ಸದ್ಯಕ್ಕೆ ರಾಜ್ಯದಲ್ಲಿ ಈಗ ವಿಧಾನಸಭೆ ಎಲೆಕ್ಷನ್ ದೇ ಗುಂಗು. ಎಲ್ಲಾ ಪಕ್ಷಗಳು ಕೂಡ ಪ್ರಣಾಳಿಕೆಗಳಲ್ಲಿ ನಾನಾ ಭರವಸೆಗಳನ್ನು ಕೊಟ್ಟು ಪ್ರಚಾರ ಮಾಡುತ್ತಿದ್ದಾರೆ. ಅದೇ ರೀತಿ ಜೆಡಿಎಸ್ ಪಕ್ಷದ ವರಿಷ್ಠ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಸಹ ಈಗಾಗಲೇ ಸಾಕಷ್ಟು ಭರವಸೆಗಳನ್ನು ಮುಂದಿನ ಎಲೆಕ್ಷನ್ ಗೆಲ್ಲುವ ಸಲುವಾಗಿ ಕರ್ನಾಟಕದ ಜನತೆಗೆ ನೀಡುತ್ತಿದ್ದಾರೆ ನಡುವೆ ಅವರು ಘೋಷಿಸಿರುವ ಈ ಯೋಜನೆ ನಾಡಿನ ಎಲ್ಲರ ಗಮನ ಸೆಳೆದಿದೆ.
ತುಮಕೂರು ಜಿಲ್ಲೆಯ ತಿಪಟೂರು ನಗರದ ಪಂಚರತ್ನ ಯಾತ್ರೆ ಅಲ್ಲಿ ಬಾಗಿಯಾಗಿದ್ದ ಕುಮಾರಸ್ವಾಮಿ ಅವರು ಅಲ್ಲಿಯೇ ಈ ರೀತಿ ಹೊಸದೊಂದು ಘೋಷಣೆ ಘೋಷಿಸಿದ್ದಾರೆ. ಇದನ್ನು ರೈತರ ಮಕ್ಕಳಿಗಾಗಿ ಅವರ ಮದುವೆ ಸಲುವಾಗಿ ಘೋಷಿಸಿದ್ದಾರೆ ಎನ್ನುವುದು ವಿಶೇಷ. ರೈತರಿಗೆ ನಾನಾ ಚಿಂತೆ ಮತ್ತು ಸಮಸ್ಯೆಗಳ ನಡುವೆ ಅವರ ಮಕ್ಕಳನ್ನು ಅಥವಾ ವ್ಯವಸಾಯ ಮಾಡುವವರನ್ನು ಯಾರು ಮದುವೆ ಆಗುತ್ತಿಲ್ಲ ಎನ್ನುವುದು ಮತ್ತೊಂದು ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಈಗಾಗಲೇ ರಾಜ್ಯದಲ್ಲಿ ಸಾಕಷ್ಟು ಬಾರಿ ಈ ಬಗ್ಗೆ ಚರ್ಚೆಗಳು ನಡೆದಿದ್ದರೂ ಇನ್ನೂ ಸಹ ಯಾಕೋ ಹೆಣ್ಣುಮಕ್ಕಳು ವ್ಯವಸಾಯ ಮಾಡುವವರನ್ನು ಮದುವೆಯಾಗಲು ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ ಇದರ ಬಗ್ಗೆ ಮಾತನಾಡಿ, ಸದ್ಯಕ್ಕೆ ರಾಜ್ಯದಲ್ಲಿ ಇದೆ ಒಂದು ಸಮಸ್ಯೆಯಾಗಿ ಕಾಡುತ್ತಿದೆ. ಪ್ರತಿಯೊಂದು ಊರಿನಲ್ಲೂ ನೂರು ಗಂಡು ಮಕ್ಕಳು ಈ ರೀತಿ ಹೆಣ್ಣಿಗಾಗಿ ಕಾಯುತ್ತಿರುವವರು ಸಿಗುತ್ತಿದ್ದಾರೆ. ಇವರನ್ನು ಮದುವೆ ಆಗುವ ಹೆಣ್ಣು ಮಕ್ಕಳನ್ನು ಪ್ರೋತ್ಸಾಹಿಸುವ ಸಲುವಾಗಿ ನಾನು ಈ ಬಾರಿ ಗೆದ್ದು ಗದ್ದಿಗೆ ಏರಿದರೆ.
ಈ ರೀತಿ ರೈತ ಮಕ್ಕಳನ್ನು ಮದುವೆ ಆಗುವ ಹೆಣ್ಣು ಮಕ್ಕಳಿಗೆ ಎರಡು ಲಕ್ಷದವರೆಗೆ ಪ್ರೋತ್ಸಾಹ ಧನ ನೀಡುತ್ತೇನೆ ಎಂದು ಭರವಸೆ ಕೊಟ್ಟಿದ್ದಾರೆ. ಮಣ್ಣಿನ ಮಗ ಮತ್ತು ರೈತರ ಮಗ ಎಂದು ಕರೆಸಿಕೊಂಡಿರುವ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ತಾವು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲೂ ಸಹ ಈ ರೀತಿ ರಾಜ್ಯಕ್ಕೆ ಅನುಕೂಲ ಆಗುವಂತೆ ಮತ್ತು ನೀರಾವರಿ ಹಾಗೂ ಕೃಷಿಗೆ ಸಂಬಂಧಪಟ್ಟಂತೆ ಸಾಕಷ್ಟು ಯೋಜನೆಗಳನ್ನು ತಂದು ರಾಜ್ಯದ ರೈತ ಬಾಂಧವರಿಗೆ ಸಹಾಯ ಆಗಿದ್ದರು.
ಈ ಬಾರಿ ಅವರು ರೈತರ ಮಕ್ಕಳಿಗೆ ಈ ಯೋಜನೆ ಘೋಷಿಸಿರೋದು ಇನ್ನು ವಿಶೇಷ ಎನಿಸಿದೆ. ಇನ್ನು ಮುಂದೆ ಆದರೂ ಹೆಣ್ಣು ಮಕ್ಕಳು ಈ ಸಮಸ್ಯೆ ಅರಿತುಕೊಂಡು ಅಥವಾ ರೈತರ ಮಹತ್ವವನ್ನು ತಿಳಿದುಕೊಂಡು ರೈತ ಮಕ್ಕಳನ್ನು ವರಿಸಲು ಮುಂದೆ ಬಂದರೆ ಅಷ್ಟೇ ಸಾಕು. ಜೊತೆಗೆ ರೈತ ಮಕ್ಕಳ ಈ ಮದುವೆಯ ಕೂಗು ಸರ್ಕಾರದ ವರೆಗೂ ಮುಟ್ಟಿರುವುದು ಕೂಡ ಇಲ್ಲಿ ಆಶ್ಚರ್ಯಕರ ವಿಷಯ ಎನಿಸುತ್ತಿದೆ. ಎಲ್ಲರೂ ರೈತರ ಬಗ್ಗೆ ಮಾತನಾಡುತ್ತಾರೆ, ರೈತರ ಪ್ರಾಮುಖ್ಯತೆ ಬಗ್ಗೆ ತಿಳಿಸುತ್ತಾರೆ, ಕೃಷಿಯನ್ನು ಹಾಡಿ ಕೊಂಡಾಡುತ್ತಾರೆ.
ಆದರೆ ತಾವು ಕೃಷಿ ಮಾಡಲು ಮಾತ್ರ ಕಣಕ್ಕೆ ಇಳಿಯುವುದಿಲ್ಲ, ಜೊತೆಗೆ ಹಳ್ಳಿಗಳಿಗೆ ಮದುವೆಯಾಗಲು ಹಳ್ಳಿಗಳಲ್ಲಿ ವಾಸಿಸಲು ಯಾರು ಸಿದ್ಧರಿಲ್ಲ. ಇದೇ ರೀತಿ ಪರಿಸ್ಥಿತಿ ಮುಂದುವರೆದರೆ ಅದು ದೇಶದ ಆರ್ಥಿಕತೆ ಮಾತ್ರವಲ್ಲದೆ ಸಾಮಾನ್ಯ ಜನ ಜೀವನಕ್ಕೂ ಕೂಡ ದೊಡ್ಡ ಸಂಕಷ್ಟವಾಗಿ ಹೊರಹೊಮ್ಮುತ್ತದೆ. ಹಾಗಾಗಿ ಗ್ರಾಮಗಳ ಮಹತ್ವ ವ್ಯವಸಾಯದ ಮಹತ್ವ ಮತ್ತು ರೈತರ ಮಹತ್ವವನ್ನು ಮನಗಂಡು ಹೆಣ್ಣು ಹೆತ್ತ ಪೋಷಕರು ಮತ್ತು ಹೆಣ್ಣು ಮಕ್ಕಳು ಇನ್ನು ಮುಂದೆ ಒಳ್ಳೆ ರೀತಿ ನಿರ್ಧಾರಗಳನ್ನು ತೆಗೆದುಕೊಂಡರೆ ಅಷ್ಟೇ ಸಾಕು.