18 ವರ್ಷಕ್ಕಿಂತ ಮೇಲ್ಪಟ್ಟ ನಿರ್ಗತಿಕ ವಿಧವೆಯರಿಗೆ ಅವರು ಮ’ರ’ಣ ಹೊಂದುವವರೆಗೆ ಅಥವಾ ಮರುಮದುವೆ ಆಗುವವರೆಗೆ ಅಥವಾ ಉದ್ಯೋಗ ಪಡೆದು ನಿಗದಿತ ವಾರ್ಷಿಕ ಆದಾಯಕ್ಕಿಂತ ಹೆಚ್ಚಿನ ಆದಾಯ ಪಡೆಯುವವರೆಗೂ ಕೂಡ ಸಾಮಾಜಿಕ ಭದ್ರತಾ ಯೋಜನೆ ಅಡಿ ಸರ್ಕಾರವು ಪ್ರತಿ ತಿಂಗಳು 800ರೂ. ವಿಧವಾ ವೇತನ (Widow pension) ನೀಡುತ್ತದೆ.
ಇದನ್ನು ಪಡೆಯಲು ಮಹಿಳೆಯರು ಸರ್ಕಾರಿ ಕಚೇರಿಗಳಿಗೆ ಹೋಗಿ ಪೂರಕ ದಾಖಲೆ ಸಲ್ಲಿಸಿ ಅರ್ಜಿ ಸಲ್ಲಿಸಬೇಕಿತ್ತು. ಆದರೆ ಈಗ ಮೊಬೈಲ್ ನಲ್ಲಿಯೇ ಕೂಡ ಸೇವಾ ಸಿಂಧು ಪೋರ್ಟಲ್ (Sevasindhu portal) ಮೂಲಕ ವಿಧವಾ ವೇತನ ಪಡೆಯಲು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ವಿಧಾನ ಹೇಗೆ ಎನ್ನುವುದನ್ನು ತಿಳಿದುಕೊಳ್ಳಲು ಈ ಅಂಕಣವನ್ನು ಪೂರ್ತಿಯಾಗಿ ಓದಿ.
ಗೃಹಜ್ಯೋತಿ ಯೋಜನೆಗೆ ಅರ್ಜಿ ಹಾಕಿದ್ದವರು ಈ ತಪ್ಪು ಮಾಡಿದ್ರೆ ಅರ್ಜಿ ರಿಜೆಕ್ಟ್ ಆಗುತ್ತದೆ, ಉಚಿತ ವಿದ್ಯುತ್ ಸಿಗಲ್ಲ.!
● Google ಅಥವಾ Chrome ಬ್ರೌಸರ್ ಮೂಲಕ Sevasindhu portal ಎಂದು ಸರ್ಚ್ ಕೊಡಿ, ಸೇವಾಸಿಂಧು ಲಿಂಕ್ ಕ್ಲಿಕ್ ಮಾಡಿ.
ಯಾರ ಹೆಸರಿನಲ್ಲಿ ಅರ್ಜಿ ಸಲ್ಲಿಸಬೇಕು ಅವರ ಮೊಬೈಲ್ ನಂಬರ್ ಮೂಲಕ ರಿಜಿಸ್ಟರ್ ಆಗಿ password ಪಡೆದು Login ಆಗಿ.
● ಮೆನುವಿನಲ್ಲಿ Apply for services ಅದನ್ನು ಸೆಲೆಕ್ಟ್ ಮಾಡಿ view all services select ಮಾಡಿ.
● Serach bar ನಲ್ಲಿ Widow ಎಂದು type ಮಾಡಿ ಸರ್ಚ್ ಕೊಟ್ಟು ನಿರ್ಗತಿಕ ವಿಧವಾ ವೇತನ ಎನ್ನುವ ಆಪ್ಷನ್ ಇರುತ್ತದೆ ಅದನ್ನು ಸೆಲೆಕ್ಟ್ ಮಾಡಿ.
● ಅರ್ಜಿ ಸಲ್ಲಿಸುವ ಫಾರಂ ಓಪನ್ ಆಗುತ್ತದೆ ಅದರಲ್ಲಿ ಅರ್ಜಿದಾರರ ಆಧಾರ್ ಕಾರ್ಡ್ ಸಂಖ್ಯೆ, ವಿವರ, ಶೀರ್ಷಿಕೆ, ಆಧಾರ್ ಕಾರ್ಡ್ ಅಲ್ಲಿ ಇರುವಂತೆ ಅರ್ಜಿದಾರರ ಹೆಸರು, ಸಂಬಂಧಿಕರ ವಿಧ, ಸಂಬಂಧಿಕರ ಶೀರ್ಷಿಕೆ, ಸಂಬಂಧಿಕರ ಹೆಸರು, ತಾಯಿಯ ಹೆಸರು, ಖಾಯಂ ವಿಳಾಸ, ಮೊಬೈಲ್ ಸಂಖ್ಯೆ ಇನ್ನು ಮುಂತಾದ ಮಾಹಿತಿ ಕೇಳಿರುತ್ತದೆ. ಇದರಲ್ಲಿ ಸರಿಯಾದ ವಿವರಗಳನ್ನು ಭರ್ತಿ ಮಾಡಿ.
ನಿಮ್ಮ APL ಕಾರ್ಡ್ ಅನ್ನು BPL ಕಾರ್ಡ್ ಆಗಿ ವರ್ಗಾವಣೆ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ.
● ಅರ್ಜಿ ವಿಲೇವಾರಿಯ ಕ್ಷೇತ್ರ ವ್ಯಾಪ್ತಿ ಅದರಲ್ಲಿ ಜಿಲ್ಲೆ, ತಾಲೂಕು, ಹೋಬಳಿ, ವಾರ್ಡ್ ಕೇಳಿರುತ್ತದೆ ಅದರಲ್ಲೂ ಕೂಡ ಮಾಹಿತಿ ತುಂಬಿ.
● ಅರ್ಜಿದಾರರ ವಿವರ ವಿಭಾಗದಲ್ಲಿ ಅರ್ಜಿದಾರರ ಉದ್ಯೋಗ, ಪ್ರವರ್ಗ ಲಿಂಗ ಗುರುತಿನ ಚೀಟಿ ವಿಧ, ID ಸಂಖ್ಯೆ, ಧರ್ಮ, ಜಾತಿ, ವಾರ್ಷಿಕ ಆದಾಯದ ವಿವರ, ಹುಟ್ಟಿದ ದಿನಾಂಕ ವಯಸ್ಸು ಇತ್ಯಾದಿ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ.
● ಪತಿಯ ವಿವರಗಳು ವಿಭಾಗದಲ್ಲಿ ಪತಿಯ ಹೆಸರು, ವಿಳಾಸ, ಮ’ರ’ಣ ಹೊಂದಿದ ಕಾರಣ, ಮ’ರ’ಣ ಹೊಂದಿದ ದಿನಾಂಕ ಭರ್ತಿ ಮಾಡಿ.
● ಬ್ಯಾಂಕ್ ವಿವರಗಳಲ್ಲಿ ಬ್ಯಾಂಕ್ ಖಾತೆ ವಿಧವನ್ನು ಸೆಲೆಕ್ಟ್ ಮಾಡಿ, ಬ್ಯಾಂಕ್ ಹೆಸರು, ಶಾಖೆ, ವಿಳಾಸ, IFSC ಕೋಡ್ ಇತ್ಯಾದಿ ವಿವರಗಳನ್ನು ಭರ್ತಿ ಮಾಡಬೇಕು, ಕೊನೆಯಲ್ಲಿ Word verification ಇರುತ್ತದೆ ಎಂಟ್ರಿ ಮಾಡಿ Submit ಕೊಡಿ.
ಫೋನ್ ಪೇ, ಗೂಗಲ್ ಪೇ ಮೂಲಕ ಹಣ ಕಳುಹಿಸುವವರಿಗೆ RBI ನಿಂದ ಮಹತ್ವದ ಸೂಚನೆ.! ಈ ತಪ್ಪು ಮಾಡದಂತೆ ಎಚ್ಚರ
● ಮುಂದಿನ ಪ್ರೋಸೆಸ್ e-sign ಇರುತ್ತದೆ ಆಗ ನಿಮ್ಮ ಆಧಾರ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ OTP ಹೋಗಿರುತ್ತದೆ, ಅದನ್ನು ಎಂಟ್ರಿ ಮಾಡಿ ಪ್ರಕ್ರಿಯೆ ಪೂರ್ತಿಗೊಳಿಸಿದರೆ ನಿಮಗೆ ಅರ್ಜಿ ಸ್ವೀಕೃತಿ ಪತ್ರ (acknowledgement) ಕೂಡ ಸಿಗುತ್ತದೆ, ಮುಂದಿನ ದಿನಗಳಲ್ಲಿ ಆ ರೆಫರೆನ್ಸ್ ನಂಬರ್ ಇಂದ ನಿಮ್ಮ ಅರ್ಜಿ ಸ್ಟೇಟಸ್ ಏನಾಗಿದೆ ಎಂದು ತಿಳಿದುಕೊಳ್ಳಬಹುದು. ಈ ರೀತಿಯಾಗಿ ಸುಲಭವಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ.