ಮೊದಲೆಲ್ಲಾ ತುಂಬಾ ವಯಸ್ಸಾದ ಮೇಲೆ ಕಣ್ಣಿನ ಸಮಸ್ಯೆ ಕಾಣಿಸಿಕೊಳ್ಳುತ್ತಾ ಇತ್ತು ಆದರೆ ಈಗೆಲ್ಲ ಚಿಕ್ಕ ಮಕ್ಕಳಿಗೆ ಈ ಒಂದು ಕಣ್ಣಿನ ಸಮಸ್ಯೆ ಕಂಡು ಬರುತ್ತಿದೆ. ಮಧ್ಯಮ ವಯಸ್ಕರಲ್ಲಿಯೂ ಸಹ ಕಣ್ಣಿನ ಸಮಸ್ಯೆಗಳು ಕಂಡುಬರುತ್ತಿದೆ ಬೋರ್ಡ್ ಮೇಲೆ ಬರೆದಿರುವಂತಹ ಅಕ್ಷರಗಳು ಕಾಣಿಸುವುದಿಲ್ಲ ಹಾಗೆಯೇ ಟಿವಿಯಲ್ಲಿ ಬರುವಂತಹ ಸಣ್ಣ ಸಣ್ಣ ಅಕ್ಷರಗಳು ಕಾಣಿಸುತ್ತಾ ಇಲ್ಲ. ಈ ರೀತಿಯಾದಂತಹ ಸಮಸ್ಯೆಗಳು ಇತ್ತೀಚೆಗೆ ಕಾಣಿಸಿಕೊಳ್ಳುತ್ತದೆ ಇದಕ್ಕೆ ಕಾರಣ ನಮ್ಮ ಆಹಾರ ಕ್ರಮ, ನಮ್ಮ ಜೀವನ ಶೈಲಿ, ತುಂಬಾ ಮೊಬೈಲ್ ನೋಡುವುದು, ಹೆಚ್ಚಾಗಿ ಟಿವಿ ನೋಡುವುದು ಹಾಗೆಯೇ ನಮ್ಮ ಆರೋಗ್ಯದ ಬಗ್ಗೆ ನಾವು ಗಮನವನ್ನು ಹರಿಸುತ್ತಿಲ್ಲ. ಈಗಿನ ಬಿಸಿ ಜೀವನದಲ್ಲಿ ಎಲ್ಲರೂ ಸಹ ಆರೋಗ್ಯದ ಮೇಲೆ ಕಾಳಜಿಯನ್ನು ವಹಿಸುತ್ತಿಲ್ಲ ಇದೆಲ್ಲದರಿಂದ ನಮಗೆ ಕೆಲವೊಂದು ಸಮಸ್ಯೆಗಳು ತುಂಬಾ ಬೇಗ ಬರುತ್ತಿದೆ.
5 ರಿಂದ 10 ನಿಮಿಷಗಳ ಕಾಲ ನಾವು ಫ್ರೀ ಮಾಡಿಕೊಂಡು ನಮ್ಮ ಕಣ್ಣಿನ ಆರೋಗ್ಯವನ್ನು ಸಹ ನೋಡಿಕೊಳ್ಳಬೇಕಾಗುತ್ತದೆ ಇತ್ತೀಚಿನ ದಿನಗಳಲ್ಲಿ ಮೊಬೈಲ್ ಗಳು ಇಲ್ಲದೆ 10 ನಿಮಿಷಗಳು ಸಹ ಮೊಬೈಲ್ ಬಿಟ್ಟಿರಲು ಸಾಧ್ಯವಿಲ್ಲ ನಾವು ಏನಾದರೂ ಕಳೆದುಕೊಂಡಿರುತ್ತೇವೆ ಎನ್ನುವಂತೆ ಭಾಸವಾಗುತ್ತದೆ. ಹಾಗೆಯೇ ಸಾಕಷ್ಟು ಜನರು ಹೆಚ್ಚಾಗಿ ಟಿವಿ ನೋಡುವುದು ಹಾಗೆ ಲ್ಯಾಪ್ಟಾಪ್ ಮುಂದೆ ಕೂತು ಕೆಲಸ ಮಾಡುವುದು ಈ ರೀತಿಯಾಗಿ ಮಾಡುತ್ತಿರುತ್ತಾರೆ ಇದರಿಂದ ನಮ್ಮ ಕಣ್ಣಿನ ಮೇಲೆ ಪರಿಣಾಮ ಬೀರುತ್ತದೆ ನಮ್ಮ ಆರೋಗ್ಯವು ಹಾಳಾಗುತ್ತದೆ. ನಮ್ಮ ಕಣ್ಣಿನ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬೇಕಾದರೆ ನಾವು ಕೆಲವೊಂದು ಕಣ್ಣಿಗೆ ಸಂಬಂಧಿಸಿದಂತಹ ಎಕ್ಸರ್ಸೈಜ್ ಗಳನ್ನ ಮಾಡಬೇಕಾಗುತ್ತದೆ.
ದಿನದ ಯಾವುದೇ ಸಮಯದಲ್ಲಿ ಆದರೂ ಸಹ ನೀವು ಈ ಒಂದು ಎಕ್ಸರ್ಸೈಜ್ ಳನ್ನ ಮಾಡಬಹುದಾಗಿದೆ. ಮೊದಲನೇ ಎಕ್ಸರ್ಸೈಜ್ ನೋಡುವುದಾದರೆ ನಾವು ನಮ್ಮ ಕತ್ತನ್ನು ಮೇಲೆ ಮಾಡಿ ನಮ್ಮ ಕಣ್ಣುಗಳನ್ನ ಮಿಟುಕಿಸಬೇಕು ನೀವು ಎಷ್ಟು ಜೋರಾಗಿ ಸಾಧ್ಯವೊ ಅಷ್ಟು ಜೋರಾಗಿ ಕಣ್ಣು ಮಿಟುಕಿಸಬೇಕು. ನಿಮ್ಮ ಕಣ್ಣಿನ ಒಳಗಡೆ ಸಣ್ಣ ಸಣ್ಣ ಧೂಳು ಏನಾದರೂ ಇದ್ದರೆ ಈ ರೀತಿಯಾಗಿ ಮಾಡುವುದರಿಂದ ಕಣ್ಣೀರಿನ ಮೂಲಕ ಅದು ಆಚೆ ಬರುತ್ತದೆ. ನಿಮಗೆ ಕಣ್ಣೀರು ಬಂದರು ಸಹ ನೀವು ಇದನ್ನು ನಿಲ್ಲಿಸಬಾರದು ಹೀಗೆ ಮಾಡುವುದರಿಂದ ಕಣ್ಣೀರಿನ ಮೂಲಕ ಕಣ್ಣಲ್ಲಿ ಇರುವಂತಹ ಕಲ್ಮಶಗಳು ಆಚೆ ಬರಲು ಸಹಾಯ ಮಾಡುತ್ತದೆ. ನಂತರ ನಿಮ್ಮ ಒಂದು ಕೈಯಿಂದ ಒಂದು ಕಣ್ಣನ್ನು ಮುಚ್ಚಿಕೊಂಡು ಒಂದು ಕಣ್ಣನ್ನು ಮಾತ್ರ ಮಿಟುಕಿಸಬೇಕು, ಮತ್ತೊಮ್ಮೆ ಇನ್ನೊಂದು ಕಣ್ಣನ್ನು ಮುಚ್ಚಿಕೊಂಡು ಮತ್ತೊಂದು ಕಣ್ಣನ್ನು ಮಿಟುಕಿಸಬೇಕು.
ಎರಡನೆಯದಾಗಿ ನಿಮ್ಮ ಕಣ್ಣುಗಳನ್ನು ಟೈಟಾಗಿ ಮುಚ್ಚಬೇಕು ನಿಧಾನವಾಗಿ ಬಿಡಬೇಕು ನಿಮ್ಮಿಂದ ಎಷ್ಟು ಟೈಟಾಗಿ ಮುಚ್ಚಲು ಮಾಡಲು ಸಾಧ್ಯವಾಗುತ್ತದೆ ಅಷ್ಟು ಟೈಟ್ ಆಗಿ ನಿಮ್ಮ ಕಣ್ಣನ್ನು ಮುಚ್ಚಬೇಕು. ಹೀಗೆ ಮಾಡುವುದರಿಂದ ನಮ್ಮ ಕಣ್ಣಿಗೆ ಬ್ಲಡ್ ಸರ್ಕ್ಯುಲೇಶನ್ ಚೆನ್ನಾಗಿ ಆಗುತ್ತದೆ ನೀವು ಹತ್ತು ಸಾರಿ ಮಾಡಿದರೆ ಸಾಕು. ನಾವು ವ್ಯಾಯಾಮದ ಜೊತೆಗೆ ಒಳ್ಳೆಯ ಆಹಾರವನ್ನು ಸೇವನೆ ಮಾಡಬೇಕು ನಮ್ಮ ಕಣ್ಣುಗಳ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರೆ ಲ್ಯಾಪ್ಟಾಪ್ ಮುಂದೆ ಹೆಚ್ಚಾಗಿ ಕೂತು ಕೆಲಸ ಮಾಡುವವರು ಸ್ವಲ್ಪ ಹೊತ್ತು ಫ್ರೀ ಮಾಡಿಕೊಂಡು ನಿಮ್ಮ ದೃಷ್ಟಿಯಲ್ಲಿ ಎಷ್ಟು ದೂರದ ತನಕ ಬಿಡಬಹುದೋ ಅಷ್ಟು ದೂರದವರೆಗೆ ನೀವು ನೋಡಿ.