ಕುಟುಂಬದ ನಡುವೆ ಹಣ ಆಸ್ತಿಗೆ ಸಂಬಂಧಪಟ್ಟ ಯಾವುದಾದರು ವಿಚಾರ ಬಂದಾಗ ವಂಶಾವಳಿ ಪ್ರಮಾಣ ಪತ್ರವನ್ನು (Family Tree Certificate) ಒಂದು ಪ್ರಮುಖ ದಾಖಲೆಯಾಗಿ ಕೇಳುತ್ತಾರೆ. ಪ್ರತಿಯೊಬ್ಬ ಸಾಮಾನ್ಯ ನಾಗರಿಕನು ಕೂಡ ಈ ವಿಚಾರದ ಬಗ್ಗೆ ತಿಳಿದುಕೊಂಡಿರಲೇಬೇಕು.
ಹಾಗಾಗಿ ಈ ಅಂಕಣದಲ್ಲಿ ವಂಶಾವಳಿ ಪ್ರಮಾಣ ಪತ್ರ ಎಂದರೆ ಏನು? ಇದರ ಅವಶ್ಯಕತೆ ಯಾವ ಸಂದರ್ಭದಲ್ಲಿ ಬರುತ್ತದೆ? ವಂಶಾವಳಿ ಪ್ರಮಾಣ ಪತ್ರ ಪಡೆದುಕೊಳ್ಳಲು ಹೇಗೆ ಅರ್ಜಿ ಸಲ್ಲಿಸಬೇಕು? ಅರ್ಜಿ ಸಲ್ಲಿಸುವ ಸಮಯದಲ್ಲಿ ನೀಡಬೇಕಾದ ದಾಖಲೆ ಪತ್ರಗಳು ಏನು? ಎನ್ನುವ ಎಲ್ಲ ಮಾಹಿತಿಯನ್ನು ತಿಳಿಸಿ ಕೊಡುತ್ತಿದ್ದೇವೆ.
ತಪ್ಪದೆ ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ. ಒಂದು ಕುಟುಂಬದಲ್ಲಿ ಬರುವ ರಕ್ತ ಹಂಚಿಕೊಂಡು ಹುಟ್ಟಿರುವ ಎಲ್ಲ ಸಂಬಂಧಗಳನ್ನು ಗುರುತಿಸುವ ಪ್ರಮಾಣ ಪತ್ರ ಎಂದು ಹೇಳಬಹುದು ನಮ್ಮ ರಾಜ್ಯದಲ್ಲಿ ಕಂದಾಯ ಇಲಾಖೆಯು ಈ ಪತ್ರಗಳನ್ನು ನೀಡುತ್ತದೆ.
ಈ ಸುದ್ದಿ ಓದಿ:- ಕೇವಲ 2 ಘಂಟೆ ಕೆಲಸ ಮಾಡಿದರೆ ಸಾಕು, 80 ಸಾವಿರ ಸುಲಭವಾಗಿ ಸಂಪಾದನೆ ಮಾಡಬಹುದು.!
ಇದನ್ನು ನೀಡುವ ಪ್ರಮುಖ ಅಧಿಕಾರಿಯು ನಾಡ ಕಚೇರಿಯ ಉಪತಹಶಿಲ್ದಾರ್ ಆಗಿರುತ್ತಾರೆ. ಹೀಗಿದ್ದರೂ ನಿಮ್ಮ ಗ್ರಾಮ ಆಡಳಿತ ಅಧಿಕಾರಿ (V.O) ಮತ್ತು ಕಂದಾಯ ನಿರೀಕ್ಷಕರ (RI) ವರದಿ ಪಡೆಯುವುದು ಕೂಡ ಮುಖ್ಯ.
ವಂಶಾವಳಿ ಪ್ರಮಾಣ ಪತ್ರದ ಅಗತ್ಯತೆಗಳು:-
* ಪಿತ್ರಾರ್ಜಿತವಾಗಿ ಬರುವ ಮನೆ, ಜಮೀನು ಇತ್ಯಾದಿ ಎಲ್ಲಾ ಆಸ್ತಿಗಳನ್ನು ವಿಭಾಗ ಮಾಡಿಕೊಳ್ಳುವಾಗ ವಂಶಾವಳಿ ಪ್ರಮಾಣ ಪತ್ರದ ಅವಶ್ಯಕತೆ ಇರುತ್ತದೆ
* ಕುಟುಂಬದಲ್ಲಿ ಆಸ್ತಿಗೆ ಸಂಬಂಧಿಸಿದ ಯಾವುದಾದರು ತಂಟೆ ತಕರಾರು ಇದ್ದರೆ ಕೋರ್ಟ್ ನಲ್ಲಿ ಹಕ್ಕು ಸಾಧಿಸಲು ದಾವೆ ಹೂಡುವ ಸಮಯದಲ್ಲಿ ಕೂಡ ಇದನ್ನು ಕೇಳುತ್ತಾರೆ.
* ಕುಟುಂಬದ ಗುರುತಿಗಾಗಿ ಮತ್ತು ಸರ್ಕಾರದಿಂದ ಕುಟುಂಬದ ಪರವಾಗಿ ಯಾವುದಾದರೂ ಅನುದಾನ ಪಡೆಯುವ ಸಂದರ್ಭದಲ್ಲಿ ಕೂಡ ಇದನ್ನು ನೀಡಲೇಬೇಕು.
* ಜಮೀನು ಅಥವಾ ಮನೆಪಾಲು ಮಾಡಿಕೊಳ್ಳುವ ಸಂದರ್ಭದಲ್ಲಿ ಕೂಡ ಈ ದಾಖಲೆಬೇಕು.
* ಬ್ಯಾಂಕ್ ಸಾಲ ಪಡೆದುಕೊಳ್ಳಲು ಯೋಜನಾ ನಿರಾಶ್ರಿತರ ಪರಿಹಾರಗಳನ್ನು ಪಡೆದುಕೊಳ್ಳಲು, ಅನುಕಂಪದ ಆಧಾರದ ಮೇಲೆ ನೌಕರಿ ಪಡೆದುಕೊಳ್ಳಲು ವಂಶಾವಳಿ ಪ್ರಮಾಣ ಪತ್ರ ಕೇಳುತ್ತಾರೆ.
ಇನ್ನಿತರ ಪ್ರಮುಖ ಸಂಗತಿಗಳು:-
* ಆಫ್ ಲೈನ್ ನಲ್ಲಿ ನಾಡಕಚೇರಿಗೆ ಹೋಗಿ ಅಥವಾ ಆನ್ಲೈನ್ ನಲ್ಲಿ ನಾಡಕಚೇರಿ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು
* ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್ ನೀಡುವುದು ಕಡ್ಡಾಯ ಒಂದು ವೇಳೆ ಆಧಾರ್ ಕಾರ್ಡ್ ಇಲ್ಲದೆ ಇದ್ದ ಪಕ್ಷದಲ್ಲಿ ವೋಟರ್ ಐಡಿ ಬಳಸಿ ಕೂಡ ಅರ್ಜಿ ಸಲ್ಲಿಸಬಹುದು. ಆಧಾರ್ ಕಾರ್ಡ್ ಇದ್ದರೆ ಪ್ರಕ್ರಿಯೆ ಸರಳವಾಗಿ ಸಾಗುತ್ತದೆ.
* ವಂಶಾವಳಿ ಪ್ರಮಾಣ ಪತ್ರದಲ್ಲಿ ಮದುವೆ ಆಗಿರುವ ಹೆಣ್ಣು ಮಕ್ಕಳ ಹೆಸರನ್ನು ಕೂಡ ಸೇರಿಸಬೇಕೇ ಎನ್ನುವ ಅನುಮಾನ ಹಲವರಲ್ಲಿ ಇರುತ್ತದೆ. ಹೌದು, ವಿವಾಹವಾಗಿರುವ ಹೆಣ್ಣು ಮಕ್ಕಳು ಮತ್ತು ಆ ಮನೆಯ ಸೊಸೆಯಂದಿರು ಇಬ್ಬರ ಹೆಸರನ್ನು ನಮೂದಿಸಬೇಕು ಹೆಣ್ಣು ಮಕ್ಕಳು ಈ ವಿಚಾರದಲ್ಲಿ ಗಂಡನ ಮನೆ ಹಾಗೂ ತಂದೆಯ ಮನೆ ಎರಡು ಮನೆಯ ವಂಶವೃಕ್ಷದಲ್ಲಿ ಇರುತ್ತಾರೆ.
ಈ ಸುದ್ದಿ ಓದಿ:- LIC ಹೊಸ ಸ್ಕೀಮ್ ಕೇವಲ 121 ರೂಪಾಯಿ ಹೂಡಿಕೆ ಮಾಡಿ ಸಾಕು 27 ಲಕ್ಷ ಸಿಗಲಿದೆ.!
* ವಂಶಾವಳಿ ಪ್ರಮಾಣ ಪತ್ರದಲ್ಲಿ ಇಲ್ರುವ ಎಲ್ಲರಿಗೂ ಆಸ್ತಿ ಪಾಲು ಹೋಗುತ್ತದೆ ಎಂದರೆ ಪಿತ್ರಾರ್ಜಿತ ಆಸ್ತಿ ಆಗಿದ್ದು ಅದು 2005ಕ್ಕೂ ಮುಂಚೆ ವಿಭಾಗವಾಗಿಲ್ಲ ಎಂದರೆ ಹೆಣ್ಣು ಮಕ್ಕಳಿಗೂ ಪಾಲು ಇರುತ್ತದೆ, ಅವರು ಸ್ವಂತ ಇಚ್ಛೆಯಿಂದ ಬಿಟ್ಟುಕೊಡಬಹುದು ಸ್ವಯಾರ್ಜಿತ ಆಸ್ತಿಯಾಗಿದ್ದರೆ ಆಸ್ತಿ ಮಾಲೀಕನ ವಿವೇಚನೆ ಮೇಲೆ ನಿರ್ಧಾರವಾಗುತ್ತದೆ.