Farmers ರೈತರಿಗೆ ತೋಟಗಾರಿಕೆ ಇಲಾಖೆಯಿಂದ ಸಿಗುವ ಎಲ್ಲಾ ಯೋಜನೆ ಮತ್ತು ಸಹಾಯಧನದ ಬಗ್ಗೆ ಮಾಹಿತಿ ಮಿನಿ ಟ್ರಾಕ್ಟರ್ ಖರೀದಿಗೆ ಸಹಾಯ ಧನ
ಬಂಧುಗಳೇ ರೈತರಿಗೆ ಸರ್ಕಾರದ ಮಟ್ಟದಿಂದ ಇಲಾಖೆಗಳ ಮೂಲಕ ಹಲವಾರು ಸವಲತ್ತು ಮತ್ತು ಯೋಜನೆಗಳನ್ನು ರೂಪಿಸಲಾಗಿರುತ್ತದೆ. ಆದರೆ ನಮ್ಮ ರೈತರಿಗೆ ಮಾಹಿತಿಯ ಕೊರತೆಯಿಂದ ಇಲಾಖೆಗಳ ಮುಖಾಂತರ ಸಿಗಬೇಕಾದ ಸವಲತ್ತುಗಳು ಯಾವುವು ಎಂಬುದು ತಿಳಿದಿರುವುದಿಲ್ಲ ಈ ಲೇಖನದಲ್ಲಿ ತಮ್ಮ ಎಲ್ಲಾ ರೈತರಿಗೆ ತೋಟಗಾರಿಕೆ ಇಲಾಖೆಯಿಂದ ಸಿಗುವ ಸಹಾಯಧನ ಹಾಗೂ ಇನ್ನಿತರ ಯೋಜನೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗುತ್ತದೆ ಮಾಹಿತಿಯನ್ನು ಇತರರಿಗೆ ಶೇರ್ ಮಾಡಿ ಅವರಿಗೂ ಉಪಯೋಗವಾಗಲಿ.
. ಹೌದು ಬಂಧುಗಳೇ, ತೋಟಗಾರಿಕೆ ಇಲಾಖೆಯ ವತಿಯಿಂದ ರೈತರಿಗೆ ಹಲವಾರು ಯೋಜನೆಗಳ ಮುಖಾಂತರ ತೋಟಕ್ಕೆ ಬೇಕಾದ ಸಾಮಗ್ರಿಗಳು, ಉಪಕರಣಗಳು ನೀರು ಸಿಂಪಡಿಸುವ ಪೈಪುಗಳು ಹೀಗೆ ಇನ್ನಿತರ ವಸ್ತುಗಳನ್ನು ಸಬ್ಸಿಡಿ ಹಾಗೂ ಉಚಿತವಾಗಿ ನೀಡುವ ಹಲವಾರು ಯೋಜನೆಗಳನ್ನು ಈ ಲೇಖನದಲ್ಲಿ ನೀಡಲಾಗಿದೆ.
- ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ (PMKSY)
- ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (RKVY)
- ರಾಷ್ಟ್ರೀಯ ತೋಟಗಾರಿಕಾ ಮಿಷನ್ (NHM)
- ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ (PMKSY)
ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅಡಿಯಲ್ಲಿ ರೈತರು ತಮ್ಮ ಎರಡು ಹೆಕ್ಟರ್ ತೋಟಕ್ಕೆ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಲು ಶೇಕಡ 90ರಷ್ಟು ಸಬ್ಸಿಡಿ ಸಹಾಯಧನ ದೊರೆಯುತ್ತದೆ. ಅಂದರೆ ರೈತರು ತಮ್ಮ ಎರಡು ಎಕರೆ ತೋಟಕ್ಕೆ ಒಂದು ಲಕ್ಷ ರೂಪಾಯಿ ಸಬ್ಸಿಡಿ ಪಡೆದರೆ 90 ಸಾವಿರ ರೂಪಾಯಿ ತನಕ ಸಬ್ಸಿಡಿ ಆಗಿರುತ್ತದೆ ರೈತರು ತಾವು 10,000ಗಳನ್ನು ಮಾತ್ರ ಒದಗಿಸಬೇಕಾಗುತ್ತದೆ. ಈ ಯೋಜನೆಯು ಎಲ್ಲಾ ವರ್ಗದ ರೈತರಿಗೂ ಅನ್ವಯವಾಗುತ್ತದೆ. ಒಂದು ವೇಳೆ ರೈತರು ಎಕರೆಗಿಂತ ಹೆಚ್ಚಿನ ಮತ್ತು 5 ಎಕರೆಯ ಒಳಗಿನ ವಿಸ್ತೀರ್ಣ ತೋಟವನ್ನು ಹೊಂದಿದ್ದರೆ ಶೇಕಡ 40ರಷ್ಟು ಸಬ್ಸಿಡಿಯನ್ನು ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅಡಿಯಲ್ಲಿ ನೀಡಲಾಗುತ್ತದೆ. ಹನಿ ನೀರಾವರಿ ಪದ್ಧತಿಯಿಂದ ಕಡಿಮೆ ನೀರಿನಲ್ಲಿಯೂ ಹೆಚ್ಚಿನ ಬೆಳೆಯನ್ನು ತೆಗೆಯಬಹುದು ಮತ್ತು ಮಣ್ಣಿನ ಸವಕಳಿಯನ್ನು ತಡೆಗಟ್ಟಬಹುದಾಗಿದೆ. ಇದರಿಂದ ಬೇಸಿಗೆಯಲ್ಲಿಯೂ ಬೆಳೆಗಳನ್ನು ಸುಲಭವಾಗಿ ಸಂರಕ್ಷಿಸಬಹುದು ಮತ್ತು ಇದು ಲಾಭದಾಯಕವಾಗಿದೆ.
- ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ
ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯ ಫಲವನ್ನು ರೈತರು ಹಲವಾರು ಯೋಜನೆಗಳಿಂದ ಪಡೆಯಬಹುದಾಗಿದೆ. ಅವುಗಳೆಂದರೆ
- ನೀರು ಸಂಗ್ರಹಣ ಘಟಕ
- ಮಿನಿ ಟ್ರಾಕ್ಟರ್ ಖರೀದಿಗೆ ಸಹಾಯ ಧನ
- ಹಣ್ಣಿನ ಗಿಡಗಳ ಮೇಲಾವರಣ ನಿರ್ವಹಣೆ
- ಬೆಳೆ ಹಣ್ಣು ಹೂವುಗಳ ಹೊದಿಕೆಗಳಿಗೆ ಸಹಾಯಧನ
- ಸೋಲಾರ್ ಪಂಪ್ ಸೆಟ್
- ನೀರಿನಲ್ಲಿ ಕರಗುವ ರಸಗೊಬ್ಬರಗಳ ಖರೀದಿಗೆ ಸಹಾಯಧನ
-
- ನೀರು ಸಂಗ್ರಹಣ ಘಟಕ : ನೀರು ಸಂಗ್ರಹಣ ಘಟಕ ನಿರ್ಮಾಣ ಮಾಡಿಕೊಳ್ಳಲು ಶೇಕಡ 50ರಂತೆ ಕನಿಷ್ಠ 1.5 ಲಕ್ಷದಿಂದ 5 ಲಕ್ಷದವರೆಗೆ ಸಹಾಯದಿಂದ ನೀಡಲಾಗುತ್ತದೆ.
- ಮಿನಿ ಟ್ರಾಕ್ಟರ್ ಖರೀದಿಗೆ ಸಹಾಯ ಧನ
ಮಿನಿ ಟ್ರ್ಯಾಕ್ಟರ್ ಖರೀದಿಗೆ ಸಾಮಾನ್ಯ ವರ್ಗದ ಜನರಿಗೆ ಶೇಕಡ 25ರಂತೆ ಗರಿಷ್ಠ 75,000 ವರೆಗೆ ಸಹಾಯಧನ ನೀಡಲಾಗುವುದು ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡದ ವರ್ಗದವರಿಗೆ ಶೇಕಡ 35ರಂತೆ ಗರಿಷ್ಠ ಒಂದು ಲಕ್ಷ ರೂಪಾಯಿವರೆಗೆ ಮಿನಿ ಟ್ರ್ಯಾಕ್ಟರ್ ಖರೀದಿ ಮಾಡಲು ಇಲಾಖೆಯು ಸಹಾಯ ಮಾಡುತ್ತದೆ.
- ಹಣ್ಣಿನ ಗಿಡಗಳ ಮೇಲಾವರಣ ನಿರ್ವಹಣೆ : ಪ್ರತಿ ಫಲಾನುಭವಿಗೂ ಪ್ರತಿ ಒಂದು ಹೆಕ್ಟೇರ್ ಮೀರದಂತೆ ಶೇಕಡ 25ರಂತೆ 10,000 ಸಹಾಯಧನ ನೀಡಲಾಗುತ್ತದೆ.
- ಸೋಲಾರ್ ಪಂಪ್ ಸೆಟ್ : ರೈತರು ತಮ್ಮ ಪಂಪ್ ಸೆಟ್ ಗಳಿಗೆ ಸೋಲಾರ್ ಪ್ಯಾನೆಲ್ ಅಳವಡಿಸಿಕೊಳ್ಳಲು ಶೇಕಡ 50ರಂತೆ ಘಟಕದ ವೆಚ್ಚ 3,00,000 ವಾಗಿದ್ದರೆ ಇಲಾಖೆ ವತಿಯಿಂದ 1,50,000 ಸಹಾಯಧನ ಮತ್ತು ಘಟಕದ ವೆಜ್ಜ 2 ಲಕ್ಷವಾಗಿದ್ದರೆ 1 ಲಕ್ಷ ಸಹಾಯಧನ ಇಲಾಖೆ ಕಡೆಯಿಂದ ನೀಡಲಾಗುತ್ತದೆ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ ಸುದ್ದಿಗಳನ್ನು ಪಡೆದುಕೊಳ್ಳಲು ನಮ್ಮ ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇನ್ನು ಹೆಚ್ಚಿನ ಮಾಹಿತಿಗೆ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.