ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ (Karnataka government Guarantee Schemes) ಗೃಹಲಕ್ಷ್ಮಿ ಯೋಜನೆ ಕೂಡ ಒಂದು. ಮಹಿಳೆಯರನ್ನು ಆರ್ಥಿಕವಾಗಿ ಸಾಲಂಬಿಗಳಾನ್ನಾಗಿಸಲು ಮತ್ತು ಲಿಂಗ ಸಮಾನತೆ ಕಾಪಾಡುವ ಉದ್ದೇಶದಿಂದ ಕರ್ನಾಟಕ ರಾಜ್ಯದ ಎಲ್ಲಾ ಕುಟುಂಬದ ಯಜಮಾನಿ ಮಹಿಳೆಗೆ (head of the family women) ಪ್ರತಿ ತಿಂಗಳು ಅವರ ಕುಟುಂಬ ನಿರ್ವಹಣೆಗಾಗಿ 2,000 ಸಹಾಯಧನ ನೀಡುವುದಾಗಿ ಕಾಂಗ್ರೆಸ್ ಪಕ್ಷ (Congress manifesto) ಚುನಾವಣೆ ಪೂರ್ವವಾಗಿ ಘೋಷಿಸಿತ್ತು.
ಅಂತೆಯೇ ಬಹುಮತ ಬೆಂಬಲದೊಂದಿಗೆ ಕಾಂಗ್ರೆಸ್ ನೇತೃತ್ವದ ಸರ್ಕಾರ ಸ್ಥಾಪನೆ ಆದಮೇಲೆ ಜುಲೈ 19 ರಿಂದ ಪಡಿತರ ಚೀಟಿ ಹೊಂದಿರುವ ಎಲ್ಲಾ ಕುಟುಂಬದ ಯಜಮಾನಿ ಮಹಿಳೆ ಕೂಡ ಪಡಿತರ ಚೀಟಿ ಸಂಖ್ಯೆ, ಆಧಾರ್ ಕಾರ್ಡ್ ಸಂಖ್ಯೆ ಹಾಗೂ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಕೊಡುವ ಮೂಲಕ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಅಥವಾ ಬಾಪೂಜಿ ಸೇವಾ ಕೇಂದ್ರಗಳಲ್ಲಿ ನೋಂದಾಯಿಸಿಕೊಳ್ಳಬೇಕು ಎಂದು ಸೂಚಿಸಿತ್ತು.
ಆಗಸ್ಟ್ 30ನೇ ತಾರೀಕಿನಂದು ಮೈಸೂರಿನಲ್ಲಿ (Mysore) ಅದ್ದೂರಿಯಾಗಿ ಈ ಕಾರ್ಯಕ್ರಮವನ್ನು ಲಾಂಚ್ (Gruhalakshmi Launch) ಮಾಡಲಾಗಿದೆ. ಅಂದಿನಿಂದ ಆವರೆಗೆ ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಂಡಿದ್ದ ಮಹಿಳೆಯರೆಲ್ಲರೂ ಖಾತೆಗೂ ಜಿಲ್ಲಾವಾರು ಹಂತ ಹಂತವಾಗಿ DBT ಮೂಲಕ ಹಣ ವರ್ಗಾವಣೆ ಆಗುತ್ತಿದೆ. ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಗೃಹಲಕ್ಷ್ಮಿ ಯೋಜನೆಯ ಮೊದಲನೇ ಕಂತಿನ ಹಣ ವರ್ಗಾವಣೆ ಆಗಿರುವ ಕುರಿತು ಹಾಗೂ ಎರಡನೇ ಕಂತಿನ ಹಣ ಯಾವಾಗ ವರ್ಗಾವಣೆ ಆಗುತ್ತದೆ ಎನ್ನುವುದರ ಕುರಿತು ಮಾಹಿತಿ ಸಿಕ್ಕಿದೆ.
ಇಲಾಖೆ ಹೇಳುವ ಅಂಕಿ ಅಂಶಗಳ ಪ್ರಕಾರ ಒಟ್ಟು 1.2 ಕೋಟಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಿಕೊಂಡಿದ್ದರು, ಆದರೆ 1.08 ಕೋಟಿ ಮಹಿಳೆಯರು ಮಾತ್ರ ಮೊದಲನೇ ಕಂತಿನ ಹಣ ಪಡೆಯಲು ಅರ್ಹರಾಗಿದ್ದಾರೆ. ಇನ್ನುಳಿದ ಮಹಿಳೆಯರ ಬ್ಯಾಂಕ್ ಖಾತೆ ಮಾಹಿತಿ ಹೊಂದಾಣಿಕೆ ಆಗದ ಕಾರಣ, ಇನ್ನಿತರ ತಾಂತ್ರಿಕ ಸಮಸ್ಯೆಗಳ (technical error) ಕಾರಣ ಮೊದಲನೇ ಕಂತಿನ ಹಣವನ್ನು ಪಡೆಯಲಾಗದೆ ವಂಚಿತರಾಗಿದ್ದಾರೆ.
LIC ಈ ಸ್ಕೀಮ್ ನಲ್ಲಿ 2,000 ಹೂಡಿಕೆ ಮಾಡಿದ್ರೆ ಸಾಕು 43 ಲಕ್ಷ ಸಿಗುತ್ತೆ.! ಹೆಚ್ಚು ಹಣ ಗಳಿಸುವ ಸೂಪರ್ ಸ್ಕೀಮ್ ಇದು.!
ಈ ಕೂಡಲೇ ಅವರು ತಮ್ಮ ಬ್ಯಾಂಕ್ ಖಾತೆಗಳನ್ನು ಆಕ್ಟಿವ್ (bank account active) ಆಗಿ ಇಟ್ಟುಕೊಂಡು ಅದಕ್ಕೆ Aadhar Seeding NPCI mapping ಮಾಡಿಸಿಕೊಂಡರೆ ಅವರಿಗೂ ಎರಡನೇ ಕಂತಿನ ಹಣ ವರ್ಗಾವಣೆ ಆಗಲಿದೆ, ಜೊತೆಗೆ ಇನ್ನೂ ಕೂಡ ಯಾರು ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಂಡಿಲ್ಲ ಅವರಿಗೂ ಕೂಡ ಅರ್ಜಿ ಸಲ್ಲಿಸಲು ಅವಕಾಶವಿದೆ, ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಳ್ಳಲು ಯಾವುದೇ ಕಡೆಯ ದಿನಾಂಕ ಇಲ್ಲ.
ಮಹಿಳೆಯರು ನೋಂದಾಯಿಸಿಕೊಂಡ ತಿಂಗಳಿನಿಂದ ಅವರು 2000ರೂ. ಸಹಾಯಧನ ಪಡೆಯಲು ಅರ್ಹರಾಗುತ್ತಾರೆ, ಹಾಗಾಗಿ ಎರಡನೇ ಕಂತಿನ ಹಣ ವರ್ಗಾವಣೆ ಆಗುವ ಮುನ್ನ ನೋಂದಾಯಿಸಿಕೊಳ್ಳಿ ಎಂದು ಸೂಚಿಸಿದ್ದಾರೆ. ಇದೆಲ್ಲದರ ಜೊತೆಗೆ ಎರಡನೇ ಕಂತಿನ ಹಣ ಯಾವಾಗ ವರ್ಗಾವಣೆ ಆಗುತ್ತದೆ (September month Gruhalakshmi amount) ಎನ್ನುವ ಪ್ರಶ್ನೆ ಎಲ್ಲರ ಮನದಲ್ಲೂ ಮೂಡಿದೆ.
ಸರ್ಕಾರ ತಿಳಿಸಿರುವ ಮಾಹಿತಿ ಪ್ರಕಾರ ಸೆಪ್ಟೆಂಬರ್ 15ರ ಒಳಗೆ ಎರಡನೇ ಕಂತಿನ ಹಣ ಕೂಡ ವರ್ಗಾವಣೆ ಆಗಲಿದೆ ಎನ್ನುವ ಸುದ್ದಿ ಇದೆ ಇದುವರೆಗೂ ಯಾರೆಲ್ಲಾ ಯೋಜನೆಗೆ ಅರ್ಜಿ ಸಲ್ಲಿಸಿಲ್ಲ ಈ ಸದಾ ಅವಕಾಶವನ್ನು ಉಪಯೋಗಿಸಿಕೊಳ್ಳಿ ಮತ್ತು ಈ ಉಪಯುಕ್ತ ಮಾಹಿತಿಯ ಬಗ್ಗೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರಿಗೂ ಕೂಡ ತಿಳಿಸಿ.