1 ಲಕ್ಷದಲ್ಲಿ ಮನೆ ಆಗುತ್ತದೆ ಎಂದರೆ ಎಲ್ಲರಿಗೂ ಕೂಡ ಆಶ್ಚರ್ಯ ಒಂದು ಲಕ್ಷಕ್ಕೆ ಏನು ಬರುತ್ತದೆ ಇದು ಫೇಕ್ ಎಂದು ಕೊಳ್ಳುತ್ತಾರೆ. ಆದರೆ ಸರಿಯಾಗಿ ನಾವು ಹೇಳುವ ವಿವರವನ್ನು ಪೂರ್ತಿಯಾಗಿ ಕೇಳಿ ಆಗ ನಿಮಗೆ ಇದು ಮನವರಿಕೆ ಆಗುತ್ತದೆ. ನೀವು ಈಗಾಗಲೇ ಒಂದು RCC ಮನೆಯಲ್ಲಿ ಇದ್ದೀರಾ ಮೇಲೆ ಮನೆ ಕಟ್ಟುವ ಪ್ಲಾನಿಂಗ್ ಇದೆ ಆದರೆ ಸದ್ಯಕ್ಕೆ ಆಗುವುದಿಲ್ಲ ಆದರೂ ಒಂದು ಕಡಿಮೆ ಬಜೆಟ್ ನಲ್ಲಿ ಮನೆ ಮಾಡಿ ಬಾಡಿಗೆಗೆ ಕೊಡಬೇಕು ಎಂದಿದ್ದರೆ ಈಗ ನಾವು ಹೇಳುತ್ತಿರುವ ಈ ರೀತಿ ಐಡಿಯಾ ಮಾಡಿ ಮನೆ ಕಟ್ಟಿ ಒಂದು ಚಿಕ್ಕ ಫ್ಯಾಮಿಲಿ ಗೆ ನೀವು ಬಾಡಿಗೆಗೆ ಕೊಡಬಹುದು.
ಈಗಿನ ಕಾಲದಲ್ಲಿ ವಿದ್ಯಾಭ್ಯಾಸಕ್ಕಾಗಿ ಅಥವಾ ಉದ್ಯೋಗಕ್ಕಾಗಿ ಸಾವಿರಾರು ಜನ ತಾವಿರುವ ಜಾಗಗಳಿಂದ ಬೇರೆ ಜಾಗಗಳಿಗೆ ಹೋಗಿ ಕಡಿಮೆ ಬಾಡಿಗೆಗೆ ಮನೆ ಹುಡುಕುತ್ತಿರುತ್ತಾರೆ. ಆದರೆ ಆ ಮನೆಯಲ್ಲಿ ತಮಗೆ ಎಲ್ಲ ಸೌಕರ್ಯಗಳು ಇರಬೇಕು ಎಂದು ಬಯಸುತ್ತಾರೆ. ಹೀಗೆ ಮನೆ ಕಟ್ಟುವವರು ಕೂಡ ನಮಗೆ ಬಾಡಿಗೆಗೆ ಬರುವವರು ಕೇಳುವ ಎಲ್ಲಾ ಫೆಸಿಲಿಟಿ ಇರಬೇಕು ಆದರೆ ಬಜೆಟ್ ಕಮ್ಮಿ ಆಗಿರಬೇಕು ಅಂತಹ ಮನೆಯ ಕಟ್ಟಿಸಬೇಕು ಎಂದು ಅಂದುಕೊಳ್ಳುತ್ತಾರೆ. ನಿಮಗೂ ಈ ಆಲೋಚನೆ ಇದ್ದರೆ ನಾವು ಹೇಳುವ ಪ್ಲಾನ್ ಪ್ರಕಾರ ಮನೆ ಮಾಡಿ.
ಈ ಸುದ್ದಿ ಓದಿ:- ಅಂಗನವಾಡಿ ಟೀಚರ್ ಹುದ್ದೆ ನೇರ ನೇಮಕಾತಿ, SSLC ಆದವರೂ ಅರ್ಜಿ ಹಾಕಿ..
ಇದೊಂದು ರೂಫಿಂಗ್ ಶೀಟ್ ಮನೆಯಾಗಿದೆ ಒಂದು ಸಿಂಗಲ್ ರೂಮ್ ರೀತಿ ಇದ್ದು ಈ ರೂಮ್ ನಲ್ಲಿಯೇ ಓಪನ್ ಕಿಚನ್ ಇರುತ್ತದೆ, 13*13 ಸಿಂಕ್ ಇರುತ್ತದೆ ಮತ್ತು ಅಡುಗೆ ಐಟಂಗಳನ್ನು ಇಟ್ಟುಕೊಳ್ಳಲು ಶೆಲ್ಫ್ ಗಳನ್ನು ಹಾಕಲಾಗಿದೆ. ಚಿಕ್ಕ ಮನೆ ಅಥವಾ ಬ್ಯಾಚುಲರ್ ಇದ್ದರೆ ಸಾಮಾನ್ಯವಾಗಿ ಕಡಿಮೆ ರೇಷನ್ ತರುತ್ತಾರೆ.
ಇವುಗಳನ್ನು ಇಟ್ಟುಕೊಳ್ಳಲು ಇಷ್ಟೇ ಜಾಗ ಸಾಕಾಗುತ್ತದೆ ಬಾಡಿಗೆಗೆ ಇರುವವರು ಸಾಮಾನ್ಯವಾಗಿ ಎಮರ್ಜೆನ್ಸಿಗೆ ಅಡುಗೆ ಮಾಡುವಷ್ಟು ಇಟ್ಟುಕೊಳ್ಳುತ್ತಾರೆ ಹಾಗಾಗಿ ಕಿಚನ್ ದೊಡ್ಡದಿರಬೇಕು ಎನ್ನುವ ಟೆನ್ಶನ್ ಇಲ್ಲ ಇರುವಷ್ಟು ಶೆಲ್ಫ್ ಗಳಲ್ಲಿ ಅಡ್ಜಸ್ಟ್ ಮಾಡಬಹುದು ಮತ್ತು ಕಿಚನ್ ಸೆಟ್ ಅಪ್ ಪಕ್ಕದಲ್ಲಿಯೇ ವಾರ್ಡ್ರೋಬ್ ರೀತಿ 8 ಸಿಮೆಂಟ್ ಶೆಲ್ಫ್ ಗಳನ್ನು ಮಾಡಲಾಗಿದೆ, ಇದರಲ್ಲಿ ಬಟ್ಟೆಗಳನ್ನು ಜೋಡಿಸಿಕೊಳ್ಳಬಹುದು.
ಅಥವಾ ಬುಕ್ ಗಳು ಇಂಪಾರ್ಟೆಂಟ್ ವಸ್ತುಗಳನ್ನು ಈ ರೀತಿ ವಸ್ತುಗಳನ್ನು ಜೋಡಿಸಿಕೊಳ್ಳಬಹುದು. ಹಾಲ್ ನಲ್ಲಿ ಒಂದು ಕಬೋರ್ಡ್ ರೀತಿ ಸೆಟಪ್ ಮಾಡಲಾಗಿದೆ ಇದರಲ್ಲಿ ಶೋಕೇಸ್ ವಸ್ತುಗಳು ಅಥವಾ ಮೊಬೈಲ್ ಚಾರ್ಜರ್ ಇಂತಹ ಚಿಕ್ಕ ಪುಟ್ಟ ವಸ್ತುಗಳನ್ನು ಇಟ್ಟುಕೊಳ್ಳಬಹುದು.
ಈ ಸುದ್ದಿ ಓದಿ:- ಆಸ್ತಿ ಪತ್ರಗಳಿಗೆ ಆಧಾರ್ ಜೋಡಣೆ ಕಡ್ಡಾಯ.! ಅಧಿಕೃತವಾಗಿ ಮಾಹಿತಿ ಹಂಚಿಕೊಂಡ ಕಂದಾಯ ಸಚಿವರು.!
ಸಿಂಪಲ್ ಡೋರ್ ಆಗಿದ್ದು ಒಂದು ಕಿಟಕಿ ಹಾಕಲಾಗಿದೆ. ಎಲ್ಲದಕ್ಕೂ ಟೈಲ್ಸ್ ವ್ಯವಸ್ಥೆ ಮಾಡಲಾಗಿದೆ ಮತ್ತು ಮನೆ ಮೇಲೆ ಕಟ್ಟುವುದರಿಂದ ಮನೆ ಮುಂದೆ ಹೇಗಿದ್ದರೂ ಟೆರೇಸ್ ಜಾಗ ಇರುತ್ತದೆ ಆ ಫ್ಲೋರ್ ನಲ್ಲಿ ಇರುವವರು ಬಿಟ್ಟು ಹೆಚ್ಚಿಗೆ ಯಾರು ಹೋಗೋದಿಲ್ಲ ಹಾಗಾಗಿ ಅವರಿಗೆ ಜಾಗ ಇಕ್ಕಟ್ಟು ಎನಿಸುವುದಿಲ್ಲ ಆಚೆ ಇದ್ದು ಸಮಯ ಕಳೆಯಬಹುದು.
ಇನ್ನು ಬಾತ್ರೂಮ್ ವ್ಯವಸ್ಥೆ ಹೊರಗಡೆ ಮಾಡಲಾಗಿದ್ದು, ಅದರ ಮೇಲೆ ಸಿಂಟೆಕ್ಸ್ ಇಡಲಾಗಿದೆ ಬಾತ್ರೂಮ್ ಅಟ್ಯಾಚ್ ಟಾಯ್ಲೆಟ್ ಆಗಿದ್ದು ಅದರ ಮುಂದೆ ಕಾಲು ತೊಳೆದುಕೊಳ್ಳಲು ಬಟ್ಟೆ ವಾಶ್ ಮಾಡಲು ಸ್ಪೇಸ್ ಮಾಡಿ ಕೊಡಲಾಗಿದೆ.
ಈ ಸುದ್ದಿ ಓದಿ:- ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಯ ಎಲ್ಲಾ ಪೆಂಡಿಂಗ್ ಹಣ ಜಮೆ ಹೀಗೆ ಚೆಕ್ ಮಾಡಿ.!
ಎಲ್ಲದಕ್ಕೂ ಕಾಂಬಿನೇಷನ್ ಮ್ಯಾಚ್ ಮಾಡಿ ಅಂಗಡಿಗಳಲ್ಲಿ ವೇಸ್ಟ್ ಆಗಿ ಉಳಿದಿರುವ ಟೈಲ್ಸ್ ಗಳನ್ನು ಸೆಲೆಕ್ಟ್ ಮಾಡುವುದರಿಂದ ಟೈಲ್ಸ್ ಚಾರ್ಜಸ್ ಕೂಡ ಕಡಿಮೆ ಆಗುತ್ತದೆ ಸಿಂಪಲ್ ಡೋರ್ ಬಳಸಲಾಗಿದೆ ವೆಂಟಿಲೇಶನ್ ಗಾಗಿ ಕಿಟಕಿ ಇಡಲಾಗಿದೆ. ಹೀಗೆ ಸಿಂಪಲ್ ಆಗಿ ಸಕ್ಕತ್ತಾಗಿ ಒಂದು ಲಕ್ಷಕ್ಕೆ ಮನೆ ಮಾಡಿಕೊಳ್ಳಬಹುದು ಇದರ ವಿವರಕ್ಕಾಗಿ ಈ ವಿಡಿಯೋ ಪೂರ್ತಿಯಾಗಿ ನೋಡಿ.