ಈ ಪ್ರಪಂಚದಲ್ಲಿ ಎಲ್ಲಾ ಮನುಷ್ಯರಿಗೂ ಕೂಡ ದೇವರು ಸಮಾನವಾಗಿ ಕೊಟ್ಟಿರುವ ವರ ಎಂದರೆ ಅದು ನಿದ್ರೆ. ಒಬ್ಬ ವ್ಯಕ್ತಿಯು ಆಹಾರ ಸೇವಿಸದೆ ಇದ್ದರು ಕನಿಷ್ಠ ಒಂದು ತಿಂಗಳವರೆಗೆ ತನ್ನ ದೇಹದಲ್ಲಿ ಈಗಾಗಲೇ ಸ್ಟೋರ್ ಆಗಿರುವ ಫ್ಯಾಟ್ ನಿಂದ ಒಂದು ತಿಂಗಳು ಕಾಲ ಆದರೂ ಜೀವಂತವಾಗಿರಬಹುದು.
ಆದರೆ ಹತ್ತು ದಿನಕ್ಕಿಂತ ಹೆಚ್ಚು ಮನುಷ್ಯ ನಿದ್ರೆಗೆಟ್ಟು ಇರಲು ಸಾಧ್ಯವಿಲ್ಲ. ಹೀಗೆ ಮಾಡಿದರೆ ಅಂತ ಸಾ’ವನ್ನಪ್ಪಬೇಕಾಗುತ್ತದೆ. ಹಾಗಾಗಿ ನಿದ್ರೆ ದೇಹಕ್ಕೆ ಎಷ್ಟು ಪ್ರಮುಖ ಎನ್ನುವುದನ್ನು ನಾವು ಮನಗಾಣಬಹುದು. ನಾವು ಹೆಚ್ಚು ನಿದ್ರೆ ಮಾಡಿದರು ಕೂಡ ಅನಾರೋಗ್ಯಕ್ಕೆ ತುತ್ತಾಗುತ್ತೇವೆ, ಜೀವನದಲ್ಲಿ ಸೋಲನ್ನು ಕಾಣಬೇಕಾಗುತ್ತದೆ ಹಾಗೆಯೇ ಕಡಿಮೆ ನಿದ್ರೆ ಮಾಡಿದರು ದೇಹವು ಅನೇಕ ರೋಗಗಳಿಗೆ ಗುರಿಯಾಗುತ್ತದೆ.
ಹಾಗಾಗಿ ಯಾವ ರೀತಿ ನಿದ್ರೆ ಮುಖ್ಯ? ಯಾರು ಎಷ್ಟು ಹೊತ್ತು ನಿದ್ದೆ ಮಾಡಬೇಕು ಎನ್ನುವುದರ ಕೆಲ ಪ್ರಮುಖ ವಿಷಯವನ್ನು ಈ ಅಂಕಣದಲ್ಲಿ ಹಂಚಿಕೊಳ್ಳುತ್ತಿದ್ದೇವೆ. ಕ್ವಾಲಿಟಿ ಆಫ್ ಸ್ಲೀಪ್ ಆ ವ್ಯಕ್ತಿಯು ಮರುದಿನ ಎಷ್ಟು ಆಕ್ಟಿವ್ ಆಗಿ ಇರುತ್ತಾನೆ ಎನ್ನುವುದನ್ನು ನಿರ್ಧರಿಸುತ್ತದೆ ಮರುದಿನ ಆತ ಆರೋಗ್ಯವಾಗಿ ಸಂತೋಷವಾಗಿ ಇರಬೇಕು ಎಂದರೆ ಹಿಂದಿನ ರಾತ್ರಿ ಸರಿಯಾಗಿ ನಿದ್ರೆ ಆಗಿರಬೇಕು.
ನಿದ್ರೆ ಎಂದರೆ ಹಾಸಿಗೆಗೆ ಹೋಗುವ ಸಮಯ ಅಲ್ಲ ನಾವು ಯಾವ ಹೊತ್ತಿಗೆ ನಿದ್ದೆಗೆ ಜಾರಿ ಎಷ್ಟು ಹೊತ್ತಿನವರೆಗೆ ನಿದ್ದೆ ಮಾಡುತ್ತಿದೆ ಎನ್ನುವುದು. ನಾವು ನಿದ್ರೆ ಮಾಡುವಾಗ ಹಲವು ಹಂತಗಳು ಇರುತ್ತವೆ. Non REM ಸ್ಲೀಪ್, light Sleep, moderate sleep, deep sleep, REM sleep. ಒಟ್ಟು ಈ ಸರ್ಕಲ್ 90 ನಿಮಿಷ ತೆಗೆದುಕೊಳ್ಳುತ್ತದೆ.
ಹಾಗೆಯೇ ಒಂದು ರಾತ್ರಿಯಲ್ಲಿ ನಾವು ಮೂರರಿಂದ ಐದು ಸುತ್ತುಗಳನ್ನು ಕ್ರಮಿಸುತ್ತೇವೆ ಎಂದು ಹೇಳಲಾಗುತ್ತದೆ. ಪ್ರತಿ ಬಾರಿ ನಾವು ಮಲಗಿದಾಗಲು ಮೊದಲಿಗೆ Non REM Sleep ಗೆ ಹೋಗುತ್ತೇವೆ ಎಂದರೆ ಆಗಷ್ಟೇ ಎಚ್ಚರದ ಸ್ಥಿತಿಯಿಂದ ನಿದ್ರೆಗೆ ಜಾರುತ್ತೇವೆ. ಈ ಸಮಯದಲ್ಲಿ ನಮಗೆ ಸಣ್ಣಪುಟ್ಟ ಶಬ್ದವಾದರೂ ಯಾರಾದರೂ ಕರೆದರೂ ಎಚ್ಚರವಾಗುತ್ತದೆ.
ನಿಧಾನವಾಗಿ ನಾವು light sleep ಗೆ ಜಾರುತ್ತೇವೆ ಈ ಸಮಯದಲ್ಲಿ ಹೊರಗಿನ ಶಬ್ದಗಳು, ಮಾತುಗಳು, ವಾಸನೆ ಇವು ತಿಳಿಯುವುದಿಲ್ಲ ಪಂಚೇಂದ್ರಿಯಗಳ ಜೊತೆ ಮೆದುಳಿಗೆ ಕನೆಕ್ಷನ್ ಕಟ್ ಆಗಿರುತ್ತದೆ. ಅದಾದ ಬಳಿಕವಷ್ಟೇ Deep Sleep ಹಂತಕ್ಕೆ ಹೋಗುವುದು. ಇಲ್ಲಿ ನಾವು ಸಂಪೂರ್ಣವಾಗಿ ನಿದ್ರೆ ಮಾಡುತ್ತೇವೆ.
ಈ ಸಮಯದಲ್ಲಿ ನಮ್ಮನ್ನು ಎಚ್ಚರ ಮಾಡುವುದು ಬಹಳ ಕಷ್ಟ ಸಂಪೂರ್ಣವಾಗಿ ನಾವು ನಮ್ಮದೇ ಕನಸಿನ ಲೋಕದಲ್ಲಿ ಇರುತ್ತೇವೆ. ಈ ಸಮಯದಲ್ಲಿ ದೇಹದಲ್ಲಿ ಹಲವಾರು ಹಾರ್ಮೋನ್ ಗಳು ಬಿಡುಗಡೆ ಆಗುತ್ತದೆ. ಅದರಲ್ಲಿ ಪಿಟ್ಯುಟರಿ ಗ್ರಂಥಿಯಿಂದ ಆಗುವ ಜೀವಕೋಶಗಳನ್ನು ಉತ್ಪತ್ತಿಗೆ ಅನುಕೂಲವಾಗಿರುವ ಹಾರ್ಮೋನ್ ಕೂಡ ಒಂದು.
ಹಾಗಾಗಿ ಡೀಪ್ ಸ್ಲಿಪ್ ಮನುಷ್ಯನ ಆರೋಗ್ಯವನ್ನು ನಿರ್ಧರಿಸುತ್ತದೆ ಎಂದು ಹೇಳಬಹುದು. ಇದಾದ ಬಳಿಕ ಮತ್ತೆ REM ಸ್ಲೀಪ್ ಗೆ ಬರುತ್ತೇವೆ ಈ ಸಮಯದಲ್ಲಿ ಕಣ್ಣಿನ ಗುಡ್ಡೆಗಳು ಮಾತ್ರ ಚಲಿಸುತ್ತಿರುತ್ತವೆ, ಆದರೆ ದೇಹವು ಚಲನೆಯಲ್ಲಿ ಇರುವುದಿಲ್ಲ. ಯಾಕೆಂದರೆ ನಾವು ಸಂಪೂರ್ಣವಾಗಿ ಡೀಪ್ ಸ್ಲೀಪ್ ನಿಂದ ಹೊರ ಬಂದಿರುವುದಿಲ್ಲ ಹಾಗಾಗಿ ಒಮ್ಮೊಮ್ಮೆ ಕನಸಿನಲ್ಲಿ ಆಗುವುದು ನಿಜವಾಗಿಯೂ ಆಗುತ್ತಿದೆ ಎನ್ನುವ ಭಾವನೆ ಬರುತ್ತದೆ.
ಆಗ ನಾವು ಬೀಳುವುದು ಯಾರಿಗಾದರೂ ಹೊಡೆಯುವುದು ಹೀಗಾಗಬಾರದು ಹಾಗಾಗಿ ಕಣ್ಣಿನ ಮೂವ್ಮೆಂಟ್ ಬಿಟ್ಟು ಇನ್ನೆಲ್ಲ ಅಂಗಗಳು ಕೂಡ ಚಲನೆ ಕಳೆದುಕೊಂಡಿರುತ್ತವೆ. ಒಂದರ್ಥದಲ್ಲಿ ಪಾರ್ಶ್ವವಾಯು ಪಿಡಿತರಾದವರಂತೆ ಮಲಗಿರುತ್ತೇವೆ ನಂತರ ನಿಧಾನವಾಗಿ ಎಚ್ಚರವಾಗುತ್ತೇವೆ.
ವಿಜ್ಞಾನವು ಹೇಳುವ ಪ್ರಕಾರ ಯಾವ ವಯಸ್ಸಿನ ವ್ಯಕ್ತಿಗೆ ಎಷ್ಟು ನಿದ್ದೆ ಬೇಕು ಎನ್ನುವ ಲೆಕ್ಕಾಚಾರ ಇದೆ, ಒಂದು ವೇಳೆ ಅಷ್ಟು ನಿದ್ದೆ ಮಾಡದೇ ಇದ್ದಲ್ಲಿ ಅದು ನಮ್ಮ ದೇಹಕ್ಕೆ ನಾವು ಮಾಡಿಕೊಂಡಿರುವ ಸಾಲದಂತೆ ಒಂದು ವೇಳೆ ಎರಡು ವಾರದ ಒಳಗಡೆ ನಾವು ಆ ಸಾಲವನ್ನು ತಿರೀಸದೆ ಇದ್ದರೆ ಮುಂದೆ ಬಹಳ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಅವತ್ತಿನ ನಿದ್ದೆ ಅವತ್ತೇ ಮಾಡಿ. ನಿದ್ರೆ ವಿಚಾರದಲ್ಲೂ ಸಾಲ ಮಾಡಿಕೊಳ್ಳುವಷ್ಟು ಬಡವರಾಗುವುದು ಬೇಡ.
* ನವಜಾತ ಶಿಶು 3 ತಿಂಗಳವರೆಗೆ 17 ರಿಂದ 18 ಗಂಟೆ ನಿದ್ದೆ ಮಾಡಬೇಕು.
* ಶಿಶು 4 ರಿಂದ 12 ತಿಂಗಳು 14 ರಿಂದ 16 ಗಂಟೆ
* ಪುಟ್ಟ ಮಕ್ಕಳು 1 – 2 ವರ್ಷ 11 ರಿಂದ 14 ಗಂಟೆ
* ಪ್ರಿ ಸ್ಕೂಲ್ ಮಕ್ಕಳು 3 – 5 ವರ್ಷ 12 ಗಂಟೆ
* ಸ್ಕೂಲ್ ಮಕ್ಕಳು 7 – 10 ವರ್ಷ 10 ರಿಂದ 11 ಗಂಟೆ
* ಹದಿಹರೆಯದವರು 13 ರಿಂದ 18 ವರ್ಷ 8 – 10 ಗಂಟೆ
* 18 ವರ್ಷ ದಾಟಿದವರು ಕನಿಷ್ಠ 7 ಗಂಟೆಗಳ ಕಾಲ ನಿದ್ದೆ ಮಾಡಲೇಬೇಕು.