ವಿದ್ಯುತ್ ಅನ್ನು ನಾವು ಕಿಲೋ ವ್ಯಾಟ್ ಪರ್ ಹವರ್ ಎನ್ನುವ ಮಾಪನದ ಮೂಲಕ ಅಳೆಯುತ್ತೇವೆ. ನಮ್ಮ ಮನೆಗೆ ಕೊಡುವ ವಿದ್ಯುತ್ ಬಿಲ್ ಅನ್ನು ಕೂಡ ನಾವು ತಿಂಗಳಿಗೆ ಎಷ್ಟು ಕಿಲೋಮೀಟರ್ ವಿದ್ಯುತ್ ಬಳಸುತ್ತೇವೆ ಎನ್ನುವುದನ್ನು ಲೆಕ್ಕಾಚಾರ ಹಾಕಿ ನೀಡುತ್ತಾರೆ. ಸದ್ಯಕ್ಕೆ ಈಗ ಕರ್ನಾಟಕ ರಾಜ್ಯ ಸರ್ಕಾರವು ಪ್ರತಿ ಕುಟುಂಬಕ್ಕೂ ಕೂಡ 200 ಯೂನಿಟ್ ವಿದ್ಯುತ್ತನ್ನು ಉಚಿತವಾಗಿ ಕೊಟ್ಟಿರುವ ಕಾರಣ ಎಲ್ಲರೂ ಈಗ ತಾವು ಬಳಸುತ್ತಿರುವ ವಿದ್ಯುತ್ಚ್ಛಕ್ತಿಯ ಲೆಕ್ಕಾಚಾರವನ್ನು ಹಾಕುತ್ತಿದ್ದಾರೆ.
ಈ ಅಂಕಣದಲ್ಲೂ ಕೂಡ ಎಷ್ಟು ಕಿಲೋ ವ್ಯಾಟ್ ಬಳಕೆಗೆ ಯೂನಿಟ್ ಆಗುತ್ತದೆ ಮತ್ತು ಅದು 200 ಯೂನಿಟ್ ಒಳಗೆ ಬರಬೇಕು ಎಂದರೆ ಯಾವ ರೀತಿ ಕ್ರಮ ಕೈಗೊಳ್ಳಬೇಕು ಎನ್ನುವ ಮಾಹಿತಿಯನ್ನು ತಿಳಿಸಿ ಕೊಡುತ್ತಿದ್ದೇವೆ. ವಿದ್ಯುತ್ ಭಾಷೆಯಲ್ಲಿ ಒಂದು ಯೂನಿಟ್ ವಿದ್ಯುತ್ ಎಂದರೆ 1,000 Watt hour ಅಥವಾ 1 kilo Watt hour. ಇನ್ನು ಸರಳವಾಗಿ ಹೇಳುವುದಾದರೆ 100 ವ್ಯಾಟ್ ನ 10 ವಿದ್ಯುತ್ ಬಲ್ಬ್ ಅನ್ನು ಅಥವಾ 50 ವ್ಯಾಟ್ ನ 20 ವಿದ್ಯುತ್ ಬಲ್ಬ್ ಗಳನ್ನು 10 ವ್ಯಾಟ್ 100 ಬಲ್ಬ್ ಗಳನ್ನು 1 ಗಂಟೆ ಉರಿಸಿದರೆ ಅದೇ 1,000 watt hour ಅಥವಾ 1 ಯೂನಿಟ್.
1 ಯೂನಿಟ್ ವಿದ್ಯುತ್ ಗೆ 1000 ವ್ಯಾಟ್ ಹವರ್. 200 ಯೂನಿಟ್ ವಿದ್ಯುತ್ ಗೆ 2 ಲಕ್ಷ ವ್ಯಾಟ್ ಹವರ್. ಆ ಲೆಕ್ಕದಲ್ಲಿ 100 ವ್ಯಾಟ್ ನ 2,000 ಬಲ್ಬ್ ಗಳನ್ನು ಒಂದು ಗಂಟೆ ಉರಿಸುವಷ್ಟು 50 ವ್ಯಾಟ್ ನ 4000 ಬಲ್ಬ್ ಗಳನ್ನು ಒಂದು ಗಂಟೆ ಉರಿಸುವಷ್ಟು 10 ವ್ಯಾಟ್ ನ 20,000 ಬಲ್ಬ್ ಗಳನ್ನು ಉರಿಸುವಷ್ಟು ಕರೆಂಟ್ ಎಂದು ಅರ್ಥ.
ಗೃಹಬಳಕೆಯ ಯೂನಿಟ್ ವಿದ್ಯುತ್ ಗೆ ಸುಮಾರು 700 ರಿಂದ 800 ಚಾರ್ಜ್ ಆಗುತ್ತದೆ ನಾವು ಪ್ರತಿದಿನ ಅಥವಾ ಒಂದು ತಿಂಗಳಿಗೆ ಎಷ್ಟು ವಿದ್ಯುತ್ ಖರ್ಚು ಮಾಡುತ್ತಿದ್ದೇವೆ ಎನ್ನುವುದನ್ನು ನಮ್ಮ ಕರೆಂಟ್ ಬಿಲ್ ನೋಡಿ ಚೆಕ್ ಮಾಡಬಹುದು. ಪ್ರತಿ ತಿಂಗಳು ನಮಗೆ ಕರೆಂಟ್ ಬಿಲ್ ಬರುವಾಗ ಇದುವರೆಗೆ ನಾವು ಎಷ್ಟು ವಿದ್ಯುತ್ ಬಳಸಿದ್ದೇವೆ ಎನ್ನುವುದರ ಮಾಹಿತಿ ಇರುತ್ತದೆ.
ಅದರಲ್ಲಿ ಪ್ರತ್ಯೇಕವಾಗಿ ವಿದ್ಯುತ್ ಬಿಲ್ ಬಂದಿರುವ ತಿಂಗಳಿನಲ್ಲಿ ಖರ್ಚು ಮಾಡಿರುವ ವಿದ್ಯುತ್ ಎಷ್ಟು ಎನ್ನುವ ಲೆಕ್ಕವು ಕೂಡ ಇರುತ್ತದೆ. ವಿದ್ಯುತ್ ಬಿಲ್ ಬರುವುದಕ್ಕಿಂತ ಮುಂಚೆಯೇ ನಮ್ಮ ಮನೆಯ ಮೀಟರ್ ನೋಡಿ ಇದನ್ನು ಕೂಡ ನಾವು ಲೆಕ್ಕ ಹಾಕಬಹುದು. ಈಗ ಎಲ್ಲಾ ಕಡೆ ಡಿಜಿಟಲ್ ಮೀಟರ್ ಗಳು ಇರುವುದರಿಂದ ಅದರಲ್ಲಿ ಹಸಿರು ಬಣ್ಣದಲ್ಲಿ ಕಪ್ಪು ಅಂಕಿಗಳು ಯಾವಾಗಲೂ ಬ್ಲಿಂಕ್ ಆಗುವುದನ್ನು ಮತ್ತು ಪಕ್ಕದಲ್ಲಿ ಕೆಂಪು ಲೈಟ್ ಬ್ಲಿಂಕ್ ಆಗುವುದನ್ನು ನಾವು ನೋಡುತ್ತಿದ್ದೇವೆ.
ಇದರಲ್ಲಿ ಕೆಳಗೆ ಇರುವ ಒಂದು ಕಪ್ಪು ಬಟನ್ ಅನ್ನು ನಾಲ್ಕೈದು ಬಾರಿ ಪ್ರೆಸ್ ಮಾಡಿದಾಗ ಇದುವರೆಗೆ ಎಷ್ಟು ಕಿಲೋ ವ್ಯಾಟ್ ವಿದ್ಯುತ್ ಬಳಕೆ ಆಗಿದೆ ಎನ್ನುವ ಲೆಕ್ಕ ತೋರುತ್ತದೆ. ಅದರಿಂದ ಕಳೆದ ತಿಂಗಳು ಕರೆಂಟ್ ಬಿಲ್ ಅಲ್ಲಿ ಇರುವ ಒಟ್ಟು ಸಂಖ್ಯೆಯನ್ನು ಮೈನಸ್ ಮಾಡಿದಾಗ ಇದುವರೆಗೆ ನಾವು ಎಷ್ಟು ವಿದ್ಯುತ್ ಬಳಸಿದ್ದೇವೆ ಎನ್ನುವ ಲೆಕ್ಕ ಸಿಗುತ್ತದೆ.
ಅದನ್ನು ಪ್ರತಿದಿನ ಬೇಕಾದರೂ ಅಥವಾ ವಾರಕ್ಕೊಮ್ಮೆ ಅಥವಾ ಹತ್ತು ದಿನಕೊಮ್ಮೆ ಚೆಕ್ ಮಾಡಿಕೊಂಡರೆ ಒಂದು ತಿಂಗಳಲ್ಲಿ 200 ಯೂನಿಟ್ ಗಿಂತ ಜಾಸ್ತಿ ಆದಂತೆ ನೋಡಿಕೊಳ್ಳಬಹುದು. ಕೆಂಪು ಬಣ್ಣದ ಲೈಟ್ 3200 ಬಾರಿ ಬ್ಲಿಂಕ್ ಆದರೆ 1kwh ಓಡಿದೆ ಎಂದು ಅರ್ಥ. ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ಪೂರ್ತಿಯಾಗಿ ನೋಡಿ.