ಅಭಾ ಆರೋಗ್ಯ ಕಾರ್ಡ ಎಂದರೇನು? ಪಡೆಯಲು ಅಪ್ಲೈ ಮಾಡುವುದು ಹೇಗೆ? ಯಾರೆಲ್ಲಾ ಅಭಾ ಆರೋಗ್ಯ ಕಾರ್ಡ್ ಅನ್ನು ಪಡೆಯಲು ಅರ್ಹರು? ಮನೆಯಲ್ಲಿಯೇ ಕುಳಿತು ಅಪ್ಲೈ ಮಾಡಲು ನೀವು ಹೊಂದಿರಬೇಕಾದ ದಾಖಲಾತಿಗಳು ಯಾವವು? ಕಾರ್ಡಿನ ಉಪಯೋಗಗಳೇನು? ಎಂಬೆಲ್ಲಾ ಮಾಹಿತಿಯನ್ನು ಈ ಬರಹವನ್ನು ಓದಿ ತಿಳಿದುಕೊಳ್ಳಿ. ಮನೆಯಲ್ಲಿಯೇ ಕುಳಿತುಕೊಂಡು ಆಧಾರ್ ಕಾರ್ಡ್ಗೆ ನೀವೇ ಅಪ್ಲೈ ಮಾಡಬಹುದು.
ಅಭಾ ಆರೋಗ್ಯ ಕಾರ್ಡ್ ಅನ್ನು ಹೊಂದಿದವರಿಗೆ ಯಾವುದೇ ರೀತಿಯ ರೋಗಗಳು ಬಂದಾಗ ಅಥವಾ ದೊಡ್ಡ ಚಿಕಿತ್ಸೆಯನ್ನು ಮಾಡಿಸಿಕೊಳ್ಳುವಾಗ ಸರ್ಕಾರದಿಂದ ಉಚಿತವಾಗಿ ಹಣವು ಸಿಗುತ್ತದೆ. ಅಭಾ ಆರೋಗ್ಯ ಕಾರ್ಡನ್ನು ಮಾಡಿಸಿಕೊಂಡರೆ ತುರ್ತು ಚಿಕಿತ್ಸೆಯ ಸಂದರ್ಭದಲ್ಲಿ ಅಥವಾ ದೊಡ್ಡ ಕಾಯಿಲೆಯನ್ನು ಗುಣಪಡಿಸಬೇಕಾದ ಪರಿಸ್ಥಿತಿಯಲ್ಲಿ ಸರ್ಕಾರವು ವ್ಯಕ್ತಿಗೆ ಮತ್ತು ವ್ಯಕ್ತಿಯ ಕುಟುಂಬಕ್ಕೆ 5 ಲಕ್ಷ ರೂಪಾಯಿಗಳನ್ನು ಉಚಿತವಾಗಿ ನೀಡುತ್ತದೆ.
ಅಭಾ ಆರೋಗ್ಯ ಕಾರ್ಡ್ ಗಾಗಿ ಅಪ್ಪ್ಲೈ ಮಾಡಲು ವ್ಯಕ್ತಿಯು ಹೊಂದಿರಬೇಕಾದ ದಾಖಲಾತಿಗಳು : ಆಧಾರ್ ಕಾರ್ಡ್, ರೇಷನ್ ಕಾರ್ಡ್ ಮತ್ತು ಆಧಾರ ಕಾರ್ಡಿಗೆ ಲಿಂಕ್ ಆಗಿರುವಂತಹ ಫೋನಿನ ನಂಬರ್ ಚಾಲ್ತಿಯಲ್ಲಿರಬೇಕು. ಈ ಮೂರು ದಾಖಲಾತಿಗಳನ್ನು ನೀವು ಹೊಂದಿರಲೇಬೇಕು.
ಅಭಾ ಆರೋಗ್ಯ ಕಾರ್ಡನ್ನು ಪಡೆಯಲು ಅರ್ಜಿ ಸಲ್ಲಿಸುವ ವಿಧಾನ :
1. ಮೊದಲಿಗೆ ನ್ಯಾಷನಲ್ ಹೆಲ್ತ್ ಅಥಾರಿಟಿಯ ವೆಬ್ಸೈಟ್ ಅನ್ನು ತೆರೆದುಕೊಳ್ಳಬೇಕು.
2. ವೆಬ್ಸೈಟ್ ಓಪನ್ ಆದಾಗ ಬಲಬದಿಯ ಮೇಲ್ಭಾಗದಲ್ಲಿ ಕ್ರಿಯೇಟ್ ಅಬಾನ್ ನಂಬರ್ ಎಂಬ ಆಪ್ಷನ್ ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಬೇಕು.
3. ನೀವು ಆಧಾರ್ ಕಾರ್ಡನ್ನು ಹೊಂದಿದ್ದು ಅಲ್ಲಿರುವ ಹೆಸರು ವಿಳಾಸ ಜನ್ಮ ದಿನಾಂಕ ಫೋನಿನ ನಂಬರ್ ಎಲ್ಲವೂ ಸರಿಯಾಗಿದ್ದಲ್ಲಿ ಯೂಸಿಂಗ್ ಆಧಾರ್ ಕಾರ್ಡ್ ಅನ್ನು ಸೆಲೆಕ್ಟ್ ಮಾಡಬಹುದು. ಅಥವಾ ಡ್ರೈವಿಂಗ್ ಲೈಸೆನ್ಸ್ ಅನ್ನು ಹೊಂದಿದವರಾಗಿದ್ದಲ್ಲಿ ಯೂಸಿಂಗ್ ಡ್ರೈವಿಂಗ್ ಲೈಸೆನ್ಸ್ ಅನ್ನು ಕೂಡ ಸೆಲೆಕ್ಟ್ ಮಾಡಬಹುದು. ಎರಡರಲ್ಲಿ ಒಂದನ್ನು ಸೆಲೆಕ್ಟ್ ಮಾಡಿದ ಬಳಿಕ ನೆಕ್ಸ್ಟ್ ಎಂಬ ಚೌಕಟ್ಟಿಗೆ ಕ್ಲಿಕ್ ಮಾಡಬೇಕು.
4. ನಾಲ್ಕು ಹಂತಗಳು ಇರುವುದನ್ನು ನೀವು ಕಾಣಬಹುದು. ಮೊದಲನೆಯದು ಕನ್ಸರ್ಟ್ ಕಲೆಕ್ಷನ್. ಅದರಲ್ಲಿ ಆಧಾರ್ ನಂಬರ್ ಅನ್ನು ಸರಿಯಾಗಿ ನಮೂದಿಸಿ ನಂತರ I agree ಅನ್ನು ಸೆಲೆಕ್ಟ್ ಮಾಡಿ, ಸೆಕ್ಯೂರಿಟಿ ಕ್ವೆಶ್ಚನ್ ಅನ್ನು ಸರಿಯಾಗಿ ಉತ್ತರಿಸಿ, ನೆಕ್ಸ್ಟ್ ಬಟನ್ ಅನ್ನು ಕ್ಲಿಕ್ ಮಾಡಬೇಕು.
5. ಎರಡನೆಯ ಹಂತವಾದ ಆಧಾರ್ ಅಥೆಂಟಿಕೇಶನ್ ತೆರೆದುಕೊಳ್ಳುತ್ತದೆ. ಅದರಲ್ಲಿ ನಿಮ್ಮ ಆಧಾರ್ ಕಾರ್ಡಿಗೆ ಲಿಂಕ್ ಆಗಿರುವ ಮೊಬೈಲ್ ನಂಬರಿಗೆ ಬಂದ ಓಟಿಪಿಯನ್ನು ಸರಿಯಾಗಿ ನಮೂದಿಸಬೇಕು. ಬಳಿಕ ನೆಕ್ಸ್ಟ್ ಬಟನ್ ಅನ್ನು ಕ್ಲಿಕ್ ಮಾಡಬೇಕು.
6. ನಂತರ ಕ್ರಿಯೇಟ್ ಆಗಿರುವ ಅಭಾ ಆರೋಗ್ಯ ಕಾರ್ಡನ್ನು ನೀವು ಗಮನಿಸಬಹುದು. ಡೌನ್ಲೋಡ್ ಅಬಾ ಕಾರ್ಡ್ ಅನ್ನು ಸೆಲೆಕ್ಟ್ ಮಾಡಿದರೆ ಡೌನ್ಲೋಡ್ ಆದ ಪ್ರತಿ ಸಿಗುತ್ತದೆ. ಡೌನ್ಲೋಡ್ ಆದ ಅಭಾ ಕಾರ್ಡನ್ನು ಪ್ರಿಂಟ್ ತೆಗೆಸಿಕೊಳ್ಳಬಹುದು. ಅಥವಾ ಸೇವ್ ಮಾಡಿ ಹಾಗೆ ಇಟ್ಟುಕೊಳ್ಳಬಹುದು.
7. ಕಾರ್ಡ್ ನಲ್ಲಿ ಯಾವುದಾದರೂ ಬದಲಾವಣೆಗಳು ಆಗಬೇಕಾಗಿದ್ದಲ್ಲಿ ಆಯ್ಕೆಗಳು ಇರುತ್ತವೆ. ಎಡಿಟ್ ಡೀಟೇಲ್ಸ್, ಅಪ್ಡೇಟ್ e-mail ಅಡ್ರೆಸ್, ಚೇಂಜ್ ಮೊಬೈಲ್ ನಂಬರ್ ಹೀಗೆ ನಿಮಗೆ ಬೇಕಾದ ಆಯ್ಕೆಯನ್ನು ಆಯ್ದುಕೊಳ್ಳಬಹುದು.
ನಿಮಗೆ ಲಾಭ ಕಾರ್ಡ್ ಬೇಡವೇ ಬೇಡ ಎಂದೆನಿಸಿದಾಗ ಡಿಲೀಟ್ ಮಾಡಬಹುದು ಅಥವಾ ಡಿ ಆಕ್ಟಿವೇಟ್ ಮಾಡಬಹುದು. ಯಾವುದೇ ತರಹದ ಗೊಂದಲಗಳು ಉಂಟಾದಲ್ಲಿ ತೆರೆದುಕೊಂಡ ಪುಟದ ಮೇಲ್ಭಾಗದಲ್ಲಿ ಕಾಣುವ ನಂಬರ್ಗೆ ಕರೆ ಮಾಡುವ ಮುಖಾಂತರ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು. ಈ ರೀತಿಯಾಗಿ ಕಾರ್ಡನ್ನು ಪಡೆಯಲು ಮನೆಯಲ್ಲಿಯೇ ಕುಳಿತು ಅಪ್ಲೈ ಮಾಡಿ. ಅಭಾ ಆರೋಗ್ಯ ಕಾರ್ಡನ್ನು ಹೊಂದಿದವರಿಗೆ ಸರ್ಕಾರದ ಕಡೆಯಿಂದ ಅನಾರೋಗ್ಯದ ಸಮಯದಲ್ಲಿ ಸಹಾಯವು ದೊರೆಯುತ್ತದೆ 5 ಲಕ್ಷದ ವರೆಗೂ ಹಣವನ್ನು ಉಚಿತವಾಗಿ ನೀಡಲಾಗುತ್ತದೆ.