ದೇಶಕ್ಕೆ ಮಾದರಿ ಯೋಜನೆ ಎನಿಸಿ, ಇಡೀ ದೇಶವೇ ಮತ್ತೊಮ್ಮೆ ರಾಜ್ಯದ ಬಗ್ಗೆ ಮಾತನಾಡುವಂತೆ ಮಾಡಿದ ಯೋಜನೆ ಎಂದರೆ ಈ ಬಾರಿ ಕರ್ನಾಟಕದಲ್ಲಿ (Karnataka Governmebt Guaranty Schemes) ಆಡಳಿತದಲ್ಲಿರುವ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಗ್ಯಾರಂಟಿ ಯೋಜನೆಗಲ್ಲಿ ಒಂದಾದ ಶಕ್ತಿ ಯೋಜನೆ (Shakthi Yojane).
ಈ ಶಕ್ತಿ ಯೋಜನೆ ಮೂಲಕ ಕರ್ನಾಟಕದ ನಾಲ್ಕು ನಿಗಮದ ಬಸ್ ಗಳಲ್ಲಿ ಕರ್ನಾಟಕದ ಗಡಿ ಒಳಗೆ ರಾಜ್ಯದ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಕಳೆದ ಜೂನ್ ತಿಂಗಳಿನಿಂದ ರಾಜ್ಯದ ಮಹಿಳಾ ಫಲಾನುಭವಿಗಳು ಈ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ.
ಇದರಿಂದ ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಮಹಿಳೆಯರ ತೊಡಗಿಕೊಳ್ಳುವಿಕೆ ಹೆಚ್ಚಾಗುತ್ತಿದೆ ಮತ್ತು ಧಾರ್ಮಿಕ ಹಾಗೂ ಪ್ರೇಕ್ಷಣೀಯ ಸ್ಥಳಗಳಲ್ಲಿ ಮಹಿಳೆಯರ ಸಂಖ್ಯೆಯೇ ಹೆಚ್ಚಾಗಿ ಕಾಣುತ್ತಿದೆ. ಆದರೆ ಯೋಜನೆ ಆರಂಭವಾದ ಸಮಯದಲ್ಲಿ ಈ ಯೋಜನೆ ಬಗ್ಗೆ ಸಾಕಷ್ಟು ನೆಗೆಟಿವ್ ಮಾತುಗಳನ್ನು ಕೂಡ ಕೇಳಬೇಕಾಗಿ ಬಂತು.
ಈ ಸುದ್ದಿ ಓದಿ:- PUC ಆದವರಿಗೂ ಸಿಗುತ್ತೆ 50,000 ಸಂಬಳ, 500 ದೊಡ್ಡ ದೊಡ್ಡ ಕಂಪನಿಗಳಲ್ಲಿ ತಕ್ಷಣ ಕೆಲಸಕ್ಕೆ ಬೇಕಾಗಿದ್ದರೆ ಆಸಕ್ತರು, ನೋಡಿ.!
ಯಾಕೆಂದರೆ ರಾಜ್ಯದಲ್ಲಿ ಮೊದಲ ಬಾರಿಗೆ ಹೀಗೆ ಉಚಿತ ಪ್ರಯಾಣದ ಅವಕಾಶವನ್ನು ಕೊಟ್ಟಿದ್ದರಿಂದ ಬಸ್ ಗಳಲ್ಲಿ ನೂಕು ನೂಕಲು ಮತ್ತು ಸೀಟ್ ಗಾಗಿ ಕ’ಲ’ಹ, ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದರಿಂದ ಬಸ್ ಗಳ ಕೊರತೆ ಉಂಟಾಗಿ ಇನ್ನೂ ಹತ್ತು ಹಲವಾರು ತೊಂದರೆಗಳು ವರದಿಯಾದವು.
ಆದರೆ ಹಂತ ಹಂತವಾಗಿ ಈ ಎಲ್ಲಾ ಸಮಸ್ಯೆಯನ್ನು ಪರಿಹಾರ ಮಾಡಿಕೊಡಲಾಗಿದೆ. ಈಗ ಸಾಧಾರಣವಾಗಿ ಯೋಜನೆ ಸಾಗುತ್ತಿದೆ ಆದರೆ ಈ ಯೋಜನೆಗೆ ವರ್ಷ ಸಮೀಪಿಸುತ್ತಿರುವ ಸಮಯದಲ್ಲಿ ರಾಜ್ಯ ಸರ್ಕಾರ ವತಿಯಿಂದ ಯೋಜನೆ ಕುರಿತಾದ ಮತ್ತೊಂದು ಅಪ್ಡೇಟ್ ಇದೆ.
ಶಕ್ತಿ ಯೋಜನೆಗೆ ಇದ್ದ ಕಂಡೀಷನ್ ಗಳು ಏನೆಂದರೆ, AC ಬಸ್ ಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಸರ್ಕಾರಿ ಬಸ್ ಗಳಲ್ಲಿ ಮಹಿಳಾ ಪ್ರಯಾಣಿಕರು ರಾಜ್ಯದ ಗಡಿಯೊಳಗೆ ಎಲ್ಲಿ ಬೇಕಾದರೂ ಉಚಿತವಾಗಿ ಪ್ರಯಾಣ ಮಾಡಬಹುದು. ಆದರೆ ರಾಜ್ಯದ ನಿವಾಸಿ ಎನ್ನುವುದಕ್ಕೆ ಆಧಾರ್ ಕಾರ್ಡ್ / ಪ್ಯಾನ್ ಕಾರ್ಡ್ / ಡ್ರೈವಿಂಗ್ ಲೈಸೆನ್ಸ್ / ವೋಟರ್ ಐಡಿ ಅಥವಾ ಇನ್ನಿತರ ಯಾವುದೇ ದಾಖಲೆ ತೋರಿಸಿ ಟಿಕೆಟ್ ಪಡೆಯಬೇಕು ಎನ್ನುವುದೇ ಕಂಡೀಶನ್ ಆಗಿತ್ತು.
ಈ ಸುದ್ದಿ ಓದಿ:- ಸರ್ಕಾರದಿಂದ ರೈತರಿಗೆ ಗುಡ್ ನ್ಯೂಸ್, ಜಮೀನಿನಲ್ಲಿ ವಿದ್ಯುತ್ ಕಂಬ ಅಥವಾ ಟ್ರಾನ್ಸ್ಫರ್ಮರ್ ಇದ್ದರೆ ತಿಂಗಳಿಗೆ 5000 ಹಣ ಸಿಗಲಿದೆ.!
ನಮ್ಮ ರಾಜ್ಯದಲ್ಲಿ ಪರ ರಾಜ್ಯಗಳಿಂದ ಕೂಡ ಬಂದು ವಾಸ ಮಾಡುತ್ತಿರುವವರ ಸಂಖ್ಯೆಗೇನೂ ಕಡಿಮೆ ಇಲ್ಲ. ಹೀಗೆ ಬಂದವರು ಕೂಡ ಸರ್ಕಾರಕ್ಕೆ ವಂಚಿಸಿ ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಈ ಯೋಜನೆ ಪ್ರಯೋಜನ ಪಡೆಯುತ್ತಿದ್ದಾರೆ. ಇದರಿಂದ ಆಗುತ್ತಿರುವ ನಷ್ಟವನ್ನು ತಡೆಗಟ್ಟಲು ಸ್ಮಾರ್ಟ್ ಕಾರ್ಡ್ ಯೋಜನೆ (Smart card Scheme) ಜಾರಿಗೆ ತರುವ ಬಗ್ಗೆ ಸರ್ಕಾರ ಚಿಂತನೆ ಮಾಡುತ್ತಿದೆ.
ಮಹಿಳೆಯರು ದಾಖಲೆಯಾಗಿ ತಮ್ಮ ಆಧಾರ್ ಕಾರ್ಡ್ ಗಳನ್ನು ಕೊಟ್ಟು ಮಹಿಳೆಯರು ಭಾವಚಿತ್ರ ಮತ್ತು ವಿವರಗಳು ಇರುವ ಸ್ಮಾರ್ಟ್ ಕಾರ್ಡ್ ಪಡೆಯಬೇಕು. ಈ ರೀತಿ ಸ್ಮಾರ್ಟ್ ಕಾರ್ಡ್ ಇದ್ದರೆ ಮಾತ್ರ ಉಚಿತ ಪ್ರಯಾಣದ ಪ್ರಯೋಜನ ಪಡೆಯಲು ಸಾಧ್ಯ ಎನ್ನುವ ಘೋಷಣೆ ಹೊರಡಿಸಿತ್ತು.
ಆದರೆ ಸ್ಮಾರ್ಟ್ ಕಾರ್ಡ್ ವಿತರಣೆಗೆ ಹೆಚ್ಚುವರಿ ಹೊರೆ ಆಗುವುದರಿಂದ ಇದನ್ನು ಮುಂದೂಡಲಾಗಿತ್ತು. ಈಗ ಯೋಜನೆಗೆ ವರ್ಷ ಸಮೀಪಿಸುತ್ತಿರುವ ಸಮಯದಲ್ಲಿ ಮತ್ತೊಮ್ಮೆ ಈ ಒಂದು ಸ್ಮಾರ್ಟ್ ಕಾರ್ಡ್ ಬಗ್ಗೆ ಥಿಂಕಿಂಗ್ ನಡೆಯುತ್ತಿದೆ. ಮಹಿಳೆಯರಿಗೆ ಹತ್ತಿರದಲ್ಲಿರುವ ಯಾವುದೇ ಸೇವಾ ಸಿಂಧು ಕೇಂದ್ರಗಳಿಗೆ ಹೋಗಿ ಆಧಾರ್ ಕಾರ್ಡ್ ನೀಡಿ ಅಲ್ಲೇ ಶಕ್ತಿ ಯೋಜನೆಗೆ ಸ್ಮಾರ್ಟ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ.
ಈ ಸುದ್ದಿ ಓದಿ:- ಆಹಾರ ಸಂಶೋಧನಾಲಯ ಇಲಾಖೆ ನೇಮಕಾತಿ ಆಸಕ್ತರು ಅರ್ಜಿ ಸಲ್ಲಿಸಿ.! ವೇತನ 56,000/-
ಒಂದು ವೇಳೆ ಇದು ಜಾರಿಯಾದರೆ ಆಧಾರ್ ಕಾರ್ಡ್ ಇದ್ದರು ಸ್ಮಾರ್ಟ್ ಕಾರ್ಡ್ ತೋರಿಸದೆ ಇದ್ದಲ್ಲಿ ಉಚಿತ ಪ್ರಯಾಣದ ಅನುಕೂಲತೆ ತಪ್ಪಬಹುದು ಮತ್ತು ಕರ್ನಾಟಕದ ನಿವಾಸಿ ಅಲ್ಲದೆ ಇದ್ದರೂ ಸುಳ್ಳು ದಾಖಲೆ ಸೃಷ್ಟಿಸಿ ವಂಚಿಸುತ್ತಿರುವವರ ದಬ್ಬಾಳಿಕೆ ಕೂಡ ತಪ್ಪಬಹುದು. ಈ ವಿಷಯದ ಬಗ್ಗೆ ನಿಮ್ಮ ಅಭಿಪ್ರಾಯ ಏನು ತಪ್ಪದೇ ಕಮೆಂಟ್ ಮಾಡಿ ತಿಳಿಸಿ.