ಗೃಹಜ್ಯೋತಿ ಯೋಜನೆ.! ಇಂಥವರಿಗೆ ಇನ್ಮುಂದೆ 200 ಅಲ್ಲ 250 ಯೂನಿಟ್ ಫ್ರೀ.!

 

WhatsApp Group Join Now
Telegram Group Join Now

ಕಾಂಗ್ರೆಸ್ ಸರ್ಕಾರವು ಘೋಷಿಸಿದ್ದ ಗ್ಯಾರಂಟಿ ಯೋಜನೆಗಳಲ್ಲಿ (Guaranty Scheme ) ಮೊದಲನೆಯ ಯೋಜನೆ ಗೃಹಜ್ಯೋತಿ (Gruhajyothi) ಯೋಜನೆಯಾಗಿತ್ತು. ಅದೇ ರೀತಿಯಾಗಿ ಜಾರಿಗೆ ಬಂದ ಯೋಜನೆಗಳಲ್ಲಿ ಎರಡನೆಯ ಯೋಜನೆಯಾಗಿ ಗೃಹಜ್ಯೋತಿ ಯೋಜನೆ ಜಾರಿಯಾಯಿತು. ಜುಲೈ ತಿಂಗಳಿನಿಂದ ಕರ್ನಾಟಕದ ಜನತೆ ಗೃಹಜೋತಿ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ.

ಇದನ್ನು ಇಲಾಖೆ ಅಂಕಿ ಅಂಶಗಳ ಪ್ರಕಾರ ಇದುವರೆಗೆ 1.60 ಕೋಟಿ ಕುಟುಂಬಗಳು ಗೃಹಜ್ಯೋತಿ ಯೋಜನೆಗೆ ನೋಂದಾಯಿಸಿಕೊಂಡಿದ್ದು, ಇದರಲ್ಲಿ ಪ್ರತಿ ತಿಂಗಳು ಸರಾಸರಿ 1.10ಕೋಟಿ ಕುಟುಂಬಗಳು ಸಂಪೂರ್ಣವಾಗಿ ಉಚಿತ ವಿದ್ಯುತ್ (free electricity) ಪ್ರಯೋಜನ ಪಡೆಯುತ್ತಿವೆ. ಗೃಹಜ್ಯೋತಿ ಯೋಜನೆಯಡಿ ಫಲಾನುಭವಿಗಳು ವಾರ್ಷಿಕವಾಗಿ ಬಳಸಿದ್ದ ವಿದ್ಯುತ್ ಬಳಕೆಯ ಸರಾಸರಿಗಿಂತ 10% ಹೆಚ್ಚು ವಿದ್ಯುತ್ತನ್ನು ಗರಿಷ್ಠ 200 ಯೂನಿಟ್ ವರೆಗೆ ಪ್ರತಿ ತಿಂಗಳು ನೀಡುತ್ತಿದೆ.

ಈಗ ಈ ಯೋಜನೆ ಕುರಿತು ಮತ್ತೊಂದು ಮಹತ್ವದ ಅಪ್ಡೇಟ್ ಹೊರ ಬಿದ್ದಿದೆ ಆದೇನೆಂದರೆ ಇನ್ನು ಮುಂದೆ ಗೃಹಜ್ಯೋತಿ ಉಚಿತ ವಿದ್ಯುತ್ ಮಿತಿಯನ್ನು 200 ಯೂನಿಟ್ ಬದಲು 250 ಯೂನಿಟ್ ಗೆ ಏರಿಸಲು (increase Gruhajyothi limit) ಸರ್ಕಾರಕ್ಕೆ ಮನವಿ ಸಲ್ಲಿಕೆಯಾಗಿದೆ.

ಆದರೆ ಇದು ನೇಕಾರರ ವರ್ಗದ ಕುಟುಂಬಗಳಿಗೆ ಮಾತ್ರ ಸೀಮಿತವಾಗುತ್ತದೆ ಸಣ್ಣ ಮತ್ತು ಮಧ್ಯಮ ವರ್ಗದ ಕೈಗಾರಿಕೆಗಳ ಸಚಿವರು ಈ ಬಗ್ಗೆ ಸರ್ಕಾರದ ಮುಂದೆ ಪ್ರಸ್ತಾಪ ಇಟ್ಟು, ಇಂಧನ ಇಲಾಖೆ ಹಾಗೂ ಸರ್ಕಾರದ ಬಳಿ ಈ ಕುರಿತು ಮಾತುಕತೆ ನಡೆಸಿದ್ದಾರೆ. ಯಾಕೆಂದರೆ ಬೆಂಗಳೂರು ಹೊರವಲಯ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಅನೇಕ ಕುಟುಂಬಗಳು ನೇಯ್ಗೆಯನ್ನೇ ತಮ್ಮ ಜೀವನೋಪಾಯವಾಗಿ ಹೊಂದಿವೆ‌.

ಇಂತಹ ಕುಟುಂಬಗಳು ಮನೆಯಲ್ಲಿಯೇ ನೇಯ್ಗೆ ಕೆಲಸ ಮಾಡುತ್ತಿರುವುದರಿಂದ ಇಂತಹ ಕುಟುಂಬಗಳಿಗೆ 200 ಯೂನಿಟ್ 250 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡಿದರೆ ಸಹಾಯವಾಗುತ್ತದೆ ಎಂದು ಸರ್ಕಾರದ ಬಳಿ ಈ ಕುರಿತು ಪ್ರಸ್ತಾಪ ಮಾಡಲಾಗಿದೆ.

ಕೆಲ ದಿನಗಳ ಹಿಂದಷ್ಟೇ ದೇವಸ್ಥಾನಗಳನ್ನೂ ಕೂಡ ಗೃಹಜ್ಯೋತಿ ವ್ಯಾಪ್ತಿಗೆ ಪರಿಗಣಿಸಿ ದೇವಸ್ಥಾನಗಳಿಗೂ ಉಚಿತ ವಿದ್ಯುತ್ ನೀಡಬೇಕು ಎಂದು ಕರ್ನಾಟಕ ಅರ್ಚಕರ ಸಂಘವು ಮಾನ್ಯ ಮುಜರಾಯಿ ಇಲಾಖೆ ಸಚಿವರಾದ ರಾಮಲಿಂಗ ರೆಡ್ಡಿ ಅವರ ಬಳಿ ಮನವಿ ಮಾಡಿಕೊಂಡಿದ್ದರು. ಸುದ್ದಿಗೋಷ್ಠಿ ಒಂದರಲ್ಲಿ ಈ ಬಗ್ಗೆ ಮಾತನಾಡಿದ ಸಚಿವರು ಮುಜರಾಯಿ ಇಲಾಖೆಯಲ್ಲಿ ಇರುವ.

C ಗ್ರೇಡ್ ಅಂದರೆ ವಾರ್ಷಿಕವಾಗಿ 5 ಲಕ್ಷಕ್ಕಿಂತ ಕಡಿಮೆ ಆದಾಯ ಬರುವ ದೇವಸ್ಥಾನಗಳಲ್ಲಿ ಸರಾಸರಿಯಾಗಿ 50 ರಿಂದ 60 ಯೂನಿಟ್ ಅಷ್ಟೇ ವಿದ್ಯುತ್ ಬಳಕೆ ಆಗುತ್ತಿರುವುದು ಒಟ್ಟಾರೆಯಾಗಿ 34 ಸಾವಿರದಷ್ಟು ದೇವಾಲಯಗಳು C ಗ್ರೇಟ್ ಗೆ ಬರುತ್ತವೆ. ಹಾಗಾಗಿ ಇವುಗಳಿಗೆ ಉಚಿತ ವಿದ್ಯುತ್ ನೀಡಿದರೆ ಸರ್ಕಾರಕ್ಕೆ ಹೆಚ್ಚಿನ ಹೊರೆ ಆಗುವುದಿಲ್ಲ ಎಂದು ಭಾವಿಸಿ, ಮಾನ್ಯ ಮುಖ್ಯಮಂತ್ರಿಗಳ ಬಳಿ ಈ ಬಗ್ಗೆ ಚರ್ಚಿಸುತ್ತೇನೆ ಎಂದು ಹೇಳಿದ್ದರು ಮುಜರಾಯಿ ಇಲಾಖೆ ಜೊತೆ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಸಚಿವರ ಮನವಿ ಕೂಡ ಈಗ ಮುಖ್ಯಮಂತ್ರಿಗಳ ಮುಂದಿದೆ.

ಬಲವಾದ ಮೂಲಗಳ ಮಾಹಿತಿ ಪ್ರಕಾರ ಸರ್ಕಾರ ಮತ್ತು ಮಧ್ಯಮ ಕೈಗಾರಿಕಾ ಇಲಾಖೆ ವ್ಯಾಪ್ತಿಯ ನೇಕಾರರ ಕುಟುಂಬಗಳಿಗೆ ಗೃಹಜ್ಯೋತಿ ಮಿತಿಯನ್ನು 250 ಕ್ಕೆ ಏರಿಸಲು ಅನುಮತಿ ನೀಡುತ್ತದೆ ಎಂದು ತಿಳಿದು ಬಂದಿದೆ. ಆದರೆ ಸಚಿವಾಲಯದಿಂದ ಸ್ಪಷ್ಟೀಕರಣ ಸಿಗುವವರೆಗೂ ಕಾಯಬೇಕು ಮತ್ತು ಇದು ಜಾರಿಗೆ ಬಂದರೆ ಸಾಮಾನ್ಯರಿಗೆ ಈ ಮಿತಿ 200 ಯೂನಿಟ್ ಅಷ್ಟೇ ಇರುತ್ತದೆ ಆದರೆ ನೇಕಾರರ ಕುಟುಂಬಗಳಿಗೆ ಮಾತ್ರ ಗರಿಷ್ಠ 250 ಯೂನಿಟ್ ಅನ್ವಯವಾಗುತ್ತದೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now