ಪಾದದ ನೋವು ಮತ್ತು ಹಿಮ್ಮಡಿ ನೋವು ಈ ರೀತಿಯ ನೋವುಗಳು ವಯಸ್ಸಾಗುತ್ತಿದ್ದಂತೆ ಕಾಣಿಸಿಕೊಳ್ಳುತ್ತದೆ. ಇದು ವಯೋ ಸಹಜ ಕಾಯಿಲೆಗಳು. ವಯಸ್ಸಾಗುತ್ತಿದ್ದಂತೆ ದೇಹದ ಶಕ್ತಿ ಕುಂಠಿತವಾಗಿರುತ್ತದೆ, ರಕ್ತ ಕಡಿಮೆ ಆಗಿರುತ್ತದೆ, ಸ್ನಾಯುಗಳು ಕೂಡ ಸವೆದಿರುತ್ತದೆ ಹೀಗಾಗಿ ನೋವುಗಳು ಕಾಣಿಸಿಕೊಳ್ಳುವುದು ಮಾಮೂಲು ಆದ್ದರಿಂದ ಇದು ವೃದ್ಧರ ಖಾಯಿಲೆ ಎಂದು ಹೇಳಲಾಗುತ್ತಿತ್ತು.
ಆದರೆ ಇತ್ತೀಚಿನ ದಿನಗಳಲ್ಲಿ 20 ರ ವಯೋಮಾನದವರಿಗೂ ಕೂಡ ಈ ಸಮಸ್ಯೆ ಕಾಡುತ್ತಿರುವುದನ್ನು ನಾವು ನೋಡಬಹುದು. ಪಾದದ ಹಾಗೂ ಹಿಮ್ಮಡಿ ನೋವಿನ ವಿಪರೀತವಾದ ಸೆಳೆತಕ್ಕೆ ಚಿಕ್ಕ ವಯಸ್ಸಿನವರು ಕೂಡ ಬೇಸತ್ತು ಹೋಗಿರುತ್ತಾರೆ. ಇದಕ್ಕಾಗಿ ಯಾವುದೇ ಸ್ಟಿರಾಯ್ಡ್ ಆಗಲಿ ಅಥವಾ ಔಷಧಿಗಳಾಗಲಿ ಅಥವಾ ಯಾವುದೇ ಚಿಕಿತ್ಸೆ ಮಾಡಿಸಿದರೂ ಕೂಡ ಸಮಸ್ಯೆ ಪರಿಹಾರ ಆಗುತ್ತಿಲ್ಲ, ಕಾಯಿಲೆ ಗುಣವಾಗುತ್ತಿಲ್ಲ ಎನ್ನುವುದಾದರೆ ಈ ಮನೆಮದ್ದುಗಳನ್ನು ಪ್ರಯೋಗಿಸಿ ನೋಡಿ.
ಮೊದಲಿಗೆ ಇತ್ತೀಚೆಗೆ ಎಲ್ಲರಿಗೂ ಈ ರೀತಿ ಪಾದದ ನೋವು ಹಾಗೂ ಹಿಮ್ಮಡಿ ನೋವು ಕಾಣಿಸಿಕೊಳ್ಳಲು ಕಾರಣವೇನು ಎಂದು ನೋಡುವುದಾದರೆ, ಇತ್ತೀಚಿನ ದಿನಗಳಲ್ಲಿ ನಿಂತು ಕೆಲಸ ಮಾಡುವವರ ಸಂಖ್ಯೆ ಹೆಚ್ಚಾಗಿದೆ ಹಾಗೂ ದಿನಪೂರ್ತಿ ಓಡಾಡಿಕೊಂಡು ಇರುತ್ತಾರೆ ಅಂತವರಿಗೆ ಈ ರೀತಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಜೊತೆಗೆ ಸಾಮಾನ್ಯವಾಗಿ ಕುಳಿತುಕೊಳ್ಳುವಾಗ ಕಾಲಿನ ಮೇಲೆ ಹೆಚ್ಚು ಒತ್ತಡ ಬಿಟ್ಟು ಕುಳಿತುಕೊಳ್ಳುವುದರಿಂದ ಕೂಡ ಈ ನೋವು ಬರುತ್ತಿದೆ.
ಇನ್ನೊಂದು ಸಮಸ್ಯೆ ಏನೆಂದರೆ ಇದ್ದಕ್ಕಿದ್ದಂತೆ ದೇಹದ ತೂಕ ಹೆಚ್ಚಾಗುವುದು, ದೇಹದ ತೂಕ ಹೆಚ್ಚಾದಾಗ ಕಾಲಿನ ಮೇಲೆ ಸಹಜವಾಗಿ ಒತ್ತಡ ಬೀಳುತ್ತದೆ ಈ ರೀತಿ ಒತ್ತಡದಿಂದ ಪಾದದ ಕೀಲಿಗೆ ಏಟಾಗಿ ಈ ರೀತಿಯ ನೋವುಗಳು ಕಾಣಿಸಿಕೊಳ್ಳುತ್ತದೆ. ಈ ರೀತಿ ಯಾವುದೇ ಕಾರಣಕ್ಕೂ ನಿಮಗೆ ಪಾದದ ಹಾಗೂ ಹಿಮ್ಮಡಿ ನೋವು ಹಾಗೂ ಕಾಣಿಸಿಕೊಂಡಿದ್ದರೂ ಈಗ ನಾವು ಹೇಳುವ ಈ ಎರಡು ಮನೆಮದ್ದುಗಳನ್ನು ಪ್ರಯೋಗ ಮಾಡಿ ನೋಡಿ.
ನಿಮ್ಮ ನೋವು ಖಂಡಿತವಾಗಿಯೂ ದೂರವಾಗುತ್ತದೆ. ಮೊದಲಿಗೆ ಒಂದು ಬಕೆಟ್ ಅಲ್ಲಿ ಬಿಸಿ ನೀರು ತೆಗೆದುಕೊಳ್ಳಿ ಆ ಬಿಸಿನೀರು ನಿಮ್ಮ ಕಾಲಿಗೆ ಬೀಸಿ ತಡೆಯುವಷ್ಟು ಇರಬೇಕು, ಬಿಸಿಯಾಗಿದ್ದಷ್ಟೂ ತುಂಬಾ ಪರಿಣಾಮಕಾರಿಯಾಗಿ ಇದು ಕೆಲಸ ಮಾಡುತ್ತದೆ. ಆ ಬಿಸಿ ನೀರಿಗೆ ಸೈಂಧವ ದ್ರಾವಣ ಹಾಕಿ ಅದರೊಳಗೆ ನಿಮ್ಮ ಕಾಲಿಟ್ಟು ಬಿಸಿ ಆರುವವರೆಗೂ ಕೂಡ ಹಾಗೆಯೇ ಇಟ್ಟುಕೊಂಡಿರಬೇಕು.
ಈ ರೀತಿ ಮಾಡುವುದರಿಂದ ಪಾದದ ಮತ್ತು ಹಿಮ್ಮಡಿಯ ನೋವನ್ನೆಲ್ಲ ಬಿಸಿನೀರು ಎಳೆದುಕೊಳ್ಳುತ್ತದೆ. ನಿಮಗೆ ನೋವಿನಿಂದ ಪರಿಹಾರ ನೀಡುತ್ತದೆ. ಸಾಧ್ಯವಾದರೆ ದಿನಕ್ಕೆ ಎರಡು ಬಾರಿ ಈ ರೀತಿ ಮಾಡಿ ಬೆಳಗ್ಗೆ ಒಂದು ಬಾರಿ ಹಾಗೂ ರಾತ್ರಿ ಮಲಗು ಮುನ್ನ ಈ ರೀತಿ ಮಾಡುವುದು ತುಂಬಾ ಒಳ್ಳೆಯದು. ಇದರೊಂದಿಗೆ ಇಷ್ಟ ಪರಿಣಾಮಕಾರಿಯಾಗಿ ಕೆಲಸ ಮಾಡುವ ಇನ್ನೊಂದು ಮನೆಮದ್ದು ಕೂಡ ಇದೆ.
ಅದೇನೆಂದರೆ ಪಾದಕ್ಕೆ ಹಾಗೂ ಹಿಮ್ಮಡಿಗೆ ಒಂದು ಲೇಪನ ಹಚ್ಚಬೇಕು. ಆ ಲೇಪನವನ್ನು ಈ ರೀತಿ ತಯಾರಿಸಿಕೊಳ್ಳಬೇಕು. 500 ಗ್ರಾಂ ಹೊಂಗೆ ಬೀಜದ ಪುಡಿಗೆ, 300 ಗ್ರಾಂ ಪಚ್ಚೆ ಕರ್ಪೂರ ಹಾಕಿ ಒಂದು ಲೀಟರ್ ನೀಲಗಿರಿ ಎಣ್ಣೆಯ ಜೊತೆ ಬಿಸಿ ಮಾಡಿ ಪೇಸ್ಟ್ ಮಾಡಿ ಇಟ್ಟುಕೊಳ್ಳಬೇಕು. ದಿನ ರಾತ್ರಿ ಈ ಮೇಲೆ ತಿಳಿಸಿದಂತೆ ಬಿಸಿ ನೀರಿನ ಆರೈಕೆ ಆದ ಮೇಲೆ ಪಾದಗಳಿಗೆ ಈ ಲೇಪನವನ್ನು ಚೆನ್ನಾಗಿ ಹಚ್ಚಿ ಮೇಲೆ ಹಗುರವಾದ ಬಟ್ಟೆ ಸುತ್ತಿಕೊಂಡು ಮಲಗಬೇಕು. ಈ ರೀತಿ ಮಾಡುತ್ತಾ ಬಂದರೆ ಶೀಘ್ರವಾಗಿ ನಿಮ್ಮ ನೋವು ಕಡಿಮೆ ಆಗುತ್ತದೆ. ಇದರೊಂದಿಗೆ ದೇಹದ ತೂಕ ಹೆಚ್ಚಾಗಿದ್ದರೆ, ತೂಕ ಕಡಿಮೆ ಮಾಡಿಕೊಳ್ಳುತ್ತ ಕೂಡ ಗಮನ ಕೊಡಬೇಕು.