ಪ್ರತಿಯೊಂದು ಹಳ್ಳಿಗಳಲ್ಲಿಯೂ ಕೂಡ ಇರುವವರಿಗೆ ಕಾಡುವ ಸಮಸ್ಯೆ ಒಂದೇ ಹಾಗೂ ಅವರಲ್ಲಿ ಇರುವಂತಹ ಸಮಸ್ಯೆ ಯಾವುದು ಎಂದರೆ ಅವರ ಮನೆಯ ಹಕ್ಕು ಪತ್ರ ಇಲ್ಲದೆ ಇರುವುದು ಹಾಗೂ ಅವುಗಳು ಹಾಳಾಗಿರುವುದು ಅದಕ್ಕಾಗಿ ಅವರು ಆ ಪತ್ರಗಳನ್ನು ಮತ್ತೆ ಪಡೆದು ಕೊಳ್ಳಲು ಗ್ರಾಮ ಪಂಚಾಯಿತಿಗೆ ಹೋಗಿ ಕೇಳಿದರೆ ಅಲ್ಲಿಯೂ ಕೂಡ ಇಲ್ಲ ಎನ್ನುವಂತಹ ಉತ್ತರವನ್ನು ಕೊಡುತ್ತಾರೆ. ಇದಕ್ಕೆಲ್ಲ ಮುಖ್ಯ ಕಾರಣ ಏನು ಎಂದರೆ ಆ ಪತ್ರಗಳು ತುಂಬಾ ಹಳೆಯದಾಗಿರುತ್ತದೆ ಹಾಗೂ ಕೆಲವೊಂದು ಪತ್ರಗಳು ಸಿಕ್ಕರೂ ಕೂಡ ಅವು ಸರಿಯಾಗಿ ನಮಗೆ ಕಾಣಿಸುವುದಿಲ್ಲ ಅಂದರೆ ಅದರಲ್ಲಿರುವ ಅಕ್ಷರಗಳು ನಮಗೆ ಕಾಣಿಸುವುದಿಲ್ಲ
ಇದರಿಂದ ಆ ಪತ್ರಗಳು ಯಾರದ್ದು ಯಾರ ಹೆಸರಿನಲ್ಲಿದೆ ಅದಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಗಳನ್ನು ಕೂಡ ಸಂಪೂರ್ಣವಾಗಿ ಸ್ಪಷ್ಟವಾಗಿ ಹೇಳಲು ಗ್ರಾಮ ಪಂಚಾಯಿತಿಯವರಿಗೆ ಸಾಧ್ಯವಾಗುವುದಿಲ್ಲ. ಅದಕ್ಕಾಗಿ ಅವರು ಯಾವುದೇ ಪತ್ರ ಸಿಕ್ಕರೂ ಸಹ ಇದು ಇಂಥವರದ್ದು ಎಂದು ಸ್ಪಷ್ಟವಾಗಿ ಹೇಳುವುದಿಲ್ಲ ಬದಲಾಗಿ ಯಾವುದಾದರೂ ಬೇರೆಯದನ್ನು ಕೊಟ್ಟರೆ ಅದನ್ನು ಮನೆಯವರು ಉಪಯೋಗಿಸಿ ಬೇರೆ ಕೆಲಸಗಳಿಗೆ ಉಪಯೋಗಿಸಿದರೆ ಅದರಿಂದ ಮುಂದಿನ ದಿನದಲ್ಲಿ ಏನಾದರೂ ತೊಂದರೆ ಉಂಟಾಗಬಹುದು ಎಂಬ ಕಾರಣಕ್ಕಾಗಿ ಈ ರೀತಿಯಾದಂತಹ ನಿರ್ಧಾರವನ್ನು ಗ್ರಾಮ ಪಂಚಾಯಿತಿಯವರು ಯಾವುದೇ ಕಾರಣಕ್ಕೂ ತೆಗೆದುಕೊಳ್ಳುವುದಿಲ್ಲ.
ಇದರಿಂದ ಆ ಮನೆ ಅಥವಾ ಯಾವುದೇ ಆಸ್ತಿಗೆ ಸಂಬಂಧಿಸಿದ ಹಕ್ಕು ಪತ್ರಗಳು ಸರಿಯಾದ ದಾಖಲೆ ಇಲ್ಲದಿರುವುದರಿಂದ ಮನೆಯಲ್ಲಿರುವಂತಹ ಸಹೋದರರು ಆಸ್ತಿಯನ್ನು ವಿಭಾಗ ಮಾಡಿಕೊಂಡಾಗ ಅವರಿಗೆ ಯಾವುದೇ ರೀತಿಯಾದಂತಹ ಪತ್ರಗಳು ಸಿಕ್ಕಿರುವುದಿಲ್ಲ ಇದರಿಂದ ಅವರು ಹಲವಾರು ಸಮಸ್ಯೆಗಳನ್ನು ಅನುಭವಿಸುತ್ತಿರುತ್ತಾರೆ. ಆದರೆ ಈ ದಿನ ನಾವು ಮನೆಯ ಹಕ್ಕು ಪತ್ರ ಅಂದರೆ ಇ – ಸ್ವತ್ತು ಹಕ್ಕು ಪತ್ರವನ್ನು ಹೇಗೆ ಪಡೆದುಕೊಳ್ಳುವುದು ಹಾಗೂ ಅದನ್ನು ಹೇಗೆ ಪಡೆದುಕೊಳ್ಳಬೇಕು ಇದನ್ನು ಪಡೆದುಕೊಳ್ಳಬೇಕಾದರೆ ಹೇಗೆ ಅರ್ಜಿಯನ್ನು ಸಲ್ಲಿಸಬೇಕು ಮತ್ತು ಅದರ ಪ್ರಕ್ರಿಯೆ ಹೇಗಿರುತ್ತದೆ.
ಇದರಿಂದ ನಿಮ್ಮ ಮನೆಯ ಇ – ಸ್ವತ್ತು ಹೇಗೆ ಮಾಡಿಸಿಕೊಳ್ಳುವುದು ಎನ್ನುವ ಮಾಹಿತಿಯ ಬಗ್ಗೆ ಈ ದಿನ ಕೂಲಂಕುಶವಾಗಿ ತಿಳಿದುಕೊಳ್ಳುತ್ತಾ ಹೋಗೋಣ. ಹಾಗಾದರೆ ಇದಕ್ಕೆ ಬೇಕಾಗುವ ದಾಖಲಾತಿಗಳು ಯಾವುದು ಎಂದರೆ ನಿಮ್ಮ ಮನೆಯ ವಿದ್ಯುತ್ ಬಿಲ್, ಆಧಾರ್ ಕಾರ್ಡ್, ಸ್ಥಳೀಯ ಸಿವಿಲ್ ಇಂಜಿನಿಯರಿಂಗ್ ಬಳಿ ಹೋಗಿ ನಿಮ್ಮ ಮನೆಯ ನಕ್ಷೆ ಪಡೆದುಕೊಳ್ಳುವುದು. ಹೀಗೆ ಪಡೆದ ನಕ್ಷೆಯನ್ನು ಗ್ರಾಮ ಪಂಚಾಯಿತಿಗೆ ಕೊಟ್ಟು 11 ಬಿ ಪತ್ರವನ್ನು ಮಾಡಿಸಿಕೊಳ್ಳಬೇಕು.
ನಂತರ ನೀವು ಫಾರಂ ನಂಬರ್ 9 ಹಾಗೂ 11 ಪಡೆದುಕೊಳ್ಳಬೇಕು ಇದನ್ನು ಮಾಡಿಸಲು ಬೇಕಾಗುವ ದಾಖಲಾತಿಗಳು 11 ಬಿ ನಕಲು ಪತ್ರ, ಆಧಾರ್ ಕಾರ್ಡ್, ವಿದ್ಯುತ್ ಬಿಲ್, ಮನೆಯ ನಕ್ಷೆ ಮತ್ತು ಫೋಟೋ, ಗ್ರಾಮ ನಕ್ಷೆ ಮತ್ತು ಕರರಶೀದಿ ಇವುಗಳ ಜೊತೆ ನಮೂನೆ ಅರ್ಜಿಯನ್ನು ಭರ್ತಿ ಮಾಡಿ ನಿಮ್ಮ ಗ್ರಾಮ ಪಂಚಾಯಿತಿಯ ಗಣಕ ಶಾಖೆಗೆ ಕೊಡ ಬೇಕಾಗಿರುತ್ತದೆ. ಹಾಗಾದರೆ ಇ- ಸ್ವತ್ತು ಪಡೆಯಬೇಕಾದರೆ ಯಾವ ವಿಧಾನ ಅನುಸರಿಸಬೇಕು ಎಂದರೆ ಗ್ರಾಮ ಪಂಚಾಯಿತಿಗೆ ಅಗತ್ಯ ದಾಖಲೆಯೊಂದಿಗೆ ಗ್ರಾಮ ಪಂಚಾಯಿತಿಯಲ್ಲಿ ಅರ್ಜಿಯನ್ನು ಮೊದಲು ಸಲ್ಲಿಸಬೇಕಾಗಿರುತ್ತದೆ ನಂತರ ಅರ್ಜಿ ಸಲ್ಲಿಸಿ ಸ್ವೀಕೃತಿಯನ್ನು ಪಡೆದು ಕೊಳ್ಳಬೇಕು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.