ಕರ್ನಾಟಕ ಸರ್ಕಾರವು ಘೋಷಿಸಿರುವ ಗ್ಯಾರಂಟಿ ಯೋಜನೆಗಳಲ್ಲಿ (Gyarantee Scheme) ಗೃಹಲಕ್ಷ್ಮಿ ಯೋಜನೆಯ (Gruhalakshmi Scheme) ಮೂಲಕ ಕರ್ನಾಟಕದ ರೇಷನ್ ಕಾರ್ಡ್ (ration card) ಹೊಂದಿರುವ ಕುಟುಂಬದ ಯಜಮಾನಿ ಮಹಿಳೆಯರು ಪ್ರತಿ ತಿಂಗಳು 2000 ಸಹಾಯಧನವನ್ನು ಸರ್ಕಾರದ ವತಿಯಿಂದ ಕುಟುಂಬ ನಿರ್ವಹಣೆಗಾಗಿ ಪಡೆಯುತ್ತಿದ್ದಾರೆ.
ಈ ಹಣವು ನೇರವಾಗಿ DBT ಮೂಲಕ ವರ್ಗಾವಣೆ ಆಗುತ್ತಿತ್ತು ಗೃಹಲಕ್ಷ್ಮಿ ಹೆಸರಿನ ಈ ಯೋಜನೆಗೆ ಅರ್ಹ ಮಹಿಳೆಯರು ತಮ್ಮ ರೇಷನ್ ಕಾರ್ಡ್ ಆಧಾರ್ ಕಾರ್ಡ್ ಮತ್ತು ಮೊಬೈಲ್ ಸಂಖ್ಯೆ ಮಾಹಿತಿಯನ್ನು ನೀಡಿ ಗ್ರಾಮ ಒನ್, ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ಕೇಂದ್ರಗಳಲ್ಲಿ ನೋಂದಾಯಿಸಿಕೊಳ್ಳಬೇಕು.
ಜುಲೈ ತಿಂಗಳಿಂದ ಈವರೆಗೆ ರಾಜ್ಯದ 1.10 ಸೊನ್ನೆ ಕೋಟಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ ಮತ್ತು ಆಗಸ್ಟ್ ತಿಂಗಳ ಅಂತ್ಯದಲ್ಲಿ ಲಾಂಚ್ ಆದ ಗೃಹಲಕ್ಷ್ಮಿ ಯೋಜನೆ ಹಣ ವರ್ಗಾವಣೆ ಸಮಯದಿಂದ ಇಲ್ಲಿಯವರೆಗೆ ಮೂರು ಬಾರಿ ಫಲಾನುಭವಿಗಳು ಹಣ ಪಡೆದಿದ್ದಾರೆ.
ಈಗಷ್ಟೇ ದೀಪಾವಳಿ ಹಬ್ಬದ ಸಮಯದಿಂದ ಸರ್ಕಾರವು ಮೂರನೇ ಕಂತಿನ ಹಣವನ್ನು ವರ್ಗಾವಣೆ ಮಾಡುತ್ತಾ ಬಂದಿದೆ ಮತ್ತು ಈ ಮಾಸದ ಅಂತ್ಯದೊಳಗೆ ಸಂಪೂರ್ಣವಾಗಿ ಎಲ್ಲಾ ಅರ್ಹರ ಖಾತೆಗೆ ಮೂರನೇ ಕಂತಿನ ಹಣವು ಕೂಡ ವರ್ಗಾವಣೆ ಆಗಲಿದೆ. ಆದರೆ ಗೃಹಲಕ್ಷ್ಮಿ ಯೋಜನೆ ಹಣ ವರ್ಗಾವಣೆಯಾಗಲು ಆರಂಭಿಸಿದ ಮೊದಲ ದಿನದಿಂದಲೂ ಕೇಳಿ ಬರುತ್ತಿರುವ ಈ ಯೋಜನೆಯ ಕುರಿತ ಸಾಕಷ್ಟು ದೋಷಗಳು ಏನೆಂದರೆ.
ಕೆಲವು ಮಹಿಳೆಯರಿಗೆ SMS ಸಂದೇಶ ಬಂದಿದ್ದರು ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗಿಲ್ಲ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕೂಡ ಇದಕ್ಕೆ ಮೊದಲ ಕಂತಿನ ಹಣ ವಂಚಿತರಾದ ಸಮಯದಲ್ಲಿಯೇ ಸೂಚನೆ ಕೊಟ್ಟಿತ್ತು. ಮಹಿಳೆಯರು ಬ್ಯಾಂಕ್ ಖಾತೆ ಆಕ್ಟಿವ್ ಆಗಿ ಇಟ್ಟುಕೊಳ್ಳದೆ ಇರುವುದು ಅಥವಾ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ NPCI ಮ್ಯಾಪಿಂಗ್ ಆಗಿರದ ಕಾರಣ ಹಣ ವರ್ಗಾವಣೆ ಮಾಡಲು ಸಮಸ್ಯೆ ಆಗುತ್ತಿದೆ, ಇದನ್ನು ತಿದ್ದುಪಡಿ ಮಾಡಿಸಿಕೊಳ್ಳಿ.
ಇದರ ಜೊತೆಗೆ ನೀಡಿರುವ ದಾಖಲೆಗಳಲ್ಲಿ ಹೆಸರಿನ ವ್ಯತ್ಯಾಸವಾಗಿರುವ ಕಾರಣದಿಂದಲೂ ಕೂಡ ಹಣ ವರ್ಗಾವಣೆ ಆಗುತ್ತಿಲ್ಲ ಎಲ್ಲಾ ದಾಖಲೆಗಳಲ್ಲೂ ಒಂದೇ ಹೆಸರಿರುವಂತೆ ತಿದ್ದುಪಡಿ ಮಾಡಿಸಿಕೊಳ್ಳಿ ಎಂದು ಇಲಾಖೆ ಅಧಿಕಾರಿಗಳು ಹೇಳಿದ್ದರು.
ಅಂತೆಯೇ ಸಮಸ್ಯೆ ಇದ್ದ ಲಕ್ಷಾಂತರ ಮಹಿಳೆಯರು ತಿದ್ದುಪಡಿ ಮಾಡಿಸಿಕೊಂಡು ಮೊದಲನೇ ಕಂತಿನ ಹಣ ಪಡೆಯಲು ವಂಚಿತರಾದಕ್ಕಿದ್ದವರು ಎರಡನೇ ಕಂತಿನ ಹಣದ ಸಮಯದಲ್ಲಿ ಎರಡು ಕಂತುಗಳ 4,000ರೂ. ಹಣವನ್ನು ಒಟ್ಟಿಗೆ ಪಡೆದಿರುವ ಉದಾಹರಣೆ ಇದೆ.
ಅಂತೆಯೇ ಈಗ ಮೂರನೇ ಕಂತಿನ ಹಣ ವರ್ಗಾವಣೆ ಸಮಯದಲ್ಲಿ ಇನ್ನು ಹೆಚ್ಚಿನ ಫಲಾನುಭವಿಗಳ ಖಾತೆಗೆ ಹಣ ತಲುಪಿಸಲು ಸರ್ಕಾರ ಶ್ರಮಿಸುತ್ತಿದೆ. ಆ ಪ್ರಕಾರವಾಗಿ ಈ ಬಾರಿ ಕೂಡ ಲಕ್ಷಾಂತರ ಮಹಿಳೆಯರ ಸಮಸ್ಯೆಗಳು ಪರಿಹಾರವಾಗಿ ಒಟ್ಟಿಗೆ ಅವರಿಗೆ ಮೂರು ಕಂತಿನ 6,000 ಯನ್ನು ಸರ್ಕಾರ ಜಮೆ ಮಾಡುತ್ತಿದೆ. ಈ ಸಂಬಂಧಿತ ಮಾಹಿತಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ (KWCWD) ಮೂಲಗಳು ಹಂಚಿಕೊಂಡಿದೆ.
ಒಂದು ವೇಳೆ ಈಗಲೂ ಕೂಡ ಹಣ ಬಂದಿಲ್ಲದೆ ಇದ್ದವರು ಕೆಲವೇ ದಿನಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು (CM Siddaramaih) ನೀಡಿದ ಸೂಚನೆಯಂತೆ ಆಯಾ ಗ್ರಾಮ ಪಂಚಾಯಿತಿಯಲ್ಲಿ ನಡೆಸಲಾಗುವ ಗೃಹಲಕ್ಷ್ಮಿ ಅದಾಲತ್ (Gruhalakshmi Adalath) ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಸಹಾಯದಿಂದ ಸಮಸ್ಯೆ ಬಗೆಹರಿಸಿಕೊಂಡು ಹಣ ಪಡೆಯಬಹುದು.
ಇನ್ನು ಕೆಲವು ಮಹಿಳೆಯರಿಗೆ ಅವರ ಖಾತೆಗೆ ಹಣ ಹೋಗುತ್ತಿದ್ದರು SMS ಸಂದೇಶ ಬರದಿದ್ದ ಕಾರಣದಿಂದಾಗಿ ಹಣ ಬಂದಿಲ್ಲ ಎಂದುಕೊಳ್ಳುತ್ತಿದ್ದಾರೆ. ಆದ್ದರಿಂದ ಮಹಿಳೆಯರು SMS ಗಾಗಿ ಕಾಯದೆ ತಮ್ಮ ಬ್ಯಾಂಕ್ ಶಾಖೆಗಳಿಗೆ ಹೋಗಿ ಸ್ಟೇಟ್ಮೆಂಟ್ ಪಡೆಯುವ ಮೂಲಕ ಹಣ ವರ್ಗಾವಣೆ ಆಗಿದೆ ಎನ್ನುವುದನ್ನು ದೃಢಪಡಿಸಿಕೊಳ್ಳಬಹುದು.