ಯಾವುದೇ ವ್ಯಕ್ತಿಯನ್ನು ಅರೆಸ್ಟ್ ಮಾಡಿದ ತಕ್ಷಣ ಜೈಲಿಗೆ ಹಾಕುವುದಿಲ್ಲ. ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು ಅವರನ್ನು ವಿಚಾರಣೆ ನಡೆಸಿ ನ್ಯಾಯಲಯಕ್ಕೆ ಹಾಜರುಪಡಿಸಲಾಗುತ್ತದೆ. ಅಲ್ಲಿ ಆತನ ಆರೋಪ ಸಾಬೀತಾದ ಮೇಲೆ ಜೈಲಿಗೆ ಹಾಕುತ್ತಾರೆ. ಈ ಸಮಯದಲ್ಲಿ ಜಾಮೀನು ಸಿಕ್ಕಿದರೆ ಮನೆಗೆ ಹೋಗಬಹುದು ಆದರೆ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದರೆ ಜೈಲಿನಲ್ಲಿಯೇ ಹೋಗಬೇಕಾಗುತ್ತದೆ.
ಕೆಲವೊಮ್ಮೆ ಕೋರ್ಟ್ ನಲ್ಲಿ ವಿಚಾರಣೆಗಳು ಪದೇಪದೇ ಮುಂದೂಡಿ ಜೈಲು ಶಿಕ್ಷೆ ಪ್ರಮಾಣ ಪ್ರಕಟವಾಗುವುದೇ ಇಲ್ಲ, ವರ್ಷಗಟ್ಟಲೆ ಜೈಲಿನಲ್ಲಿ ಇದ್ದರೂ ಶಿಕ್ಷೆ ಪ್ರಕಟವಾಗದ ಉದಾಹರಣೆಯು ಇದೆ. ಯಾವುದೇ ಅಪರಾಧಿಯನ್ನು ಜೈಲಿಗೆ ಹಾಕುವ ಮುನ್ನ ಆತನ ಬಳಿ ವೆಪನ್ ಇರಬಹುದೇ ಎಂದು ಚೆಕ್ ಮಾಡುತ್ತಾರೆ ಹಾಗೂ ಆತನ ಬಳಿ ಇರುವ ವಸ್ತುಗಳನ್ನು ವಶಕ್ಕೆ ಪಡೆಯುತ್ತಾರೆ.
ಆತನಿಗೆ ಯಾವುದಾದರು ಕಾಯಿಲೆ ಇದೆಯೇ ಎಂದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಆರೋಗ್ಯವಾಗಿದ್ದರೆ ಅರೆಸ್ಟ್ ಮಾಡುತ್ತಾರೆ. ಜೈಲಿಗೆ ಬಂದವರಿಗೆ ಖೈದಿ ಬಟ್ಟೆ ಕೊಟ್ಟು ನಂಬರ್ ಕೊಟ್ಟು ಸೆಲ್ ಗಳಿಗೆ ಅಥವಾ ಬ್ಯಾರಕ್ ಗಳಿಗೆ ತಳ್ಳುತ್ತಾರೆ. ಎಲ್ಲಾ ಜೈಲಿನಲ್ಲೂ ಕೂಡ ಸಮವಸ್ತ್ರ ಇರುವುದಿಲ್ಲ.
ಕೆಲವೊಂದು ಜೈಲು ಗಳಲ್ಲಿ ಒಂದು ಬ್ಯಾರೆಕ್ ನಲ್ಲಿ ಐದಾರು ಜನ ಇದ್ದರೆ, ಕೆಲವೊಂದು ಜೈಲುಗಳಲ್ಲಿ 50 ರಿಂದ 60 ಜನ ಇರಬೇಕಾಗುತ್ತದೆ. ಅದು ಆ ಸೆಲ್ ಗಳ ಸಾಮರ್ಥ್ಯದ ಮೇಲೆ ನಿರ್ಧಾರ ಆಗುತ್ತದೆ. ಜೈಲಿನಲ್ಲಿ ಖೈದಿಗಳನ್ನು ಬೆಳಿಗ್ಗೆ 6 ಗಂಟೆಗೆ ಏಳಿಸಲಾಗುತ್ತದೆ, ನಿತ್ಯ ಕರ್ಮ ಮುಗಿಸಿದ ನಂತರ ಒಟ್ಟಿಗೆ ಪ್ರಾರ್ಥನೆ ಮಾಡಿ ದಿನ ಆರಂಭಿಸುತ್ತಾರೆ ಇವರಿಗೆ ಟೀ ವ್ಯವಸ್ಥೆ ಕೂಡ ಇರುತ್ತದೆ.
ಆಯ ಪ್ರಾಂತ್ಯಗಳಿಗೆ ತಕ್ಕನಾದ ಊಟದ ವ್ಯವಸ್ಥೆ ಇರುತ್ತದೆ. ಬೆಳಗಿನ ಉಪಹಾರ ಆದಮೇಲೆ 8 ರಿಂದ 12 ಗಂಟೆವರೆಗೆ ಕೆಲಸ ಕೊಡಲಾಗುತ್ತದೆ. ಮಧ್ಯಾಹ್ನದ ಊಟ ಆದ ಮೇಲೆ ರೆಸ್ಟ್ ಇರುತ್ತದೆ ನಂತರ ಸಂಜೆ ತನಕ ಕೆಲಸ ಮಾಡಬೇಕು, ಸಂಜೆ ಆದ ಮೇಲೆ ಅವರಿಗೆ ಮನರಂಜನೆಗಾಗಿ ಚಟುವಟಿಕೆಗಳಿರುತ್ತವೆ.
ತಮಗೆ ಆಸಕ್ತಿ ಇರುವ ಕೆಲಸ ಮಾಡಬಹುದು ಉತ್ಪನ್ನಗಳ ತಯಾರಿಕೆ, ಮರ ಗೆಲಸ, ಬಟ್ಟೆ ನೇಯ್ಗೆ ಈ ರೀತಿ ಹಲವು ವಿಧದ ಕೆಲಸಗಳು ಇರುತ್ತವೆ. ಕೆಲವೊಮ್ಮೆ ಜೈಲಿನ ಅಧಿಕಾರಿಗಳೇ ಅವರಿಗೆ ಮಾಡಬೇಕಾದ ಕೆಲಸಗಳನ್ನು ಸೂಚಿಸುತ್ತಾರೆ ಆದರೆ ಇಲ್ಲಿ ಅವರು ಮಾಡುವ ಕೆಲಸಗಳಿಗೆ ಹಣವನ್ನು ಕೈಗೆ ಕೊಡುವುದಿಲ್ಲ.
ಆತ ಜೈಲು ಶಿಕ್ಷೆ ಮುಗಿಸಿ ಹೊರಗೆ ಹೋಗುವಾಗ ಆತನ ಅಕೌಂಟಿಗೆ ಅರ್ಧ ಹಣ ಹಾಕಲಾಗುತ್ತದೆ ಹಾಗೂ ಅರ್ಧದಷ್ಟು ಮಾತ್ರ ಹಣ ಕೈಗೆ ಕೊಡಲಾಗುತ್ತದೆ. ಜೈಲಿನಲ್ಲಿ ಕೊಡುವ ಉಪಹಾರ ತಿನ್ನಲು ಇಷ್ಟ ಇಲ್ಲದೇ ಇರುವವರು, ಜೈಲು ಕ್ಯಾಂಟೀನ್ ನಿಂದ ತರಿಸಿಕೊಳ್ಳಬಹುದು. ಈ ಕ್ಯಾಂಟೀನ್ ನಲ್ಲಿ ದುಡ್ಡು ನಡೆಯುವುದಿಲ್ಲ ಅವರ ಕಡೆಯವರು ಹಣ ಕಟ್ಟಿದರೆ ಅವರಿಗೆ ಟೋಕನ್ ಗಳನ್ನು ಕೊಡಲಾಗುತ್ತದೆ, ಟೋಕನ್ ಬಳಕೆ ಮಾಡಿ ಊಟ ತೆಗೆದುಕೊಳ್ಳಬಹುದು.
2019-20ನೇ ಬಜೆಟ್ ನಲ್ಲಿ ಭಾರತ ಸರ್ಕಾರವು ಜೈಲುಗಳ ನಿರ್ವಹಣೆಗಾಗಿ 6,818 ಕೋಟಿ ಮೀಸಲಿಟ್ಟಿದೆ. ಇದರ 48% ಹಣವು ಕೈದಿಗಳ ಆಹಾರಕ್ಕಾಗಿ ಖರ್ಚಾಗುತ್ತಿದೆ, ಆ ಪ್ರಕಾರವಾಗಿ ಒಬ್ಬ ಖೈದಿಗೆ ಒಂದು ದಿನಕ್ಕೆ ರೂ.119 ಊಟಕ್ಕಾಗಿ ಖರ್ಚು ಮಾಡುತ್ತಾರೆ. ಆದರೆ ಇದೆಲ್ಲವನ್ನು ಸಮರ್ಪಕವಾಗಿ ಆಡಳಿತ ಮಂಡಳಿ ಖರ್ಚು ಮಾಡುತ್ತಿಲ್ಲ ಎನ್ನುವ ಆರೋಪ ಕೂಡ ಇದೆ.
ಜೈಲುಗಳನ್ನು ರಾಜ್ಯ ಸರ್ಕಾರಗಳೇ ನೋಡಿಕೊಳ್ಳಬೇಕು ಆದರೆ ಕೇಂದ್ರ ಸರ್ಕಾರ ನೀಡುವ ಸೂಚನೆಗಳನ್ನು ಪಾಲಿಸಬೇಕು. ಮುಖ್ಯವಾಗಿ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಕೈದಿಗಳನ್ನು ನಡೆಸಿಕೊಳ್ಳಬೇಕು. ಜೈಲು ಅಧಿಕಾರಿಗಳು ಮಾನವೀಯತೆ ಹೊಂದಿರಬೇಕು, ಶಿಕ್ಷೆ ಮುಗಿದ ಮೇಲೆ ಹೆಚ್ಚು ಶಿಕ್ಷೆ ವಿಧಿಸಬಾರದು ಮತ್ತು ಖೈದಿಗಳ ಹಕ್ಕುಗಳಿಗೆ ಚ್ಯುತಿ ತರಬಾರದು.
ಒಟ್ಟಾರೆಯಾಗಿ ಭಾರತದಲ್ಲಿ ಎಷ್ಟು ವಿಧದ ಜೈಲುಗಳಿವೆ ಎಂದರೆ ಭಾರತದಲ್ಲಿ ಒಟ್ಟು 1,306 ಜೈಲುಗಳಿವೆ, ಇದರಲ್ಲಿ ಎರಡು ವರ್ಷ ಹಾಗೂ ಅದಕ್ಕಿಂತ ಹೆಚ್ಚು ಶಿಕ್ಷೆ ಪಡೆದವರನ್ನು ಸೆಂಟ್ರಲ್ ಜೈಲಿಗೆ ಕಳುಹಿಸಲಾಗುತ್ತದೆ. ಈ ಸೆಂಟ್ರಲ್ ಜೈಲ್ ಗಳು ಭ’ಯಾ’ನ’ಕವಾಗಿರುತ್ತವೆ.
ನಿಯಮದ ಪ್ರಕಾರ 10 ಕೈದಿಗೆ ಒಂದು ಟಾಯ್ಲೆಟ್ ಇರಬೇಕು ಆದರೆ ಕೈದಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ 70 ರಿಂದ 80 ಕೈದಿಗಳಿಗೆ ಒಂದು ಟಾಯ್ಲೆಟ್ ಇರುತ್ತದೆ. NCRB ವರದಿ ಪ್ರಕಾರ 4 ಲಕ್ಷ ಕೈದಿಗಳು ಇರಲು ವ್ಯವಸ್ಥೆ ಇದೆ ಆದರೆ ಒಟ್ಟಾರೆಯಾಗಿ ಇದರಲ್ಲಿ 4,78,000 ಕೈದಿಗಳಿದ್ದಾರೆ. ಇದರಿಂದ ಮಲಗಲು ಕ’ಷ್ಟವಾಗುತ್ತಿದೆ, ಭಾರತದಲ್ಲಿ ಒಟ್ಟು 145 ಸೆಂಟ್ರಲ್ ಜೈಲ್ ಗಳಿವೆ.
ಸೆಂಟ್ರಲ್ ಜೈಲ್ ಕೆಳಗೆ ಬರುವುದು ಜಿಲ್ಲಾ ಕಾರಾಗ್ರಹಗಳು. ಇವು ಕೂಡ ಸೆಂಟ್ರಲ್ ಜೈಲ್ ರೀತಿಯೇ ನಿಯಮಗಳನ್ನು ಹೊಂದಿರುತ್ತವೆ. ದೇಶದಲ್ಲಿ ಒಟ್ಟು 413 ಜಿಲ್ಲಾ ಕಾರಾಗೃಹಗಳಿವೆ. ಇದರ ಕೆಳಗೆ ಉಪ ಕಾರಗ್ರಹಗಳು ಬರುತ್ತವೆ. ಇವು ಸಣ್ಣ ಜೈಲ್ ಗಳಾಗಿದ್ದು ಒಟ್ಟಾರೆಯಾಗಿ ಭಾರತದಲ್ಲಿ 565 ಉಪಕಾರಾಗ್ರಹಗಳಿವೆ.
ಉಪಕಾರಗ್ರಹಗಳಲ್ಲಿ ವ್ಯವಸ್ತೆ ಚೆನ್ನಾಗಿರುವುದಿಲ್ಲ ಕಾಯಿಲೆ ತಪ್ಪಿದರೆ ಚಿಕಿತ್ಸೆಯು ಸಿಗುವುದಿಲ್ಲ. ಓಪನ್ ಜೈಲ್ ಎನ್ನುವುದು ಕೂಡ ಇರುತ್ತದೆ. ಉತ್ತಮ ವರ್ತನೆ ಹೊಂದಿರುವ ಖೈದಿಗಳನ್ನು ಈ ಓಪನ್ ಜೈಲಿಗೆ ಕಳುಹಿಸುತ್ತಾರೆ, ಈ ರೀತಿಯ 88 ಜೈಲುಗಳಿವೆ. 44 ಸ್ಪೆಷಲ್ ಹೈ ಸೆಕ್ಯೂರಿಟಿ ಜೈಲುಗಳು ಇವೆ.
ಇವುಗಳಲ್ಲಿ ಉಗ್ರರು, ಹಗರಣಗಳನ್ನು ಮಾಡಿದವರು ಇಂತಹ ದೊಡ್ಡ ದೊಡ್ಡ ಅಪರಾಧ ಮಾಡಿದವರನ್ನು ಇರಿಸಲಾಗುತ್ತದೆ. ಆದರೆ ಇಲ್ಲಿ ದುಡ್ಡು ಕೊಟ್ಟು ಅವರು ಎಲ್ಲ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಾರೆ ಇದು ಕಾಮನ್ ಆಗಿಬಿಟ್ಟಿದೆ. ಕೆಲವರನ್ನು ಸರ್ಕಾರವೇ ಕೋಟಿಗಟ್ಟಲೆ ಖರ್ಚು ಮಾಡಿ ಸಾಕುತ್ತದೆ.
ಭಾರತದಲ್ಲಿ ಒಟ್ಟರೆ 17,834 ಮಹಿಳಾ ಅಪರಾಧಿಗಳು ಮತ್ತು ಮಕ್ಕಳಿದ್ದಾರೆ. ಆದರೆ ಮಹಿಳೆಯರಿಗಾಗಿ ಕೇವಲ 29 ಜೈಲುಗಳಿವೆ. ಅವುಗಳ ಸಾಮರ್ಥ್ಯ 5,000 ಅಷ್ಟೇ. ಮಹಿಳಾ ಕೈದಿಗಳಿಗೆ ವಿಶೇಷ ನಿಯಮಗಳು ಇದ್ದು ಹೆಚ್ಚಿನ ಸಮಯದಲ್ಲಿ ಅದನ್ನು ಯಾರು ಪಾಲನೆ ಮಾಡುವುದಿಲ್ಲ ಎನ್ನುವ ದೂರುಗಳಿವೆ.
ಗರ್ಭಿಣಿಯರಿಗೂ ಸರಿಯಾದ ಹಾರೈಕೆ ಸಿಗುವುದಿಲ್ಲ, ಮುಟ್ಟಾದಾಗ santitery pad ಸಿಗುವುದಿಲ್ಲ. ಬಾಲಾಪರಾಧಿಗಳಿಗೆ ಓದಲು ಶಾಲೆ ಕೂಡ ಇದೆ ಆದರೆ ಆ ಶಾಲೆಯಲ್ಲಿ ಕೂಡ ವ್ಯವಸ್ಥೆ ಸರಿ ಇಲ್ಲ ಎನ್ನುವ ಆರೋಪವಿದೆ. ಓದುವ ಆಸಕ್ತಿ ಇದ್ದವರಿಗೆ ಲೈಬ್ರವಿ ವ್ಯವಸ್ಥೆ ಇದ್ದು, ವಿದ್ಯಾಭ್ಯಾಸ ಮುಂದುವರಿಸುವವರಿಗೆ ಪರೀಕ್ಷೆಗಳನ್ನು ನಡೆಸಿ ಸರ್ಟಿಫಿಕೇಟ್ ಗಳನ್ನು ಕೂಡ ಕೊಡಲಾಗುತ್ತದೆ.