ಹೃ.ದ.ಯಾ.ಘಾ.ತ ಆಗುವುದಕ್ಕೂ ಮುನ್ನ ಸಿಗುವ ಸೂಚನೆಗಳು ಇವು. ಆಗ ಏನ್ ಮಾಡಬೇಕು ಗೊತ್ತಾ.? ಒಂದು ಕಾಲ ಇತ್ತು, ಆ ಕಾಲದಲ್ಲಿ ವೃದ್ದ ತಂದೆ ತಾಯಿಗಳನ್ನು ಮಕ್ಕಳು ಹೃದಯದ ತಪಾಸಣೆಗೆ ಅಥವಾ ಹೃದಯ ಸಮಸ್ಯೆಗೆ ಚಿಕಿತ್ಸೆಗೆ ಎಂದು ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗುತ್ತಿದ್ದರು. ಈಗ ಜೀವನ ಶೈಲಿ ಎಷ್ಟು ಬದಲಾಗಿ ಹೋಗಿದೆ ಎಂದರೆ 25ರಿಂದ 40ರ ವಯಸ್ಸಿನ ಯುವಜನತೆಯೇ ಹೃದಯ ಸಂಬಂಧಿತ ಸಮಸ್ಯೆಗಳಿಗಾಗಿ ಹಾಗೂ ಅದರ ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ತಿರುಗುವಂತಾಗಿದೆ.
50 ವರ್ಷದ ಹಿಂದೆ ಶೇಕಡ ಮೂರರಷ್ಟು ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದ ಭಾರತೀಯ ಜನತೆ ಶೇಕಡವಾರು ಇಂದು 8% ಅಷ್ಟಾಗಿ ಹೋಗಿದೆ. ಶ್ರೀಮಂತರ ಕಾಯಿಲೆ ಎಂದು ಕರೆಸಿಕೊಳ್ಳುತ್ತಿದ್ದ ಹೃದಯದ ಕಾಯಿಲೆ ಇಂದು ಬಡವ ಬಲ್ಲಿದ ಪೌರಕಾರ್ಮಿಕ ನಿರ್ಗತಿಕ ಎನ್ನುವ ಭೇದ ಭಾವ ಇಲ್ಲದೆ ಎಲ್ಲರನ್ನು ಕಾಡುತ್ತಿದೆ.
ಇದಕ್ಕೆ ಕಾರಣವಾಗಿರುವ ಪ್ರಮುಖ ಐದು ಅಂಶಗಳನ್ನು ಮೊದಲು ತಿಳಿದುಕೊಳ್ಳಬೇಕು. ಅತಿಯಾದ ರಕ್ತದೊತ್ತಡ, ಅತಿಯಾದ ಬ್ಲಡ್ ಶುಗರ್, ದೇಹದ ಅತಿಯಾದ ತೂಕ, ಅತಿಯಾದ ಮಧ್ಯಪಾನ ಹಾಗೂ ಧೂಮಪಾನ ಸೇವನೆ ಹಾಗೂ ಅತಿಯಾದ ಆಸೆ. ಅತಿಯಾದ ಆಸೆಯಿಂದ ಅತಿಯಾದ ಒತ್ತಡ ಈ 5 ಕಾರಣಗಳೇ ಹೃದಯ ಸಮಸ್ಯೆಯನ್ನು ತಂದೊಟ್ಟುವ ಮಹಾ ಕಂಠಕಗಳು.
ಇದಕ್ಕೆ ಸೇರ್ಪಡೆ ಆಗಿರುವ ಮತ್ತೊಂದು ಹೊಸ ಅಂಶ ಎಂದರೆ ವಾಯುಮಾಲಿನ್ಯ. ವಾಯು ಮಾಲಿನ್ಯವನ್ನು ಹೊಸ ತಂಬಾಕು ಎಂದು ಕೂಡ ಕರೆಯುತ್ತಾರೆ. ಸಂಶೋಧನೆಗಳ ಪ್ರಕಾರ ವಾಯುಮಾಲಿನ್ಯವೂ ಕೂಡ ಶ್ವಾಸಕೋಶಕ್ಕೆ ಮಾತ್ರವಲ್ಲದೇ ಹೃದಯದ ಆರೋಗ್ಯಕ್ಕೂ ಕೆಡುಕನ್ನು ಉಂಟು ಮಾಡುತ್ತಿದೆ. ಇದರ ಬಗ್ಗೆಯೂ ಸಹ ಎಚ್ಚರದಿಂದ ಇರಬೇಕು. ಇನ್ನು ಹೃ.ದ.ಯ.ಘಾ.ತ ಆಗುವ ಮುನ್ನ ಕೆಲವು ಸೂಚನೆಗಳು ಸಿಗುತ್ತದೆ.
ಕೆಲವರಿಗೆ ಹೃ.ದ.ಯ.ಘಾ.ತ ಆಗುವ ಸ್ವಲ್ಪ ಸಮಯದ ಮುಂಚೆ ಎದೆಯ ಎಡ ಭಾಗದಲ್ಲಿ ನೋವು ಬಂದರೆ ಕೆಲವರಿಗೆ ಎದೆಯ ಮಧ್ಯಭಾಗದಲ್ಲಿ ನೋವು ಬರುತ್ತದೆ, ಕೆಲವರಿಗೆ ಬರಿ ಎದೆ ಉರಿ ಕಾಣಿಸಿಕೊಂಡು ನಂತರ ಹಾರ್ಟ್ಅಟ್ಯಾಕ್ ಆಗಿರುವ ಉದಾಹರಣೆಗಳು ಇವೆ. ಹಾಗಾಗಿ ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳ ಲಕ್ಷಣಗಳನ್ನು ಚೆನ್ನಾಗಿ ಅರಿತುಕೊಂಡು ಪ್ರಾಥಮಿಕ ಹಂತದಲ್ಲಿ ಅದರ ಕಡೆಗೆ ಗಮನ ಕೊಟ್ಟು ಸುಧಾರಿಸಿಕೊಳ್ಳುವುದು ಬಹಳ ಮುಖ್ಯ.
ಸಾಮಾನ್ಯವಾಗಿ ಓಡಾಡುವಾಗ, ಮೆಟ್ಟಿಲು ಹತ್ತುವಾಗ ಎದೆ ಭಾಗದಲ್ಲಿ ನೋವು ಬರುತ್ತಾ ಇದೆ ಎಂದರೆ ಆಗ ಹೃದಯಕ್ಕೆ ಏನೋ ಸಮಸ್ಯೆ ಇದೆ ಎಂದು ಅರ್ಥ ಮಾಡಿಕೊಳ್ಳಬೇಕು. ಎಲ್ಲರಿಗೂ ಹೃದಯ ನೋವು ಬಂದ ನಂತರ ಹೃ.ದ.ಯ.ಘಾ.ತ ಆಗುವುದಿಲ್ಲ. ಕೆಲವರಿಗೆ ಹೊಟ್ಟೆ ನೋವು, ವಾಂತಿ, ಹೊಟ್ಟೆ ಉರಿ ಅಥವಾ ದವಡೆ ನೋವು, ಬೆನ್ನು ನೋವು ಈ ರೀತಿ ಕಾಣಿಸಿಕೊಂಡು ಹೃದಯಘಾತ ಆಗಿದೆ.
ಹೃದಯದ ರಕ್ತನಾಳಗಳಲ್ಲಿ 70 ಪರ್ಸೆಂಟ್ ಅಷ್ಟು ಸಮಸ್ಯೆಗಳಾದಾಗ ಹೃದಯದ ನೋವು ಕಾಣಿಸಿಕೊಳ್ಳುತ್ತದೆ ಅದು ನೂರಕ್ಕೆ ನೂರರಷ್ಟು ಆದಾಗ ಹೃ.ದ.ಯ.ಘಾ.ತ ಆಗಿ ಬಿಡುತ್ತದೆ. ಹಾಗಾಗಿ ಇದು ತೋರುವ ಲಕ್ಷಣಗಳನ್ನು ನಿರ್ಲಕ್ಷ ಮಾಡದೆ ತಕ್ಷಣ ಆಸ್ಪತ್ರೆಗೆ ಹೋಗಬೇಕು. ನಿಖರವಾಗಿ ಪ್ರಥಮ ಚಿಕಿತ್ಸೆ ಮಾಡುವುದು ಗೊತ್ತಿದ್ದರೆ ಪ್ರಥಮ ಚಿಕಿತ್ಸೆ ಮಾಡಿ ಆಸ್ಪತ್ರೆಗೆ ಕರೆದೊಯ್ಯಬೇಕು. ಹೀಗೆ ಮಾಡಿದ್ದಲ್ಲಿ ಹೃ.ದ.ಯ.ಘಾ.ತ ಆಗುವುದನ್ನು ತಪ್ಪಿಸಬಹುದು.
ಜೊತೆಗೆ ಹೃದಯದ ಆರೋಗ್ಯವನ್ನು ಕಾಪಾಡುವುದಕ್ಕೆ ಇರುವ ಒಂದೇ ಒಂದು ಉತ್ತಮವಾದ ವ್ಯಾಯಾಮ ಎಂದರೆ ನಡೆಯುವುದು ಮನುಷ್ಯ ಎಷ್ಟು ಕೆಲಸ ಮಾಡುತ್ತಾನೋ ಅಷ್ಟು ಆರೋಗ್ಯಕ್ಕೆ ಒಳ್ಳೆಯದು. ಹಾಗೆ ಹೃದಯದ ಆರೋಗ್ಯಕ್ಕಾಗಿ ಕನಿಷ್ಠ 40 ನಿಮಿಷದಿಂದ ಒಂದು ಗಂಟೆವರೆಗೆ ಆದರೂ ದಿನದಲ್ಲಿ ನಡೆಯಬೇಕು ಹೀಗೆ ಮಾಡಿದ್ದೇ ಆದರೆ ದೇಹದ ಆರೋಗ್ಯ ಮತ್ತು ಹೃದಯದ ಆರೋಗ್ಯ ಉತ್ತಮಗೊಳ್ಳುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ನೋಡಿ.