ನರಹುಲಿ ಎನ್ನುವುದು ಮನುಷ್ಯರಿಗೆ ಕಾಡುವ ಒಂದು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆ ಎನ್ನಬಹುದು. ಈ ರೀತಿ ನರಹುಲಿ ಸಮಸ್ಯೆ ಬರಲು ಪ್ರಮುಖ ಕಾರಣ ಎಂದರೆ ಹ್ಯೂಮಿನೋ ಪೆಪೋಲಿಯನ್ ವೈರಸ್ ಎನ್ನುವ ಒಂದು ರೀತಿಯ ವೈರಸ್. ಇದರಿಂದಾಗಿ ದೇಹದ ನಾನಾ ಕಡೆಗಳಲ್ಲಿ ಈ ರೀತಿಯ ನರಹುಲಿಗಳು ಕಂಡುಬರುತ್ತವೆ ಹಾಗೂ ಅವು ಬೆಳವಣಿಗೆ ಕೂಡ ಆಗುತ್ತವೆ. ಕೈಗಳ ಮೇಲೆ, ಬೆನ್ನಿನ ಭಾಗದಲ್ಲಿ, ಕುತ್ತಿಗೆ ಭಾಗದಲ್ಲಿ ಹಾಗೂ ಜನಾಂಗಗಳ ಭಾಗದಲ್ಲಿ ಮತ್ತು ಮುಖದ ಮೇಲೆ ಕೂಡ ಇದು ಕಂಡುಬರುತ್ತದೆ. ಇಂಗ್ಲಿಷಿನಲ್ಲಿ ಈ ಕಾಯಿಲೆಗೆ ಸ್ಕಿನ್ ಟ್ಯಾಗ್ ಎಂದು ಕರೆಯುತ್ತಾರೆ. ಈ ರೀತಿ ನರಹುಲಿ ಸಮಸ್ಯೆ ಇರುವವರ ಪ್ರಮುಖ ಸಮಸ್ಯೆ ಏನೆಂದರೆ ಅದರಿಂದ ದೈಹಿಕವಾಗಿ ಯಾವುದೇ ರೀತಿಯ ನೋವು ಕಂಡು ಬರದೆ ಹೋದರು ಕೂಡ ಇದು ಮುಖದ ಸೌಂದರ್ಯವನ್ನು ಹಾಳು ಮಾಡುವುದರಿಂದ ಇದರ ಬಗ್ಗೆ ತುಂಬಾ ಡಿಸ್ಟರ್ಬ್ ಆಗುತ್ತಾರೆ.
ಇವುಗಳನ್ನು ಲೇಸರ್ ಚಿಕಿತ್ಸೆಯ ಮೂಲಕ ತಜ್ಞ ವೈದ್ಯರನ್ನು ಸಂಪರ್ಕಿಸಿ ಗುಣ ಮಾಡಿಕೊಳ್ಳಬಹುದು. ಆದರೆ ಲೇಸರ್ ಚಿಕಿತ್ಸೆ ಅಷ್ಟೊಂದು ನೋವು ಕೊಡುವುದಿಲ್ಲ ಎನ್ನುವ ಅರಿವು ಎಲ್ಲರಲ್ಲೂ ಇರುವುದಿಲ್ಲ. ಜೊತೆಗೆ ಇದರ ವೆಚ್ಚವು ದುಬಾರಿ ಮತ್ತು ಎಲ್ಲರ ಕೈಗೆ ಎಟಕುವ ಅನುಕೂಲತೆಯಲ್ಲಿ ಚಿಕಿತ್ಸೆ ಇಲ್ಲವಾದ್ದರಿಂದ ಮತ್ತು ಹಳ್ಳಿಗಳ ಪ್ರದೇಶದಲ್ಲಿ ಇರುವವರು ಚಿಕಿತ್ಸೆಗಾಗಿಯೇ ಪಟ್ಟಣಗಳಿಗೆ ಬರಲು ಸಾಧ್ಯವಾಗದೆ ಇರುವುದರಿಂದ ಹಾಗೂ ಹೆಚ್ಚಿನ ಮನೆಗಳಲ್ಲಿ ಇದು ಚಿಕ್ಕ ಸಮಸ್ಯೆ ಎಂದು ಭಾವಿಸಿ, ಚಿಕಿತ್ಸೆಗೆ ಅನುಮತಿ ಕೊಡದೆ ಇರುವುದರಿಂದ ಇಂತಹ ನೂರಾರು ಸಮಸ್ಯೆಗಳಿಂದ ಎಲ್ಲರೂ ಈ ರೀತಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಇದನ್ನು ಗುಣಪಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೆ ಅಂತಹವರು ನಿರಾಸೆ ಹೊಂದುವ ಅಗತ್ಯ ಇಲ್ಲ ಯಾವುದೇ ಚಿಕಿತ್ಸೆ ಇಲ್ಲದೆ ಮನೆಮದ್ದುಗಳಿಂದ ಕೂಡ ಇದನ್ನು ಸಂಪೂರ್ಣವಾಗಿ ಗುಣಪಡಿಸಿಕೊಳ್ಳಬಹುದು.
ನರಹುಲಿ ಸಮಸ್ಯೆಗಳು ಅನಾದಿಕಾಲದಿಂದ ಕೂಡ ಮನುಷ್ಯರನ್ನು ಕಾಡುತ್ತಾ ಇವೆ. ಅದರಲ್ಲೂ ಮಹಿಳೆಯರು ಇದರ ಬಗ್ಗೆ ತುಂಬಾ ಗಾಬರಿಗೆ ಒಳಗಾಗುತ್ತಾರೆ. ಆಯುರ್ವೇದ ಮೂಲಕ ಮನೆಯಲ್ಲೇ ಇದನ್ನು ಗುಣಪಡಿಸಿಕೊಳ್ಳಬಹುದು ಎನ್ನುವುದು ಸಾಬೀತು ಕೂಡ ಆಗಿರುವುದರಿಂದ ಈಗ ನಾವು ಹೇಳುವ ಟಿಪ್ಸ್ ಗಳನ್ನು ಪಾಲಿಸಿ ನೀವು ಇದನ್ನು ಸಂಪೂರ್ಣವಾಗಿ ಗುಣಪಡಿಸಿಕೊಳ್ಳಬಹುದು. ಅದರಲ್ಲಿ ಮೊದಲನೆಯದಾಗಿ ಆಪಲ್ ಸೀಡ್ಸ್ ವಿನೆಗರ್ ಇದು ಎಲ್ಲ ಮೆಡಿಕಲ್ ಸ್ಟೋರ್ ಹಾಗೂ ಕಾಸ್ಮೆಟಿಕ್ ಶಾಪ್ಗಳಲ್ಲಿ ಸಿಗುತ್ತದೆ. ಇದನ್ನು ಖರೀದಿಸಿ ತಂದು ಹತ್ತಿಯ ಸಹಾಯ ತೆಗೆದುಕೊಂಡು ಆಪಲ್ ಸೀಡ್ಸ್ ವಿನೆಗರ್ ಅಲ್ಲಿ ಅದ್ದಿ ನಂತರ ಅದನ್ನು ನರಹುಲಿ ಇರುವ ಜಾಗಗಳಿಗೆ ಹಚ್ಚುವುದರಿಂದ ದಿನಕ್ಕೆ ಎರಡು ಬಾರಿ ತಪ್ಪದೇ ಐದು ದಿನಗಳವರೆಗೆ ಇದನ್ನು ಮಾಡುತ್ತಾ ಬರುವುದರಿಂದ ತುಂಬಾ ಪರಿಣಾಮಕಾರಿಯಾಗಿ ಇದು ಕೆಲಸ ಮಾಡುತ್ತದೆ ಎನ್ನುವುದು ನಿಮ್ಮ ಅನುಭವಕ್ಕೆ ಬರುತ್ತದೆ.
ಮತ್ತು ಹಲವು ದಿನಗಳವರೆಗೆ ಇದನ್ನು ಮುಂದುವರಿಸುವುದರಿಂದ ಈ ನರಹುಲಿಗಳು ಸಂಪೂರ್ಣವಾಗಿ ಉದುರಿ ಹೋಗುತ್ತವೆ. ಇದರೊಂದಿಗೆ ಅಲೋವೆರಾ ಕೂಡ ಈ ಸಮಸ್ಯೆಗೆ ಉತ್ತಮ ಔಷಧಿಯಾಗಿ ಕೆಲಸ ಮಾಡುತ್ತದೆ. ಅಲೋವೆರಾ ಎನ್ನುವುದು ಚರ್ಮದ ಸಮಸ್ಯೆಗೆ ಹೇಳಿ ಮಾಡಿದ್ದ ಔಷಧಿ ಎನ್ನುವುದು ಎಲ್ಲರಿಗೂ ತಿಳಿದೇ ಇದೆ. ಹಾಗಾಗಿ ಔಷಧಿಗಳ ತಯಾರಿಕೆಯಲ್ಲಿ ಕಾಸ್ಮೆಟಿಕ್ ಗಳ ತಯಾರಿಕೆಯಲ್ಲಿ ಅಲೋವೆರಾದ ಬಳಕೆ ಹೆಚ್ಚಾಗಿ ಕಂಡು ಬರುತ್ತಿರುವುದು. ಅದಲ್ಲದೆ ಆಯುರ್ವೇದದಲ್ಲೂ ಕೂಡ ಅಲೋವೆರ ಗೆ ತುಂಬಾ ಪ್ರಾಮುಖ್ಯತೆ ನೀಡಲಾಗಿದೆ ಬಹುತೇಕ ಚರ್ಮ ಸಮಸ್ಯೆಗಳಿಗೆ ಇದನ್ನೇ ಸಜೆಸ್ಟ್ ಮಾಡುತ್ತಾರೆ ಮತ್ತು ಸೌಂದರ್ಯ ಹೆಚ್ಚಿಸುವಲ್ಲೂ ಕೂಡ ಅಲೋವೆರಾ ಒಂದು ಉತ್ತಮ ಸೌಂದರ್ಯ ವರ್ಧಕವಾಗಿ ಕೆಲಸ ಮಾಡುತ್ತದೆ ಹೀಗಾಗಿ ನರ ಹುಲಿ ಸಮಸ್ಯೆ ಇರುವವರು ಕೂಡ ಅಲೋವೆರಾ ಜೆಲ್ ತೆಗೆದುಕೊಂಡು ಅದನ್ನು ನರ ಹುಲಿ ಇರುವ ಜಾಗಕ್ಕೆ ಅಪ್ಲೈ ಮಾಡಿಕೊಂಡು ಬರುವುದರಿಂದ ನರಹುಲಿಗಳು ಉದುರಿ ಹೋಗುತ್ತವೆ.
ಬೇಕಿಂಗ್ ಸೋಡಾ ಕೂಡ ಈ ಸಮಸ್ಯೆಗೆ ಉತ್ತಮ ಔಷಧಿಯಾಗಿ ಕೆಲಸ ಮಾಡುತ್ತದೆ. ಸ್ವಲ್ಪ ಬೇಕಿಂಗ್ ಸೋಡಾ ವನ್ನು ಹರಳೆಣ್ಣೆ ಜೊತೆ ಮಿಕ್ಸ್ ಮಾಡಿ ಅದನ್ನು ಒಂದು ರೀತಿಯ ಪೇಸ್ಟ್ ರೀತಿ ತಯಾರಿಸಿಕೊಂಡು ಪ್ರತಿದಿನ ರಾತ್ರಿ ಮಲಗುವ ಮುನ್ನ ನರ ಹುಲಿ ಇರುವ ಜಾಗಕ್ಕೆ ಅಪ್ಲೈ ಮಾಡಿ ಬೆಳಗ್ಗೆ ಎದ್ದು ಮುಖ ತೊಳೆಯುವುದರಿಂದ ಹಾಗೂ ತಪ್ಪದೆ ಹಲವು ದಿನಗಳವರೆಗೆ ಈ ರೂಢಿಯನ್ನು ಮಾಡಿಕೊಂಡು ಬರುವುದರಿಂದ ಆದಷ್ಟು ಬೇಗ ನರ ಹುಲಿಗಳು ಉದುರಿ ಹೋಗಿ ನಿಮ್ಮ ಮುಖ ಹೆಚ್ಚು ಸೌಂದರ್ಯವಾಗಿ ಕಾಣುವಂತೆ ಆಗುತ್ತದೆ. ಇದರಂತೆಯೇ ಬಾಳೆಹಣ್ಣು ಕೂಡ ಈ ಸಮಸ್ಯೆಗೆ ಉತ್ತಮ ಪರಿಹಾರ ನೀಡುತ್ತದೆ, ಬಾಳೆಹಣ್ಣನ್ನು ಚೆನ್ನಾಗಿ ಸ್ಮ್ಯಾಶ್ ಮಾಡಿ ಅದನ್ನು ನರಹುಲಿ ಜಾಗಕ್ಕೆ ಹಚ್ಚಿಕೊಳ್ಳಬಹುದು ಅಥವಾ ಇದರಿಂದ ಯಾವುದೇ ಸೈಡ್ ಎಫೆಕ್ಟ್ ಇಲ್ಲದ ಕಾರಣ ಪೂರ್ತಿ ಮುಖಕ್ಕೆ ಕೂಡ ಇದನ್ನು ಹಚ್ಚಿಕೊಳ್ಳಬಹುದು ಈ ರೀತಿ ಸಾಧ್ಯವಾಗದ್ದಾಗೆಲ್ಲ ಬಾಳೆಹಣ್ಣಿನ ಸ್ಮ್ಯಾಶ್ ಹಚ್ಚುವುದರಿಂದ ನರಹುಲಿ ಸಮಸ್ಯೆ ಕಡಿಮೆಯಾಗುತ್ತದೆ.
ಇವುಗಳ ಜೊತೆಗೆ ಮತ್ತೊಂದು ಉತ್ತಮವಾದ ಔಷದ ಯಾವುದೆಂದರೆ ಬೆಳ್ಳುಳ್ಳಿ. ಉತ್ತಮವಾದ ಆಹಾರ ಪದಾರ್ಥವಾಗಿದೆ ಇದು ಎಲ್ಲ ರೀತಿಯ ಚರ್ಮ ಸಮಸ್ಯೆಗೆ ದೇಹದ ಒಳಗಿಂದ ಸರಿ ಮಾಡುವ ಔಷದ ಎನ್ನುವುದು ಎಲ್ಲರಿಗೂ ತಿಳಿದಿದೆ. ಆಹಾರ ಸೇವನೆಯಲ್ಲಿ ಬೆಳ್ಳುಳ್ಳಿಯನ್ನು ಬಳಸುವುದರಿಂದ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆ ಕಡಿಮೆಯಾಗುತ್ತದೆ ಎನ್ನುವುದು ಈಗಾಗಲೇ ಎಲ್ಲರೂ ತಿಳಿದುಕೊಂಡಿದ್ದಾರೆ. ನರಹುಲಿ ಸಮಸ್ಯೆಗೂ ಕೂಡ ಆರು ಏಳು ಬೆಳ್ಳುಳ್ಳಿಯನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಚಚ್ಚಿ ರಸ ತೆಗೆದುಕೊಂಡು ನಂತರ ಆ ರಸಕ್ಕೆ ಆರು ಏಳು ಹನಿ ನಿಂಬೆಹಣ್ಣಿನ ರಸವನ್ನು ಹಿಂಡಿ ಜೊತೆಗೆ ಸ್ವಲ್ಪ ಬೇಕಿಂಗ್ ಸೋಡವನ್ನು ಬೆರೆಸಿ ಈ ಮೂರರ ಮಿಶ್ರಣವನ್ನು ನರ ಹುಲಿ ಇರುವ ಜಾಗಕ್ಕೆ ಹಚ್ಚಿ 5 ನಿಮಿಷಗಳ ಕಾಲ ಬಿಟ್ಟು ನಂತರ ಶುದ್ದ ನೀರಿನಿಂದ ಮುಖ ತೊಳೆಯುವುದರಿಂದ ನರ ಹುಲಿ ಸಮಸ್ಯೆ ಪರಿಣಾಮಕಾರಿಯಾಗಿ ಕಡಿಮೆ ಆಗುತ್ತದೆ. ಈ ಮಾಹಿತಿಯನ್ನು ತಪ್ಪದೆ ಶೇರ್ ಮಾಡಿ ಮತ್ತು ಲೈಕ್ ಮಾಡಿ ನಿಮ್ಮ ಅಭಿಪ್ರಾಯವನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.