುವುದಂತೂ ನಿಶ್ಚಿತ. ಶೀಘ್ರವಾಗಿ ಯೋಜನೆ ಬರಲಿ, ದೇಶದಲ್ಲಿರುವ ಪ್ರತಿಯೊಬ್ಬರು ಕೂಡ ತಮ್ಮ ಸ್ವಂತ ಮನೆಯಲ್ಲಿ ವಾಸಿಸುವಂತಾಗಲಿ ಎಂದು ನಾವು ಕೂಡ ಆಶಿಸೋಣ.