ಬಂಗಾರದ ಒಡವೆಗಳನ್ನು ನಾವು ಹೂಡಿಕೆ ಉದ್ದೇಶದಿಂದ ಕೂಡ ಖರೀದಿಸುತ್ತೇವೆ. ಸಾಮಾನ್ಯವಾಗಿ ಭಾರತೀಯರಿಗೆ ಈ ರೀತಿ ಚಿನ್ನದ ಒಡವೆಗಳ ಮೇಲೆ ವ್ಯಾಮೋಹ ಇದ್ದೇ ಇರುತ್ತದೆ. ಅದನ್ನು ಅಲಂಕಾರಕ್ಕಾಗಿ ಪ್ರತಿಷ್ಠೆಗಾಗಿ ಧರಿಸುವುದರ ಜೊತೆಗೆ ಹಣ ಇದ್ದಾಗ ಬಂಗಾರ ಖರೀದಿಸಿದರೆ ಕಷ್ಟಕಾಲದಲ್ಲಿ ಅದು ಕಾಯುತ್ತದೆ ಎನ್ನುವ ಉದ್ದೇಶದಿಂದ ಕೂಡ ಚಿನ್ನವನ್ನು ಖರೀದಿಸುತ್ತೇವೆ.
ಮನುಷ್ಯನಿಗೆ ಅನಿರೀಕ್ಷಿತವಾಗಿ ಅನೇಕ ಕಷ್ಟಗಳು ಬರುತ್ತವೆ ಅಂತಹ ಸಮಯದಲ್ಲಿ ತನ್ನ ಬಳಿ ಇರುವ ಹಣ ಸಾಲದೆ ಹೋದಾಗ ಸಾಲ ಮಾಡುವ ಅನಿವಾರ್ಯತೆ ಬರುತ್ತದೆ. ಇನ್ನೊಬ್ಬರ ಬಳಿ ಸಾಲ ಕೇಳಲು ಮನಸ್ಸು ಇಲ್ಲದೆ ಇರುವವರು ತಮ್ಮ ಬಳಿ ಇರುವ ಆಸ್ತಿ ಅಥವಾ ಓಡವೆಗಳನ್ನು ಅಡ ಇಟ್ಟು ಸಾಲ ಪಡೆಯುತ್ತಾರೆ.
ಅದರಲ್ಲೂ ಮನೆಯಲ್ಲಿ ಇದ್ದರೆ ಚಿನ್ನ ಚಿಂತೆಯು ಏತಕೆ ಇನ್ನ ಎನ್ನುವಂತೆ ಸಂಗ್ರಹಕ್ಕೆ ಅತಿ ಕಡಿಮೆ ಕಾಗದ ಪತ್ರಗಳಲ್ಲಿ ನಿಮ್ಮ ಸಮಯಕ್ಕೆ ಸರಿಯಾಗಿ ಸಾಲ ಸಿಗುತ್ತದೆ. ಆದರೆ ಒಂದು ಮಾತಿದೆ, ಯಾವ ಒಡವೆಯನ್ನು ನಾವು ಅತಿ ಹೆಚ್ಚು ಗಿರವಿಗೆ ಇಡುತ್ತೇವೆ ಅದು ಹಾಗೆ ಕಳೆದು ಹೋಗುತ್ತದೆ ಎಂದು.
ಹಾಗಾಗಿ ಬಂಗಾರ ಅಡ ಇಡುವ ಮುನ್ನ ಬಹಳ ಯೋಚನೆ ಮಾಡಬೇಕು ಆದರೂ ಅನಿವಾರ್ಯವಾಗಿ ಇಡಲೇ ಬೇಕಾದ ಸಂದರ್ಭ ಬಂದಾಗ ಈಗ ನಾವು ಹೇಳುವ ಈ ಉಪಾಯಗಳನ್ನು ಬಳಸಿದರೆ ನೀವು ಅಡ ಇಟ್ಟ ಚಿನ್ನ ಬಿಡಿಸಿಕೊಳ್ಳಲು ನಿಮಗೆ ದಾರಿ ಸಿಗುತ್ತದೆ. ಬಂಗಾರ ಅಡ ಇಟ್ಟು ಬಿಡಿಸಿಕೊಳ್ಳಲಾಗದೆ ಕಷ್ಟಪಡುತ್ತಿರುವುದು ಈ ಸಣ್ಣ ಪ್ರಯೋಗ ಮಾಡಿದರೆ ಸಾಕು, ಮೂರೇ ದಿನದಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ.
ಅದೇನೆಂದರೆ ನೀವು ಚಿನ್ನವನ್ನು ಅಡ ಇಡುವಾಗ ನೀವು ಯಾವುದೇ ಬ್ಯಾಂಕ್ ಅಥವಾ ಫೈನಾನ್ಸ್ ಕಂಪನಿಗಳಲ್ಲಿ ಅಡ ಇಡಲು ಹೋದರು ನೀವು ಹೋಗುವ ಜಾಗಕ್ಕೆ ಎಡಗಾಲಿಟ್ಟು ಹೋಗಬೇಕು, ಅದೇ ರೀತಿ ಬಂಗಾರ ಬಿಡಿಸಿಕೊಳ್ಳುವಾಗ ಬಲಕಾಲಿಟ್ಟು ಬರಬೇಕು. ಇದಕ್ಕೂ ಮುಖ್ಯವಾದ ವಿಚಾರ ಏನೆಂದರೆ ಅಡ ಇಡುವುದಕ್ಕಾಗಿ ಚಿನ್ನ ಕೊಡುವಾಗಲೇ ಮಹಾಲಕ್ಷ್ಮಿಯ ಬಗ್ಗೆ ಬಳಿ ಪ್ರಾರ್ಥನೆ ಮಾಡಿಕೊಂಡು.
ತಾಯಿ ಮಹಾಲಕ್ಷ್ಮಿ ನಮ್ಮನ್ನು ಕ್ಷಮಿಸು ಈ ರೀತಿ ಕಷ್ಟದಿಂದಾಗಿ ನಮ್ಮ ಒಡವೆ ಅಡ ಇಡುತ್ತಿದ್ದೇವೆ ಆದಷ್ಟು ಬೇಗನೆ ನಮಗೆ ಇದನ್ನು ಬಿಡಿಸಿಕೊಳ್ಳುವ ಶಕ್ತಿ ಕೊಡು ತಾಯಿ ಎಂದು ಪ್ರಾರ್ಥಿಸಿದರೆ ತಾಯಿ ಆಶೀರ್ವಾದದಿಂದ ನಿಮಗೆ ಅನಿರೀಕ್ಷಿತ ಧನಲಾಭವಾಗಿ ಬಂಗಾರ ಬಿಡಿಸಿಕೊಳ್ಳುವುದಕ್ಕೆ ದಾರಿ ಸಿಗುತ್ತದೆ.
ಇದರೊಂದಿಗೆ ನೀವು ಒಂದು ಮ್ಯಾಜಿಕರ್ ವರ್ಡ್ ನ್ನು ಹೇಳಿಕೊಳ್ಳುತ್ತಿರಬೇಕು. BRING – GOLD – CLOUDS NOW ಎಂದು ಒಂದು ದಿನದಲ್ಲಿ ಎಷ್ಟು ಬಾರಿ ಸಾಧ್ಯ ಅಷ್ಟು ಬಾರಿ ಇದನ್ನು ಹೇಳುತ್ತಿರಬೇಕು ಇದರ ಜೊತೆಗೆ ಬೆಳಿಗ್ಗೆ ಅಥವಾ ಸಂಜೆ ಭಕ್ತಿಯಿಂದ ಓಂ ಹ್ರೀಂ ಕಮಲೇ ಮೋಕ್ಷಂ ಸಾಧ್ಯ ಐಶ್ವರ್ಯಂ ದೇವಿ ಶ್ರೀ ಓಂ ನಮಃ ಈ ಮಂತ್ರ ಪಠಣೆ ಮಾಡಿದರೆ ನಿಮಗೆ ಯಾವುದಾದರೂ ಒಂದು ರೂಪದಲ್ಲಿ ಹಣ ಒಲಿದು ಬರುತ್ತದೆ.
ಆಗ ನೀವು ನಿಮ್ಮ ಬಂಗಾರವನ್ನು ಬಿಡಿಸಿಕೊಳ್ಳಬಹುದು. ಈ ಉಪಾಯವನ್ನು ಮಾಡುವಾಗ ಬಹಳ ನಂಬಿಕೆಯಿಂದ ಮನಸ್ಸಿನಲ್ಲಿ ಗಟ್ಟಿಯಾಗಿ ಈ ರೀತಿ ಮಾಡುವುದರಿಂದ ನನಗೆ ಯಾವುದಾದರೂ ಒಂದು ರೂಪದಲ್ಲಿ ಹಣ ಉಳಿದು ಬರುತ್ತದೆ ಆಗ ಒಡವೆ ಬಿಡಿಸಿಕೊಳ್ಳುತ್ತೇನೆ ಎಂದು ನಂಬಿಕೆ ಇಟ್ಟು ಮಾಡಬೇಕು ಅಷ್ಟು ನಂಬಿಕೆ ಇದ್ದರೆ ಮಾತ್ರ ಇದು ಫಲ ಕೊಡುತ್ತದೆ.