ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಕೂಡ ಕೆಲಸದ ಒತ್ತಡದಿಂದ ಹೆಚ್ಚು ಆಯಾಸವನ್ನು ಪಡುತ್ತಿದ್ದಾರೆ. ಹಾಗೂ ಯಾವುದೇ ಒಂದು ವಿಷಯದ ಬಗ್ಗೆ ಹೆಚ್ಚು ಗಾಢವಾಗಿ ಗಮನಿಸುತ್ತಾ ಅಥವಾ ಆ ವಿಷಯ ವಾಗಿ ಹೆಚ್ಚು ಆಲೋಚನೆಯನ್ನು ಮಾಡುವುದರಿಂದ ಅವರಲ್ಲಿ ಅಧಿಕ ರಕ್ತದ ಒತ್ತಡ ಕಾಣಿಸಿಕೊಳ್ಳುತ್ತದೆ. ಅದರಲ್ಲೂ ಇದರಿಂದ ಹಲವಾರು ರೀತಿಯ ಸಮಸ್ಯೆಗಳನ್ನು ಕೂಡ ಅವರು ಎದುರಿಸಬೇಕಾಗುತ್ತದೆ.
ಜೊತೆಗೆ ಅಧಿಕ ರಕ್ತದ ಒತ್ತಡ ಸಮಸ್ಯೆ ಇರುವವರಿಗೆ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಈ ವಿಷಯವಾಗಿ ಅವರು ಜಾಗರೂಕತೆಯಿಂದ ಇರುವುದು ಬಹಳ ಮುಖ್ಯವಾಗಿರುತ್ತದೆ. ಅಧಿಕ ರಕ್ತದ ಒತ್ತಡ ಸಮಸ್ಯೆ ಕೇವಲ ಹೃದಯ ದಲ್ಲಿ ಕಾಣಿಸಿಕೊಳ್ಳುವುದಷ್ಟೇ ಅಲ್ಲದೆ ಮೆದಳು ಪಾಶ್ವ ವಾಯುವಿನಂತಹ ಸಮಸ್ಯೆ ಕೂಡ ಕಾಣಿಸಿಕೊಳ್ಳುತ್ತದೆ.
ಹಾಗಾಗಿ ಇವರು ತಮ್ಮ ಜೀವನ ಶೈಲಿಯಲ್ಲಿ ಕೆಲವೊಂದಷ್ಟು ಬದಲಾವಣೆ ಮಾಡಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಸಾಮಾನ್ಯವಾಗಿ ಆರೋಗ್ಯವಂತ ಪುರುಷ ಹಾಗೂ ಮಹಿಳೆಯ ರಕ್ತದ ಒತ್ತಡವು120/80 ಮಿಲಿ ಮೀಟರ್ ಗಳಷ್ಟು ಇರುತ್ತದೆ. ಇದು ಪ್ರತಿಯೊಬ್ಬರಿಗೂ ಕೂಡ ಒಂದೇ ರೀತಿಯಾಗಿ ಇರುವುದಿಲ್ಲ ಬದಲಿಗೆ ಒಬ್ಬೊಬ್ಬರಲ್ಲಿ ಒಂದೊಂದು ರೀತಿಯಾಗಿ ಇರುತ್ತದೆ. ಆದರೆ ರಕ್ತದ ಒತ್ತಡವು90/60 ಗಿಂತಲೂ ಕಡಿಮೆಯಾದಾಗ ಅದನ್ನು ಕಡಿಮೆ ರಕ್ತದ ಒತ್ತಡ ಅಥವಾ ಲೋ ಬಿಪಿ ಎಂದು ಕರೆಯುತ್ತೇವೆ.
ಅಧಿಕ ರಕ್ತದ ಒತಡವು ಹೇಗೆ ದೇಹದ ಎಲ್ಲಾ ಪ್ರಮುಖ ಅಂಗದ ಮೇಲೆ ತನ್ನ ಪರಿಣಾಮವನ್ನು ಬೀರುತ್ತದೆಯೋ, ಅದೇ ರೀತಿಯಾಗಿ ಕಡಿಮೆ ರಕ್ತದೊತ್ತಡವೂ ಕೂಡ ಅಪಾಯಕಾರಿಯೇ ಆಗಿದೆ. ಇದು ಕೂಡ ನಮ್ಮ ಹೃದಯ ಮೆದುಳು ಹಾಗೂ ಮೂತ್ರಪಿಂಡಗಳ ರಕ್ತ ಪರಿಚಲನೆಯಲ್ಲಿ ತೊಡಕನ್ನು ಉಂಟುಮಾಡುತ್ತದೆ. ಈ ಸಮಸ್ಯೆ ಇದ್ದವರಿಗೆ ಅಧಿಕ ತಲೆ ಸುತ್ತು ಬರುವುದು, ವಾಕರಿಕೆ,ವಾಂತಿ ಮತ್ತು ಮಾನಸಿಕ ಸ್ಥಿತಿಯ ಅಸಮತೋಲನ ದಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.
ಒಟ್ಟಾರೆಯಾಗಿ ಈ ಎಲ್ಲಾ ಸಮಸ್ಯೆಗಳು ಸರಿ ಹೋಗಬೇಕು ಎಂದರೆ ಎಲ್ಲರೂ ಆಸ್ಪತ್ರೆಗಳಿಗೆ ಹೋಗಿ ಔಷಧಿಗಳನ್ನು ತೆಗೆದುಕೊಳ್ಳುತ್ತಾರೆ ಜೊತೆಗೆ ಕೆಲವೊಂದು ಮಾತ್ರೆಗಳನ್ನು ತೆಗೆದುಕೊಳ್ಳು ವುದರ ಮೂಲಕ ಸಮಸ್ಯೆಗಳನ್ನು ಕಡಿಮೆ ಮಾಡಿಕೊಳ್ಳುತ್ತಿರುತ್ತಾರೆ. ಜೊತೆಗೆ ಇನ್ನೂ ಕೆಲವೊಬ್ಬರು ಮನೆಯಲ್ಲಿಯೇ ಕೆಲವೊಂದು ಮನೆ ಮದ್ದುಗಳನ್ನು ಮಾಡಿ ಉಪಯೋಗಿಸುತ್ತಾ ಹೈ ಬಿಪಿ ಹಾಗು ಲೋ ಬಿಪಿ ಸಮಸ್ಯೆಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಂಡಿರುತ್ತಾರೆ.
ಆದರೆ ಈ ದಿನ ಯಾವುದೇ ರೀತಿಯಾದಂತಹ ಮನೆ ಮದ್ದನ್ನು ಔಷಧಿಯನ್ನು ಉಪಯೋಗಿಸದೆ ಸಮಸ್ಯೆಯನ್ನು ಐದು ನಿಮಿಷದಲ್ಲಿ ಹೇಗೆ ಸರಿಪಡಿಸ ಬಹುದು ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳೋಣ. ಲೋ ಬಿಪಿ ಸಮಸ್ಯೆ ಇರುವವರು ಕಪಾಲಭಾತಿ ಪ್ರಾಣಾಯಾಮವನ್ನು ಮಾಡಬೇಕು, ಈ ರೀತಿ ಕಪಾಲಭಾತಿಯನ್ನು ತಕ್ಷಣವೇ ಮಾಡಿದರೆ ಲೋ ಬಿಪಿ ಸಮಸ್ಯೆ ನಿಮಗೆ 5 ನಿಮಿಷದಲ್ಲಿಯೇ ಕಡಿಮೆಯಾಗುತ್ತದೆ.
ಹಾಗಾದರೆ ಹೈ ಬಿಪಿ ಸಮಸ್ಯೆ ಇರುವವರು ಏನು ಮಾಡಬೇಕು ಎಂದು ನೋಡುವುದಾದರೆ. ಅಂಥವರು ಹೊಟ್ಟೆಗೆ ಒಂದು ಬಟ್ಟೆಯನ್ನು ಕಟ್ಟಬೇಕು ನಂತರ ಪ್ರಾಣ ಮುದ್ರೆಯಲ್ಲಿ ಕುಳಿತು ನಾಡಿಶೋಧನವನ್ನು ಮಾಡಬೇಕು ಈ ರೀತಿ 3 ನಿಮಿಷಗಳ ಕಾಲ ನಾಡಿಶೋಧನವನ್ನು ಮಾಡುವುದರಿಂದ ನಿಮ್ಮಲ್ಲಿ ಇರುವಂತಹ ಹೈ ಬಿಪಿ ದೂರವಾಗುತ್ತದೆ. ಒಟ್ಟಾರೆಯಾಗಿ ಯಾವುದೇ ರೀತಿಯ ಪದಾರ್ಥಗಳನ್ನು ಉಪಯೋಗಿ ಸದೆ ಆರೋಗ್ಯಕರವಾದಂತಹ ವಿಧಾನವನ್ನು ಉಪಯೋಗಿಸುವುದರ ಮೂಲಕ ನಿಮ್ಮ ಹೈಬಿಪಿ ಹಾಗೂ ಲೋ ಬಿಪಿ ಸಮಸ್ಯೆಗಳನ್ನು ನಿಯಂತ್ರಣ ಮಾಡಿಕೊಳ್ಳಬಹುದಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.