ಕರ್ನಾಟಕ ರಾಜ್ಯದ ಎಲ್ಲಾ ಕುಟುಂಬಗಳಿಗೂ ಕೂಡ ಗೃಹಬಳಕೆ ವಿದ್ಯುತ್ 200 ಯೂನಿಟ್ ಗಳ ಉಚಿತವಾಗಿ ಸಿಗುತ್ತಿದೆ. ಇಂತಹದೊಂದು ಭರವಸೆಯನ್ನು ಕಾಂಗ್ರೆಸ್ ಸರ್ಕಾರವು ನೀಡಿದೆ. ಯಾಕೆಂದರೆ, 2023ರ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ವೇಳೆ ಪಕ್ಷವು ಹೊರಡಿಸಿದ್ದ ಗ್ಯಾರಂಟಿ ಕಾರ್ಡ್ ಯೋಜನೆಗಳಲ್ಲಿ ಇದೇ ಮೊದಲನೇ ಯೋಜನೆ ಆಗಿತ್ತು.
ಕರ್ನಾಟಕವನ್ನು ಕತ್ತಲೆ ಮುಕ್ತ ಮಾಡುವ ಉದ್ದೇಶದಿಂದ ಗೃಹಜೋತಿ ಯೋಜನೆ ಅಡಿ ಕರ್ನಾಟಕದ ಖಾಯಂ ನಿವಾಸಿಗಳಾಗಿರುವ ಎಲ್ಲಾ ಕುಟುಂಬಗಳಿಗೂ ಕೂಡ ಗೃಹಬಳಕೆಯ ವಿದ್ಯುತ್ ಅನ್ನು ಉಚಿತವಾಗಿ ಕೊಡುತ್ತೇವೆ ಎಂದು ಭರವಸೆ ನೀಡಿದ್ದ ಕಾರಣ ಈಗ ಅದನ್ನು ಅನುಷ್ಠಾನಕ್ಕೆ ತರುತ್ತಿದೆ. ಜುಲೈ ತಿಂಗಳಲ್ಲಿ ಗ್ರಾಹಕರು ಬಳಸಿದ ವಿದ್ಯುತ್ ಗೆ ಆಗಸ್ಟ್ ತಿಂಗಳಲ್ಲಿ ಬಿಲ್ ನೀಡುತ್ತಿದ್ದರು.
ಈ ಆಗಸ್ಟ್ ತಿಂಗಳಿನಿಂದ ನೀಡುವ ವಿದ್ಯುತ್ ಬಿಲ್ಲನ್ನು ಸರ್ಕಾರವೇ ಭರಿಸಲಿದೆ ಮತ್ತು ಗ್ರಾಹಕರಿಗೆ ಶೂನ್ಯ ಬಿಲ್ ನೀಡಲಿದೆ ಈಗಾಗಲೇ ಮುಖ್ಯಮಂತ್ರಿಗಳು ತಮ್ಮ ಕ್ಯಾಬಿನೆಟ್ ಜೊತೆಗೆ ಚರ್ಚಿಸಿ ಇವುಗಳ ನಿಬಂಧನೆಗಳು ಮತ್ತು ಮಾರ್ಗಸೂಚಿಗಳ ಬಗ್ಗೆ ಆದೇಶ ಪತ್ರವನ್ನು ಕೂಡ ಹೊರಡಿಸಿದ್ದಾರೆ. ಕರ್ನಾಟಕಕ್ಕೆ ವಿದ್ಯುತ್ ಸರಬರಾಜು ಮಾಡುತ್ತಿರುವ ಕಂಪನಿಗಳ ಜೊತೆ ಚರ್ಚಿಸಿರುವ ವಿದ್ಯುತ್ ಇಲಾಖೆಯ ಸಚಿವರು ಕೂಡ ಇದರ ಸಾಧಕ ಬಾಧಕಗಳ ವಿವರಗಳನ್ನು ಸರ್ಕಾರಕ್ಕೆ ನೀಡಿದ್ದಾರೆ.
ಅದರ ಪ್ರಕಾರವಾಗಿ ಸದ್ಯಕ್ಕೆ ಈಗ 2.16 ಕೋಟಿ ಕುಟುಂಬಗಳು ಈ ಯೋಜನೆಗೆ ಒಳಪಡುತ್ತಿದ್ದು ಅದರಲ್ಲಿ 2 ಲಕ್ಷಕ್ಕಿಂತ ಹೆಚ್ಚು ಮಂದಿ ಈ ಗರಿಷ್ಠ ಮಿತಿ 200 ಯೂನಿಟ್ ಕಿಂತ ಹೆಚ್ಚು ಬಳಸುತ್ತಿದ್ದಾರೆ ಎನ್ನುವ ವಿವರ ಸರ್ಕಾರಕ್ಕೆ ಸಿಕ್ಕಿದೆ. ಈ ಯೋಜನೆ ಆದೇಶಪತ್ರದಲ್ಲಿ ತಿಳಿಸಿರುವ ಸ್ಪಷ್ಟ ಆದೇಶದ ಪ್ರಕಾರ ಕಳೆದ ಒಂದು ಆರ್ಥಿಕ ವರ್ಷದಲ್ಲಿ ಬಳಸಿರುವ ಸರಾಸರಿ ವಿದ್ಯುತ್ ಕಿಂತ 10% ಮಾತ್ರ ವಿದ್ಯುತ್ತನ್ನು ಬಳಸಬಹುದಾಗಿತ್ತು.
ಅದಕ್ಕಿಂತಲೂ ಹೆಚ್ಚಿನ ವಿದ್ಯುತ್ ಬಳಸಿದವರು ಮತ್ತು 200 ಯೂನಿಟ್ ಕಿಂತ ಹೆಚ್ಚು ವಿದ್ಯುತ್ ಬಳಸಿದವರು ಬಿಲ್ ಅನ್ನು ಪಾವತಿ ಮಾಡಬೇಕಾಗುತ್ತದೆ. ಬಾಡಿಗೆ ಮನೆಗಳಲ್ಲಿ ವಾಸಿಸುವವರಿಗೆ ಹಾಗೂ ಹೊಸ ಮನೆ ನಿರ್ಮಾಣ ಮಾಡಿರುವವರಿಗೆ ಈ ವಿಷಯವಾಗಿ ಗೊಂದಲವಿತ್ತು, ಆದರೆ ಸದ್ಯಕ್ಕೀಗ ಅವರು ಈಗ ಯೋಜನೆ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.
ಜೊತೆಗೆ ಬಾಡಿಗೆ ಮನೆಗಳಲ್ಲಿ ವಾಸಿಸುವವರು ಈ ಯೋಜನೆಯ ಫಲಾನುಭವಿಗಳಾಗಿದ್ದರೆ ಕರಾರು ಪತ್ರವನ್ನು ದಾಖಲೆಯಾಗಿ ಸಲ್ಲಿಸಬೇಕು. ಹಾಗೆ ಈ ಯೋಜನೆಯ ಪ್ರಯೋಜನ ಪಡೆಯಲು ಎಲ್ಲರೂ ಆಧಾರ್ ಸಂಖ್ಯೆಯನ್ನು ವಿದ್ಯುತ್ ಕಸ್ಟಮರ್ ಐಡಿ ಜೊತೆಗೆ ಲಿಂಕ್ ಮಾಡಬೇಕು ಎನ್ನುವುದನ್ನು ಕಡ್ಡಾಯಗೊಳಿಸಿದೆ. ಈ ರೀತಿ ಗ್ರಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುವುದು ಮತ್ತು ಕಸ್ಟಮರ್ ಐಡಿ ಅಥವಾ ಆರ್.ಆರ್ ಸಂಖ್ಯೆಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದನ್ನು ಮನೆಯಲ್ಲಿಯೇ ಮೊಬೈಲ್ ಮೂಲಕ ಅಥವಾ ಪರ್ಸನಲ್ ಕಂಪ್ಯೂಟರ್ ಮೂಲಕ ಮಾಡಬಹುದಾಗಿದೆ.
ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಕೇಂದ್ರಗಳಲ್ಲಿ ಸೇವಾ ಸಿಂಧು ಪೋರ್ಟಲ್ ಮೂಲಕ ನೋಂದಣಿ ಮಾಡಬಹುದಾಗಿದೆ. ಸೇವಾ ಸಿಂಧುಸೇವೆ ಒದಗಿಸುವುದಕ್ಕೆ ಸರ್ಕಾರವು ವೆಬ್ಸೈಟ್ ಸಿದ್ಧಪಡಿಸುತ್ತಿದ್ದು ಜೂನ್ 18ರಿಂದ ಈ ವೆಬ್ ಸೈಟ್ ಓಪನ್ ಆಗುವ ನಿರೀಕ್ಷೆ ಇದೆ. ಸೇವಾ ಸಿಂಧು ಪೋರ್ಟಲ್ ಅಲ್ಲಿ ರಿಜಿಸ್ಟರ್ ಆಗಿ ಐಡಿ ಪಡೆದು ಆ ಮೂಲಕ ಲಾಗಿನ್ ಆಗಿ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ಸೇವಾ ಸಿಂಧು ಸೇವೆಗಳಿಗೆ ಲಾಗಿನ್ ಆಗಿ ಸರ್ಚ್ ಬಾರ್ ಅಲ್ಲಿ ಗೃಹಜೋತಿ ಯೋಜನೆಯನ್ನು ಸರ್ಚ್ ಮಾಡುವ ಮೂಲಕ ಮುಂದಿನ ಹಂತಗಳನ್ನು ಯಶಸ್ವಿಯಾಗಿ ಪೂರೈಸಿ ಸಂಬಂಧಪಟ್ಟ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಪೂರ್ತಿಗೊಳಿಸಬಹುದು.
ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ.
https://sevasindhugs1.karnataka.gov.in/#